ಹಂಸ ನಾದ
ಹಂಸ ನುಡಿದರೆ, ಹಂಸನಾದ!
ದಕ್ಷಿಣಾಯನ
ಇವತ್ತಿಂದ ದಕ್ಷಿಣಾಯನ ಶುರು. ಸೂರ್ಯ ಆಕಾಶದಲ್ಲಿ ವರ್ಷೇ ವರ್ಷೇ ಮಾಡೋ ಪ್ರಯಾಣದಲ್ಲಿ ಇವತ್ತು ಯುನಿವರ್ಸಲ್ ಟೈಮ್ 23:59 ಕ್ಕೆ (ಅಂದರೆ ಜೂನ್ 20ರ ಗ್ರೀನ್ ವಿಚ್ ಸಮಯ ರಾತ್ರಿ 11 ಗಂಟೆ, 59 ನಿಮಿಷದಲ್ಲಿ, ತನ್ನ ದಾರಿಯ ಅತೀ ಉತ್ತರದ ಭಾಗದಲ್ಲಿರುತ್ತಾನೆ. ನೀವೆಲ್ಲಿದ್ದೀರೋ ಅದರ ಮೇಲೆ ಕೆಲ್ವು ಘಂಟೆ ಸೇರಿಸ್ಕೊಂಡೋ, ಕಳ್ಕೊಂಡೋ ಮಾಡಿದ್ರೆ, ನಿಮ್ಮೂರಲ್ಲಿ ಇದು ಎಷ್ಟು ಹೊತ್ತಿಗೆ ಅಂತ ಗೊತ್ತಾಗತ್ತೆ. ಇಲ್ಲಿಂದ ಸೂರ್ಯ ಪ್ರತಿ ಕ್ಷಣವೂ ದಕ್ಷಿಣಕ್ಕೆ ಸರಿಯೋದ್ರಿಂದ ಇವತ್ತಿಂದ ದಕ್ಷಿಣಾಯನ, ಇನ್ನು ಆರು ತಿಂಗಳು.
ಇವತ್ತೇ ಉತ್ತರಾರ್ಧ ಗೋಳದಲ್ಲಿ ಅತಿ ಹೆಚ್ಚು ಹಗಲು,ಮತ್ತೆ ಅತಿ ಕಡಿಮೆ ರಾತ್ರಿಯ ಅವಧಿ. ನಾನಿರೋ ಕಡೆ 14 ಗಂಟೆ, 45 ನಿಮಿಷ ಹಗಲಿರತ್ತೆ ಇವತ್ತು. ಇನ್ನು ಇವತ್ತಿಂದ ಆರ್ಕ್ಟಿಕ್ ಸರ್ಕಲ್ ಒಳಗಿರೋ ಭಾಗದಲ್ಲಿ ಮುಳುಗದ ಸೂರ್ಯನ ಆರುತಿಂಗಳ ಮುಗಿಯದ ಹಗಲು! ಅದೇ ದಕ್ಷಿಣಾರ್ಧ ಗೋಳದಲ್ಲೋ ಇವತ್ತು ಅತೀ ಉದ್ದದ ರಾತ್ರಿ. ಅಂಟಾರ್ಕ್ಟಿಕಾದಲ್ಲಿ, ಆರು ತಿಂಗಳ ಕಾಲ ಸೂರ್ಯನ ಮುಖವೂ ಕಾಣದು.
ಇವತ್ತು ಗೂಗಲ್ ಮುಖಪುಟ ಆಕರ್ಷಕವಾಗಿತ್ತು. ಅದನ್ನೇ ಹಾಕಿದೀನಿ ಇಲ್ಲಿ,ಇವತ್ತು ನೋಡದೇ ಹೋಗಿದ್ದವರಿಗೆ ಅಂತ!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 540 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ದಕ್ಷಿಣಾಯನ
ಗೂಗಲ್ ಲೋಗೋ ನೋಡಿ ನಾವೆಲ್ಲ ಸೈಬರ್ ಜಗತ್ತಿನಲ್ಲಿ ಖುಷಿಪಡುತ್ತಿದ್ದರೆ ಅತ್ತ ಅಂಟಾರ್ಟಿಕಾದ ಪೆಂಗ್ವಿನ್ನುಗಳು ಇನ್ನು ಕತ್ತಲೆಯಾಯ್ತಲ್ಲ ಅಂತ ದುಃಖಿಸುತ್ತಿರಬಹುದು
('ಮಾರ್ಚ್ ಆಫ್ ದಿ ಪೆಂಗ್ವಿನ್ಸ್' ಅನ್ನೋ ಡಾಕ್ಯುಮೆಂಟರಿ ನೆನಪಾಗತ್ತೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದಕ್ಷಿಣಾಯನ
ಇನ್ನಾರು ತಿಂಗಳು ಪುಣ್ಯಾತ್ಮರಿಗೆ ಸಾವಿಗೆ ರಜೆ .
ಉ: ದಕ್ಷಿಣಾಯನ
ವಿವರಗಳಿಗಾಗಿ ನನ್ನಿಗಳು. ಆದರೆ ಗೂಗಲ್ ಲೋಗೋದ tool tip text ಮಾತ್ರ "First day of summer" ಅಂತ ತೋರಿಸುತ್ತಿತ್ತಲ್ಲಾ?
ಉ: ದಕ್ಷಿಣಾಯನ
ಶ್ರೀನಿವಾಸ ಬಂಗೋಡಿಯವರೆ,
ಅದೊಂದು ಕಥೆ - ಅದ್ಯಾಕೋ ಪಶ್ಚಿಮದ ದೇಶಗಳಲ್ಲಿ ಅವತ್ತಿಂದ ಬೇಸಿಗೆ ಶುರು ಅಂತ ಲೆಕ್ಕ ಹಾಕ್ಕೋತಾರೆ - ನಿಜ ಹೇಳ್ಬೇಕು ಅಂದ್ರೆ, ಇದು ಬೇಸಿಗೆಯ ನಡುಭಾಗ ಆಗ್ಬೇಕು. ಇನ್ನು ವಾತಾವರಣದಲ್ಲಿ ನಿಜವಾಗಿ ಸೆಖೆ ಶುರು ಆಗೋದನ್ನ ನೋಡಿದ್ರೂ, ಬೇಸಿಗೆ ಶುರುವಾಗಿ ಸುಮಾರು ೩-೪ ವಾರವಾಗ್ಬೇಕು. ಆದ್ರೆ, ಇಲ್ಲೀ ಲೆಕ್ಕ ಹೀಗೇ..
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ದಕ್ಷಿಣಾಯನ
ಓ ಹಂಗಾ. ಅವತ್ತು ಮನೇಲಿ ಈ ಲೋಗೋನ ಎಷ್ಟು ಚೆನ್ನಾಗಿದೆಯಲ್ವಾ ಅಂತ ತೋರಿಸಿದೆ. ಅವರೂ ಇದನ್ನೇ ಕೇಳಿದ್ರು. ಏನೋ ನಂಗೊತ್ತಿಲ್ಲಪ್ಪಾ ಅಂದೆ.
ಈಗ ಮನೆಗೆ ಹೋಗಿ ಹೇಳ್ಬೇಕು
ತುಂಬಾ ನನ್ನಿಗಳು.