ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಮರೆಯಲಾರದ ಸಣ್ಣಕಥೆಗಳು -೨

November 27, 2007 - 11:36pm — hamsanandi

ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ.

ಗೊರೂರು ರಾಮಸ್ವಾಮಯ್ಯಂಗಾರರು ಹೆಚ್ಚಾಗಿ ಹರಟೆ, ಅನುಭವಕಥನ, ಹಳ್ಳಿಯ ಜೀವನದ ವಿಶೇಷತೆಗಳನ್ನು ಹೆಕ್ಕಿ ತೋರಿಸುವ ಬರಹಗಳಿಗೆ ಪ್ರಖ್ಯಾತರು. ಅಲ್ಲದೆ, ಸಣ್ಣಕತೆಗಳನ್ನೂ, ನೀಳ್ಗತೆಗಳನ್ನೂ ಬರೆದಿದ್ದಾರೆ. ನಮ್ಮೂರ ರಸಿಕರು, ಹಳ್ಳಿಯ ಚಿತ್ರಗಳು ಮೊದಲಾದ ಅವರ ಪ್ರಬಂಧ ಸಂಕಲನಗಳು ಬಹಳ ಚೆನ್ನಾಗಿವೆ. ನಮಗೆ ೧೯೩೦ ರ ದಕ್ಷಿಣ ಕರ್ನಾಟಕದ ಹಳ್ಳಿಯ ಜನಜೀವನವನ್ನು ರಸವತ್ತಾಗಿ ಇಲ್ಲಿ ಅವರು ಚಿತ್ರಿಸಿದ್ದಾರೆ. ಚಲನಚಿತ್ರವಾಗಿ ಭಾರೀ ಯಶಸ್ಸು ಗಳಿಸಿದ ಇವರ ಬೂತಯ್ಯನ ಮಗ ಅಯ್ಯು ಕಥೆ ಯಾರಿಗೆ ಗೊತ್ತಿಲ್ಲ ಹೇಳಿ? ಅಲ್ಲದೆ ಪ್ರವಾಸಿಯ ವರದಿಯಾದ ಅಮೆರಿಕೆಯಲ್ಲಿ ಗೊರೂರು ಎಂಬ ಇವರ ಪುಸ್ತಕವೂ ಓದಬೇಕಾದಂತಹದ್ದೇ. ಬಹುಶಃ ತಮ್ಮ ೭೦ ರ ಮೇಲಿನ ವಯಸ್ಸಿನಲ್ಲಿ ಅವರು ಮಾಡಿದ ವಿದೇಶ ಯಾತ್ರೆಯ ಅನುಭವವನ್ನು ಅವರು ಸೊಗಸಾಗಿ ಹೇಳಿದ್ದಾರೆ. ಈ ಪುಸ್ತಕಗಳನ್ನು ಓದದಿದ್ದವರು, ಖಂಡಿತ ಓದಿ ಎನ್ನುವ ಶಿಫಾರಸು ನನ್ನದು.

ರಾಮಸ್ವಾಮಯ್ಯಂಗಾರರ ಸಣ್ಣ ಕಥೆಯೊಂದು ವರ್ಷಗಟ್ಟಲೆಯಿಂದ ನನ್ನ ಮನಸ್ಸಿನಲ್ಲಿ ನೆಲೆನಿಂತಿದೆ. ( ಈ ಕಥೆ ಗೊರೂರು ರಾಮಸ್ವಾಮಿ ಅಯ್ಯಂಗಾರರದ್ದೇ ಎನ್ನುವುದು ನನ್ನ ನೆನಪು. ಒಂದು ವೇಳೆ ಇದು ಅವರದಲ್ಲದೇ ಬೇರೆಯವರದ್ದಾದರೆ, ತಿಳಿದವರು ತಿದ್ದಿ!). ಈ ಕಥೆಯ ಹೆಚ್ಚಾಯ ಏನೆಂದರೆ, ಇದೊಂದು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಹೊಂದುವಂತಹ ಕಥೆ. ಸಣ್ಣ ಕಥೆಗಳ ಹಿರಿಮೆಯೇ ಅದಲ್ಲವೇ? ಅದಕ್ಕೇ ತಾನೇ ಓ ಹೆನ್ರಿ, ಅಥವಾ ಮೊಪಾಸಾ ಅಂತಹವರ ಕಥೆಗಳು ಎಲ್ಲೆಡೆ ಪ್ರಖ್ಯಾತವಾಗಿರುವುದು?

ಗೊರೂರರ ಬಗ್ಗೆ ಹೇಳಬೇಕೆನ್ನಿಸಿದ್ದಕ್ಕೆ ಇನ್ನೂ ಒಂದು ಕಾರಣವಿದೆ. ಎಷ್ಟೇ ಎಂದರೂ, ನಾನೂ ಅವರ ಜಿಲ್ಲೆಯವನೇ. ಅವರು ಕುಡಿದ ಹೇಮಾವತೀ ನದೀ ನೀರನ್ನೇ ಕುಡಿದು ಬೆಳೆದವನೇ! ಅಲ್ಲದೇ, ರಾಮಸ್ವಾಮಯ್ಯಂಗಾರರ ಅಣ್ಣ ಶ್ರೀ ನರಸಿಂಹಾಚಾರರ ಬಳಿ ರಾಮಃ ರಾಮೌ ರಾಮಾಃ ಎಂದು ಸಂಸ್ಕೃತ ಪಾಠ ಕಲಿಯುವ ಅದೃಷ್ಟವೂ ನನ್ನದಾಗಿತ್ತು.  :)

"ಮುಳ್ಳು ಗಿಡ" - ಇದು ನಾನು ಹೇಳಬೇಕೆಂದಿರುವ ಕಥೆಯ ತಲೆಬರಹ. ಈ ಕಥೆಯ ನಾಯಕ ಒಬ್ಬ ಸಾಧಾರಣವಾದ ಕೆಲಸವೊಂದರಲ್ಲಿರುವ, ಮಧ್ಯಮ ವರ್ಗದ ಗೃಹಸ್ಥ. ಕಷ್ಟ ಪಟ್ಟು ತಿಂಗಳ ಕೊನೆಯವರೆಗೆ ಖರ್ಚು ತೂಗಿಸಬೇಕಾದ ಪರಿಸ್ಥಿತಿ. ಇವನದ್ದೊಂದು ಕೊರಗು. ಕಾಲೇಜಿನಲ್ಲಿ ಓದುತ್ತಿದ್ದಾಗ ಜೊತೆಯಲ್ಲಿ ಓದುತ್ತಿದ್ದ ಸುಂದರಿ ಲಲಿತಳನ್ನು ಮದುವೆಯಾಗಬೇಕೆಂಬಾಸೆಯಿದ್ದರೂ, (ಕಾಲಮಾನಕ್ಕೆ ತಕ್ಕಂತೆ) ತಂದೆ ತಾಯಿ ನೋಡಿದವಳನ್ನೇ ಕಟ್ಟಿಕೊಳ್ಳಬೇಕಾಯಿತು. ಹೆಂಡತಿ ಸುರೂಪಿಯೂ ಅಲ್ಲ. ಹೋಗಲಿ, ಹಾಡು ಹಸೆ, ಚಿತ್ರ ಬರೆಯುವುದೋ, ಕಸೂತಿ ಹಾಕುವುದೋ, ಒಂದಾದರೂ ಒಳ್ಳೆ ಕಲೆ ಬರುವುದೋ? ಅದೂ ಇಲ್ಲ. ಬಲವಂತ ಮಾಘಸ್ನಾನವಾಯಿತು ಇವನ ಸಂಸಾರ. ಮದುವೆಯಾಗಿ ವರ್ಷಗಳು ಕಳೆದರೂ, ಸದಾಕಾಲ ಘಮಘಮಿಸುವ ಹೂವು ಬಿಡದ, ಕೆಟ್ಟ ಮುಳ್ಳುಗಿಡದ ತರಹ ಇವಳು  ಎಂದು ಸದಾ ಕಾಲ ಹೆಂಡತಿಯನ್ನು ಮನಸ್ಸಿನಲ್ಲಿ ಬೈದುಕೊಳ್ಳುವುದನ್ನು ಮಾತ್ರ ಇವನು ಬಿಡಲಿಲ್ಲ.

ಒಮ್ಮೆ ಅಚಾನಕ್ಕಾಗಿ ಇವನಿಗೆ ಪೇಟೆಯಲ್ಲಿ ವರ್ಷಗಳಿಂದ ನೋಡದ, ಹಳೆಯ ಮಿತ್ರನೊಬ್ಬ ಸಿಕ್ಕಿದ. ಅವನು ಬಲವಂತ ಮಾಡಿ ತನ್ನ ಮನೆಗೆ ಬರಲೇಬೇಕೆಂದು ಕರೆದುಕೊಂಡೂ ಹೋದ. ಅಲ್ಲಿ ತನ್ನ ಗೆಳೆಯನೊಬ್ಬ ಬಂದಿದ್ದಾನೆಂದು ಮಿತ್ರ ಒಳಗೆ ಹೋಗಿ, ತನ್ನ ಹೆಂಡತಿಗೆ ಹೇಳಿದಾಗ, ಅವಳಾಡಿದ ಮಾತುಗಳು, ಹಜಾರದಲ್ಲಿದ್ದ ಇವನ ಕಿವಿಗೂ  ಬಿದ್ದವು. ಪಾಪ, ಆಕೆಯೇನು ಅಂತಹ ಪಿಸುಮಾತಿನಲ್ಲಿ ಮಾತನಾಡುತ್ತಿರಲಿಲ್ಲವಲ್ಲ? ಗಂಡನ ಜನ್ಮವನ್ನೇ ಜಾಲಾಡಿದ್ದಳು ಆ ಮಹಾಸತಿ. ಪೆಚ್ಚು ಮುಖ ಹೊತ್ತ ಮಿತ್ರ ಹೊರಬಂದು ಏನೋ ಸಬೂಬು ಹೇಳಿ, ಈತನನ್ನು ಸಾಗಹಾಕಬೇಕಾಯಿತು. ಇವನೂ ಸಪ್ಪೆಮೋರೆ ಹಾಕಿಕೊಂಡು ಹೊರಹೋಗುವಾಗ ಕಿಟಿಕಿಯ ಪರದೆಯ ಸಂದಿಯಲ್ಲಿ ಮಿತ್ರನ ಹೆಂಡತಿಯ ಮುಖ ಕಂಡಿತು. ಆ ಮುಖವನ್ನು ಅವನು ಹೇಗೆ ತಾನೇ ಮರೆತಾನು? ಅವಳೇ ಅಲ್ಲವೆ ಈತ ಕನಸು ಕಂಡು ಕನವರಿಸುತ್ತಿದ್ದ ಲಲಿತ?

ಮನೆಗೆ ಹೋಗುತ್ತ ಅವನ ಮನಸ್ಸೊಂದು ತಕ್ಕಡಿಯಾಗಿತ್ತು. ಬರುವ ಸಂಬಳದಲ್ಲೇ, ಒಂದು ದಿನವೂ ಗೊಣಗದೇ ಸಂಸಾರ ನಿಭಾಯಿಸುವ, ಮೃದು ಮಾತಿನ, ನೆಂಟರಿಷ್ಟರು ಬಂದರೆ ಆದರದಿಂದ ಕಾಣುವ ತನ್ನ ಹೆಂಡತಿಯೆಲ್ಲಿ? ಮನೆಗೊಬ್ಬರು ಬಂದರೆ ಕಾಫಿಯನ್ನೋ ಹಾಲನ್ನೋ ಮಾಡಿಕೊಡಬೇಕಾದರೆ ಗಂಡನ ಮರ್ಯಾದೆಯನ್ನೇ ಕಳೆಯುವ, ಅವನನ್ನು ಬಾಯಿಗೆ ಬಂದಂತೆ ಹಳಿಯುವ ಲಲಿತೆಯಂತಹ ಹೆಣ್ಣೆಲ್ಲಿ?

ಕೊನೆಗೂ ಅವನಿಗೆ, ಮುಳ್ಳುಗಿಡ ಯಾರು ಅನ್ನುವುದು ಅರ್ಥವಾಗಿಹೋಯಿತು.

-ಹಂಸಾನಂದಿ

 

  • ಕನ್ನಡ
  • ಗೊರೂರು
  • ರಾಮಸ್ವಾಮಿ ಅಯ್ಯಂಗಾರ್
  • ಸಣ್ಣಕಥೆ
~.~
  • hamsanandi ರವರ ಬ್ಲಾಗ್
  • Login or register to post comments
  • 497 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 28, 2007 - 1:18am — kalpana

ಉ: ಮರೆಯಲಾರದ ಸಣ್ಣಕಥೆಗಳು -೨

kalpana's picture

ಚೆನ್ನಾಗಿದೆ. ಭೂತಯ್ಯನ ಮಗ ಅಯ್ಯು ಇವರು ಬರೆದದ್ದು ಅಂತ ತಿಳಿದಿರಲಿಲ್ಲ. ಆ ಕಥೆಯಲ್ಲೂ, ಈ ಕಥೆಯಲ್ಲೂ ಒಂಥರ ನೀತಿ ಅಡಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 2:52am — hamsanandi

ಉ: ಮರೆಯಲಾರದ ಸಣ್ಣಕಥೆಗಳು -೨

hamsanandi's picture

ಬೂತಯ್ಯನ ಮಗ ಅಯ್ಯು, ಗೊರೂರಿನಲ್ಲೇ ನಡೆದ ಕೆಲವು ಸಂಗತಿಗಳಮೇಲೆ ಆಧಾರಿತವಾದದ್ದು ಎಂದು ಕೇಳಿದ್ದೇನೆ.
ಒಬ್ಬರ ಮನೆಯನ್ನು ಅಲ್ಲಿ ಬೂತಯ್ಯನ ಮನೆ ಅಂತ ಯಾರೋ ತೋರಿಸಿಯೂ ಇದ್ದರು Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 10:09am — csomsekraiah

ಉ: ಮರೆಯಲಾರದ ಸಣ್ಣಕಥೆಗಳು -೨

csomsekraiah's picture

ಇದು ಗೋರೂರರದೇ ಕತೆ, ಸುಮಾರು ಮುವ್ವತ್ತು ವರ್ಷ ಗಳ ಹಿಂದೆ ಓದಿದ ಕತೆಯನ್ನು ನೆನಪು ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಇದು ನನ್ನನ್ನೂ ತುಂಬಾ ಕಾಡಿದ ಕತೆ ಹೀಗೆ ಹಳೆಯ ಒಳ್ಳೆಯ ಸಾಹಿತ್ಯ ಕೃತಿ ಗಳನ್ನು ನೆನಪಿಸುತ್ತಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 11:14am — hamsanandi

ಉ: ಮರೆಯಲಾರದ ಸಣ್ಣಕಥೆಗಳು -೨

hamsanandi's picture

ಧನ್ಯವಾದಗಳು. ನಾನೂ ಇದನ್ನು ಓದಿ ಸುಮಾರು ಇಪ್ಪತ್ತೈದು ವರ್ಷವೇ ದಾಟಿರಬಹುದು. ಅದಕ್ಕೇ ಅನುಮಾನ ಬಂದದ್ದು.

೧೯೮೬-೮೮ ರ ಸಮಯದಲ್ಲಿ ಬೆಂಗಳೂರು ದೂರದರ್ಶನದಲ್ಲಿ ಬರುತ್ತಿದ್ದ ಒಂದು ಕನ್ನಡ ಕಥೆಗಳನ್ನಾಧರಿಸಿದ ಧಾರಾವಾಹಿಯೊಂದರಲ್ಲಿಯೂ (ನಮ್ಮ ನಮ್ಮಲ್ಲಿ?) ಈ ಕಥೆ ಬಂದಿತ್ತು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 11:44am — Sunil Jayaprakash

ಉ: ಮರೆಯಲಾರದ ಸಣ್ಣಕಥೆಗಳು -೨

Sunil Jayaprakash's picture

ಹಂಸಾನಂದಿ, ಇದು ನಮ್ಮ ರಾಜ್ಕುಮಾರ್-ಕಲ್ಪನಾ ಅಭಿನಯಿಸಿದ "ಎರಡು ಕನಸು" ತರಹ ಇಲ್ವೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 11:19pm — hamsanandi

ಉ: ಮರೆಯಲಾರದ ಸಣ್ಣಕಥೆಗಳು -೨

hamsanandi's picture

ಅರರೆ ಸುನಿಲ್, ಇದನ್ನ ನಾನು ಮೊದಲು ಯೋಚಿಸಿರಲಿಲ್ಲ..

ಆದ್ರೂ, ಈ ಕಥೆ ಎರಡು ಕನಸು ಕಾದಂಬರಿಗಿಂತ ಹತ್ತಿಪ್ಪತ್ತು ವರ್ಷ ಹಳೇದಿರಬೇಕು ಅನ್ನಿಸುತ್ತೆ. ಅಲ್ಲದೆ, ಈ ಕಥೆಯನ್ನು ಓದಿದಾಗ ಆಗುವ ಭಾವನೆಯೇ ಬೇರೆ. ಲೈಬ್ರರಿಯಲ್ಲಿ ಎಲ್ಲಾದರೂ ಸಿಕ್ಕರೆ ಓದಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆಯಲಾರದ ಸಣ್ಣ ಕಥೆಗಳು - ೩ : ರಂಗನಹಳ್ಳಿ ರಾಮ
  • ಮರೆಯಲಾರದ ಸಣ್ಣ ಕಥೆಗಳು
  • ನವರಾತ್ರಿಯ ನಾಲ್ಕನೇ ದಿನ
  • ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
  • 365 ದಿನಗಳು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾಶ್ಮೀರ ಯಾರಿಗೆ ಸೇರಿದ್ದು?
  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator