ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ನಿಮ್ಮೆಲ್ಲರಂತೆ ನಾನೊಬ್ಬ ಕನ್ನಡಿಗ. ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wo...

ಮೂರು ಬಗೆಯ ಜನರು

ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು

(ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)*

ಮೂಲ ಸಂಸ್ಕೃತ ಸುಭಾಷಿತ:

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ:
ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ

-ಹಂಸಾನಂದಿ

*: ವೆಂಕಟಸುಬ್ಬಯ್ಯನವರ ನಿಘಂಟುವಿನ ನೆರವು ಪಡೆದಿದ್ದೇನೆಂದು ತಿಳಿಸಲು ನನಗೆ ಹಿಂಜರಿಕೆಯೇನಿಲ್ಲ :) ಕನ್ನಡದಲ್ಲಿ ಟ ಠ ಡ ಢ ಣ ಗಳು ಹೆಚ್ಚಾಗಿ ಇರುವುದೆಂದು ಪ್ರತೀತಿ. ಅದಕ್ಕೆಂದೇ, ಸ್ವಲ್ಪ ಡಕಾರವನ್ನು ಹೆಚ್ಚಿಸಿ ಅನುವಾದಿಸಿದ್ದೇನೆ.

**: ಅನಿಲ ಜೋಷಿಯವರ ಟಿಪ್ಪಣಿ ನೋಡಿದ ನಂತರ, ಅದು ಸರಿ ಎನ್ನಿಸಿ, 'ಮುಗಿಸು' ವನ್ನು 'ನಡೆಸು'ವಾಗಿ ಬದಲಾಯಿಸಿರುವೆ. ನಡೆಸುವುದರಲ್ಲೆ, ತಾನೇ ತಾನಾಗಿ, ವರ್ತಮಾನ ಕಾಲ ಹಾಗೂ ಮುಂದುವರೆಯುವ ಸೂಚನೆ ಎರಡೂ ಬರುತ್ತಲ್ಲವ :) ?

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮೂರು ಬಗೆಯ ಜನರು

ವೈಭವ's picture

ಸಕ್ಕತ್ ಹಂಸಾನಂದಿಗಳೆ,
ತುಂಬ ತುಂಬ ಇಶ್ಟ ಆಯಿತು.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಮೂರು ಬಗೆಯ ಜನರು

mahesha's picture

ಅಬ್ಬ.. ಅಗ್ಗಳ!

ಉ: ಮೂರು ಬಗೆಯ ಜನರು

aniljoshi's picture

ಹಂಸಾನಂದಿಗಳೆ,
ಬಹಳ ಚನ್ನಾಗಿದೆ ಸುಭಾಷಿತ ಮತ್ತು ಅನುವಾದ.

ಒಂದು ಅನುಮಾನ/ಅನಿಸಿಕೆ : ಮೂಲದಲ್ಲಿ 'ನ ಪರಿತ್ಯಜಂತಿ' ಎಂದಿರುವದನ್ನ 'ಕೈ ಬಿಡದೆ ಮುಗಿಸುವವರಗ್ಗಳರು' ಎನ್ನುವ ಬದಲು 'ಕೈ ಬಿಡರು ಅಗ್ಗಳರು' ಎನ್ನಬೇಕಿತ್ತೆ ? ಆಗ ಮೂಲಕ್ಕೂ ಮತ್ತಷ್ಟು ಹತ್ತಿರ ಹಾಗೂ ನಿರಂತರ ಮಾಡುತ್ತಲೇ ಇರಬೇಕಾದ ಒಳ್ಳೆ ಕೆಲಸಗಳಿಗೂ ಈ ಸುಭಾಷಿತ ಹೊಂದುತ್ತದೆ. ಅಲ್ಲವೆ?

ಅನಿಲ

ಉ: ಮೂರು ಬಗೆಯ ಜನರು

hamsanandi's picture

ಅನಿಲ ಜೋಷಿ,

ನಿಮ್ಮ ಪ್ರತಿಕ್ರಿಯೆ ಮತ್ತು ಸಲಹೆಗೆ ಧನ್ಯವಾದಗಳು. ಮುಗಿಸುವುದನ್ನು ನಡೆಸುವುದಾಗಿ present continous ಗೆ ಬದಲಾಯಿಸಿದ್ದೇನೆ !

-ಹಂಸಾನಂದಿ

ಉ: ಮೂರು ಬಗೆಯ ಜನರು

ಸಂಗನಗೌಡ's picture

ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ಮುಗಿಸುವವಗ್ಗಳರು.

ತುಂಬಾ ಚೆನ್ನಾಗಿದೆ. ನಿಮಗೆ ತಮಿಳು ತಿಳಿದಿರುವದಕ್ಕೇನೋ ಇಂತ ಅಚ್ಚ ಕನ್ನಡ ಪದಗಳನ್ನು ಬಳಸಲು ತುಂಬ ಅನುವಾಗಿರೋದು ಅನಿಸುತ್ತೆ. ಇದನ್ನು ಬಿಡಿಸಿ ಹೇಳಬೇಕೆನಿಸಿದೆ, ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು - ಅಂದರೆ ತೊಂದರೆಗೆ ಹೆದರಿ ಸೋಮಾರಿಗಳು ಕೆಲಸವನ್ನು ಸುರುನೇ ಮಾಡಲ್ಲ. ನಡುನಡುವೆ ತಡೆ ಬರಲು ಬಿಡುವರು ನಾಡಾಡಿಗಳು - ನಡುನಡುವೆ ತಡೆ ಬಂದಾಗ ಹಿಡಿದ ಕೆಲಸವನ್ನು ಅಲ್ಲಿಗೇ ಬಿಡೋರೇ ಹೆಚ್ಚು, ಎಡಬಿಡದೆ ಬರುವ ತೊಂದರೆಗಳನ್ನು ಎದುರಿಸಿ, ಹಿಡಿದ ಕೆಲಸವನ್ನು ಕೈ ಬಿಡದೇ ಮುಗಿಸುವವರೇ ಅಗ್ಗಳರು ಅಂದರೆ ಮೇಲ್ಮಟ್ಟದವರು, ಹೆಚ್ಚಿನವರು, ’ಗೌರವಾನ್ವಿತರು’.

ವಾವ್!