ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸುಲಭವಲ್ಲವೋ ಮಹದಾನಂದ ...

April 24, 2007 - 12:59am — hamsanandi

ಹಿಂದಿನ ಬರಹದಲ್ಲಿ, ಪುರಂದರ ದಾಸರ ಇಂದಿನ ಯೋಗ ಶುಭಯೋಗ ಎನ್ನುವ ಪದವನ್ನು ಹೆಸರಿಸಿದ್ದೆ. ಅದಕ್ಕೇ ಅವರದೇ ಇನ್ನೊಂದು ದೇವರನಾಮದ ಬಗ್ಗೆ ಮಾತಾಡೋಣ ಎನ್ನಿಸಿತು. ಪುರಂದರ ದಾಸರು ನಾಕು ಲಕ್ಷ ಎಪ್ಪತ್ತೈದು ಸಾವಿರ ರಚನೆಗಳನ್ನು ಬರೆದರೆಂದು ನಂಬಿಕೆ. ಈ ನಂಬಿಕೆ ಹೇಗೇ ಇರಲಿ, ನಮಗೆ ಸಿಕ್ಕಿರುವುದು ಸುಮಾರು ಎರಡು ಸಾವಿರಕ್ಕೂ ಕಡಿಮೆ ರಚನೆಗಳು. ದಾಸಸಾಹಿತ್ಯದಲ್ಲಿ ಪುರಂದರರು ಅತೀ ಮುಖ್ಯರಾಗಿ ಕಾಣಲು ಅವರ ಸರಳವಾದ, ಮನಸ್ಸಿಗೆ ಸುಲಭವಾಗಿ ನಾಟುವ ಶೈಲಿಯೇ ಕಾರಣ ಎಂದು ನನ್ನ ಭಾವನೆ.

ಇವರ ಹೆಚ್ಚಿನಂಶ ರಚನೆಗಳು ಬಹಳ ಸುಲಭವಾಗಿದ್ದರೂ, ಕೆಲವು ಒಗಟಿನಂತಹ ಪದಗಳನ್ನೂ ಪುರಂದರ ದಾಸರು ಬರೆದಿದ್ದಾರೆ. ಅರ್ಥ ಆಯಿತೋ ಇಲ್ಲವೋ ಎಂದು ತಿಳಿಯಲು ಹೆಣಗಬೇಕಾದ ಪರಿಸ್ಥಿತಿ ಈ ಪದಗಳದ್ದು. ಅಂತಹ ಒಂದು ಉದಾಹರಣೆ ಇಲ್ಲಿದೆ.

ಪಲ್ಲವಿ :

ಸುಲಭವಲ್ಲವೊ ಮಹದಾನಂದ ತನ್ನೊಳಗೆ ತಾ ತಿಳಿಯಬೇಕು ಗುರು ದಯದಿಂದ

ಚರಣ 1:

ಬೆಕ್ಕನು ಇಲಿ ನುಂಗುವ ತನಕ ಕಡುರಕ್ಕಸಿಯ ಕಂಡು ಗಿಣಿ ನುಂಗುವತನಕ

ಮಕ್ಕಳ ಭಕ್ಷಿಸುವ ತನಕ ಮದಸೊಕ್ಕಿದ ಗಜವನ್ನು ನರಿ ನುಂಗುವ ತನಕ

ಚರಣ 2:

ಇಷ್ಟದೈವತ ವಶವಾಗೋತನಕ ಮೂರು ಬೆಟ್ಟಗಳನ್ನು ನೊಣ ನುಂಗುವತನಕ

ಶಿಷ್ಟರೊಡನೆ ಸೇರುವತನಕ ಗುಬ್ಬಿ ರಾಜಹಂಸನ ನುಂಗುವತನಕ

ಚರಣ 3:

ಒಳಹೊರಗೊಂದಾಗುವತನಕ ಸಾಲ ಕಳೆಯೆಂಬುವ ಭಾವ ಬಯಲಾಗುವ ತನಕ

ಬೆಳಗಿನೊಳಗೆ ಕಾಣುವತನಕ ನಮ್ಮ ಪುರಂದರ ವಿಠಲನ ದಯವಾಗುವ ತನಕ

ಈ ಪದ ಓದಲು ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತಾ ಎಂಬ ಪದದಂತಿದೆಯಲ್ಲವೇ? ಶರೀಫರು ಹರಿದಾಸರ ಪ್ರಭಾವಕ್ಕೊಳಗಾಗಿರುವುದು ನಾವು ಇನ್ನೂ ಹಲವೆಡೆ ಕಾಣಬಹುದು.

ಸಂಪದಿಗರೇ, ಈಗ ಈ ಪದದ ಅರ್ಥವನ್ನು ಯಾರಾದರೂ ಬರೆಯಬಲ್ಲಿರಾದರೆ ದಯವಿಟ್ಟು ಬರೆಯಿರಿ. ನಮ್ಮೆಲ್ಲರಿಗೂ ಒಳಿತಾಗುತ್ತದೆ!

  • ಒಗಟು
  • ದಾಸ ಸಾಹಿತ್ಯ
  • ಪುರಂದರ ದಾಸ
  • ಸಮಸ್ಯೆ
~.~
  • hamsanandi ರವರ ಬ್ಲಾಗ್
  • Login or register to post comments
  • 556 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 24, 2007 - 3:20am — hpn

ಉ: ಸುಲಭವಲ್ಲವೋ ಮಹದಾನಂದ ...

hpn's picture

ಮೋಕ್ಷ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2007 - 5:07pm — Sunil Jayaprakash

ಉ:

Sunil Jayaprakash's picture

ಬದುಕಿನಲ್ಲಿ ಆನಂದಕ್ಕಾಗಿಯೇ ತಾನೇ ನಾವೆಲ್ಲರೂ ಹಪಹಪಿಸುವದು - ಆನಂದವೇ ಬ್ರಹ್ಮ Eye-wink ಮೊದಲನೆ ಚರಣದ "ಮಕ್ಕಳ ಭಕ್ಷಿಸುವ ತನಕ" ಪದವನ್ನು ಬಿಟ್ಟು ಮಿಕ್ಕ ಸಾಲಿನ ಅರ್ಥಗಳನ್ನು ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಸರಳವಾಗಿ ಹಾಕುತ್ತಿರುವೆ.

ಈ ಪದ್ಯವನ್ನೋದಿದಾಗ ನನಗೆ ತಿಳಿದದ್ದು, ಈ "ಸುಲಭವಲ್ಲವೋ ಮಹದಾನಂದ"ದಲ್ಲಿ ಅಡಗಿರುವದು "ಅರಿವೇ ಗುರು" ಎಂಬ ತತ್ವ. ಅದನ್ನೇ ದಾಸರು, ಮೊದಲ ಸಾಲಿನಲ್ಲಿಯೇ "ತನ್ನೊಳಗೆ ತಾ ತಿಳಿಯಬೇಕು ಗುರು ದಯದಿಂದ" ಎಂದಿದ್ದಾರೆ. "ಮುಂದೆ ಗುರಿಯಿರಲು, ಹಿಂದೆ ಗುರುವಿರಲು, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ನೆನಪಿಗೆ ತಂದುಕೊಳ್ಳಿ.

ಈ ಅರಿವೇ ಗುರು ಎಂಬ ತತ್ವವನ್ನು ಅನುಸರಿಸಿ ಜ್ಞಾನವನ್ನು (ತಿಳಿಯಬೇಕು) ಸಂಪಾದಿಸುತ್ತಾ, ದುರ್ಬಲರನ್ನು ತಮ್ಮ ಏಳಿಗೆಗೆ ಬಳಸಿಕೊಳ್ಳುವ ಮನಸ್ಥಿತಿಯನ್ನು ಮಟ್ಟಹಾಕಬೇಕು(ಬೆಕ್ಕನು ಇಲಿ ನುಂಗುವ ತನಕ, ಕಡುರಕ್ಕಸಿಯ ಕಂಡು ಗಿಣಿ ನುಂಗು, ಗುಬ್ಬಿ ರಾಜಹಂಸನ ನುಂಗುವತನಕ), ಸಮಾಜದಲ್ಲಿ ಇರಬಹುದಾದ ಅಹಂಕಾರದ ಗುಂಗನ್ನು ಬುದ್ಧಿವಂತಿಕೆಯಿಂದ (ನರಿ) ಕಿತ್ತೊಗೆಯಬೇಕು(ಮದಸೊಕ್ಕಿದ ಗಜವನ್ನು ನರಿ ನುಂಗುವ).
ಮೂರು ಬೆಟ್ಟಗಳನ್ನು ನೊಣ - ನಮ್ಮಲ್ಲಿನ ಜ್ಞಾನವನ್ನು ಬಳಸಿ ಹಣವನ್ನು ಸಂಪಾದಿಸುವದು(???) ಒಟ್ಟಿನಲ್ಲಿ ಎಲ್ಲರೂ ಈ ಭುವಿಯಲ್ಲಿರುವ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಸಮಾನರು ಎಂಬರ್ಥದಲ್ಲಿ.
ಶಿಷ್ಟರೊಡನೆ ಸೇರುವತನಕ - ಸಜ್ಜನರ ಸಂಗ ಹೆಜ್ಜೇನು ಸವಿದಂತೆ ನೆನಪಿಸಿಕೊಳ್ಳಿ
ಒಳ ಹೊರಗು ಒಂದಾಗುವ ತನಕ,
ಸಾಲ ಕಳೆಯೆ ಎಂಬುವ ಭಾವ ಬಯಲಾಗುವ ತನಕ - ಬಹುಶಃ ಇವೆರೆಡು ಮಾತನ್ನು ಜಾತಿ, ಕುಲಗಳ ಬಗ್ಗೆ ಪುರಂದರದಾಸರು ಹೀಗೆ ಹೇಳಿರಬಹುದು.
ಬೆಳಗಿನೊಳಗೆ ಕಾಣುವತನಕ - ತನ್ನತನವನ್ನು ಗುರುತಿಸಿಕೊಳ್ಳದ ಹೊರತು ಬೌದ್ಧಿಕ ಬೆಳವಣಿಗೆ ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ.

ಅಂದರೆ ನಾವು ಜ್ಞಾನವನ್ನು ಸಂಪಾದಿಸಿ, ಅಹಂಕಾರದ ಹುಟ್ಟಡಗಿಸಿ, ನಾವು ದುರ್ಬಲರು ಎಂಬ ನಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಂಡು, ಬೆಳಕಿನೆಡೆಗೆ ನಡೆಯುವ ಚೈತನ್ಯವನ್ನು ಪಡೆದುಕೊಳ್ಳಬೇಕು ಎಂಬುದೇ ಇದರ ಆಶಯ.

ಹಂಸಾನಂದಿಯವರೇ, ಈ ಪದವನ್ನು ಇಲ್ಲಿ ಹಾಕಿದ್ದಕ್ಕಾಗಿ ತುಂಬಾ ತುಂಬಾ ಸವಿಯೊದಗು. ನನಗೆ ಈ ಪದ ತುಂಬಾ ಹಿಡಿಸಿತು. ಈ ಪದ ಒಂದು ಸಾಮಾಜಿಕ ಪದ ಎಂದೆನಿಸುತ್ತದೆ, ಯಾವದೇ ಆಧ್ಯಾತ್ಮದ ಸೊಂಕಿಲ್ಲ. ಅಂದ ಹಾಗೆ, ಹಂಸಾನಂದಿಯವರೆ ಒಂದು ಡೌಟು. ಪುರಂದರ ದಾಸರ ಪದಗಳಲ್ಲಿ, ಸಾಮಾಜಿಕ ಕಲ್ಪನೆ, ಭಕ್ತಿಮಾರ್ಗ, ಕರ್ಮಮಾರ್ಗ, ಜ್ಞಾನಮಾರ್ಗ ಇವುಗಳ ಕುರಿತಾದ ವಿಶ್ಲೇಷಣೆಗಳೇನಾದರೂ ಆಗಿದೆಯೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2007 - 10:04pm — hamsanandi

ಉ:

hamsanandi's picture

ಬಹಳ ಚೆನ್ನಾಗಿ ಬರೆದಿದ್ದೀರ ಸುನಿಲ್ ಅವರೆ

ಪುರಂದರ ದಾಸರು ವಿವಿಧ ವಿಷಯಗಳ ಬಗ್ಗೆ ಬರೆದಿದ್ದಾರೆ. ಆದಾಗ ಒಂದೊಂದು ರಚನೆಯನ್ನು ನೋಡೋಣ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 26, 2007 - 1:49am — bhatpp

ಉ:

bhatpp's picture

ಪುರಂದರದಾಸರ ಒಟ್ಟೂ ರಚನೆಗಳನ್ನು ಪುರಂದರೋಪನಿಷತ್ ಎಂದು ಕರೆಯುವುದಲ್ಲದೇ, ನಾನು ಕೇಳಿದ ಹಾಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅದನ್ನು ಆಳವಾಗಿ ಅಭ್ಯಾಸ ಮಾಡುತ್ತಾರೆ (ಈ ವಿಷಯದ ಮೇಲೆ ಕೆಲ ಪ್ರಬಂಧ ಅಥವಾ thesisಗಳು ಸಿಕ್ಕಲೂ ಸಿಗಬಹುದು!).

ಈ ಪದ್ಯವನ್ನು ಓದಿದ ಹಾಗೆ ನನಗೆ (ಪುರಂದರ)ದಾಸರ ಇನ್ನೊಂದು ಹಾಡು ನೆನಪಿಗೆ ಬಂತು:
"ಸಾಮಾನ್ಯವಲ್ಲ ಶ್ರೀ ಹರಿ ಸೇವೆ, ಪಾಮರ ಜನರಿಗೆ
..
ಅಂತರ ಮಲಿನವು ಅಳಿಯಬೇಕು
..
ಸಂತತ ಮನದಲಿ ನಿರಂತವ ತಾ ಚಿಂತಿಸಬೇಕು .."

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ಕನಸ್ಸು
  • ನಾನು ಯಾವ ಆತ್ಮ
  • ಹೃದಯದ ಭಾವ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:04am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator