ಕವಿಗಳೇ ಬರುವಿರಾ ನೀವು?
ಅಪ್ಪ ಹಾಕಿದ್ದ ಆ ಮರದ ನೆರಳಲ್ಲಿ
ಅದೆಷ್ಟು ಹಾಯಾಗಿ ಮಲಗಿದ್ದೆ ನಾನು!
ಹಣ್ಣು ಕಾಯ್ಗಳ ತಿಂದು
ಚಿಲಿಪಿಲಿ ಗುಟ್ಟುತ್ತಾ
ನಲಿವ ಹಕ್ಕಿಗಳನ್ನು ಮರೆಯಲೇನು?
ಚೈತ್ರದಾ ಆಚಿಗುರು
ಘಮಘಮಿಸುವಾ ಹೂವು
ರುಚಿ ರುಚಿಯಾ ಹಣ್ಣು
ಇನ್ನು ಸಿಗುವುದೇನು?
ಚೈತ್ರಬಂದರೂ ಇಂದು
ಚಿಗುರಲೊಲ್ಲದು ಏಕೋ
ಮತ್ತೆಲ್ಲಿ ಹೊವಿನಾ ಘಮ?
ಇನ್ನೆಲ್ಲಿ ರುಚಿ ರುಚಿಯಾ ಹಣ್ಣು?
ಎಲುಬುದೇಹವ ಕಂಡು
ಒದ್ದೆಯಾಗಿದೆ ಕಣ್ಣು|
ಬುಡದಲ್ಲಿ ಬೆಳೆದಿದೆಯಲ್ಲಾ
ಮಹಮ್ಮಾರಿ ಕಳೆ!
ಪೈಪೋಟಿ ಮಾಡಿದೆಯಲ್ಲಾ
ತಿಂದು ಅದೇ ಮರದ ಎಲೆ|
ಕಳೆಯ ತೆಗೆಯಬೇಕು
ಮರವ ಉಳಿಸಬೇಕು
ಕವಿಗಳೇ, ಬರುವಿರಾ ನೀವು?
- hariharapurasridhar's blog
- Login or register to post comments
- 332 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕವಿಗಳೇ ಬರುವಿರಾ ನೀವು?
ಶ್ರೀಧರ್ ಸಾರ್
ಸೂಪರ್ ಕವನ ! ಬಹುಶಃ ನಾನು ಕಂಡಂತೆ ಇದೇ ಮೊದಲನೇ ಬಾರಿಗೆ ನೀವು ಕವನ ಬರೆದು ನಮ್ಮ ಸಂಪದಕ್ಕೆ ಕೊಡುಗೆಯನ್ನಿತ್ತಿದ್ದೀರಿ, ನಿಮ್ಮ ಕವನಗಳ ಮಹಾ ಸಾಗರದ ಅಲೆಗಳಂತೆ ಸಂಪದ ಬ್ಲಾಗಿಗೆ ಬರುತ್ತಿರಲಿ ಎಂಬುದೇ ನಿಮ್ಮ ಅಭಿಮಾನಿ ಹುಡುಗನ ಆಶಯ.
ಅರವಿಂದ್
ಉ: ಕವಿಗಳೇ ಬರುವಿರಾ ನೀವು?
ಅರವಿಂದ್,
ಚೆನ್ನಾಗಿದ್ದೀರಾ?
ಕೊಂಡಿಯಲ್ಲಿ ನೋಡಿದರೆ ಹಿಂದೂ ಬರೆದಿರುವೆ.
http://sampada.net/u...
ಉ: ಕವಿಗಳೇ ಬರುವಿರಾ ನೀವು?
ಬರುತ್ತೇವೆ ಶ್ರೀಧರ್ ಸರ್, ಕವನ ಚೆನ್ನಾಗಿದೆ.
ಉ: ಕವಿಗಳೇ ಬರುವಿರಾ ನೀವು?
ಸಹೃದಯೀ ಸಂಪದಿಗರು ಈಗಾಗಲೇ ಕಾರ್ಯಶೀಲರಾಗಿದ್ದಾರೆ. ಹಾಸನದಲ್ಲಿನ ಒಂದು ಕವಿಗೋಷ್ಠಿಗೆ ಬರೆದಿದ್ದನ್ನು ಇಲ್ಲಿ ಹಾಕಿರುವೆ. ಮೆಚ್ಚುಗೆಗೆ ಧನ್ಯವಾದಗಳು.
ಉ: ಕವಿಗಳೇ ಬರುವಿರಾ ನೀವು?
ಶ್ರೀಧರ ಸರ್,
ಕವನ ಬಹಳ ಸೊಗಸಾಗಿದೆ.
"ಇಂದು ಚೈತ್ರಬಂದರೂ
ನಮಗೆ ಚಿಗುರುಬೇಕೆಂದರೂ
ಮರವೇಬೇಡವೆಂದರೂ
ಮರಕಡಿಯುವವರೂ,
ಎಲ್ಲಿ ಹೋದರು
ಆ ಪರಿಸರವಾದಿಯರೂ,
ಮರಗಿಡಗಳನ್ನು ಉಳಿಸುವವರು"
ಉ: ಕವಿಗಳೇ ಬರುವಿರಾ ನೀವು?
ಕಳೆಯ ತೆಗೆಯಬೇಕು
ಮರವ ಉಳಿಸಬೇಕು
ಕವಿಗಳೇ, ಬರುವಿರಾ ನೀವು?
ಈ ಆಶಯ ಅರ್ಥವಾಗಿದ್ದರೆ ಸಾಕು.
ಉ: ಕವಿಗಳೇ ಬರುವಿರಾ ನೀವು?
ಮರವ ಉಳಿಸಬೇಕು
ಕವಿಗಳೇ, ಬರುವಿರಾ ನೀವು?
ಇದನ್ನು ಓದಿದಾಗ ನನ್ನ ತಲೆಗೆ ತಕ್ಷಣ ಬಂದ ಸಾಲುಗಳೇ ಆಗಿನ ಪ್ರತಿಕ್ರಿಯೆಯಲ್ಲಿ ಬಂದದ್ದು.
ಉ: ಕವಿಗಳೇ ಬರುವಿರಾ ನೀವು?
ಸಂತೋಷ, ಕಮಲಾ ಅವರೇ,
ಉ: ಕವಿಗಳೇ ಬರುವಿರಾ ನೀವು?
ಕವಿಗಳು ಕವನ ಬರೆಯಬಲ್ಲರು
ಮನದ ಕೊಳೆಯ ತೆಗೆಯಬಲ್ಲರು
ಮರವ ಉಳಿಸಬಲ್ಲರೋ
ಕಳೆಯ ತೆಗೆಯಬಲ್ಲರೋ
ನಾನರಿಯದಿರುವೆ
ಕವಿಗಳನೇ ಏಕೆ ಕರೆದಿರೋ
ಕವಿವರ್ಯ ನಾನರಿಯದಿರುವೆ
ನಾನೂ ಕವಿಯೋ ಎಂಬ ವಿಮರ್ಶೆಯೊಳು
ನಾನೀಗ ಸುಮ್ಮನಿರುವೆ
ಉ: ಕವಿಗಳೇ ಬರುವಿರಾ ನೀವು?
ವಿಮರ್ಶೆಯೇಕೆ?? ನಿಮ್ಮಂಥ ಹಿರಿಯ ಕವಿಗಳಿಗೆ
ಸುಮ್ಮನಿದ್ದರೆ, ಏನಾಗಬೇಕು ನಮ್ಮಂಥ ಕಿರಿಯ ಕವಿಗಳಿಗೆ????
ಉ: ಕವಿಗಳೇ ಬರುವಿರಾ ನೀವು?
<ಮರವ ಉಳಿಸಬಲ್ಲರೋ
ಕಳೆಯ ತೆಗೆಯಬಲ್ಲರೋ>
ಮರವ ಉಳಿಸುವ, ಕಳೆಯ ತೆಗೆಯುವ ಕೆಲಸವನ್ನು ಕೃಷಿಕ ಮಾಡುತ್ತಲೇ ಇರುವನು, ಮಹಾನ್ ಸಂಸ್ಕೃತಿ ಎಂಬ ಮರವನ್ನುಳಿಸುವ, ಅದಕ್ಕಂಟಿರುವ ಜಾಡ್ಯಗಳೆಂಬ ಕಳೆ ತೆಗೆಯುವ ಕೆಲಸವನ್ನು ಸಾಹಿತ್ಯ ಕೃಷಿ ಮಾಡುವ ಕವಿ ಮಾಡಬಾರದೇ? ಇದು ನನ್ನ ಆಶಯ. ಅಂದಹಾಗೆ ಹಾಸನದ ಕವಿಗೋಷ್ಠಿಗಾಗಿ ಬರೆದ ಕವನವಿದು.
ಧನ್ಯವಾದಗಳು ಸುರೇಶ್.
ಉ: ಕವಿಗಳೇ ಬರುವಿರಾ ನೀವು?
ಕವಿಗಳ್ ಕೇಳಿ ನಾ ಪೆಳ್ವದ
ಕವನದ ಸಾಲಿನೋಳ್ ಹರುಹಿದಿರಿ,
ನಿಮ್ಮ ಮನದಾಳದ ಚಿತ್ರವ.
ಇದೋ ನನ್ ಸಾಲ್ಗ್ ಳ್, ನಿಮ್ಮೆಲಿನ್ ಅಭಿಮಾನಕ್ಕೆ
"ಸುಂದರ, ಸುಲಲಿತ, ಸುಮಧುರ, ನವ್ಯ ಕನ್ನಡ ದಾಟಿಯ ಅರ್ಥೈಸುವ ಸರಳ ನುಡಿ"