24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

September 26, 2008 - 10:30pm
hamsanandi

ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ.

ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ ಅಂತ ನಂಗೊತ್ತಿಲ್ಲ.

ನಾನು ಕ್ರಿಕೆಟ್ ಆಡಲ್ಲ. ಹಿಂದೆ ಆಡಿರೋದೂ ಕಡಿಮೆ. ನೋಡೋ ಆಸಕ್ತೀನೂ ನನಗೆ ಇಲ್ಲ.

ಆಡೋವ್ರೆಲ್ಲ ಯಾಕೆ ಈ ಆಟದಲ್ಲಿ ವೇಳೆ ಹಾಳು ಮಾಡ್ತಾರೋ ನಂಗೊತ್ತಿಲ್ಲ. ಇದರಿಂದ ನಾಡು ಕಟ್ಟೋ ಕೆಲಸಕ್ಕೆ ಒಂಚೂರೂ ಸಹಾಯ ಆಗೋದಿಲ್ಲ!

ಏನಂತೀರ ನೀವೆಲ್ಲ ?

-ಹಂಸಾನಂದಿ

(ಕೊನೆಯ ಕೊಸರು: ಮೇಲಿನ ಸಾಲುಗಳಲ್ಲಿ, ಕ್ರಿಕೆಟ್ ಆಡೋದು ಅನ್ನೋದರ ಜಾಗದಲ್ಲಿ - ಹಾಡು ಹೇಳೋದು,ಹಾಡುಕೇಳೋದು,ಕಥೆ ಓದೋದು, ಕಥೆ ಬರೆಯೋದು, ಅಥವಾ ಮನೆಯಲ್ಲಿ ಅಡಿಗೆ ಮಾಡೋದು, ಕಾಮೆಡಿ ಟೈಮ್ ಗಣೇಶನ ಸಿನೆಮಾ ನೋಡೋದು, ಅಥವಾ ರಾತ್ರಿಯಲ್ಲಿ ತಲೆಕೆಟ್ಟವರ ತರಹ ನಕ್ಷತ್ ನೋಡ್ತಾ ನಿಲ್ಲೋದು :) - ಇಂತಹ ನಿಮಗೆ ಮನ ಬಂದ  ಪದಗಳನ್ನ ಅಥವಾ ಪದಗಳ ಗುಂಪನ್ನ ಹಾಕ್ಕೊಂಡು ಓದ್ಕೊಳಿ. ಆಮೇಲೆ ಮಜಾ ನೋಡಿ ;) )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ASHOKKUMAR on
ಕ್ರಿಕೆಟ್ ಆಡುವಾಗಲಾದರೂ ಕನ್ನಡ ಮಾತನಾಡಬಹುದು. ಶಾಲೆಯೊಳಗೆ ಇಂಗ್ಲಿಷ್ ಕಡ್ಡಾಯ :) *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kalpana on
ನಾವ್ಮಾಡೋ ಪ್ರತಿ ಕೆಲಸದಿಂದ ಏನು ಉಪಯೋಗ ಅಂತ ಯೋಚಿಸಿದ್ರೆ ... ಬಹುಶಃ ೯೦% ಜನ ಆತ್ಮಹತ್ಯೆ ಮಾಡ್ಕೋಬೇಕಾಗತ್ತೆ, ಯಾಕೆಂದ್ರೆ ಬರಿ ಆಮ್ಲಜನಕ ವೇಶ್ಟ್ ಮಾಡ್ತಾ ಇರ್ತೀವಿ :-) ~ಕಲ್ಪನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kishoreyc on
ಮೇಲೆ ಹೇಳಿದ ಯಾವುದನ್ನು ಮಾಡೋದ್ರಿ೦ದಲೂ ಕರ್ನಾಟಕಕ್ಕೆ, ಕನ್ನಡಕ್ಕೆ ಕಿ೦ಚಿತ್ ಉಪಯೋಗವು ಆಗೋದಿಲ್ಲ... ಚೇತನ್ ಜೀರಾಲ್ ರವರ ಬರಹವನ್ನು ಹಾಸ್ಯ ಮಾಡೋದ್ರಿ೦ದಲೂ ಏನು ಪ್ರಯೋಜನ ಆಗಲ್ಲ. ಆದರೆ ಸ೦ಪದದ ಮ೦ದಿ ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚೊಕ್ಕೆ ಕೊಟ್ಟ ಕೊಡುಗೆ ಕಮ್ಮಿ ಇಲ್ಲ. ಅದು ವಿಕಿಪಿಡಿಯಾ ಇರಲಿ, ಗೂಗಲ್, ಫೈರಫಾಕ್ಸ್ ಬ್ರೌಸರ್ ಕನ್ನಡದಲ್ಲಿ ತಂದಿದ್ದು ಇರಲಿ,ಇಲ್ಲ ಲಿನಕ್ಸ್, ಲಿನಕ್ಸ್ ನಲ್ಲಿ ಕನ್ನಡದ ಬಳಕೆ ಬಗ್ಗೆ ಜಾಗ್ರುತಿ ತರೋದು ಇರಲಿ, ಸಂಪದ ಮುಂಚುಣಿಯಲ್ಲಿ ನಿಂತು ಕೆಲ್ಸ ಮಾಡಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಹೌದು ಕಿಶೋರ್, ಅದ್ಯಾವುದರಿಂದಲೂ ಪ್ರಯೋಜನ ಎಂದು ಗೊತ್ತಿದ್ದೂ ನಾನು ಬರೆದೆ - ಅದಕ್ಕೇ ಕೊನೆಯಲ್ಲಿ ಬರೆದ ಕೊಸರಿನಲ್ಲಿ ಹೇಳಿದ ಹಾಡು ಹೇಳೋ/ಕೇಳೋ/ಆಕಾಶ ನೋಡ್ತಾ ನಿಲ್ಲೋ ಅಂತಹ ಕೆಲಸವಲ್ಲದ ವಿಷಯಗಳೆಲ್ಲ ನನ್ನ ಬಗ್ಗೇನೇ ಆಗಿತ್ತು. ಇವತ್ತು ನಾನು ಹೀಗೆ ಬರೆಯೋದಕ್ಕೆ ಚೇತನ್ ಅವರ ಬರಹ ಒಂದು ನೆಪ ಅಷ್ಟೇ. ನನಗೆ ಹಿಂದೆ ಎಷ್ಟೋ ಬರಹಗಳನ್ನ ಪ್ರತಿಕ್ರಿಯೆಗಳನ್ನ, ಓದಿದಾಗಲೇ ಹೀಗೆ ಬರೆಯಬೇಕು ಎನಿಸಿತ್ತು. ಇವತ್ತು ಬರೆದೆ ಅಷ್ಟೇ. ಆದರೆ, ಆ ಬರಹ/ಪ್ರತಿಕ್ರಿಯೆ ಬರೆದವರದ್ದು ತಪ್ಪು ಅಂತ ಅಲ್ಲ. ಲೋಕೋ ಭಿನ್ನ ರುಚಿ: ಅಲ್ಲವೇ? ಸಮುದಾಯವೊಂದರಲ್ಲಿ, ಯಾರಿಗೆ ಏನು ಬೇಕೋ ಅದನ್ನು ತೆಗೆದುಕೊಂಡು ನಡೆಯಬೇಕಷ್ಟೇ? ಯಾವುದೇ ಒಂದು ವ್ಯಕ್ತಿ ಇನ್ಯಾರನ್ನೂ ಕಟ್ಟುಪಾಡು ಮಾಡಲಾಗದಿರುವುದೇ ಇಂತಹ ಸ್ಥಳದ ಸೊಬಗು. ನನ್ನ ಅಭಿಪ್ರಾಯಗಳೇ ಬೇರೆಯವರಿಗಿರಬೇಕು ಅಂತ ಜುಲುಮೆ ಮಾಡುವ ಉದ್ದೇಶವೂ ನನಗಿಲ್ಲ. ವೈಯಕ್ತಿಕವಾಗಿ ಒಬ್ಬರು ಮಾಡೋ ಅಂತಹ ಎಂತಹದ್ದಾದರೂ ಕೆಲಸಕ್ಕಿಂತ ಸಂಪದದಂತಹ ತಾಣ ಕನ್ನಡಿಗರಿಗೆ ಮಾಡ್ತಿರೋದು ಹೆಚ್ಚು ಅನ್ನೋದನ್ನ ತೋರಿಸೋದಷ್ಟೇ ನನ್ನ ಗುರಿಯಾಗಿತ್ತು. ನಲಿವಿರಲಿ, -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
> ಮನೆಯಲ್ಲಿ ಅಡಿಗೆ ಮಾಡೋದು... ಇಡೀ ಕನ್ನಡ ನಾಡಲ್ಲಿ ಅಡಿಗೆನೇ ಮಾಡಿಲ್ಲ ಅಂದ್ರೆ, ಕನ್ನಡಿಗರ ಕಥೆ ಏನ್ರೀ? ಕನ್ನಡನೂ ಇಲ್ಲ, ಕನ್ನಡಿಗನೂ ಇಲ್ಲ :) :D --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಈಗಂತೂ ’ಮನೆ ಅಡಿಗೆ’ , ’ಹಳ್ಳಿ ಮನೆ’ ಇಂತಹ ಜಾಗದಿಂದ ಊಟ ತರಿಸೋದೇ ಹೆಚ್ಚಾಗಿದೆಯಂತಲ್ಲ ;-)? -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಹಳ್ಳಿ ಮನೇಲಿ ಊಟ ಸಿಗೋದಕ್ಕೆ, ಅವರಾದ್ರೂ ಅಡಿಗೆ ಮಾಡಬೇಕಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಓಹ್, ನೀವು "ಮನೆ" ಅಡಿಗೆ ಅಂದಿದೀರ , ಸರಿ ಬಿಡಿ ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kishoreyc on
ಕ್ರಿಕೆಟ್ ಆಡಿ, ರಾಗುಲ್ ತರನೋ ಕು೦ಬ್ಲೆ ತರನೋ ಆಡಿದ್ರೆ ಕರ್ನಾಟಕದಲ್ಲಿ ಬೊ೦ಬಾಟ್ ಕ್ರಿಕೆಟಿಗರು ಹುಟ್ತಾರೆ, ನಾಳೆ ದಿನೆ ಭಾರತ ಪ್ರತಿನಿಧಿಸ್ತಾರೆ, ಮು೦ಬರುವ ಪೀಳಿಗೆಗೆ ಹೆಮ್ಮೆಯ ಮಾದರಿಯಾಗುತ್ತಾರೆ. ಕು೦ಬ್ಲೆ ಹಾಗೆ ಜಗತ್ತಿನ ಪ್ರತಿಷ್ಟಿತ ಸ್ಪಿನ್ನರ್ ಹುಟ್ಟುತ್ತಾರೆ. ಇವರೆಲ್ಲ ಇದ್ದು ಕರ್ನಾಟಕಕ್ಕೆ, ಕನ್ನಡಿಗರಿಗೆ ಪ್ರೋತ್ರಾಹ ಮಾರ್ಗದರ್ಶನ ಸಿಗದಿದ್ದರೆ.. ಅವರಿದ್ದೂ ವೇಸ್ಟ್. ಆದ್ದರಿ೦ದ ಕ್ರಿಕೆಟ್ ಆಡೋದ್ರಿ೦ದ ಕರ್ನಾಟಕಕ್ಕೆ ಉಪಯೋಗ ಇದೆ. ಖ೦ಡಿತ ಇದೆ. ಕ್ರಿಕೆಟ್ ಆಡೋದ್ರಿಂದ, ಅಸ್ಸಾಮ್ ಗೆ, ಅಸ್ಸಾಮಿನವರಿಗೆ ಏನು ಉಪಯೋಗ? > ಅದರಿ೦ದ ಉಪಯೋಗ ಪಡೆದುಕೊ೦ಡಲ್ಲಿ ಉಪಯೋಗ ಇದೆ. ಇಲ್ಲದಿದ್ದರೆ ಇಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಹಂಸಾನಂದಿ ಒಳ್ಳೆ ಟೆಂಪ್ಲೇಟ್ ಕೊಟ್ಟಿದ್ದಾರೆ ಸಿನಿಕತನಕ್ಕೆ. ಏನು ಹಾಕಿದರೂ ನಡೆಯತ್ತೆ. ನಾವು ಹಂಸಕ್ಷೀರ ನ್ಯಾಯವನ್ನೇ ಆದರ್ಶವಾಗಿಟ್ಟುಕೊಂಡು ಬದುಕನ್ನು ಸಾಗಿಸಬೇಕು ಎನ್ನುವ ಭಾವ ಅವರದಿರಬಹುದು. (ಅವರವರಿಗೆ ಏನು ಬೇಕೋ ಅದು ಆಯ್ದುಕೊಂಡು. ಕೆಟ್ಟದ್ದು ಒಳ್ಳೇದು ಅಂತಲ್ಲ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.