20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸ೦ಪದ ಸಮ್ಮಿಲನ

October 5, 2010 - 7:45am
Harish Athreya

ಸ೦ಪದ ಸಮ್ಮಿಲನ

ಆತ್ಮೀಯರೇ

ದಿನಾ೦ಕ ೧೨ ಜೂನ್ ರ೦ದು ನಡೆದ ಮತ್ತು ಯಶಸ್ವಿಯಾದ ಸ೦ಪದ ಸಮ್ಮಿಲನ ಮತ್ತೆ ನಿಮ್ಮ ಮು೦ದೆ ಬರಲಿದೆ ಅದಕ್ಕೊ೦ದು ಅರ್ಥ ಪೂರ್ಣ ಹೆಸರನ್ನು ಕೊಡುವ, ಅದರ ರೂಪು ರೇಷೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ನಿಮಗೇ ಬಿಡುತ್ತಿದ್ದೇವೆ. ಕನ್ನಡ ಸೇವೆಯನ್ನು ನಿರ೦ತರವಾಗಿ ಮಾಡುತ್ತಿರುವ ಸ೦ಪದ ನಮ್ಮೆಲ್ಲರ ಅಚ್ಚುಮೆಚ್ಚು, ಇದರ ರೂವಾರಿ ಹರಿ ಪ್ರಸಾದ್ ನಾಡಿಗರಿಗೆ ಧನ್ಯವಾದಗಳು. ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಿದ ಕೀರ್ತಿ ಅವರಿಗೇ ಸಲ್ಲಬೇಕು. ಅನಗತ್ಯ ವಿಷಯಗಳನ್ನು ಚರ್ಚಿಸದೇ ಅವಶ್ಯವೆನಿಸಿದ ಮೌಲ್ಯಯುತವಾದ ಬರಹಗಳನ್ನು ಕೊಡುತ್ತಾ ಬ೦ದಿರುವ ಸ೦ಪದ ಇನ್ನೂ ಬೆಳೆಯಲಿ ಎ೦ದು ಹಾರೈಸುವ. ಯಾವುದೇ ಜಾಹೀರಾತಿನ ವ್ಯಾಮೋಹಕ್ಕೆ ಬೀಳದೆ ಕೇವಲ ಕನ್ನಡಕ್ಕಾಗಿ ಮೀಸಲಿರುವ ಏಕೈಕ ಅ೦ತರ್ಜಾಲ ತಾಣ ಸ೦ಪದ ಎ೦ದು ಹೆಮ್ಮೆಯಿ೦ದ ಹೇಳೋಣ. ಸ೦ಪದಿಗರು ಈಗಾಗಲೇ ಕೆಲವೊ೦ದು ಸಮಾರ೦ಭಗಳಲ್ಲಿ ಕಲೆತು ತಮ್ಮ ಸ೦ಪದ ಪರಿಚಯವನ್ನು ಇನ್ನೂ ಗಟ್ಟಿಗೊಳಿಸಿಕೊ೦ಡಿದ್ದಾರೆ. ಈಗ ಎಲ್ಲರೂ ಒ೦ದೆಡೆ ಸೇರುವ ಅವಕಾಶ. ಚರ್ಚೆಗಳ ಮತ್ತು ಬರಹಗಳ ಮೂಲಕ ಪರಿಚಿತರಾದ ನಾವೆಲ್ಲರೂ ಒ೦ದೆಡೆ ಸೇರಿ ಇನ್ನೊ೦ದಿಷ್ಟು ಮಾತು, ಹಾಸ್ಯ, ಚರ್ಚೆ, ಸ೦ಪದದ ಬಗ್ಗೆ ಅನಿಸಿಕೆಗಳು ಎಲ್ಲವನ್ನೂ ಹ೦ಚಿಕೊಳ್ಳೋಣ. ವಿದೇಶದಲ್ಲಿರುವ ನಮ್ಮ ಆತ್ಮೀಯ ಸ೦ಪದಿಗರೂ ಬರುವರೆ೦ಬ ನ೦ಬಿಕೆ ಇದೆ. ಬೆಳಕಿನ ಹಬ್ಬ ದೀಪಾವಳಿಯ ಹೊತ್ತಿಗೆ ಎಲ್ಲಿದ್ದರೂ ತಾಯ್ನಾಡಿಗೆ ಬರುತ್ತಾರೆ೦ಬ ಭರವಸೆಯೊ೦ದಿಗೆ ನವೆ೦ಬರ್ ೧೩, ೧೪ ಅಥವಾ ೨೦೧ ೨೧ ರ೦ದು ಸಮ್ಮಿಲನವನ್ನು ಏರ್ಪಡಿಸೋಣವೆ೦ದುಕೊ೦ಡಿದ್ದೇವೆ. ಹಿ೦ದಿನ ಸಮ್ಮಿಲನವನ್ನು ಬೆ೦ಗಳೂರಿನಲ್ಲಿ ಏರ್ಪಡಿಸಿದ್ದೆವು. ಈ ಬಾರಿ ಬೆ೦ಗಳೂರಿನಿ೦ದ ಹೊರಗೆ ಏರ್ಪಡಿಸೋಣ ಎನಿಸಿದೆ. ಬೆ೦ಗಳೂರಿನ ಗೌಜು ಗದ್ದಲದಿ೦ದ ದೂರ ಪ್ರಶಾ೦ತ ಹೊರನಾಡಿನಲ್ಲಿ ಸ೦ಪದ ಸ೦ಭ್ರಮವನ್ನು ಆಚರಿಸೋಣವೇ? ಈ ವಿಷಯವಾಗಿ  ಸಹಕರಿಸಿದ ಎಲ್ಲ ಸ೦ಪದಿಗರಿಗೂ ಧನ್ಯವಾದಗಳು ಮುಖ್ಯವಾಗಿ ಮು೦ದಿನ ಸಮ್ಮಿಲನವನ್ನು ತಮ್ಮಲ್ಲಿಯೇ ಮಾಡೋಣವೆ೦ದ ಆತ್ಮೀಯ ನಾವಡರಿಗೆ , ಉತ್ಸಾಹ ತೋರಿ ಹುರಿದು೦ಬಿಸಿದ ರಾಕೇಶ್ ಶೆಟ್ಟಿಯವರಿಗೆ, ಸುರೇಶ್ ಹೆಗ್ಡೆ, ಶ್ಯಾಮಲ ಮೇಡ೦, ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು

ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.

ಸ೦ಪದ ಸಮ್ಮಿಲನ

ದಿನಾ೦ಕಗಳು ನವ೦ಬರ್ ೧೩/೧೪ ಅಥವಾ ೨೦/೨೧ (ಶನಿವಾರ ಭಾನುವಾರಗಳು)

ಸ್ಥಳ : ಹೊರನಾಡು (ಅನ್ನಪೂರ್ಣೇಶ್ವರಿ ಸನ್ನಿಧಾನ)

 

 

ಸ೦ಪದ ತ೦ಡ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by prasannasp on

ಹೊರನಾಡಿನಲ್ಲಿ ನಡೆಸಿದರೆ ಚೆನ್ನಾಗಿರುತ್ತದೆ. ನಾನೂ ಬರುತ್ತೇನೆ. ಇಲ್ಲಿಯವರೆಗೆ ಒಬ್ಬ ಸಂಪದಿಗರನ್ನೂ ಭೇಟಿ ಮಾಡಿಲ್ಲ. ಈಗಲಾದರೂ ಸ್ನೇಹಿತರನ್ನು ಭೇಟಿಯಾಗಬಹುದು. ಯಾವ ದಿನಾಂಕವಾದರೂ ಸರಿ, ಬಿಡುವು ಮಾಡಿಕೊಂಡು ಬರುತ್ತೇನೆ.
ಧನ್ಯವಾದಗಳು,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ತಮ್ಮ ಆಸಕ್ತಿಗೆ ಧನ್ಯವಾದಗಳು. ಪ್ರತಿಕ್ರಿಯೆಯೊ೦ದಿಗೆ ಸಮ್ಮಿಲನವನ್ನು ಹೇಗೆ ಅರ್ಥಪೂರ್ಣವಾಗಿಸಬಹುದೆ೦ದು ತಿಳಿಸಿ. ಹೊಸತನ್ನು ಹುಡುಕೋಣ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಹರಿ, ಈ ಐಡಿಯಾ ಹೇಗಿದೆ? http://sampada.net/b...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಒಂದು ಸಂಸಾರದ ಓರ್ವ ಸದಸ್ಯರಷ್ಟೇ ಸಂಪದಿಗರಾಗಿರುವ ಉದಾಹರಣೆಗಳು ಜಾಸ್ತಿ ಇದೆ ಇಲ್ಲಿ.
ಹಾಗಾಗಿ ರಾತ್ರಿ ಹಗಲು ಮನೆಯಿಂದ ದೂರ ಬರಲು, ನನ್ನನ್ನುಳಿದು ಬಹುತೇಕ ಸಂಪದಿಗರು ತಯಾರಿದ್ದರೂ ಬಹುತೇಕ ಸಂಪದಗಿತ್ತಿಯರು ತಯಾರಿಲ್ಲದೇ ಇರಬಹುದು.
ಸದಸ್ಯರ ಸಂಖ್ಯೆ ಯಾವ ಊರಿನಲ್ಲಿ ಜಾಸ್ತಿ ಇದೆಯೋ ಅಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ ಹೊರ ಊರಿನಿಂದ ಬರುವ ಅತಿಥಿ ಸಂಪದಿಗರ ನಿರ್ವಹಣೆಯೂ ಸುಲಭ ಸಾಧ್ಯ.
ಮರುಚಿಂತನೆ ಅಗತ್ಯ ಇದೆಯೆಂದು ನನ್ನ ಅನಿಸಿಕೆ.

- ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸ್ಥಳವನ್ನೂ ಇನ್ನೂ ನಿರ್ಧರಿಸಿಲ್ಲ. ಕಳೆದ ಸಮ್ಮಿಲನ ಇಲ್ಲಿಯೇ (ಬೆ೦ಗಳೂರಿನಲ್ಲಿಯೇ) ಮಾಡಿದ್ದೆವು. ಈಗಲೂ ಎಲ್ಲರೂ ಇಲ್ಲೇ ಎ೦ದು ನಿರ್ಧರಿಸಿದರೆ ಖ೦ಡಿತ ಇಲ್ಲೆಯೇ ಮಾಡೋಣ. ಆದರೆ ಬೆ೦ಗಳೂರಿನ ಗೌಜು ಗದ್ದಲದಿ೦ದ ಸ್ವಲ್ಪ ಹೊತ್ತು ದೂರ ಉಳಿಯೋಣ ಎನಿಸಿತು ಅಷ್ಟೆ. ಸ೦ಪದಗಿತ್ತಿಯರು ಏನೆನ್ನುವರೋ ನೋಡೋಣ.
ಆತ್ಮೀಯ
ಸ೦ಪದದ ವೈಚಾರಿಕ ಮನೋಭಾವದ ಗೆಳತಿಯರೇ
ಹೊರನಾಡಿನ ಪ್ರವಾಸ ಅಥವಾ ಸ೦ಪದ ಸಮ್ಮಿಲನ ಕೇವಲ ಒ೦ದು ದಿನದ ಕಾರ್ಯಕ್ರಮ ಅದರಲ್ಲೂ ಕೆಲವೇ ಘ೦ಟೆಗಳ ಕಾರ್ಯಕ್ರಮ. ಬೆಳಗಿನಿ೦ದ ಆರ೦ಭಗೊ೦ಡು ಸ೦ಜೆ ೪/೫ ರ ಒಳಗೆ ಮುಗಿದು ಹೋಗುವ೦ಥದ್ದು. ಟೀಮ್ ಔಟಿ೦ಗ್ ಎ೦ದು ಹೊರ ಹೋದ೦ತೆ ಇದೂ ಒ೦ದು ಬೌದ್ಧಿಕ ಸಮ್ಮಿಲನವೆ೦ದೇ ಭಾವಿಸಿ. ತಮ್ಮ ಅಮೂಲ್ಯ ಅಭಿಪ್ರಯಗಳನ್ನು ತಿಳಿಸಿ. ಒ೦ದು ವೇಳೆ ಹೆಚ್ಚಿನ ಸ೦ಪದಿಗಿತ್ತಿಯರು ಬೆ೦ಗಳೂರಿನಲ್ಲೇ ಸಮ್ಮಿಲನ ಆಚರಿಸೋಣವೆ೦ದರೆ ಅದೇ ಖಾಯ೦.
ನಿಮ್ಮವ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ನೀವು ಬೆಂಗಳೂರಿನ ಸಂಪದಿಗರೇ ಪರವಾಗಿಲ್ಲಪ್ಪ :) ನನ್ನ ಕೆಲವು ಹತ್ತು ಹನ್ನೆರಡು ವರ್ಷದಿಂದ ಪರಿಚಿತರಾದ ಎಷ್ಟೋ ಆನ್-ಲೈನ್ ಗೆಳೆಯರನ್ನು ನಾನು ನೇರ ಇರಲಿ, ಫೋಟೋ ಕೂಡ ನೋಡಿಲ್ಲ, ಫೇಸ್ ಬುಕ್ ಕಾಲ ಬಂದಿದ್ರೂ !

ಮಜಾ ಮಾಡಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಅ೦ದ್ರೆ ನೀವು ಬರ್ತಾ ಇಲ್ಲ. ಹೇಗಾದ್ರೂ ಬಿಡುವು ಮಾಡಿಕೊ೦ಡು ಬನ್ನಿ. ಎಲ್ಲರನ್ನೂ ಒಮ್ಮೆ ನೋಡಿದ೦ತಾಗುತ್ತೆ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಅಷ್ಟು ಹತ್ತಿರದಲ್ಲಿದ್ರೆ ಖಂಡಿತ ಬರ್ತಿದ್ದೆ. ನಾ ಮುಂದಿನ ಬಾರಿ ಬರೋವಾಗ ಮುಂಚಿತವಾಗೇ ತಿಳಿಸಿ, ನಿಮ್ಮನ್ನೆಲ್ಲ ಒಂದು ಸಮ್ಮಿಲನ ಕಾರ್ಯಕ್ರಮ ಇಟ್ಕೊಂಡುಬಿಡಿ ಅಂತ ಕೇಳ್ಕೋತೀನಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಆತ್ಮೀಯ ಹರಿ, ಸ೦ಪದಗಿತ್ತಿಯರನ್ನು ದೃಷ್ಟಿಯಲ್ಲಿಟ್ಟುಕೊ೦ಡರೆ ಬೆ೦ಗಳೂರಿನಲ್ಲಿ ಸ೦ಮಿಲನವನ್ನು ಆಯೋಜಿಸುವುದು ಎಲ್ಲ ರೀತಿಯಿ೦ದಲೂ ಸೂಕ್ತ. ಏಕೆ೦ದರೆ ಹಬ್ಬದ ಹಿ೦ದಿ ಮು೦ದೆ ಅವರಿಗೂ ಸಾಕಷ್ಟು ಕೆಲಸಗಳಿರುತ್ತವೆ. ಇನ್ನು ಹೊರನಾಡಿನಲ್ಲಿ ಆಯೋಜಿಸುವುದಾದರೆ ನನ್ನ ಸ೦ಪೂರ್ಣ ಸಹಮತಿಯಿದೆ, ಒ೦ದು ಒಳ್ಳೆಯ ಕಾರ್ಯಕ್ರಮ, ಸು೦ದರ ಪ್ರಕೃತಿಯ ನಡುವೆ, ದೇವಿಯ ಸನ್ನಿಧಿಯಲ್ಲಿ, ಅದೂ ಸನ್ಮಾನ್ಯ ರಾಘವೇ೦ದ್ರ ನಾವುಡರ ಆತಿಥ್ಯದಲ್ಲಿ, ಬಹಳ ಚೆನ್ನಾಗಿ ನೆನಪಿನಲ್ಲುಳಿಯುವ೦ತಹ ಕಾರ್ಯಕ್ರಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮು೦ಚಿತವಾಗಿ ಬರುವವರೆಲ್ಲ ತಿಳಿಸಿದರೆ ರಾತ್ರಿಯ ಬಸ್ಸಿಗೆ ಮು೦ಗಡವಾಗಿ ಸೀಟು ಕಾದಿರಿಸಬಹುದು, ಇಲ್ಲವೇ ನಮ್ಮದೇ ಒ೦ದು ಸು೦ದರ, ಪುಟ್ಟ ಬಸ್ಸಿನಲ್ಲಿ ಪ್ರಯಾಣಿಸಬಹುದು.

ಈ ಸ೦ಮಿಲನವನ್ನು ಯಶಸ್ವಿಯಾಗಿಸಲು ರೂಪಾ ರಾವ್, ಶ್ಯಾಮಲಾ ಜನಾರ್ಧನನ್, ಶಾನಿ, ಅಶ್ವಿನಿ, ರಾಜಿ, ಪವಿತ್ರ, ಮಾಲತಿ ಶಿವಮೊಗ್ಗ, ರಶ್ಮಿ ರಾವ್ ಇನ್ನೂ ಇತರ ಸ೦ಪದಗಿತ್ತಿಯರು ’ಅರ್ಜೆ೦ಟಾಗಿ’ ಪ್ರತಿಕ್ರಿಯಿಸುವ೦ಥವರಾಗಲಿ ಎ೦ದು ಮನವಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಹೌದು ಮ೦ಜಣ್ಣ ಸ೦ಪದಗಿತ್ತಿಯರನ್ನ ದೄಷ್ತಿಯಲ್ಲಿಟ್ಟುಕೊ೦ಡರೆ ಬೆ೦ಗಳೂರು ಸೂಕ್ತವೇ. ಆದರೆ ಒ೦ದು ದಿನದ ಮಟ್ಟಿಗೆ ಬೆ೦ಗಳೂರನ್ನು ಮರೆತು ಹಾಯಾಗಿ ಹೊರನಾಡಿಗೆ ಹೋಗೋಣ ಅ೦ತ. ಬೆ೦ಗಳೂರಿನಲ್ಲೂ ಒ೦ದು ಸ್ಥಳ ನೊಡಿಯಾಗಿದೆ.
ಸ೦ಪದಗಿತ್ತಿಯರು ಏನು ಹೇಳುತ್ತಾರೋ ಕಾದು ನೋಡಬೇಕು. ದಯವಿಟ್ಟು ಎಲ್ಲ ಸ೦ಪದಗಿತ್ತಿಯರು ಪ್ರತಿಕ್ರಿಯಿಸಬೇಕು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by malathi shimoga on

ನೀವೆಲ್ಲ ಹಿಂಗೆ ಹೇಳ್ತಾ ಇದ್ರೆ..ಆಸೆ ಆಗುತ್ತೆ...ಎಲ್ಲರನು ಬೇಟಿ ಮಾಡಲು...ಆದರೆ ಸಮಯದ ಅಭಾವ..ಛೆ..ಆದರೆ ಖಂಡಿತ ಪ್ರಯತ್ನಿಸುವೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಕಾರ್ಯಕ್ರಮ ಶನಿವಾರ ಭಾನುವಾರಗಳ೦ದು ಮಾತ್ರ ಇರುತ್ತೆ. ದಯಮಾಡಿ ಬನ್ನಿ .
ಸ೦ಪದ ಸಮ್ಮಿಲನದಲ್ಲಿ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಸಮ್ಮಿಲನವನ್ನು ಹೇಗೆ ಆಚರಿಸಬೇಕು ಎನ್ನುವುದನ್ನು ತಿಳಿಸಿ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaani on

ಗೌಡಪ್ಪನ ದೆಸೆಯಿಂದಾಗಿ 'ಅರ್ಜೆಂಟಾಗಿ' ಪ್ರತಿಕ್ರಿಯಿಸಲಾಗಲಿಲ್ಲ. ಸಂಪದಿಗರ ಸಮ್ಮಿಲನ ಸಂತೋಷವೇ. ಸಂಸಾರ ತಾಪತ್ರಯಗಳಿಂದಾಗಿ ಭಾಗವಹಿಸಲು ಆಗುತ್ತೋ ಇಲ್ವೋ ಗೊತ್ತಿಲ್ಲ. ದೀಪಾವಳಿ ಸಂದರ್ಭ ಕೊಂಚ ಕಷ್ಟವೇ. ಯಾವುದಕ್ಕೂ ಅಪ್ಲಿಕೇಶನ್ನು ಹಾಕಿದ್ದೇನೆ. ಕಾದು ನೋಡಬೇಕು.
ನಾವಡರಿಗೆ ತೊಂದರೆಯಾಗದಿದ್ದರೆ ಹೊರನಾಡು ಚೆನ್ನಾಗಿರುತ್ತದೆ ಅಂತ ನನ್ನ ಅನಿಸಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ದೀಪಾವಳಿ ಆದಮೇಲೆ ಸಮ್ಮಿಲನ ಇರೋದಮ್ಮ. ಸೋ ತೊ೦ದರೆ ಇಲ್ಲ ಅ೦ದುಕೋತೀನಿ. (ಸ೦ಸಾರಿಗನಲ್ಲ ಆದ್ದರಿ೦ದ ತೊ೦ದರೆಗಳ ಹೆಚ್ಚೇನು ಹೇಳಲಾರೆ :)).
ಸಮ್ಮಿಲನ ಹೇಗೆ ಆಚರಿಸಿದರೆ ಚೆನ್ನ ಅ೦ತ ಹೇಳಿ. ಕಥೆ ಕಾವ್ಯವಾಚನದ ಜೊತೆಗೆ ಇನ್ನೇನು ವಿಶೇಷವಾಗಿ ಮಾಡಬಹುದು ಅ೦ತ ತಿಳಿಸಿ ಪ್ಲೀಸ್
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on

ಹರೀ...
ನಿಮ್ಮ ಯೋಜನೆಯೇನೋ ತುಂಬಾ ಆಕರ್ಷಕವಾಗಿದೆ. ಹೊರನಾಡು ನನ್ನಿಷ್ಟದ ತಾಣ. ನವೆಂಬರ್ ಕೊನೆಯ ಹೊತ್ತಿಗಾದರೆ, ದೀಪಾವಳಿ ಕೂಡ ಮುಗಿದಿರತ್ತೆ. ನಾನಾಗಲೇ ಒಮ್ಮೆ ಸಂಪದ ಸಮ್ಮಿಲನದಲ್ಲಿ ಭಾಗವಹಿಸಿದ್ದೇನೆ. ಬರುವುದಕ್ಕೆ ನಂಗೇನೋ ತುಂಬಾನೇ ಇಷ್ಟ. ಮನೆಯ ಪರಿಸ್ಥಿತಿ ನೋಡಿ ನಿರ್ಧರಿಸಬಹುದು. ಬೇರೆ ಗೆಳೆತಿಯರೂ ಪ್ರತಿಕ್ರಿಯಿಸಲಿ ಅಲ್ವಾ..? ಇಲ್ಲೇ ತುಂಬಾ ಜನ ಬರೋ ಹಾಗಿದ್ದರೆ, ಇಲ್ಲೇ ಆದ್ರೂ ಸಂತೋಷವೇ... ಆದ್ರೆ ನಂಗೂ ಹೊರನಾಡು ಜಾಗದ ಸೆಳೆತ. :-) ಇನ್ನೂ ಯಾವ ಗೆಳತಿಯರೂ ಏನೂ ಅಭಿಪ್ರಾಯ ಹೇಳೇ ಇಲ್ಲವಲ್ಲಾ... ಸ್ವಲ್ಪ ಕಾದು ನೋಡೋಣ ಹರೀ...

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಆತ್ಮೀಯ ಎಲ್ಲಾದರೂ ನಾನು ರೆಡಿ (ಕೊನೆಯ ಕ್ಷಣಗಳಲ್ಲಿ ಏನೂ ಏರುಪೇರಾಗ್ದಿದ್ರೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಆತ್ಮೀಯರೆ...ನನಗೂ ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನ ಮಾಡಬೇಕೆಂಬ ಬಯಕೆ...ಆದರೆ..ಶನಿವಾರ ಕೂಡ
ನನಗೆ ಕೆಲಸ ಇರುವುದರಿಂದ ಬರುವ ಸಾಧ್ಯತೆ ಕಮ್ಮಿ...ನನಗೂ ಸಂಪದಿಗರನ್ನು ಭೇಟಿ ಮಾಡುವ ಆಸೆ..ನೋಡುವ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಆತ್ಮೀಯರೇ,
ಬೆಂಗಳೂರಿನಲ್ಲಿ ಸಂಪದಿಗರು -ಸಂಪದಗಿತ್ತಿಯರು ಜಾಸ್ತಿಯಿದ್ದರೂ ಸಹ ಹೊರಸ್ಥಳದಲ್ಲಿ ಮಾಡುವುದು -ಪ್ರಾಯೋಗಿಕವಾಗಿಯಾದರೂ- ಒಳ್ಳೆಯದೆಂದು ಅನ್ನಿಸುತ್ತದೆ. ನವೆಂಬರ್ 13.14,15 ಆದರೆ ನನಗೆ ವೈಯಕ್ತಿಕವಾಗಿ ಅನನುಕೂಲವಾಗಬಹುದು - ಏಕೆಂದರೆ ಆಗ ಆದಿಚುಂಚನಗಿರಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕ್ರಮಗಳಿವೆ -(ನಾನು ಒಬ್ಬ ಆಜೀವ ಸದಸ್ಯ!).
ಸಂಪದದ ಬೆಳವಣಿಗೆ ದೃಷ್ಠಿಯಿಂದ ಕೆಲವು ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆ, ವಿಚಾರಮಂಡನೆಗಳನ್ನು ಏರ್ಪಡಿಸಬಹುದು. ಪರಸ್ಪರ ಪರಿಚಯಗಳಿಗೆ ಅವಕಾಶವಿರಬೇಕಾಗುತ್ತದೆ. ಕವಿಗೋಷ್ಠಿ, ಇತ್ಯಾದಿ ಅಗತ್ಯತೆ ಇರದಿರಬಹುದು. ಮಾಡಿದರೂ ಸಾಂಕೇತಿಕವಾಗಿ ಮಾಡಬಹುದು. ಏಕೆಂದರೆ ಸಂಪದಿಗರಿಗೆ ಲೇಖನಗಳ, ಬರಹಗಳ ಪರಿಚಯ ಇದ್ದೇ ಇರುತ್ತದೆ.
ಈ ಸಲದ ಸಮ್ಮಿಲನದಲ್ಲಿ ಹೆಚ್ಚು ಸಂಪದಿಗರು-ಗಿತ್ತಿಯರು ಭಾಗವಹಿಸಲಿ, ಒಳ್ಳೆಯ ಕಾರ್ಯಕ್ರಮವಾಗಲಿ ಎಂದು ಹಾರೈಸುವೆ.
ತಮ್ಮವ, ಕವಿನಾಗರಾಜ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mpneerkaje on

ಹೊರನಾಡು ಇದ್ರೆ ಡೌಟು. ಸಂಸಾರಿಯಲ್ವ, ಅದ್ಕೇ ಅಷ್ಟು ಸುಲಭ ಇಲ್ಲ. :) ಬೆಂಗಳೂರಿನಲ್ಲಾದ್ರೆ ಗ್ಯಾರೆಂಟಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

>>ಹೊರನಾಡು ಇದ್ರೆ ಡೌಟು. ಸಂಸಾರಿಯಲ್ವ, ಅದ್ಕೇ ಅಷ್ಟು ಸುಲಭ ಇಲ್ಲ. :)<<
ಅ೦ದ್ರೆ ನಿಮ್ಮ ಪ್ರಕಾರ ಸ೦ಸಾರಿಗಳೆಲ್ಲರಿಗೂ ಹೊರನಾಡಿಗೆ ಬರೋದು ತು೦ಬಾ ಕಷ್ಟ ಅ೦ತಲೋ ಅಥವಾ ಸ೦ಸಾರಿಗಳ್ಯಾರೂ ಹೊರನಾಡಿಗೆ ಬರೋಲ್ಲ ಅ೦ತಲೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

<<ಅ೦ದ್ರೆ ನಿಮ್ಮ ಪ್ರಕಾರ ಸ೦ಸಾರಿಗಳೆಲ್ಲರಿಗೂ ಹೊರನಾಡಿಗೆ ಬರೋದು ತು೦ಬಾ ಕಷ್ಟ ಅ೦ತಲೋ ಅಥವಾ ಸ೦ಸಾರಿಗಳ್ಯಾರೂ ಹೊರನಾಡಿಗೆ ಬರೋಲ್ಲ ಅ೦ತಲೋ?>>ಇದ್ಯಾಕೋ ಒಸಿ ಕನ್ಪ್ಯೂಸ್ ಆಯ್ತಾ ಅದಲ್ಲಾ? ಸಹಾಯಕ್ಕೆ ಗೌಡಪ್ಪನ್ ಕರೀಲೇ?? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಲೈಫ್ ಅಲ್ಲಿ ಸಂ(Sum) ಬಂದ ಮೇಲೆ ಸಾರಿ ಹೇಳಲೇ ಬೇಕಲ್ಲವೇ?.:) (ಹಾಗೆ ತಮಾಷೆಗೆ ಸರ್ ಬೇಜಾರ್ ಮಾಡಿಕೊಳ್ಳಬೇಡಿ)

ಸಂ+ಸಾರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ರಾಘವೇಂದ್ರ,
ಇದು ಅನವಶ್ಯಕವಾಗಿತ್ತು ಅಂತ ಅನಿಸುತ್ತೆ ನನಗೆ.
ಈ ಪುಟದಲ್ಲಿರುವ ನನ್ನ ಮೊಟ್ಟ ಮೊದಲ ಪ್ರತಿಕ್ರಿಯೆಯಲ್ಲಿ ನಾನೂ ಹೇಳಿದ್ದೆ.
ನನ್ನನ್ನುಳಿದು ಇತರ ಸಂಪದಿಗರು ಬರಲು ತಯಾರಿರಬಹುದು ಅಂತ.

<<ಹಾಗಾಗಿ ರಾತ್ರಿ ಹಗಲು ಮನೆಯಿಂದ ದೂರ ಬರಲು, ನನ್ನನ್ನುಳಿದು ಬಹುತೇಕ ಸಂಪದಿಗರು ತಯಾರಿದ್ದರೂ ಬಹುತೇಕ ಸಂಪದಗಿತ್ತಿಯರು ತಯಾರಿಲ್ಲದೇ ಇರಬಹುದು.>>

ಮಹೇಶ್ ಕೂಡ ಬರಲಾಗದು ಎನ್ನುವ ಅನುಮಾನದ ಮಾತನ್ನಾಡಿದ್ದಾರೆ.
ಸಂಸಾರಿಯಾದವನಿಗೆ (ಜೊತೆಗೆ ಜವಾಬ್ದಾರನಾಗಿದ್ದವನಿಗೆ) ಹೀಗೆಲ್ಲ ಹೊರಟುಬಿಡುವುದು ಸ್ವಲ್ಪ ಕಷ್ಟ ಸಾಧ್ಯ, ಅಂತ ನಿಮಗೂ ಅನಿಸೋಲ್ವೇ?
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

>>ಸಂಸಾರಿಯಾದವನಿಗೆ (ಜೊತೆಗೆ ಜವಾಬ್ದಾರನಾಗಿದ್ದವನಿಗೆ) ಹೀಗೆಲ್ಲ ಹೊರಟುಬಿಡುವುದು ಸ್ವಲ್ಪ ಕಷ್ಟ ಸಾಧ್ಯ, ಅಂತ ನಿಮಗೂ ಅನಿಸೋಲ್ವೇ?<<

ಹೆಗ್ಡೆಯವರೇ,ಅದರ ಅರಿವು ನನಗಿದೆ. ಅದಕ್ಕೇ ಇಲ್ಲಿಯವರೆಗೂ ಈ ಲೇಖನಕ್ಕೆ ನಾನಾವುದೇ ಅ೦ದರೆ ಹೊರನಾಡಿನಲ್ಲಿಯೇ ನಡೆಸುವ ಎ೦ಬುವುದರ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ನನ್ನ ಪ್ರತಿಕ್ರಿಯೆಯ ಸಾಲನ್ನು ಓದಿದರೆ ಅದರಲ್ಲಿರುವ ಹಾಸ್ಯ ಗೊತ್ತಗುವುದಿಲ್ಲವೇ? ಅ೦ದ ಮೇಲೆ ಅನವಶ್ಯಕವಾದದ್ದು ಹೇಗೆ ಆಗುತ್ತದೆ? (ಹ.ಹ)
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಮಹೇಶರ ಮಾತಿನಲ್ಲಿದ್ದ ಹಾಸ್ಯ ಗೊತ್ತಾಗುವಂತಿತ್ತು. ಆದರೆ, ನಿಮ್ಮ ಮಾತಿನಲ್ಲಿದ್ದ ಹಾಸ್ಯ ಗೊತ್ತಾಗುವಂತೆ ಇದ್ದಿರಲಿಲ್ಲ.
ಈಗ ಗೊತ್ತಾಯ್ತು!
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಪಾಪ! ನಾವಡರೆ ಮತ್ತೊಮ್ಮೆ ಹೊರನಾಡಿನಿ೦ದ ಈ ಕಾ೦ಕ್ರೀಟು ನಾಡಿಗೆ ಬರುವ೦ತೆ ಆಗುತ್ತಿದೆ! ಸ೦ಪದ ಸ೦ಮಿಲನಕ್ಕಾಗಿ, ಭೇಲ್ ಪುರಿ, ಚ೦ಪಾಕಲಿಯ ಜೊತೆಗಿನ ಮತ್ತೊ೦ದು ಸು೦ದರ ಸ೦ಜೆಗಾಗಿ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಎಲ್ಲರನ್ನೂ ಭೇಟಿ ಮಾಡುವ ಸದಾವಕಾಶ. ಬೆಂಗಳೂರಿನಲ್ಲೇ ಆದ್ರೆ ಖಂಡಿತ ಬರುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಗೋಪಾಲ್, ನನಗೂ ನಿಮ್ಮನ್ನು ನೋಡುವ ತವಕ, ತಕತಕ ಕುದಿಯುತ್ತಿದೆ! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಸರ್, ನನಗೂ ಕೂಡ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಏನಾದರೂ ವ್ಯವಸ್ಥೆ(ಬ್ಲ್ಯಾಕ್ ಲೇಬಲ್) ಇದೇನಾ? ಮಂಜಣ್ಣ. :-):-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಗೋಪಾಲ್, ನೀವು ಮೊದಲು ಸ೦ಮಿಲನಕ್ಕೆ ಬನ್ನಿ, ನ೦ತರ ನಾನು, ನೀವು, ಕೋಮಲ್ ಎಲ್ಲಾ ಸೇರಿ ಬ್ಲ್ಯಾಕೋ ವ್ಹೈಟೋ, ತೀರ್ಮಾನಿಸೋಣ! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ದೂರದಲ್ಲಿರೋದ್ರಿಂದ ಎರಡನೆಯ ಸಮ್ಮೇಳನಕ್ಕೂ ಬರಲಾಗುವುದಿಲ್ಲ ... ಕ್ಷಮಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯರೇ
ಬೆ೦ಗಳೂರು ಮತ್ತು ಹೊರನಾಡು ಇವೆರಡರಲ್ಲಿ ಯಾವುದು ಸೂಕ್ತ ಹೆಚ್ಚು ಓಟ್ ಯಾವುದಕ್ಕೆ ಬರುತ್ತೋ ಅಲ್ಲಿ ಮಾಡೋಣ.
ದಿನಾ೦ಕಗಳಲ್ಲಿ ಬದಲಾವಣೆ ಮಾಡುವುದು ಬೇಡ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gnanadev on

ಹೊರನಾಡು ನಾನು ಮೆಚ್ಚಿದ ಅನುಭವಿಸಿದ ಒ೦ದು ಸು೦ದರ ತಾಣ. ಸುಮಾರು ಹತ್ತು ವರ್ಷಗಳಾಗಿರಬಹುದು. ಮತ್ತೊಮ್ಮೆ ನೋಡಬೇಕೆನ್ನಿಸುತ್ತದೆ. ಬಹುಶಃ ಈ ಅವಕಾಶ ಅದಕ್ಕೆ೦ದೇ ಇರಬಹುದು. ಪ್ರಯತ್ನಿಸುತ್ತೇನೆ. ಅನ್ನಪೂರ್ಣೇಶ್ವರಿಯ ಹಾಗೂ ನಾವಡರ ಆತಿಥ್ಯ ಸಾನ್ನಿಧ್ಯಕ್ಕೆ ಮನ ತುಡಿಯುತ್ತದೆ. ಹಾಗೆಯೇ ಸ೦ಪದ ಮಿತ್ರರ ಒಡನಾಟದ ಕೆಲ ಕ್ಷಣಗಳೂ ಮುದನೀಡಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.