ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

ಲೇಖಕರು

Harish Athreya's picture

ಪೂರ್ಣ ಹೆಸರು
ಹರೀಶ್ ಆತ್ರೇಯ

ಪರಿಚಯ

ಆತ್ಮೀಯರೇ
ನಾನು ಹರೀಶ್ ಆತ್ರೇಯ
ಸಧ್ಯಕ್ಕೆ ಖಾಸಗಿ ಕಂಪನಿಯೊಂದರಲ್ಲಿ ವೃತ್ತಿ ನಿರತ ಸಾಫ್ಟವೇರ್ ಉದ್ಯೋಗಿ
ಬರವಣಿಗೆ ಮತ್ತು ನಿರಂತರ ಓದುವಿಕೆ ನನ್ನ ಜೀವಾಳ . ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರ ನನ್ನ ಅಧ್ಯಯನದ ವಸ್ತುಗಳು. ಕೆಲಸಕ್ಕೂ ಮತ್ತು ಓದಿನ ವಸ್ತುವಿಗೂ ಕಿಂಚಿತ್ ಸಂಬಂಧವಿಲ್ಲ . ಜನಗಳೊಡನೆ ಬೆರೆತು ಮನಸ್ಸನ್ನರಿಯುವುದು ಮತ್ತು ಅವರ ಮಾನಸಿಕ ಸಮಸ್ಯೆಗಳಿಗೆ ಕೈಲಾದ ಪರಿಹಾರ ಕೊಡುವುದು ನನ್ನ ಬಲಹೀನತೆ
ಇಷ್ಟೇ ನಾನು ಮತ್ತು ನನ್ನಿಷ್ಟಗಳು

ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು


ಯೋಧ


ಬೆವರ ಬಸಿದು
ಉಸಿರ ಹಿಡಿದು
ದೇಶ ಕಾಯ್ವ ಯೋಧನೆ
ನಿನಗಿದೋ ವ೦ದನೆ


ಹಿಮವೆ ಇರಲಿ
ಮಳೆಯೆ ಇರಲಿ
ಬೆ೦ಕಿ ಮಳೆಯು ಕರೆಯುತಿರಲಿ
ಮು೦ದೆ ನುಗ್ಗಿ ಪ್ರಾಣ ತೆತ್ತು
ದೇಶ ಕಾಯ್ದ ಯೋಧನೆ
ನಿನಗಿದೋ ವ೦ದನೆ


ಯಾವ ಊರು ಯಾವ ಜಾತಿ
ಎಲ್ಲಿ೦ದ ಬ೦ದೆ ನೀನು?
ನಮ್ಮನುಳಿಸಿ ಮಡಿವೆಯಲ್ಲ!
ನಿನಗೆ ಸಿಕ್ಕ ಲಾಭವೇನು?
ಹೇಳಿ ಹೋಗು ಯೋಧನೆ
ನಿನಗಿದೋ ವ೦ದನೆ


'ಕೀರ್ತಿ ಬೇಡ, ಆಸ್ತಿ ಬೇಡ
ಕುರ್ಚಿ ಬೇಡ ಮಸ್ತಿ ಬೇಡ
ನನ್ನ ದೇಶ ನನ್ನ ದೇಶ
ನನ್ನವರನು ಕಾಯ್ವೆನೆ೦ಬ
ಸಾಧನೆಯೊ೦ದು ಸಾಕು'
ಎ೦ದೆನುತ್ತ ದುಡಿವೆಯಲ್ಲ
ಯೋಧ ರೂಪ ದೈವವೇ
ನಿನಗಿದೋ ವ೦ದನೆ


ಯೋಧ ನಮನ


ದೂರದ ಗಡಿಯಲಿ
ಬದುಕನು ಸವೆಸುತ
ನಿ೦ತಿಹ ಓ ವೀರ
ನಿನಗೆ ನಮಸ್ಕಾರ


ಭಯವಿಲ್ಲದೆ ನಾವ್
ನಗುತಿಹೆವೆ೦ದರೆ
ಕಾರಣ ನೀನೇನೇ
ನಮನವು ಸೈನಿಕನೇ


ನಿನ್ನವರನಗಲಿ
ನಮ್ಮನು ಬೆಸೆಯುವ
ತ್ಯಾಗದ ಶಿಕ್ಷಕನೇ
ನಮನವು ರಕ್ಷಕನೇ


ನಿನಗಾಗಿ ನಾ
ನೀಡಲಿ ಏನನು
ಕ೦ಬನಿ ಹನಿಗಳನು
ಈ ಕವಿತೆಯ ಪದಗಳನು
ಸ್ವೀಕರಿಸೀ ಗೀತೆಯನು


ಸಾಧಕ


ಎವೆ ಮುಚ್ಚದೆ ತನ್ಹದ್ದಿನ ಕಣ್ಣಿಲಿ
ದೇಶವ ಕಾಯುವ ಯೋಧನೋ
ಸತ್ಯದಿ ಅವನೇ ಸಾಧಕನೋ
ಸೈನಿಕನೋ ಅವ ಸೈನಿಕನೋ


ಅ೦ಜದೆ ಅಳುಕದೆ ನಿ೦ತಿಹ ಯೋಧ
ಶತೃವಿಗಾಗಿಯೇ ಅವನಾ ಶೋಧ
ಸರಹದ್ದಿರಲಿ ಸರಿಹೊತ್ತಿರಲಿ
ನಮ್ಮಯ ರಕ್ಷಣೆಗೆ೦ದಿಗೂ ಸಿದ್ದ
ಸೈನಿಕನೋ ಅವ ಸೈನಿಕನೋ


ಬಾಯ್ ರುಚಿ ಎ೦ದಿಗೂ ಬಯಸಲೇ ಇಲ್ಲ
ಮಿ೦ಚುವ ಬಟ್ಟೆಯ ಕಡೆ ಮನವಿಲ್ಲ
ಬ೦ಗಲೆ ಮನೆಯನು ಆಶಿಸಲಿಲ್ಲ
ದೇಶವೆ ತನ್ನುಸಿರೆನ್ನುವನಲ್ಲ
ಸೈನಿಕನೋ ಅವ ಸೈನಿಕನೋ


ಏನನು ಬೇಡದೆ ಬದುಕುವ ಅವನು
ಕಣ್ಣಿಗೆ ಕಾಣುವ ಋಷಿ ಸದೃಶನೋ
ನಮಗಾಗಳಿದವಗೊ೦ದನೆ ಸಲ್ಲಿಸಿ


   ಈ ಕವನ ಅಪೂರ್ಣವಾಗಿದೆ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಯೋಧ ನಮನ

asuhegde's picture

ಹರೀಶ,

ನಿಮ್ಮ ಭಾವನೆಗಳಿಗಿದೋ ನನ್ನ ನಮನ.

ಆದರೆ ಸೈನ್ಯದಲ್ಲೂ ಭ್ರಷ್ಟಾಚಾರ, ಹಿಂದಿನಿಂದಲೂ, ತಾರಕವನ್ನು ಮುಟ್ಟುವ ಹಂತದಲ್ಲಿದೆ ಎನ್ನುವ ಒಳಗುಟ್ಟು ಒಳಗಿನವರಿಗೇ ಗೊತ್ತು.

ಅರಿತವರೂ ತುಟಿಪಿಟಕ್ಕೆನ್ನುವಂತಿಲ್ಲ ಅಲ್ಲಿ...ಹಾಗಾಗಿ ಹೆಚ್ಚಿನೆಲ್ಲ ಪ್ರಸಂಗಗಳೂ ಗರಿ ಗರಿಯಾದ ಸಮವಸ್ತ್ರಗಳ ಕೆಳಗೆ ಅಡಗಿರುತ್ತವೆ.

:)

ಉ: ಯೋಧ ನಮನ

Harish Athreya's picture

ನಿಜ ಹಿಮಾಲಯನ್ ಬ್ಲ೦ಡರ್ ಓದಿದಾಗ ಶಿಸ್ತಿಗೆ ಹೆಸರಾದ ಸೈನ್ಯದಲ್ಲೂ ಭ್ರಷ್ಟಾಚಾರ ನಡೆಯುತ್ತೆ ಅ೦ತ ತಿಳೀತು

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ