ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ -  ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ,  ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ್ನೆಟ್ ಇವೆಲ್ಲ ಕಂಡದ್ದು. ಆಗಿನ್ನೂ ನ್ಯೂಸ್ ಗ್ರೂಪ್ ಗಳ ಕಾಲ. ನಮ್ಮಲ್ಲಿ ನ್ಯೂಸ್ ಗ್ರೂಪ್ ಗಳಿಗೂ ಪೋಸ್ಟ್ ಮಾಡೋಕಾಗ್ತಿರಲಿಲ್ಲ. ಆ ಕಾಲದಲ್ಲಿ ನಾನು ಬರೆದಿದ್ದ ಒಂದು ಇ-ಮೆಯ್ಲ್ ಎಲ್ಲೆಲ್ಲೋ ಸುತ್ತಿ ಕೊನೆಗೆ ನ್ಯೂಸ್ ಗ್ರೂಪ್ ನಲ್ಲೂ ಪೋಸ್ಟ್ ಆಗಿದ್ದನ್ನ ಕೆಲವು ವರ್ಷಗಳ ನಂತರ ಕಂಡಿದ್ದೆ. ಇದೆಲ್ಲ ನೆನಪಾಗಿ, ಸಪ್ತಾಕ್ಷರೀ ಮಂತ್ರವನ್ನು ಜಪಿಸಲು ಸಿಕ್ಕೇಬಿಡಬೇಕೇ? ಸುಮ್ಮನೆ ಇರಲಿ ಎಂದು ಇಲ್ಲಿ ಈಗ ಹಾಕುತ್ತಿರುವೆ.

 

ಹರಿ ಅವರೆ,ಇದು ಇಲ್ಲಿಗೆ ತಕ್ಕುದಲ್ಲವೆನ್ನಿಸಿದರೆ ತೆಗೆದು ಹಾಕಿರಿ. Smiling

 

ಇದು ನಾನು ಬರೆದದ್ದು ಸುಮಾರು ೧೯೯೩-೧೯೯೪ ರಲ್ಲಿ ಇರಬೇಕು -ಬರಹ-ಯುನಿಕೋಡ್ ಮೊದಲಾದ್ದೆಲ್ಲ ಬರೋದಕ್ಕೆ ಮುಂಚೆ - ನನ್ನ ನಂತರದ ಇಂಟರ್ನೆಟ್ ಅವತಾರಗಳನ್ನು ತಾಳುವ ಮೊದಲು ಬರೆದಿರುವುದಿದು ;-) 

 

ಯಾವುದೇ ಬದಲಾವಣೆಗಳಿಲ್ಲದೆ ಹಾಕುತ್ತಿರುವುದರಿಂದ out of times Smiling ಎನ್ನಿಸಬಹುದೇನೋ!

 

 

-----------------------------------------------------------------------------------------------------------------------------------------------------

ಹೇಗಿದ್ದೀರಾ ಸ್ವಾಮಿ ,

 

ಸ್ವಲ್ಪ ಮುಂಚೆ Banglish ಬಗ್ಗೆ ಒಂದು ಮೈಲ್ ಬಂತು. Banglish ಅಂದ್ರೆ ಗೊತ್ತಲ್ಲ, ಬೆಂಗಳೂರಿನಲ್ಲಿ
ಮಾತಾಡೋ
English. ನನಗನ್ನಿಸ್ತು, ನಾನ್ಯಾಕೆ Kanglish ಬಗ್ಗೆ ಬರೀಬಾರ್ದು ಅಂತ. ಏನಂತೀರಾ ?

 

Kanglish ಇದರ definition ಏನಪ್ಪಾ ಅಂದ್ರೆ (ನೋಡಿದ್ರಾ, ಏನು ಅಂತ
ಹೇಳೋದಕ್ಕೆ ಮುಂಚೇನೇ
Kanglish ನಲ್ಲೇ start ಮಾಡ್ಬಿಟ್ಟೆ!. ಮುಖ್ಯವಾಗಿ ಬೆಂಗ್ಳೂರಿನಲ್ಲಿ
ಮಾತಾಡೋ (ಈಗೀಗ ಉಳಿದ ಕಡೆಗೂ ವ್ಯಾಪಿಸ್ತಾ
ಇರೋ ) ಕನ್ನಡ.

 

Kanglish ಕಲಿತ್ಕೊಳ್ಳೋದು ಬಹಳ easy ಬಿದಿ. ಮಾತಲ್ಲಿ ಆದಷ್ಟು English ಪದ ಸೇರಿಸ್ತಾ ಹೋದ್ರೆ ಆಯಿತು.

 

ಈಗ ನೋಡಿ ಒಂದು exampleಉ. ಯಾರೋ ಒಬ್ರು ಬಂದು ಒಂದು ಅಡ್ರೆಸ್
ತೋರ್ಸಿ ಕೇಳ್ತಾರೆ ಅಂತಿಟ್ಕೊಳ್ಳಿ:

 

"ಈ ಅಡ್ರೆಸ್ ಎಲ್ಲಿ ಬರತ್ತೆ, ಸಾರ್ ?"

 

Typical Kaglish ಉತ್ತರ will be like this :

 

Just ಇದೇ road ನಲ್ಲಿ about ten minutes walk ಮಾಡಿದ್ರೆ, ನಿಮ್ಮ left side ಗೆ ಒಂದು school ಬರತ್ತೆ - Kemp-Kemp English School. ಅಲ್ಲಿ opposite side ನಲ್ಲಿ ಒಂದು road ಹೋಗತ್ತೆ. ಆ roadಅಲ್ಲಿ, three crosses ಬಿಟ್ಟು 4th crossನಲ್ಲಿ turn ತೊಗೊಂಡ್ರೆ right sideನಲ್ಲಿ second house .

 

Kanglish ಬಗ್ಗೆ ಹೆಚ್ಚು ಪ್ರೀತಿ ಇರುವ ಬೆಂಗಳೂರಿಗರಿಗಾಗಿ rulesಅನ್ನು English ನಲ್ಲೇ ಕೊಟ್ಟಿದೆ!

 

First Golden Rule Of Kanglish


 

As far as possible "Relational Operators" are in English.

 

Exampleಗೆ ಹೇಳೋದಾದರೆ ನಮ್ಮ ತಾಯಿ, ನನ್ನ ತಂಗಿ, ನನ್ನ ಮಾವ ಇತ್ಯಾದಿ ಕಂಗ್ಲಿಶ್ ನಲ್ಲಿ prohibittedಉ. ಇವುಗಳು ನಮ್ಮ motherಉ, ನನ್ನ sisterಉ, ನನ್ನ father-in-law hIge transform ಆಗುತ್ತವೆ!

 

Second Golden Rule Of Kanglish

 

As far as possible, all 'directional operators' are in English

 

So, ಎದುರುಗಡೆ, ಹೊರಗಡೆ, ಒಳಗಡೆ, ಮೇಲ್ಗಡೆ
etc wordsಉ , ಕಂಗ್ಲಿಶ್ ನಲ್ಲಿ use ಮಾಡಲೇ ಬಾರದು. ಇವನ್ನೇ opposite sideಉ, outsideಅಲ್ಲಿ, ಅಲ್ಲಿ, topನಲ್ಲಿ ಅಂತ ಅಂದ್ರೇನೇ ಕಂಗ್ಲೀಶಿನ beauty !

 

Third Golden Rule Of Kanglish

 

As for as possible , keep adjectives in English

 

ಕಂಗ್ಲಿಶ್ ನಲ್ಲಿ ಉದ್ದ, ಎತ್ತರ, ಚೆನ್ನ, ಬೇಜಾರು, ಬುದ್ಧಿವಂತ, ಚುರುಕು, ಬಿಸಿ,ತಣ್ಣನೆ ಹೀಗೆ ಯಾವ ಕನ್ನಡ ವಿಶೇಷಣಗಳನ್ನೂ ಉಪಯೋಗಿಸಲೇಬಾರದು.

 

Example ಬೇಕು ಅಂದ್ರೆ ,

 

ನಮ್ಮ ಉಷಾ second daughtervery intelligentಉ! Poems ಎಲ್ಲಾ ಎಶ್ಟು fine ಆಗಿ recite ಮಾಡ್ತಾಳೆ ಅಂತೀರ !!

Coffee (ಕಾಫಿ - ಕನ್ನಡಿಗರ ಉಚ್ಚಾರದಲ್ಲಿ) cold ಆಗಿಬಿಡ್ತೋ ಏನೋ !

Three months ಇಂದ ಯಾವುದೂ cinema ನೋಡದೇ ತುಂಬಾ boreಉ.

History lecturerಉ ಎಶ್ಟು handsome, ನೋಡೇ !

 

Fourth Golden Rule of Kanglish


 

Anything related with money or status should be in English

 

Exampleಗೆ

 

ರಾಣಿ ಮನೇಲಿ, ಅವಳ್ಗೆ fifteen ತೊಲ gold ಹಾಕಿದ್ದಾರಂತೆ ಕಣ್ರೀ !

ನಮ್ಮ daughterಉ ಹೊಸ washing machine purchase ಮಾದಿದ್ದಾಳೆ. Thirty thousand Rupeesಉ !

ನಮ್ಮ ಶಾಲಿನಿ schoolಅಲ್ಲಿ feesಉ, three fifty rupees per monthಉ.

 

* Corollary : The more educated people often drop the extra ’ಉ’ at the end of Kanglish words.

 

Final Golden Rule Of Kanglish

 

If you want to be a Kanglish expert follow this rule:

If you can insert an English word at any place,just use it.

 

exampleಗೆ ಹೇಳೋದಾದ್ರೆ

 

Never say ಉಪಯೋಗಿಸು when you can say use ಮಾಡು

Never say ಸಹಾಯ ಬೇಕಿತ್ತು when you can say help ಬೇಕಿತ್ತು

Never say ನಾನು ತುಂಬಾ ಕಾದೆ when you can say ನಾನು long time wait ಮಾಡಿದೆ

Don't say ಜೊತೇಲಿ ಹೋಗು instead say accompany ಮಾಡು

Don't say ಬೆಲೆ ಜಾಸ್ತಿ ; use  costly

Don't say ಕೆಲಸ ಮಾಡ್ತಾರೆ; use work ಮಾಡ್ತಾರೆ

Don't say ತಡ ಆಯ್ತು; Say late ಆಯ್ತು

Don't say ಯೋಚನೆ ಮಾಡ್ಬೇಡಿ ; Say worry ಮಾಡ್ಕೋಬೇಡಿ

Never say ಹೊಂದಿಕೊಂಡು ಹೋಗು for adjus ಮಾಡ್ಕೋ

Say no to ಮತ್ತೆ ನೋಡೋಣ ; it should be 'See You' !

 

So ,

 

See you Smiling

 

-ಹಂಸಾನಂದಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

venkatesh's picture

ಮಾತ್ಗೆ ಹೇಳ್ತೀನಿ. ಮಿಸ್ಟೇಕ್ ಮಾಡ್ಕೊಬೇಡಿ. ಆಫ್ ಕೋರ್ಸ್, ಇವೆಲ್ಲಾ ಕಾಮನ್ ಅಂತಿಟ್ಕೊಳ್ಳಿ.

ಆಕೆ : ಯಾರೋ ನಿಮ್ಮನೆಗೆ ಬಂಧಾಗಿದೆ. ಯಾರ್ರಿ, ಅವ್ರು.

ಈಕೆ : ಅದೇ ನಮ್ ಹಸ್ಬೆಂಡ್ ಇದಾರಲ್ಲ ., ಅವರ್ ಕಸಿನ್ ನ ಆಂಟಿ, ಅಮೆರಿಕದಲ್ಲಿ ಎಲ್ಲೋ ಇದಾರ್ರಿ. ಈಗ್ ಬಂದಿರೋರ್ರು, ಪಕ್ಕದ್ ಮನೇಲಿ, ನಮ್ ಬಬ್ಲೂ ಇಲ್ವೆ. ಅವನ್ ಫ್ರೆಂಡ್ ನ ಫಿಯಾನ್ಸಿ, ಇದಾಳಲ್ಲ. ಅವರ್ತರ್ಹಾನೆ. ಏನ್ ಕ್ಯೂಟಾಗಿದಾರಲ್ವ. ಸ್ವಲ್ಪ ಏಜ್ ಆಗಿದೆ. ಒಳ್ಳೆ ಫಿಲ್ಮ್ ಸ್ಟಾರ್ ತರ್ಹ, ಬೊಂಬಾಟಾಗ್ ಕಾಣ್ಸ್ತಾರೆ. !

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

ASHOKKUMAR's picture

very interestingಉ :)
*ಅಶೋಕ್

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

venkatesh's picture

ಏನ್ಸಾರ್ ಅಂತೂ ಫಾರಿನ್ ರಿಟರ್ನ್ ಆಗ್ಬಿಟ್ರಿ. ನಿಮ್ಗೇನಪ್ಪ ಮಕ್ಳು ಎಲ್ಲ ಚೆನ್ನಾಗಿ ಮ್ಯಾನೇಜ್ ಮಾಡ್ತಾರೆ. ನಮ್ ರಿಲೇಟಿವ್ ಒಬ್ರಿದಾರ್ರಿ. ಎಲ್ಲೊ ಫಿಲೆಡೆಲ್ಫಿಯಾನೊ ಕೆನಡಾದಲ್ಲೊ ಗೊತ್ತಿಲ್ಲ. ಯಾವಾಗ್ಲೂ ಇನ್ವೈಟ್ ಮಾಡ್ತಾನೇ ಇರ್ತಾರೆ. ನಾವೆಲ್ ಹೋಗೋದ್ ಹೇಳಿ. ನಮ್ ಬ್ಯಾಂಗ್ಳುರ್ ನಲ್ಲೆ, ಫ್ರೆಂಡ್ಸ್ ಕಂಪೆಲ್ ಮಾಡ್ತಾರೆ. ಒಟ್ಗೆ, ಸಿಂಗಪುರ್ ಕ್ಕೆ ಟ್ರಿಪ್ ಹಾಕ್ರಿ, ನಾವು ಬರ್ತಿವಿ, ಅಂತ ಪ್ರಾಮಿಸ್ ಮಡಿದಾರ್ರಿ. ನಾನೇ ಡೋಂಟ್ ಕೇರ್ ಅಂದ್ಬಿಟ್ಟೆ. ಯಾರ್ರಿ, ಸುಡ್ಗಾಡಿ ಅಲ್ಲೆಲ್ಲಾ ಟ್ರಾವೆಲ್ ಮಾಡಿ ಹೆಲ್ತ್ ಎಲ್ಲ ಅಪ್ಸೆಟ್ ಮಾಡ್ಕೊಂಡು . ಅಲ್ವಾ ನಿಮ್ ಒಪಿನಿಯನ್ ಏನು ?

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

shreekant.mishrikoti's picture

ರಾಜ್ಯೋತ್ಸವದ ದಿನ ಚಾನೆಲ್ ಬದಲಾಯಿಸ್ತಿದ್ದೆ . ಉದಯ ಚಾನೆಲ್ ಮೂಲಕ ಹಾದು ಹೋಗುವಾಗ ಯಾರ್ನೋ ಕೇಳ್ತಾ ಇದ್ರು .

ಕಸ್ಟಮರ್ಸ್ ನಿಮಗೆ ಇಂಗ್ಲೀಷಲ್ಲಿ ಕೊಶ್ಚನ್ ಕೇಳ್ದಾಗ ಆನ್ಸರ್ ಮಾಡೋಕೆ ಪ್ರಾಬ್ಲೆಂ ಆಗುತ್ತಾ ?

ರಾಜ್ಯೋತ್ಸವ ನಿಮಿತ್ತ ವಿಶೇಷ ಕಾರ್ಯಕ್ರಮ ಇದ್ದಿರ್ಬೇಕು ! ? ! ? !

ಏನು ಉತ್ರ ಹೇಳಿದ್ರೋ ? ಅಶ್ಟರಲ್ಲಿ ನಾನು ಚಾನೆಲ್ ಬದಲಾಯ್ಸಿ ಆಗಿತ್ತು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

mahesha's picture

Respected ಹಂಸಾನಂದಿ Sir

ನಿಮ್ಮ ಈ Kanglish Topic ಕುರಿತ article ತುಂಬಾ excellentಆಗಿದೆ. ಸ್ವಲ್ವ out dated ಎಂದು ನೀವು guess ಮಾಡಿರೋ ಹಾಗಿದೆ.

ಈಗಿನ Bangalore Kanglishಲ್ಲಿ endಇನ ’ಉ’ almost completeಆಗಿ ನಿಂತುಹೋಗಿದೆ.

one more important point miss ಆಗಿದೆ. Numericals ಎಲ್ಲ ಒಂದು ಎರಡು ಅಲ್ಲ one, two, three

ಧನ್ಯವಾದ
-ಮಹೇಶ

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

kpbolumbu's picture

ನಮ್ಮಲ್ಲಾದರೆ "depends on" ಎನ್ನುವುದನ್ನು "-ನ್ನು ಹೊನ್ದಿಕೊಣ್ಡು" ಎನ್ನುತ್ತೇವೆ . ಕಂಗ್ಲೀಷಿನಲ್ಲೂ "-ಅ ಮೇಲೆ depend ಆಗುತ್ತೆ" ಎನ್ನುವುದರ ಬದಲು "-ನ್ನು depend ಆಗುತ್ತೆ" ಎನ್ನಬಹುದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

kannadakanda's picture

ನಿಮ್ಮನೆ ಕಾಯ್ವಾಗ. ನಿಮ್ಗ್ಯಾಕ್ಲಾ ಬಂತು ಕಂಗ್ಲಿಷ್ ಹುಚ್ಚು?

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

hamsanandi's picture

:-) :-) :-)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

kpbolumbu's picture

ಅನಂತು, ಇರಣ್ಣ... ಕೊಂಚ ಟಿಸ್ಕಿಸ್ ಮಾಡ್ಕ್ಯಳಣ...
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

srivathsajoshi's picture

ಕೆಲವು silver rules ಸಹ ಇವೆ:

1) 'So' should be followed bt 'ಹಾಗಾಗಿ’. ಉದಾ: ನನಗೆ high temeprature ಇತ್ತು, So ಹಾಗಾಗಿ Schoolಗೆ ಇವತ್ತು absent.

2) Plural indication should be in both languages. ಉದಾ: ಯಾರ್ರೀ ಈ rulesಗಳನ್ನೆಲ್ಲ follow ಮಾಡ್ತಾರೆ?

3) Dual words (ದ್ವಂದ್ವ ಪದಪ್ರಯೋಗ) should be translated from kannada to english and used same number of times. ಉದಾ: ಅವರೆಲ್ಲ separate separate ಆಗಿ applicantion fill ಮಾಡಿದ್ರು (ಬೇರೇಬೇರೆಯಾಗಿ has been 100% translated). And of course the famous example, "morning morning ಎಂಥದಯ್ಯಾ ನಿನ್ನ problemಉ?"

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

venkatesh's picture

ಏನಾದ್ರು ಹೇಳಿ. ನಮಗೆ ನಮ್ಮ ಕನ್ನಡ ಪದಗಳ ಉಗ್ರಾಣಗಳನ್ನು ಹೆಚ್ಚುಮಾಡಬೇಕಾದ ಅಗತ್ಯಗಳನ್ನು ಪರೋಕ್ಶ್ಗವಾಗಿ ಈ ಅರಳಿಕಟ್ಟೆ ಮಾತುಕತೆ, ಎಡೆಮಾಡಿಕೊಟ್ಟಿದೆ, ಎನ್ನುವುದು ಮುಖ್ಯವಾದ ವಿಶಯ. ಏನೋ ಅದೋ ಇದೋ ದಿನನಿತ್ಯದ ಮಾತುಕತೆಗೆ ಪೂರಕವಾಗಿದೆಯೇ ವಿನಃ ತಕನಿಕಿಪದಗಳ, [ಹಿಂದಿ] ಹಾಗೂ ಬೇರೆ ವೈಜ್ಞಾನಿಕ ವಿಶಯಗಳನ್ನು ಮಾತುಕತೆಯಲ್ಲಿ ಸೇರಿಸಿಕೊಂಡಾಗ, ಆಗುವ ಫಜೀತಿಯನ್ನು ನಿಜವಾಗಿಯೂ ನಾವು. ನೀವು ಮನಗಂಡಿದ್ದೇವೆ. ಈ ನಿಟ್ಟಿನಲ್ಲಿ. ದಿವಂಗತ, ನಾರಾಯಣರಾಯರು, ಹೆಗ್ಗಡೆ, ರಾಮಕೃಷ್ಣರಾಯರು, ಮುಂತಾದವರು, ಮುಂದೆಹೋಗಿ ಮಾರ್ಗದರ್ಶನ ನೀಡಿದ್ದಾರೆ. ಆದರೆ, ಇದು ಭಾರಿ ಐಸ್ ಬರ್ಗ್ ನ ಒಂದು ಟಿಪ್ ಅಷ್ಟೆ !
ಹಾಗಾಗಿ, ಬದಲಾಗುತ್ತಿರುವ ವಿಶ್ವದ ಅಗಾಧತೆಗೆ ಸ್ಪಂದಿಸುವ ಸಮಯದಲ್ಲಿ ಪರ್ಯಾಯ ಕನ್ನಡ ಪದಗಳ ಸರಕಿಲ್ಲದೆ, ತಡಬಡಾಯಿಸುತ್ತೇವೆ.
ಅದೇ ಪದ, ಪದೇ ಪದೇ ಬಳಸಿದಾಗ, ಹಳಸಲು ವಾಸನೆ ಬರುತ್ತದೆ. ಅದೇ ಪ್ಯುರ್ ಅಂದು ಅದನ್ನೇ ಹೇಳಿದ್ದೇ ಹೇಳೊ ಕೈಸ್ಬೈ ದಾಸಯ್ಯ ಅನ್ನುವ ತರಹ ಹೋಗಬೇಕೇ, ಇಲ್ಲವೇ, ಇಂಗ್ಲೀಷ್ ಸಾಹಿತ್ಯಕಾರರ ತರಹ, ತಮ್ಮ ೨೬ ಅಕ್ಷರಗಳಲ್ಲೇ ಪೂರ ವಿಶ್ವವನ್ನು ಬಗ್ಗುಬಡಿಯುವ ಸಾಹಸ ಪ್ರವೃತ್ತಿ ಬೆಳಸಿಕೊಳ್ಳಬೇಕೇ. ಎನ್ನುವುದನ್ನು ನಮ್ಮನ್ನು ನಾವೇ ಕೇಳಿಕೊಂಡಾಗ ಸಿಗುವ ಉತ್ತರವೇನು ? ಎರವಲು ತನ್ನಿ, ಪದಗಳನ್ನು ನಿಧಾನವಾಗಿ ಅವನ್ನು ನಿಮ್ಮ ನಾಲಗೆಯ ಸಲೈವದಲ್ಲಿ ರುಬ್ಬಿ, ಗ್ರೈಂಡ್ ಮಾಡಿ, ಪೇಸ್ಟ್ ಮಾಡಿ ಯೂಸ್ ಮಾಡಿ, ಅಂತ ಅಲ್ವೇ ಹೇಳಬೇಕಾದದ್ದು ?

ಏನೋ ನನ್ ತಲೆ ನಲ್ಲಿ ಸ್ಯ್ರೈಕ್ ಆಗಿದ್ದನ್ನ ಯಾವ ಇನ್ಹಿಬಿಶನ್ ಇಲ್ದೆ, ನಿಮ್ ಮುಂದೆ ಶೇರ್ ಮಾಡ್ಕೊಂಡಿದೀನಿ. ಉಳ್ದಿದ್ದು, ನಿಮ್ ನಿಮ್ ಇಂಡಿವಿಜುಯಲ್ ಟೇಸ್ಟ್ ಗೆ ಬಿಟ್ಟಿದ್ದು. ನೀವೇ ಡಿಸೈಡ್ ಮಾಡಿ ಒಂದ್ ಕನ್ ಕ್ಲೂಶನ್ ಗೆ ಬಂದ್ರೆ, ಒಳ್ಳೇದಲ್ವೆ. ಏನ್ ಡಿಸೈಡ್ ಮಾಡಿದ್ರಿ ? ಓಪನ್ನಾಗ್ ಹೇಳಿ. ......ಪರ್ವಾಗಿಲ್ಲ........ ನೊ ರಿಸರ್ವೇಶನ್ಸ ಅಟ್ ಆಲ್..........

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

kpbolumbu's picture

ಕೆಲವೆಡೆ ಅದು ಸೆಪ್ ಸೆಪ್ರೇಟು....ಬೇರ್ ಬೇರೆ ಇದ್ದಂಗೆ ಅದೂವೇ....
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

sandhya.darshini's picture

ನಾವು ಸ್ಕೂಲ್ನಲ್ಲಿ ಉಪಯೋಗಿಸ್ತಾ ಇದ್ದದ್ದು :
"miss,,, she is hitting me sim-simply ".... :)

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

mahesha's picture

ಸಕ್ಕತ್

ಆದರೆ ಈ ಹುಡುಗೀರ್‍ ಯಾರೂ ಕನ್ನಡ ಟೀಚರ್‍ ಹ್ಯಾಂಡ್ಸಮ್ ಅನ್ಲಿಲ್ವೇ
ನನ್ನಿ
-ಮಹೇಶ

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

nilgiri's picture

**History lecturerಉ ಎಶ್ಟು handsome, ನೋಡೇ ! **

ನಮ್ಮ english ಲೆಕ್ಚರರ್ ಗೆ ಹೀಗೆ ಹೇಳ್ತಾ ಇದ್ವಿ :D

ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

hndivya's picture

ನಾವು ಅಸ್ಟೇ ನಂ maths ಸರ್ ಗೆ ಹೇಳ್ತಿದ್ವಿ :)
ಕನ್ನಡದ ಕುವರಿ
ದಿವ್ಯ