ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

ಲೇಖಕರು

hariharapurasridhar's picture

ಪೂರ್ಣ ಹೆಸರು
ಹರಿಹರಪುರಶ್ರೀಧರ್

ಪರಿಚಯ

ನಾನೊಬ್ಬ ಭಾವಜೀವಿ.ಇಷ್ಟು ಸಾಕು.
ನನ್ನ ಬರಹಗಳಿಗಾಗಿ ಕೊಂಡಿ.
http://sampada.net/u...
www.vedasudhe.blogsp...
www.vedasudhe-vedio....

E-Mail: vedasudhe@gmail.com

ಅಮ್ಮನ ಕೈತುತ್ತಿನ ನೆನಪಲ್ಲಿ

ಅಂದು.....
ನನ್ನಮ್ಮ ತುತ್ತಿನೊಡೆ ಕೊಟ್ಟಿದ್ದ ಮುತ್ತು|
ಒಣರೊಟ್ಟಿ-ಚಟ್ನಿ, ಸವಿಮಾತು|
ಅಹಾ! ಅದೆಂತ ರುಚಿ! ಎಶ್ಟು ಹಿತ!!
ನಿತ್ಯ ಹೊಟ್ಟೆ ತುಂಬಲು ಇದ್ದರೇನಂತೆ
ಜೋಳ ರಾಗಿಯ ಮುದ್ದೆ,
ಇರಲಿಲ್ಲವೆಂದೆಂದೂ ಪ್ರೀತಿಯಪ್ಪುಗೆ ಕೊರತೆ||
ಇಂದು.......
ದುಂಡುಮೇಜಿನ ಮೇಲೆ ಮೃಷ್ಟಾನ್ನದೂಟ
ನಡು ನಡುವೆ ಫೋನಿನಾ ರಿಂಗಣದ ಕಾಟ|
ಊಟವೇ ರುಚಿ ಹೀನ, ಕಾರಣವು ಗೊತ್ತೆ?
ಅಮ್ಮನಾ ಕೈ ತುತ್ತಿನಾ ಮುಂದೆ ಎಲ್ಲವೂ ಸಪ್ಪೆ||

Your rating: None Average: 1 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅಮ್ಮನ ಕೈತುತ್ತಿನ ನೆನಪಲ್ಲಿ

Harish Athreya's picture

ಆತ್ಮೀಯ
ಅಮ್ಮನ ಕೈತುತ್ತೂಟ
ವಾರಕ್ಕೊಮ್ಮೆ ಎಣ್ಣೆ ಸ್ನಾನ
ಕೊನೆಯ ತ೦ಬಿಗೆಯಲ್ಲಿ
ರಾಮಚ೦ದ್ರ ರಕ್ಷ
ಸುಬ್ರಹ್ಮಣ್ಯೇಶ್ವರಾ ರಕ್ಷ ರಕ್ಷ..
ಹಾರೈಸುವಿಕೆಯೇ ಅಮ್ಮನ ಗುಣ
ಅಮ್ಮನ ಮಡಿಲಲ್ಲಿ ಮಲಗಿದರೆ
ಉಳಿದದ್ದೆಲ್ಲಾ ಗೌಣ
ಅಮ್ಮನ ನೆನಪೇ ಮಧುರ ಸ್ಮುತಿ
ನೆನಪಿಸಿದ್ದಕ್ಕೆ ಧನ್ಯವಾದ ಶ್ರೀಧರಣ್ಣ
ಹರೀಶ ಆತ್ರೇಯ

ಉ: ಅಮ್ಮನ ಕೈತುತ್ತಿನ ನೆನಪಲ್ಲಿ

sujata's picture

Nice poem..

ನಂಜುಂಡೇಶ್ವರನ ಪಾದ ತೀರ್ಥ...

hariharapurasridhar's picture

ಹರೀಶ್,
ನಿಜವಾಗಲೂ ನಮ್ಮಮ್ಮನ ಹೆಚ್ಚು ನೆನಪು ಮಾಡಿದ್ದು ನೀವು ಎಣ್ಣೆ ನೀರು ನೆನಪು ಮಾಡಿದಮೇಲೆ. ಶಾಂಪೋ ತಿಕ್ಕಿಕೊಂಡು,ಬಾಯ್ಲರ್ ನೀರು ಹುಯ್ಕೊಂಡು ತಲೆಗೆ ಸ್ನಾನ ಮಾಡುವ ಇಂದಿನ ಕಾಟಾಚಾರದ ಸ್ನಾನಕ್ಕೂ ಅಂದು ತಲೆಗೆ, ಮೈ ಕೈ ಗೆ ಹರಳೆಣ್ಣೆ ಹಚ್ಚಿಸಿಕೊಂಡು ಚೆನ್ನಾಗಿ ನೆಂದು, ಆಮೆಲೆ ಅಮ್ಮನ ಕೈನ ಬಿಸಿ ಬಿಸಿ ನೀರು ಹಂಡೆಯಿಂದ ತಲೆ, ಮೈ ಕೈ ಮೇಲೆ ಬೀಳುತ್ತಿದ್ದರೆ ಅದೆಂತಾ ಹಿತ! ನಮ್ಮಮ್ಮ ಕೊನೆಗೆ " ನಂಜುಂಡೇಶ್ವರನ ಪಾದ ತೀರ್ಥ, ಸುಬ್ರಹ್ಮಣ್ಯೇಶ್ವರನ ಪಾದತೀರ್ಥ.... ಎಂದಾಗ ಗೋವಿಂದಾ.....ಎನ್ನುತ್ತಿದ್ದುದನ್ನು ಮತ್ತೆ ನೆನಪಿಸಿ ಬಿಟ್ಟಿರಲ್ಲಾ!!

ಉ: ನಂಜುಂಡೇಶ್ವರನ ಪಾದ ತೀರ್ಥ...

ಮಾಯ್ಸ೨'s picture

ಮಹಾಸ್ವಾಮಿ..

ನಂಜುಂಡೇಶ್ವರನು ಲಿಂಗರೂಪಿಯು. ಅವನಿಗೆ ಪಾದವಾಗಲಿ, ಶಿರಸ್ಸಾಗಲಿ ಇರದು.

ಹಾಗಿರುವಾಗ ಶ್ರೀಶ್‌ರೀಕಂಠೇಶ್ವರನ ಪಾದ ತೀರ್ಥವೆಂದರೆ ಸರಿಕಾಣದು.

ನನ್ನನಿಸಿಕೆ.

ಉ: ಅಮ್ಮನ ಕೈತುತ್ತಿನ ನೆನಪಲ್ಲಿ

hariharapurasridhar's picture

ಯಾವ ಎಳೆಯಲ್ಲದರೂ ಚರ್ಚೆಗೆ ಬರುವ ನಿಮ್ಮ ಕುತೂಹಲಕ್ಕೆ ನನ್ನಿ. ಈಶ್ವರ ಲಿಂಗರೂಪಿಯೂ ಅಲ್ಲ. ಅವನು ನಿರಾಕಾರಿ. ಅವನಿಗೆ ಅಂಗಾಂಗಗಳನ್ನೆಲ್ಲಾ ಕೊಟ್ಟವರು ನಾವೇ. ಸರ್ವ ವ್ಯಾಪಿಯಾದ ಅವನಿಗೆ ಗುಡಿಯಲ್ಲಿ ಬಂಧಿಸಿದವರೂ ನಾವೇ. ಅವನಿಗೆ ಪರಾಕು ಹೇಳುವವರೂ ನಾವೇ.
ಅದೊಟ್ಟಿಗಿರಲಿ
"ಅಮ್ಮನಾ ಕೈ ತುತ್ತಿನಾ ಮುಂದೆ ಎಲ್ಲವೂ ಸಪ್ಪೆ" ಈ ಮಾತು ಹಿತವಾಯ್ತೆ?

ಉ: ಅಮ್ಮನ ಕೈತುತ್ತಿನ ನೆನಪಲ್ಲಿ

ಮಾಯ್ಸ೨'s picture

"ಈಶ್ವರ ಲಿಂಗರೂಪಿಯೂ ಅಲ್ಲ."

ಕೋಟ್ಯಂತರ ಶೈವರು ಹಾಗು ಲಿಂಗಾಯತ್ರು ಶಿವನನ್ನು ಲಿಂಗರೂಪಿಯಾಗಿಯೇ ಪೂಜಿಸೋದು. ಅದರಲ್ಲೂ ನಂಜುಂಡೇಶ್ವರ ಲಿಂಗವೇ.

ಉ: ಅಮ್ಮನ ಕೈತುತ್ತಿನ ನೆನಪಲ್ಲಿ

ಮಾಯ್ಸ೨'s picture

"ದುಂಡುಮೇಜಿನ ಮೇಲೆ ಮೃಷ್ಟಾನ್ನದೂಟ
ನಡು ನಡುವೆ ಫೋನಿನಾ ರಿಂಗಣದ ಕಾಟ|"

ಆ ಪೋನು ಅಮ್ಮ ಮಾಡಿದ್ರೆ?

ಉ: ಅಮ್ಮನ ಕೈತುತ್ತಿನ ನೆನಪಲ್ಲಿ

Aravind M.S's picture

ಶ್ರೀಧರ್ ಸರ್,

ಅಮ್ಮ ಪ್ರೀತಿಯ ಪ್ರತೀಕ. ಪ್ರೀತಿಗೆ ಪಂಚಮವೇದ ಅಂತ ಕರೀತಾರಂತೆ, ಅಂದರೆ ಅಮ್ಮ ವೇದ ಸಮಾನ. ಅದಕ್ಕೇ ಇರಬೇಕು ನಮ್ಮಲ್ಲಿ ಅಷ್ಟೊಂದು ತಾಯಿ ದೇವರುಗಳು - ಮಾರಮ್ಮ, ಉಡಿಸಲಮ್ಮ, ಹಟ್ಟಿಲಕ್ಕಮ್ಮ. ಉತ್ತರದಲ್ಲಿ - ಸಂತೋಷಿಮಾತಾ, ಕಾಲಿ ಮಾ, ಇತ್ಯಾದಿ !

- ಅರವಿಂದ