January 28, 2010 - 6:25am
ಅಡವಿಯ ತೊರೆದ ಹುಲಿಯ ಕೊಲುವರು
ಹುಲಿಯಿರದ ಅಡವಿಯನೆ ಕಡಿವರು
ಹುಲಿಗೆ ಇರಬೇಕು ಅಡವಿಯ ಕಾವಲು
ಅಡವಿಗಾದರೋ ಹುಲಿಯೇ ಕಾವಲು
ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):
ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|
ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||
-ಹಂಸಾನಂದಿ
ಸರಣಿ:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಜೊತೆಬಾಳ್ವೆ
"ಅಡವಿಯ ಹೊರಬಂದ ಹುಲಿಯ" ಎನ್ನುವ ಬದಲು "ಅಡವಿಯ ತೊರೆದ ಹುಲಿಯ" ಎನ್ನಬಹುದು.
ಉ: ಜೊತೆಬಾಳ್ವೆ
ಕೃಷ್ಣಪ್ರಕಾಶರೆ, ನಿಮ್ಮ ಸಲಹೆ ಚೆನ್ನಾಗಿದೆ. ತೆಗೆದುಕೊಂಡಿರುವೆ. ಧನ್ಯವಾದಗಳು.
ಉ: ಜೊತೆಬಾಳ್ವೆ
ಕಾಡಿಗೂ ಹುಲಿಗೂ ಇರುವ ಸ೦ಬ೦ಧವನ್ನು ಮಹಾಭಾರತದ ಕಾಲದಲ್ಲಿಯೇ ಗುರುತಿಸಲಾಗಿತ್ತು ಎ೦ದು ತಿಳಿದಿರಲಿಲ್ಲ. ಸೊಗಸಾದ, ಸರಳವಾದ ಕನ್ನಡ ಅನುವಾದದಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
-amg
ಉ: ಜೊತೆಬಾಳ್ವೆ
ಸುಂದರವಾದ ಈ ಸುಭಾಷಿತವನ್ನು ಈ ಮೊದಲು ಕೇಳಿದ ನೆನಪಿಲ್ಲ. ಧನ್ಯವಾದಗಳು ಹಂಸಾನಂದಿಯವರೇ.
ಉ: ಜೊತೆಬಾಳ್ವೆ
ಈಗ ಹುಲಿಯು ಕಡಿಮೆ, ಅಡವಿಯು ಕಡಿಮೆ.