20
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

365 ದಿನಗಳು

February 29, 2008 - 3:56am
hamsanandi
0

 

ಮುನ್ನೂರರವತ್ತೈದು ದಿನಗಳು

ಒಂದು ವರ್ಷ

(ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!)

ಎಂಬತ್ತು+ ಬ್ಲಾಗ್ ಬರಹಗಳು

ಕೈಬೆರಳೆಣಿಕೆಯ ಲೇಖನಗಳು

ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು

ಭಾಗವಹಿಸಿದ ಹತ್ತಾರು ಚರ್ಚೆಗಳು

ತಿಳಿದ ಹೊಸ ವಿಷಯಗಳು ಹಲವಾರು

ಅದರಲ್ಲರಗಿಸಿಕೊಂಡವು ನಾಕಾರು

ಹೊಸ ಗೆಳೆಯರು ಒಂದಷ್ಟು!

 

ಸಿಕ್ಕಿದ ಸಂತಸ - ಎಣೆ ಇರದಷ್ಟು!

 

ಈ ಸಂತಸ ತಂದ ಸಂಪದಕ್ಕೆ ನಾನು ಇನ್ನೇನು ತಾನೇ ಹೇಳಲಿ?

 

ಬಹುಶ: ಈ ನನ್ನ ಮೊದಲ ಬ್ಲಾಗು ಒಂದು ವರ್ಷ ಬಾಳಿದ್ದು ನನ್ನ ಪುಣ್ಯದ ಫಲ ವೇ ಇರಬೇಕು!

ಸಂಪದದ ಹಿಂದಿರುವ ಹರಿಪ್ರಸಾದ್ ನಾಡಿಗರಿಗೂ, ಅವರ ತಂಡಕ್ಕೂ, ಮತ್ತೆ ಈ ತಾಣ ಇಷ್ಟು ಕಳೆಕಳೆಯಾಗಿರಲು ಕಾರಣರಾದ ಇಲ್ಲಿ ಭಾಗವಹಿಸುತ್ತಿರುವ ಸಂಪದಿಗರೆಲ್ಲರಿಗೂ ನನ್ನ ನೂರು ನಮನಗಳು!

-ಹಂಸಾನಂದಿ

(ನನ್ನ (mostly) ಇಂಗ್ಲಿಷ್ ಬ್ಲಾಗ್ 

ಅಲ್ಲಿದೆ ನಮ್ಮ ಮನೆ:- http://neelanjana.wordpress.com/ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kalpana on

ಅಭಿನಂದನೆಗಳು! ಕೆಲಸಕ್ಕೆ ಬಾರದ ಹರಟೆ ವಿಚಾರಗಳಿಲ್ಲದೆ, ಉಪಯುಕ್ತ ವಿಷಯಗಳ ಬಗ್ಗೆ ಬರೆಯುವ ನಿಮ್ಮ ಕಲೆ ಮೆಚ್ಚಬೇಕಾದ್ದೆ. ಅದು(ಅಂದರೆ ಹಾಗೆ ಬರೆಯುವುದು) ನನಗೆ ಬಹಳ ಕಷ್ಟದ ಕೆಲಸ! ನನ್ನ ಬಗ್ಗೆ ಬರೆ ಎಂದರೆ ನೂರು ಪುಟವಾದರೂ ಬರೆದೇನು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muralihr on

ನೀವು ಸ೦ಪದ ಸರೋವರದ ಹ೦ಸ ಪಕ್ಷಿ ಇದ್ದ್ ಹಾಗೇ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on

ಸಂಪದಕ್ಕೆ ಸಂಗೀತದ edge ತಂದುಕೊಟ್ಟವರು ನೀವು.

ಸಂಗೀತದ ಕುರಿತ ಲೇಖನಗಳಿಂದ ಓದುಗರಲ್ಲಿ ಸಂಗೀತಪ್ರಿಯರಲ್ಲಿ ಒಂದು ರೀತಿ ಸೆಲೆಬ್ರಿಟಿಯಾಗಿಬಿಟ್ಟಿದ್ದೀರಿ. ನಿಮ್ಮ ಲೇಖನಗಳ ಜನಪ್ರಿಯತೆ ಇದಕ್ಕೆ ಎವಿಡೆನ್ಸು!
ನೀವು ನಿಮ್ಮ ಮೊದಲ ಬ್ಲಾಗಿನ ಲಿಂಕು ಕೊಟ್ರಿ. ನಾನು ನೀವು ಬರೆದ ಲೇಖನಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದುವನ್ನು ಕೆಳಗೆ ಪಟ್ಟಿ ಮಾಡಿರುವೆ:
[:blog/hamsanandi/12/10/2007/5920|ನವರಾತ್ರಿಯ ದಿನಗಳು (ಸಿರೀಸ್) ]
[:blog/hamsanandi/15/03/2007/3419|ರಾಗ ಮೋಹನ (ಸಿರೀಸ್)]
[:blog/hamsanandi/16/04/2007/3720|"ಇಂದಿನ ಯೋಗ ಸುಯೋಗ ಇಂದಿನ ಕರಣ ಸುಬಕರಣ" ]
[:blog/hamsanandi/02/03/2007/3321|ಕೆಲವು ಸುಭಾಷಿತಗಳು]
[:blog/hamsanandi/22/08/2007/5480|ಕೋಗಿಲೆ ಹಾಡಿದೆ ಕೇಳಿದೆಯಾ?]
(ಮತ್ತು ಇನ್ನೂ ಹಲವು!)

ನನಗೆ ಬಹಳ ಹಿಡಿಸಿದ ಲೇಖನಗಳ ಸರಣಿ - ನವರಾತ್ರಿಯ ದಿನಗಳು. ವಿಕಿಪೀಡಿಯದಲ್ಲೊಮ್ಮೆ ತಮಿಳರು ವಿಜಯ ದಸಮಿ ಮಾಡಿದ್ದನ್ನು ದಶಮಿಗೆ ಬದಲಾಯಿಸಿದ್ದೆ, ಎಷ್ಟೋ ಮಾಹಿತಿ ಸೇರಿಸಿದ್ದೆ. ಆಗಿನಿಂದ ನವರಾತ್ರಿಯ ಬಗ್ಗೆ ಸಾಕಷ್ಟು ಇಂಟರ್ನೆಟ್ಟಿನಲ್ಲಿ ಹುಡುಕಿ ಹುಡುಕಿ ಓದಿರುವೆ. ಎಲ್ಲೂ ಹುಡುಕದೆಯೇ ಇಲ್ಲೇ ಸಂಪದದಲ್ಲೇ ನವರಾತ್ರಿಯ ಬಗ್ಗೆ ಇಷ್ಟೊಂದು ಒಳ್ಳೆಯ ಓದು ಸಿಗುವುದೆಂದು ಯಾವತ್ತೂ ಎಣಿಸಿರಲಿಲ್ಲ.

ನನ್ನ ನೆನಪಿನಲ್ಲಿ ಅಚ್ಚುಳಿದ ಲೇಖನ - [:blog/hamsanandi/28/08/2007/5533|ಅವನಿಲ್ಲ]; ಇದು ನೀವು ಬರೆದ ಲೇಖನಗಳಷ್ಟೇ ಅಲ್ಲದೆ ಸಂಪದದಲ್ಲೂ ಇದುವರೆಗೂ ಹೆಚ್ಚು ಓದಲ್ಪಟ್ಟ ಲೇಖನಗಳಲ್ಲೊಂದು.

ಪ್ರತಿಕ್ರಿಯೆ ಮುಗಿಸೋದಕ್ಕೆ ಮುನ್ನ ಇನ್ನೊಂದು ವಿಷಯ ಹೇಳಿಬಿಡಬೇಕೆಂದಿದ್ದೆ - ೩೬೫ ದಿನಗಳಾದುವು, ನನ್ನ ಕೆಲಸ ಮುಗಿಯಿತು ಎಂದು ಬರೆಯುವುದು ನಿಲ್ಲಿಸಬೇಡಿ. ನಿಮ್ಮದು ನೂರು ನಮನಗಳಾದರೆ ನಮಗೆಲ್ಲ ಓದಲು ಇಷ್ಟೊಂದು ಒಳ್ಳೆಯ ಲೇಖನಗಳನ್ನು ಕೊಟ್ಟ ನಿಮಗೆ ತಿಳುವಳಿಕೆ ಹೆಚ್ಚಿಸಿಕೊಂಡ ನಾವುಗಳು ಸಾವಿರ ನಮನಗಳನ್ನು ಸಲ್ಲಿಸಬೇಕಾದೀತು :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on

ಹಂಸವೇ ಹಂಸವೇ ಹಾಡು ಬಾ,
ಸೃಷ್ಟಿಯ ಸಂಭ್ರಮ ನೋಡು ಬಾ.
ನೇಸರ ಅಲ್ಲಿ, ತಾವರೆ ಇಲ್ಲಿ,
ಮೋಹವಿದೆ ಒಂದು ಸ್ನೇಹವಿದೆ
ಪ್ರೀತಿಸುವ ದಾರಿ ಇದೆ. |ಒಂದು ಸಿನಿಮಾ ಹಾಡು|

ಹಂಸಾನಂದಿ, ನೀವು ಸಂಪದವೀಣೆಗೆ ಶ್ರುತಿಯಾಗಿದ್ದೀರಿ. ಅದು ಸರಿ, ನಾವು ಇಷ್ಟಕ್ಕೆಲ್ಲ ತೃಪ್ತರಾಗುವುದಿಲ್ಲ. ಟ್ರೀಟ್ ಕೊಡಿಸಬೇಕು.
ಟ್ರೀಟ್ ಎಂದರೆ ಏನು ಅಂತ ತಿಳಿದಿರಿ. ಇನ್ನೊಂದು ಸಂಗೀತಕ್ಕೆ ಸಂಬಂಧಪಟ್ಟ ಬರಹ ಮೂಡಿಬರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kalpana on

ಬರೀ ಬರಹ ಸಾಲದು. ನನ್ನ ಪ್ರಕಾರ ಇವರು ಒಂದು ಸಂಗೀತ ಕಲಿಕೆಯ ಆಡಿಯೋ ಸೀರಿಸ್ ಪ್ರಕಟಿಸಬೇಕು. ಏಕೆಂದರೆ, ಸಂಗೀತ ಲೇಖನಗಳು mute ಹಾಕಿಕೊಂಡು ಚಲನ ಚಿತ್ರ ನೋಡಿದ ಹಾಗೆ(of course, closed caption ಇಲ್ಲದೆ)! ನನಗೆ ಕಲಿಯಲು ಇಷ್ಟವಾಗಿರುವುದು- ಹೇಗೆ ರಾಗಗಳನ್ನು ವಿಂಗಡಿಸಲಾಗಿದೆ, ಹೇಗೆ ಅವುಗಳನ್ನು ಗುರುತಿಸುವುದು ಇತ್ಯಾದಿ. ಈ ಮಾಹಿತಿಯ ಕೊಂಡಿ ಇದ್ದರೆ ದಯವಿಟ್ಟು ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೈಭವ on

ಒಂದು ಸಿನಿಮಾದ ಹೆಸರು 'ಗಟ್ಟಿ ಮೇಳ'

ಹಂಸಾನಂದಿಗಳ ಕೆಚ್ಚಿಗರಲ್ಲಿ/ಅಬಿಮಾನಿಗಳಲ್ಲಿ ನಾನೂ ಒಬ್ಬ. ಅವರ 'ತೋಡಿ' ರಾಗದ ಬರಹಕ್ಕೆ ಕಾಯುತ್ತಿದ್ದೇನೆ.
ಹಂಸಾನಂದಿಗಳೆ, ತಮಗೆ ಒರೇಡಿನ ಸವಿಯೊದಗು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on

ಸಂಗೀತಕ್ಕೆ ಸಂಬಂಧಪಟಂತಹ ಅಂಕಣಗಲೆಲ್ಲವೂ ಬೋಮ್ಬಾಟು!
ಖಗೋಳಕ್ಕೆ ಸಂಬಂಧ ಪಟ್ಟಂತೆ ಬರಿಯೋದು ಯಾಕೆ ಕಡಿಮೆ ಮಾಡಿದ್ರಿ?

ಮತ್ತೆ ಮತ್ತೆ ಬರೀತಾ ಇರಿ..

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಸಂಪದ ವೀಣೆಗೆ ಶ್ರುತಿ..
ಸಂಪದ ಸರೋವರದ ಹಂಸ..
ಬೊಂಬಾಟ್.
ಹಂಸಾನಂದಿಯವರಿಗೆ ಶುಭಾಶಯಗಳು.
ನಿಮ್ಮ ಅಭಿಮಾನಿ,
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ