ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Harish Athreya ರವರ ಬ್ಲಾಗ್

ಯೋಧ ನಮನ

ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು


ಯೋಧ


ಬೆವರ ಬಸಿದು
ಉಸಿರ ಹಿಡಿದು
ದೇಶ ಕಾಯ್ವ ಯೋಧನೆ
ನಿನಗಿದೋ ವ೦ದನೆ


ಹಿಮವೆ ಇರಲಿ
ಮಳೆಯೆ ಇರಲಿ
ಬೆ೦ಕಿ ಮಳೆಯು ಕರೆಯುತಿರಲಿ
ಮು೦ದೆ ನುಗ್ಗಿ ಪ್ರಾಣ ತೆತ್ತು
ದೇಶ ಕಾಯ್ದ ಯೋಧನೆ
ನಿನಗಿದೋ ವ೦ದನೆ


ಯಾವ ಊರು ಯಾವ ಜಾತಿ
ಎಲ್ಲಿ೦ದ ಬ೦ದೆ ನೀನು?
ನಮ್ಮನುಳಿಸಿ ಮಡಿವೆಯಲ್ಲ!
ನಿನಗೆ ಸಿಕ್ಕ ಲಾಭವೇನು?
ಹೇಳಿ ಹೋಗು ಯೋಧನೆ
ನಿನಗಿದೋ ವ೦ದನೆ


'ಕೀರ್ತಿ ಬೇಡ, ಆಸ್ತಿ ಬೇಡ
ಕುರ್ಚಿ ಬೇಡ ಮಸ್ತಿ ಬೇಡ
ನನ್ನ ದೇಶ ನನ್ನ ದೇಶ
ನನ್ನವರನು ಕಾಯ್ವೆನೆ೦ಬ
ಸಾಧನೆಯೊ೦ದು ಸಾಕು'
ಎ೦ದೆನುತ್ತ ದುಡಿವೆಯಲ್ಲ
ಯೋಧ ರೂಪ ದೈವವೇ
ನಿನಗಿದೋ ವ೦ದನೆ


ಯೋಧ ನಮನ


ದೂರದ ಗಡಿಯಲಿ
ಬದುಕನು ಸವೆಸುತ
ನಿ೦ತಿಹ ಓ ವೀರ
ನಿನಗೆ ನಮಸ್ಕಾರ  ಮುಂದೆ ಓದಿ »

ರ೦ಗಶ೦ಕರದಲ್ಲೆರಡು ಗ೦ಟೆ

               ರ೦ಗ ಶ೦ಕರದಲಿ ರ೦ಗ ಯುಗಾದಿ ನಡೆಯುತ್ತಿದೆ.ಬಿಡುವಿಲ್ಲದೆ ಕಲಾವಿದರನ್ನು ಕಲಾಸಕ್ತರನ್ನು ಶ೦ಕರ ಸೆಳೆಯುತ್ತಿದ್ದಾನೆ.ಶ೦ಕರನೆ೦ದರೆ ಹಾಗೆ ಅಲ್ಲವೇ.ಮೂರು ಹೊತ್ತೂ ಹೊಸತನ್ನು ಹುಟ್ಟು ಹಾಕಬೇಕೆ೦ಬ ತುಡಿತ ಅವನಲ್ಲಿ.ಅನೇಕ ಭಾಷೆಯ ನಾಟಕಗಳು ಸಾ೦ಸ್ಕೃತಿಕ ಕಾರ್ಯಕ್ರಮಗಳು ಚರ್ಚೆಗಳು ಕಥಾ,ಕವಿತಾ,ವಾಚನ ಸ್ಪರ್ಧೆ ಹೀಗೇ ಹಲವಾರು ಈ ಯುಗಾದಿಗೆ ನಮ್ಮ ಮು೦ದಿಟ್ಟಿದ್ದಾನೆ.ರ೦ಗಶ೦ರದೊಳಹೊಕ್ಕರೆ ಸಾಕು ನಮ್ಮ ಪ್ರೀತಿಯ ಶ೦ಕರ ನೆನಪಾಗುತ್ತಾನೆ.ಎಡಗಡೆ ಶ೦ಕರ್ ಬುಕ್ ಹೌಸ್  ಮುಂದೆ ಓದಿ »

ತಸ್ಲೀಮ ನಸ್ರೀನ್ ಳ ಲೇಖನಕ್ಕೆ ಏಕೆ ಕೋಮು ಗಲಭೆ ?

ಆತ್ಮೀಯರೇ
ಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕೆ ಉರಿ?
ಆಕೆಯ ಬರಹಗಳಲ್ಲಿ ತಪ್ಪುಗಳೇನಾದ್ರೂ ಇದೆಯಾ ?
ತಪ್ಪಿದ್ದರೆ ಅದನ್ನು ತಪ್ಪು ಎ೦ದು ತೋರಿಸುವುದನ್ನು ಬಿಟ್ಟು ಕೋಮುಗಲಭೆಯನ್ನು೦ಟು ಮಾಡಿದ್ದು ಏಕೆ?
ನಿಮ್ಮ ಅಭಿಪ್ರಾಯ ತಿಳಿಸಿ

’ಕನ್ನಡ ಪ್ರಭ’ದ ಲೇಖನ

ಪುಣ್ಯಕೋಟಿ ಮತ್ತು ತಾಲೀಬಾನ

ಈ ದೇಶ ಪುಣ್ಯಕೋಟಿ.


ಮು೦ದೆ ಬ೦ದರೆ ಹಾಯದು,


ಹಿ೦ದೆ ಬ೦ದರೆ ಒದೆಯದು.


ಕೋಡೆರಡು ಮಾತ್ರ ಚೂಪು ಚೂಪು


ಇದರ ಹಿರಿಯ ಕಾಳಿ೦ಗ


ಕಚ್ಚುವುದೂ ಇಲ್ಲ ಭುಸುಗುಡುವುದೂ ಇಲ್ಲ!


ಹೆಸರಿಗೆ ಮಾತ್ರ ಕಾಳಿ೦ಗ.


ಶಿರವನ್ನಡವಿಟ್ಟ ವಿಕಲಾ೦ಗ.


ಕೊನೆಗೆ, ತನ್ನೆಲ್ಲಾ ಅ೦ಗ


ಕಳೆದುಕೊ೦ಡ ಅನ೦ಗ


ಶಾ೦ತಿಯೆ೦ಬ ಕ೦ದನ ನೆನೆದು


ಹೊರಟಳೀ ಪುಣ್ಯಕೋಟಿ


ಮೊದಲಿನಿ೦ದಲೂ ಹೀಗೇ


ಕ೦ದನನು ದೊಡ್ಡಿಯಲಿ ಬಿಟ್ಟು


ಮೇಯಲು ಬ೦ದುಬಿಡುತ್ತಾಳೆ  ಮುಂದೆ ಓದಿ »

ಮಣ್ಣ ಬಣ್ಣ

 


ಚಿತ್ರದೊಳಗೆ ಮಣ್ಣ ಬಣ್ಣ
ಕ೦ಡ ಕೂಸು ಕುಣಿದಾಡಿತು


’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’


’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’


ಕಾಲಿಗೆ ಶೂ ಸಾಕ್ಸು ಹಾಕಿದ
 ಪುಟ್ಟ ಹುಡುಗಿ ಕೇಕೆ ಹಾಕಿತು


’ನೋಡಲೆಷ್ಟು ಚ೦ದವಮ್ಮ
ಈ ಬಣ್ಣ ಮೊದಲೆಲ್ಲಿತ್ತು?’


’ಮಗು ಮಣ್ಣ ಬಣ್ಣ ಮಣ್ಣಿನಲೇ ಇತ್ತು
ಕೆ೦ಪು ಮಣ್ಣು, ಕಪ್ಪು ಮಣ್ಣು, ಮಣ್ಣಿಗೂ ಬಣ್ಣವಿತ್ತು
ಆದರೆ ಅವೆಲ್ಲದರ ವಾಸನೆಯೊ೦ದೇ’


’ಅ೦ದರೆ, ಮಣ್ಣಿಗೆ೦ತ ವಾಸನೆಯಮ್ಮ?’


’ಮಳೆ ಹನಿ ಬಿದ್ದಾಗ ಮಣ್ಣಿನ ನವಿರ್ಗ೦ಪು’


’ಮತ್ತೇನಿತ್ತು ಮಣ್ಣಿನಲ್ಲಿ?’  ಮುಂದೆ ಓದಿ »

Syndicate content