ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲೇನು?

ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ ಬಿಡಿಸುತ್ತಾ, ಮಧ್ಯೆ ಮಧ್ಯೆದಲ್ಲಿ , ಒಂದು ತೊಳೆ ರುಚಿ ನೋಡ್ತೀನಿ, ಅಂತಾ ಹಣ್ಣು ಬಿಡಿಸುವುದರಲ್ಲಿ ಅರ್ಧ ಖಾಲಿ ಮಾಡಿದ್ದ.

ನನ್ನ ಮಗ " ಅಪ್ಪಾ, ಹಳಸಿನ ಹಣ್ಣು ತಿಂದ್ರೆ ಏನೂ ತೊಂದರೆ ಆಗಲ್ವಾ? ಊಟಕ್ಕಿಂತ ಮುಂಚೆ ತಿನ್ ಬೇಕೂ ಅಂತಾರೆ, ಅದರ ಬೀಜ ಸುಮ್ನೆ ಬಿಸಾಕೋದ? " ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳ್ತಾ ಕೂತಿದ್ದ. ಹಣ್ಣು ಬಿಡಿಸಿ ಮುಗಿದಮೇಲೆ ನನ್ನ ಪತ್ನಿ ಅಡಿಗೆ ಮನೆಯೊಳಗಿಂದಲೇ ಕೂಗಿ ಹೇಳಿದ್ಲು" ಪಕ್ಕದ ಮನೆಗೆ ಅರ್ಧ ಕೊಟ್ಟು ಕಳಿಸಿ, ಸೂರಿ ಅಪ್ಪಂಗೆ ಹಳಸಿನ ಹಣ್ಣು ಅಂದ್ರೆ ತುಂಬಾ ಇಷ್ಟ."

-"ಹೌದು ಅಂಕಲ್ ನಮ್ಮಪ್ಪಂಗೆ ಹಳಸಿನ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ನಮ್ಮಮ್ಮ ಯಾವಾಗ್ಲೂ ಅವರ ಜೊತೆ ಪೇಟೆಗೆ ಹೋಗ್ದಲೇ ಇರುಲ್ಲ, ನಮ್ಮಪ್ಪ ಹಳಸಿನ ಹಣ್ಣು ತರೋದಕ್ಕೆ ಅಮ್ಮ ಬಿಡಲ್ಲ."

- ಆಯ್ತಪ್ಪ ,ಒಳಗಡೆ ಹೋಗಿ ಒಂದು ಪಾತ್ರೆ ತಗೊಂಡು ಬಾ, ಹಣ್ಣು ತಗೊಂಡು ಹೋಗು.

ಅಡಿಗೆ ಮನೆಗೆಹೋದ ಸೂರಿ ಒಂದು ಸ್ಟೀಲ್ ಬಾಕ್ಸ್ ತಂದ, ಅದಕ್ಕೆ ಎಷ್ಟು ಹಾಕಿದರೂ ಅದರ ಅರ್ಧಾನೂ ತುಂಬಲಿಲ್ಲ." ಇವು ನಾಲ್ಕು ತೊಳೆ ನಮ್ಮನೆಗಿರಲಿ, ಇದನ್ನು ತಗೊಂಡು ಹೋಗು" ಅಂತಾ ಅವನಿಗೆ ಹಣ್ಣು ಕೊಟ್ಟು ಕಳಿಸಿ ಅಂಟಾಗಿದ್ದ ನನ್ನ ಕೈ ಗೆ  ಒಂದಿಷ್ಟು ಕೊಬ್ರಿ ಎಣ್ಣೆ ಹಚ್ಚಿ ಅಂಟು ತೆಗೆದು , ಹಣ್ಣಿನ ಶಾಡೆ[ಹಣ್ಣಿನ ಸಿಪ್ಪೆ] ಯನ್ನು ಎತ್ತಿ ಹೊರಗೆ ಹಾಕಿದ್ದೇ ಬಂತು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

asuhegde's picture

ಪಾಪ...ಆ ಸೂರಿಯ ಮರ್ಯಾದೆ ಹೀಗಾಯ್ತು...ಮೂರಾಬಟ್ಟೆ....

:(

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

palachandra's picture

:D

>>ಹಳಸಿನಹಣ್ಣು
ಹಲಸು ಆಗ್ಬೇಕಲ್ವ

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

asuhegde's picture

ಪಾಲಚಂದ್ರ,
ನಾವೂ ಹಲಸಿನ ಹಣ್ಣು ಅಂತಲೇ ಹೇಳೋದು...
ಹಳಸಿನ ಹಣ್ಣು ಎನ್ನುವವರು ಇದ್ದರೂ ಇರಬಹುದು.

ಕೊನೆಯ ಕೊಂಕು:

ಹಲಸಿನ ಹಣ್ಣಿನ ತೊಳೆಯಲ್ಲಿ ಹೆಚ್ಚಿನ ಪಾಲು ಪಕ್ಕದಮನೆಗೆ "ಶಿಫ್ಟ್" ಆಯ್ತಲ್ಲಾ, ಹಾಗಾಗಿ ಹಲಸಿನ ಹಣ್ಣಿನ "ಲ" ಬರೆಯುವಾಗ "ಶಿಫ್ಟ್" ಕೀಲಿ ಕೈಕೊಟ್ಟಿರಬೇಕು...
:)

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

palachandra's picture

>>ಹಲಸಿನ ಹಣ್ಣಿನ ತೊಳೆಯಲ್ಲಿ ಹೆಚ್ಚಿನ ಪಾಲು ಪಕ್ಕದಮನೆಗೆ "ಶಿಫ್ಟ್" ಆಯ್ತಲ್ಲಾ, ಹಾಗಾಗಿ ಹಲಸಿನ ಹಣ್ಣಿನ "ಲ" ಬರೆಯುವಾಗ "ಶಿಫ್ಟ್" ಕೀಲಿ ಕೈಕೊಟ್ಟಿರಬೇಕು.
ಸೂಪರ್ :)

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

n.nagaraja shetty sablady's picture

ನಮ್ಮೂರು ಕಡೆ ಬನ್ನಿ ಸರ್ ಬೇಕಾದಷ್ಟು ತಿನ್ನಬಹುದು ಈಗ ಹಲಸಿನ ಹಣ್ಣಿನ ಸೀಜನ್ ತಾನೇ

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

srinivasps's picture

ಪ್ರತಿ ಹಲಸಿನ ತೊಳೆಯ ಮೇಲೆ ಇಳಿಸುವವರ ಹೆಸರಿದೆ :)

ಹಿಂದಿ ಗಾದೆ: ದಾನೆ ದಾನೆ ಪೆ ಲಿಖಾ ಹೈ ಖಾನೆವಾಲೆ ಕಾ ನಾಮ್, ನೆನೆಯುತ್ತ :D

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

ambika's picture

"ಹಂಚಿದವರಿಗೆ ಹಲ್ಲು ಬಾಯಿ" ಎಂಬ ಗಾದೆ ಮಾತಿನಂತೆ ಆಗಿದೆ ನಿಮ್ಮ ಪರಿಸ್ಥಿತಿ. ಅದಕ್ಕಾಗಿ ನಮ್ಮ ಮನೆಯಲ್ಲಿ ನಮ್ಮ ತಂದೆಯವರು ಎಲ್ಲರೂ ಕುಳಿತು ಮೊದಲು ಪೂರ್ತಿ ಹಣ್ಣನ್ನು ಬಿಡಿಸಿ ನಂತರ ಎಲ್ಲರೂ ಒಟ್ಟಾಗಿಯೇ ತಿನ್ನಬೇಕೆಂದು ನಿಯಮವನ್ನು ವಿಧಿಸಿಬಿಡುತ್ತಿದ್ದರು. ತಿನ್ನುತ್ತಾ ತಿನ್ನುತ್ತಾ ಬಿಡಿಸಿದರೆ ಅದು ಎಂಜಲು ಎನ್ನುವ ಭಾವನೆಯೂ ಇರುತ್ತಿತ್ತು. ಎಲ್ಲ ಬಿಡಿಸಿ ಮುಗಿಯುವವರೆಗೆ ಕಾಯುವುದೂ ಸಹ ಕಷ್ಟದ ಕೆಲಸವೇ ಸರಿ.
ಆ ಹಣ್ಣಿನ ಸವಿ ಅಂತಹದ್ದು ಅಲ್ಲವೇ ?

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

malathi shimoga's picture

ಹೇಳಿದ್ರೆ ನಾನು ಬರ್ತಾಇದ್ದೆ ಬಿಡ್ಸೋಕೆ?

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

palachandra's picture

ಎಲ್ಲಿಂದ ಶಿವಮೊಗ್ಗಾದಿಂದ್ಲಾ, ಲಾಸಲ್ವೇನ್ರೀ?

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

hariharapurasridhar's picture

ಮಾಲತಿ,
ಮುಂದಿನಸಲ ಹಣ್ಣು ಬಿಡಿಸಲು ನೀವೂ ಬರುವಿರಂತೆ, ಅದಕ್ಕೆ ಮುಂಚೆ...........
ಸೂರಿ ಸೈಲೆಂಟಾಗಿ ಬಂದ. ಹಣ್ ತಿಂದೂ ಹೋದ, ಕೊಂಡೂ ಹೋದ.
ನನ್ಮಗ ಹಣ್ಣು ತಿನ್ನುವುದ ಬಿಟ್ಟು ಬರೀ ತರ್ಲೆ ಪ್ರಶ್ನೆ ಮಾಡಿಕೊಂಡಿದ್ದ.ಅವರಮ್ಮ ಅಡಿಗೆ ಮನೇಲಿ ಅವಳ ಪಾಡಿಗೆ ಅವಳಿದ್ಲು. ಈ ಮೂವರ ಪಾತ್ರವನ್ನು ಸ್ವಲ್ಪ ನಮ್ ಮನೆಯಿಂದ ಹೊರಗೆ ತಂದು ಬೇರೆ ಬೇರೆ ಕೋನಗಳಲ್ಲಿ, ಬೇರೆ ಬೇರೆ ಸಂದರ್ಭಗಳಿಗೆ ಹೋಲಿಸಿಕೊಂಡು ನೋಡಿ.ಚುಟುಕು ಬರಹದ ಚುರುಕು ತಿಳಿದೀತು.
* ಮಾತನಾಡ್ದೆ ಸಾಧಿಸುವವರು
* ಅತಿಯಾದ ಬುದ್ಧಿವಂತಿಕೆಯ ಪರಿಣಾಮ.
* ನಿರ್ಲಿಪ್ತರು.

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

asuhegde's picture

ಅಲ್ಲಿ ನಾಲ್ಕನೆಯವರ ಪಾತ್ರದ ಬಗ್ಗೆ ಮೌನ ಯಾಕೆ?
:)

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

hariharapurasridhar's picture

ಅಲ್ವಾ?
ಛೇ! ನನ್ ಕಣ್ಣಿಗೆ ಬಿದ್ದವರು ಆ ಮೂವರೇ!
ನಿಮ್ಮ ಕನ್ನಡಿಯಲ್ಲಿ ಈಗ ಕಾಣ್ತು ನೋಡ್ರೀ ಇನ್ನೊಂದು ವ್ಯಕ್ತಿಯ ರೂಪ.ತನ್ನನ್ನು ನೋಡಿಕೊಳ್ಳದೆ ಬೇರೆಯವರನ್ನೇ ನೋಡುವಾಗ ಹೀಗಾಗುತ್ತೆ, ಸುರೇಶ್, ನಿಮ್ಮ ಚುರುಕು ತಟ್ಟಿದೆ.

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

hariharapurasridhar's picture

ಮರೆತಿದ್ದೆ..
* ಕೈಗೆ ಅಂಟು ಮೆತ್ತಿಸಿಕೊಂಡು ಹಣ್ಣು ಬಿಡಿಸಿದವರು, ಕೊನೆಗೆ ಶಾಡೆ[ಸಿಪ್ಪೆ] ಎಲ್ಲಾ ತೆಗೆದು ಹೊರ ಹಾಕಿದವರು,[ಹೆ]ಹಣ್ಣಿನ ವಾಸನೆಯಲ್ಲೇ ಕಾಲ ಕಳೆದವರು.
[ವಾಸನೆ=ಬಯಕೆ]

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

palachandra's picture

ಇಲ್ಲಿ ಅಂಟು ಅಂದ್ರೆ ಮಾಯೆ, ಮತ್ತೆ ತೆಂಗಿನೆಣ್ಣೆ ಮಾಯಾ ಮೋಹವ ಕಳಚುವ ಆಧ್ಯಾತ್ಮ ಸಾಧನೆ

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

savithru's picture

ಪಾಲ

ನನ್ನ 3-4 ನಮಸ್ಕಾರ ಒಪ್ಪಿಸಿಕೊಳ್ಳಿ! ಸಕತ್!

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

palachandra's picture

ಸ್ವೀಕರಿಸಿದ್ದೇವೆ, ನಿಮಗೆ ಒಳ್ಳೆಯದಾಗಲಿ :)

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

savithru's picture

:)

೩-೪ ಎಷ್ಟು? ;)

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

palachandra's picture

-೧
ಹಿ ಹಿ,, ಅಂದ್ರೆ ನಾನೇ ನಿಮಗೊಂದು ಕೊಡ್ಬೇಕು.. ಅದಕ್ಕೆಲ್ಲಾ ಕಾಲ ಕೂಡಿ ಬರ್ಬೇಕು
ಅಂದಹಾಗೇ ನನ್ನ ಆಶೀರ್ವಾದ ವಾಪಾಸ್ ತಗೊಂಡಿದೀನಿ

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

hariharapurasridhar's picture

ಉತ್ಕೃಷ್ಟ. ಪಾಲಚಂದ್ರರೇ, ಅಂಟಿಗೆ ಮತ್ತು ಎಣ್ಣೆಗೆ ನಿಮ್ಮ ವ್ಯಾಖ್ಯಾನ ಉತ್ಕೃಷ್ಟ.

ಉ: ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ?

vinideso's picture

ಕೊಟ್ಟವ ಕೋಡಂಗಿ ಇಸ್ಕೊಂಡವ ಇರಭದ್ರ ಅನ್ನೋ ಹಾಗೈತು ನಿಮ್ಮಿ ಕಥೆ .
:D

ಹೇಗೆ ಸಗಣಿಯನ್ನು ಹೊಗಳಿದ್ದಾರೋ ಹಾಗೆ ಈ ಹಲಸು ಕೂಡ ಅಲ್ಲವಾ .

ಹೋಮ ಹವನಗಳಿಗೆ ಬೇಕು ನಾ
ನಿಮ್ಮ ಮನೆ ದ್ವಾರಕ್ಕೆ ಬೇಕು ನಾ
ನಿಮ್ಮ ಹಸಿವು ಇಂಗಿಸಲು ಬೇಕು ನಾ

ಆದರೆ ನನ್ನ ಗರ್ಭವ ಬಗೆದು
ನನ್ ಮಕ್ಕಳ ಹುರಿದು ತಿಂದು
ಹಸಿ ಹಸಿ ಹುನ್ಸು ಬಿಡುವ ನೀವು ಯಾರಿಗೆ ಬೇಕು ? :D :D

ಸುಮ್ಮನೆ ಹಾಗೆ ಬರೆದೆ