ಮಲಯ ಮಾರುತ ಗಾನ
ಹೆಚ್ಚೇನೂ ಬರೆಯಲಾರೆ. ಆದರೆ ವಿಷ್ಣುವರ್ಧನ್ ನಟಿಸಿರುವ ಕೆಲವು ಹಾಡುಗಳನ್ನ ಈ ಸಂದರ್ಭದಲ್ಲಿ ಮತ್ತೆ ಕೇಳೋಣವೆನಿಸಿತು:
’ಮಲಯಮಾರುತ’ ಚಿತ್ರದಲ್ಲಿ ಮಲಯಮಾರುತ ರಾಗದಲ್ಲಿ ಅಳವಡಿಸಿರುವ ಹಾಡು:
ಬಣ್ಣ ನನ್ನ ಒಲವಿನ ಬಣ್ಣ - ’ಬಂಧನ’ ಚಿತ್ರದಲ್ಲಿ ಶುದ್ಧ ಧನ್ಯಾಸಿ ರಾಗದ ಧಾಟಿಯಲ್ಲಿ ಅಳವಡಿಸಿರುವ ಹಾಡು:
ದೇವರು ಹೊಸೆದ ಪ್ರೇಮದ ದಾರ - ’ಮುತ್ತಿನ ಹಾರ’ ದಿಂದ ಇನ್ನೊಂದು ಶಾಸ್ತ್ರೀಯ ಸಂಗೀತದ ಹಿನ್ನಲೆಯಲ್ಲಿರುವ ಹಾಡು:
ನಗುಮೋಮು ಗನಲೇನಿ - ಅಭೇರಿ ರಾಗದ ತ್ಯಾಗರಾಜರ ರಚನೆ - ’ರಾಯರು ಬಂದರು ಮಾವನ ಮನೆಗೆ’ ಚಿತ್ರದಿಂದ:
ರಾರಾ ಸರಸಕು ರಾರಾ - ಶುದ್ಧ ಧನ್ಯಾಸಿ ರಾಗದ ಇನ್ನೊಂದು ಗೀತೆ, ’ಆಪ್ತಮಿತ್ರ’ ದಿಂದ:
ನೀ ಮೀಟಿದ ನೆನಪೆಲ್ಲವು - ’ನೀ ಬರೆದ ಕಾದಂಬರಿ’ ಚಿತ್ರದಲ್ಲಿ, ಮಿಶ್ರ ಶಿವರಂಜನಿಯಲ್ಲಿ ಅಳವಡಿಸಿರುವ ಹಾಡು:
ಇನ್ನೊಂದು ನನ್ನ all-time-favorite: ’ನಾಗರ ಹಾವಿ’ ನಿಂದ ಬಾರೇ ಬಾರೇ ಚಂದದ ಚಲುವಿನ ತಾರೇ - ಇದೂ ಕೂಡ ಶುದ್ಧ ಧನ್ಯಾಸಿ ರಾಗದ ಸ್ವರಗಳನ್ನೇ ಉಪಯೋಗಿಸುತ್ತೆ.
ಕೊನೆಗೆ ಮಲಯ ಮಾರುತ ಚಿತ್ರದ್ದೇ ಮತ್ತೊಂದು ಹಾಡು - ಹಿಂದೋಳ ರಾಗದಲ್ಲಿರುವ ’ನಟನ ವಿಶಾರದ ನಟಶೇಖರ’:
-ಹಂಸಾನಂದಿ
- hamsanandi's blog
- Login or register to post comments
- 269 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಮಲಯ ಮಾರುತ ಗಾನ
ಆತ್ಮೀಯ ಹಂಸಾನಂದಿಯವರೆ,
ಮಲಯ ಮಾರುತ ಹಾಡು ರಾಗಮಾಲಿಕೆಯಲ್ಲಿದೆ.
ಮೊದಲ ಚರಣದ ರಾಗ ಗುರುತಿಸಲಾಗುತ್ತಿಲ್ಲ. ಎರಡನೆ ಮತ್ತು ಮೂರನೇ ಚರಣ ಕ್ರಮವಾಗಿ ಖರಹರಪ್ರಿಯ ಹಾಗೂ ಅಭೋಗಿ ರಾಗಗಳಲ್ಲಿವೆ.
ತಪ್ಪಿದ್ದರೆ ತಿಳಿಸಿ
ಉ: ಮಲಯ ಮಾರುತ ಗಾನ
ನಂದಕುಮಾರ ಅವರೆ,
ಹೌದು - ’ಮಲಯಮಾರುತ ಗಾನ’ ಅನ್ನುವ ಹಾಡು ನೀವು ಹೇಳಿದಂತೆ ರಾಗಮಾಲಿಕೆಯೇ. ಪಲ್ಲವಿ, ಮತ್ತು ಮೊದಲ ಚರಣ ಮಲಯಮಾರುತ ರಾಗದಲ್ಲೇ ಇದ್ದು, ಉಳಿದವು ನೀವು ಹೇಳಿದಂತೆ ಖರಹರಪ್ರಿಯ ಮತ್ತೆ ಅಭೋಗಿ ರಾಗಗಳಲ್ಲಿವೆ.
ಇಲ್ಲಿ ವಿಡಿಯೋದಲ್ಲಿ ಹಾಕಿದ್ದ ’ಶಾರದೇ ದಯ ತೋರಿದೇ’ ಅನ್ನುವ ಹಾಡು ಕೂಡ ಮಲಯಮಾರುತ ರಾಗದಲ್ಲೇ ಇದೆ.