ಪುರಂದರ ದಾಸರ ಆರಾಧನೆ - ೨೦೦೯
ಪುಷ್ಯ ಬಹುಳ ಅಮಾವಾಸ್ಯೆ. ಜನವರಿ ೨೫, ೨೦೦೯ ಪುರಂದರದಾಸರ ಆರಾಧನೆಯ ದಿನ.
ಕಳೆದ ಆರು ತಿಂಗಳಲ್ಲಿ ಮೊದಲ್ಗೊಂಡ ಹರಿದಾಸ.ಇನ್ ನಲ್ಲಿ ಈಗ ಸುಮಾರು ೨೬೦ ಕ್ಕೂ
ಹೆಚ್ಚಿನ ದೇವರನಾಮಗಳಿವೆ ಎನ್ನುವುದನ್ನು ನೋಡಿದರೆ, ಬಹಳ ಸಂತೋಷವಾಗುತ್ತೆ. ಪುರಂದರರ
ಲಭ್ಯವಿರುವ ರಚನೆಗಳು ೧೫೦೦ಕ್ಕಿಂತ ಹೆಚ್ಚಿಲ್ಲ ಅನ್ನುವುದನ್ನು ನೆನೆದಾಗ, ಈ ಬೆಳವಣಿಗೆ
ದೊಡ್ಡದೇ.
ಶ್ರೀಕಾಂತ ಮಿಶ್ರಿಕೋಟಿಯವರ ಜೊತೆ ಒಮ್ಮೆ ಮಾತಾಡುತ್ತಿದ್ದಾಗ ಈ ವರ್ಷದ ಆರಾಧನೆಯಯ
ಒಳಗೆ ೧೦೦ ರಚನೆಗಳನ್ನಾದರೂ ಹಾಕುವ ಉದ್ದೇಶವಿದೆ ಎಂದಿದ್ದರು - ಅದಕ್ಕೂ ಹೆಚ್ಚಿನ
ರಚನೆಗಳನ್ನು ಕಳೆದ ತಿಂಗಳಲ್ಲಿ ಸೇರಿಸಿದ್ದಾರೆ. ಹಾಗೇ ಇನ್ನೂ ಹಲವು ಆಸಕ್ತರು ಕೂಡ ಈ
ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ.
ಎಲ್ಲರಿಗೂ, ನನ್ನ ಧನ್ಯವಾದಗಳು! ಹೀಗೇ ಮುಂದಿನ ವರ್ಷದೊಳಗೆ ಪುರಂದರದಾಸರ ಉಳಿದ ಎಲ್ಲ ರಚನೆಗಳನ್ನೂ,
ಇತರ ದಾಸರ ರಚನೆಗಳನ್ನೂ ಹಾಕಲು ಇನ್ನೂ ಹೆಚ್ಚಿನ ಆಸಕ್ತರು ಮುಂದೆ ಬರುತ್ತಾರೆಂಬ ಆಸೆ,
ಬರುವರೆಂಬ ನಂಬಿಕೆ ನನ್ನದು.
-ಹಂಸಾನಂದಿ
- hamsanandi's blog
- Login or register to post comments
- 432 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಪುರಂದರ ದಾಸರ ಆರಾಧನೆ - ೨೦೦೯
ಪ್ರಿಯ ಹಂಸಾನಂದಿಯವರೇ,
ನಿಮ್ಮ ಹರಿದಾಸರ ರಚನೆಗಳ ಸಂಗ್ರಹ ಚೆನ್ನಾಗಿ ಆಗುತ್ತಿರುವುದು ನಿಜಕ್ಕೂ ಅತ್ಯಂತ ಸಂತೋಷದ ವಿಷಯ. ಆದರೆ ನನಗೆ ಅಲ್ಲಿ ಯಾವುದು ಸೇರಿಸಲ್ಪಟ್ಟಿವೆ ಇಲ್ಲ ಎಂಬುದು ತಿಳಿಯುವುದಿಲ್ಲ. ಅಲ್ಲಿ ಇರುವುದನ್ನೇ ಮತ್ತೆ ಮತ್ತೆ ಕಳಿಸಿದಂತ ಆಗಬಹುದೇನೋ ಎಂಬ ಯೋಚನೆ ನನಗೆ. ಅದಕ್ಕೆ ಅವುಗಳನ್ನು ಕಳಿಸುವ ವಿಚಾರದ ಬಗ್ಗೆ ಯೋಚನೆ ಮಾಡಲು ಆಗಿಲ್ಲ. ನಿಮ್ಮ ಯೋಜನೆ ಮಾತ್ರ ಅತ್ಯುತ್ತಮವಾದದ್ದು. ನಮಗೆ ಯಾವ ರಚನೆ ಬೇಕಾದಾರೂ ಒಂದೇಕಡೆ ಸಿಗುವ ಸೌಲಭ್ಯ ಒದಗಿದಂತಾಗುತ್ತದೆ. ಹರಿದಾಸ ಸಂಪದ ಚೆನ್ನಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.
ಶೈಲಾಸ್ವಾಮಿ
ಉ: ಪುರಂದರ ದಾಸರ ಆರಾಧನೆ - ೨೦೦೯
ಇಲ್ಲಿರುವ ಪುರಂದರದಾಸಕೃತಿಗಳ
ಈ ಕ್ಷಣದವರೆಗಿನ ಪಟ್ಟಿ ಹರಿದಾಸ.ಇನ್ ನಲ್ಲಿದೆ .
ಈಗ ಕೆಳಗಿನ ಲಿಂಕ್ ಅನ್ನು ಕ್ಲಿಕ್ಕಿಸಿ
http://haridasa.in/%...
ಉ: ಪುರಂದರ ದಾಸರ ಆರಾಧನೆ - ೨೦೦೯
ಪ್ರಿಯ ಶ್ರೀಕಾಂತ್ ಅವರೇ,
ನಿಮ್ಮ ಮಾಹಿತಿ ಉಪಯುಕ್ತವಾದದ್ದು. ಧನ್ಯವಾದಗಳು. ಹಾಗೆಯೇ ಕನಕದಾಸರು, ವಿಜಯದಾಸರು, ಗೋಪಾಲದಾಸರ ಕೃತಿಗಳದ್ದೂ ಪಟ್ಟಿ ಇದೆಯೇ?
ಶೈಲಾಸ್ವಾಮಿ
ಉ: ಪುರಂದರ ದಾಸರ ಆರಾಧನೆ - ೨೦೦೯
ನಮಸ್ತೆ,
ನಿಮಗೆ ಬೇಕಾದ tag ಮೇಲೆ ಚಿಟಕಿಸಿದರೆ ಬೇಕಾದ ಫಲಿತಾಂಶ ದೊರಕಬಹುದು.
ಉದಾ: ಶಾಮಸುಂದರವಿಠಲದಾಸ
http://haridasa.in/%...
ಮೇಲೆ ಚಿಟಕಿಸಿ...
ನಿಮಗೆ ಬೇಕಿರುವ ಕೃತಿಗಳು url ಬದಲಿಸಿ ಹುಡುಕಬಹುದು :)
--ಶ್ರೀ
ಉ: ಪುರಂದರ ದಾಸರ ಆರಾಧನೆ - ೨೦೦೯
ಈ ಕೊಂಡಿಗಳನ್ನು ಕ್ಲಿಕ್ಕಿಸಿ ನೋಡಿ
ಗೋಪಾಲದಾಸರ ಕೃತಿಗಳಿಗೆ
http://haridasa.in/%...
ವಿಜಯದಾಸರ ಕೃತಿಗಳಿಗೆ
http://haridasa.in/%...
ಕನಕದಾಸರ ಕೃತಿಗಳಿಗೆ
http://haridasa.in/%...
ಪ್ರತಿಪಟ್ಟಿಯಲ್ಲಿ ನಾಲ್ಕೈದು ಮಾತ್ರ ಇವೆ . ಇವನ್ನು ನೋಡಿಕೊಂಡು ನೀವು ಮುಂದುವರೆಯಬಹುದು .
ಉ: ಪುರಂದರ ದಾಸರ ಆರಾಧನೆ - ೨೦೦೯
ಹಂಸಾನಂದಿ ಸರ್,
ನಿಮ್ಮ ಮತ್ತು ಶ್ರೀಕಾಂತರ ಕಾಳಜಿ ಮತ್ತು ಪರಿಶ್ರಮಕ್ಕೆ ವಂದನೆಗಳು. ಹಾಗೆಯೇ ಹರಿದಾಸ ಸಂಪದ ಬೆಳೆಯಲು ಕಾರಣರಾದ ಎಲ್ಲ ಮಹನೀಯರಿಗೂ ಸಹ ವಂದನೆಗಳು.
ಸಂಪದ ಸಂಗ್ರಹ ತರಹ ಹರಿದಾಸ ಸಾಹಿತ್ಯದ ಸಂಪೂರ್ಣ digital ಕಡತವನ್ನು ತರುವ ಯೋಚನೆ ಏನಾದರೂ ಇದೆಯೇ?