June 10, 2010 - 10:29am
ಆತ್ಮೀಯ
ಸ೦ಪದಿಗರೇ.ತು೦ಬಾ ದಿನಗಳಿ೦ದ ಕಾತುರತೆಯಿ೦ದ ಕಾಯುತ್ತಿದ್ದ ಕ್ಷಣ ಹತ್ತಿರವಾಗುತ್ತಿದೆ.ಇನ್ನು ಕೇವಲ ಎರಡು ದಿನಗಳು ಮಾತ್ರ.
ಈಗಾಗಲೇ ಮ೦ಜುರವರು ಕಥಾ ವಾಚನ ಮಾಡುತ್ತೇನೆ೦ದು ಹೇಳಿದ್ದಾರೆ.ತೇಜಸ್ವಿ ಅವರು ಕಾವ್ಯ ವಾಚನಕ್ಕೆ ಸಿದ್ದರಾಗುತ್ತಿದ್ದಾರೆ.
ಗೋಪೀನಾಥರು ಕವಿತೆಯನ್ನು ವಾಚಿಸಲು ಉತ್ಸುಕರಾಗಿದ್ದಾರೆ.ಸ೦ತೋಷದ ವಿಚಾರ, ಎಲ್ಲರೂ ಒ೦ದೆಡೆ ಸೇರುವುದು.
ಸ೦ಪದಿಗರಲ್ಲಿ ಹಲವಾರು ಜನ ಕವಿಗಳಿದ್ದಾರೆ, ಕಥೆಗಾರರಿದ್ದಾರೆ.ಲೇಖಕರಿದ್ದಾರೆ.ಅತ್ಯುತ್ತಮ ಬರಹಗಾರರಿದ್ದಾರೆ.ಎಲ್ಲರೂ ಈ ಸಮಾರ೦ಭದಲ್ಲಿ ತಮ್ಮ
ಬರಹಗಳನ್ನು ವಾಚಿಸುವ ಮೂಲಕ ಸಭೆಗೆ ಪ್ರೋತ್ಸಾಹ ನೀಡುವಿರೆ೦ದು ಆಶಿಸುತ್ತೇನೆ.
ಕಾರ್ಯಕ್ರಮಗಳ ವಿವರ ಮತ್ತೊಮ್ಮೆ (ಹೆಚ್ಚೇನಿಲ್ಲ:))
>ಕವಿತಾ ವಾಚನ
>ಕಥಾ ವಾಚನ
>’ಸ೦ಪದ’ದ ಬಗ್ಗೆ ಮಾತು- ಕತೆ
ನಿಮ್ಮೆಲ್ಲರ ಪ್ರತಿಕ್ರಿಯೆ ಭಾಗವಹಿಸುವಿಕೆಗೆ ಕಾಯುತ್ತಾ
ಸ೦ಪದ ತ೦ಡ
http://sampada.net/image/25957
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಹೊಳೆನರಸೀಪುರ ಮಂಜುನಾಥ್
ಹರೀಶ್ ಆತ್ರೇಯ
ಗೋಪೀನಾಥ್
ಬರ್ತಾರಂತೆ
ನಾನೂ ಬರ್ತಿದ್ದೀನಿ...
ನೀವೂ ಬರುವವರಾದರೆ ದಯವಿಟ್ಟು ಇಲ್ಲೇ ತಿಳಿಸಿ...ಬರ್ತೀವಿ ಅಂತ...
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ತೇಜಸ್ವಿಯವರನ್ನು ಬಿಟ್ಬಿಟ್ರಲ್ಲ! ಅವರು ಬರ್ತಿದ್ದಾರೆ ಎರಡು ಕವನಗಳೊಂದಿಗೆ,
ನಾನು ಬರ್ತಿದ್ದೇನೆ, ನನ್ನದೊಂದು ಹೊಸ ಕಥೆಯೊಡನೆ,
ಹೆಗ್ಡೆಯವರೆ, ಗೋಪಿನಾಥ ರಾಯರೆ, ಎಷ್ಟೆಷ್ಟು ಕವನ??
ಇನ್ನೂ ಬೇರೆ ಯಾರದೂ ಸದ್ದು ಸುದ್ಧಿಯಿಲ್ಲವಲ್ಲ!!
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ನನ್ನದು ಒಂದೆರಡು ಕವನ, ಜೊತೆಗೆ ಸ್ವಲ್ಪ ಚುರ್ಮುರಿ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಆತ್ಮೀಯ
ಅಹಾ ! ಚುರ್ಮುರಿ ಸೂಪರ್
ಹರಿ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
:)
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಆತ್ಮೀಯರೇ
ಸ೦ಮಿಲನಕ್ಕೆ ಬರುವವರ ಪಟ್ಟಿ
ಬೆಳ್ಳಾಲ ಗೋಪೀನಾಥ ರಾವ್ -> ಕವನ ವಾಚನ
ಶ್ರೀಮತಿ ಬೆಳ್ಳಾಲ ಗೋಪೀನಾಥ ರಾವ್ -> ಹಾಡುಗಾರಿಕೆ
ಹೊಳೆ ನರಸೀಪುರ ಮ೦ಜುನಾಥ್ -> ಕಥಾ ವಾಚನ
ತೇಜಸ್ವಿ -> ಕಾವ್ಯ ವಾಚನ
ವಸ೦ತ್ -> ಕವನ ವಾಚನ
ಶ್ಯಾಮಲಾ ಜನರ್ಧನ್ -> ಕವಿತಾ ವಾಚನ, ಕಥಾ ವಾಚನ
ಆತ್ರಾಡಿ ಸುರೇಶ್ ಹೆಗ್ಡೆ -> ಕವಿತಾ ವಾಚನ
ಹರೀಶ ಆತ್ರೇಯ ->
ವಿ ಎಸ್ ವೆ೦ಕಟೇಶ ಮೂರ್ತಿ->
ಶ್ರೀಮತಿ ವಿ ಎಸ್ ವೆ೦ಕಟೇಶ್ ಮೂರ್ತಿ ->
ಸ೦ಪದಿಗರೇ ನಿಮ್ಮದೇ ತಡ . ನೊ೦ದಾಯಿಸಿಕೊಳ್ಳಿ . ಇದು ನಿಮ್ಮದೇ ಕಾರ್ಯಕ್ರಮ.
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ನಾನೂ ಬರತಿತಿದ್ದೇನೆ ಆದರೆ ಆಲಿಸುವುದಷ್ಟೆ.
ವೀರಭದ್ರಪ್ಪ ಅಂಗೂರ > ಆಲಿಸುವುದು (:
ನಿಮ್ಮ,
ವೀರಭದ್ರಪ್ಪ ಅಂಗೂರ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ನನಗೂ ಪ್ರೇಕ್ಷಕಳಾಗಿ ಬರಲೇಬೇಕೆಂಬ ಇಚ್ಛೆಯಿದೆ. ಮಗಳು ಪಿ ಯು .ಸಿ ಸೇರಿದ್ದಾಳೆ. ಅವಳಿಗೆ ಕಾಲೇಜಿನಲ್ಲಿ ಪರಿಚಯ ದಿನವನ್ನು ಭಾನುವಾರವೇ ಹಮ್ಮಿಕೊಂಡಿದ್ದಾರೆ. ಪೋಷಕರನ್ನೂ ಆಹ್ವಾನಿಸಿದ್ದಾರೆ. ಮಗಳ ಒತ್ತಾಯ ಬೇರೆ. ಅಲ್ಲಿಗೆ ಭೇಟಿ ಕೊಟ್ಟು ನಂತರ ಬರಲೇ ಎಂಬ ಯೋಚನೆ ಇದೆ. ಪ್ರಯತ್ನಿಸುತ್ತೇನೆ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಜೋಕ್ ವಾಚನಕ್ಕೆ ಅವಕಾಶವಿದೆಯೇ? :)
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಆತ್ಮೀಯ
ಸುಪ್ರೀತ್ ಜೋಕ್ ಹೇಳ್ತೀರ?. ಓಹ್ ಹೇಳೀಪ್ಪ ನೀವು ಸಖತ್ ಸೀರಿಯಸ್ ಪಾರ್ಟಿ ಅ೦ದುಕೊ೦ಡವರಿಗೆಲ್ಲಾ ಜೋಕ್ ಹೇಳಿ ನಗಿಸಿಬಿಡಿ
ಎಲ್ಲದಕ್ಕೂ ಅವಕಾಶವಿದೆ ಸರ್
ಹರಿ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಸುಪ್ರೀತರಿಂದ ಜೋಕ್ ವಾಚನ..:) :)
ಸಕ್ಕತ್ತ್...
ಬರಬೇಕೆಂಬ ಆಸೆ ಇದ್ದರೂ ಕೆಲಸದ ಒತ್ತಡದಿಂದಾಗಿ ಬರಲಾಗದಿರುವುದಕ್ಕೆ ಬೇಸರವಿದೆ...
ಇಡೀ ಕಾರ್ಯಕ್ರಮದ ವಿಡಿಯೋ ಮಾಡಿ ಯ್ಯೂಟೋಬ್ನಲ್ಲಿ ಅಪ್ಲೋಡ್ ಮಾಡಿದರೆ ನಾವು ನೋಡಬಹುದು.
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಸುಪ್ರೀತ್,
ಆದರೆ ಒಂದು ಕಂಡೀಶನ್
ಜೋಕ್ ಮುಗಿದಮೇಲೆ ಒಂದು ಕೈ ಮೇಲೆ ಎತ್ತಬೇಕು..
ಮುಗಿಯಿತು ಈಗ ನಗಬಹುದು ಅಂತ ತಿಳಿಸಲು...;) :-))))
(ನಾವು ಗೆಳೆಯರು ಕೂಡಿದಾಗೆಲ್ಲ ತಮಾಷೆಗೆ ಹೀಗೆ ಮಾಡುವುದು)
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಹಾಜರಾಗಲಿರುವ ಇತರರೂ ದಯವಿಟ್ಟು ಇಲ್ಲಿ ಪ್ರತಿಕ್ರಿಯಿಸಿ...
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಆತ್ಮೀಯ
ಸ೦ಪದಿಗರೇ ನಮ್ಮೊ೦ದಿಗೆ ಸ೦ತೋಷ ಹ೦ಚಿಕೊಳ್ಳುವ ಮತ್ತು ಭಾಗವಹಿಸುವ ಎಲ್ಲರೂ ದಯವಿಟ್ಟು ಪ್ರತಿಕ್ರಿಯಿಸಿ. ಆದಿನದ ತಯಾರಿಗೆ ಸಹಾಯವಾಗುತ್ತದೆ.
ನಿಮ್ಮವ
ಹರಿ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ನಾನೂ ಬರುತ್ತೇನೆ.
N. ಅಂಜನ್ ಕುಮಾರ್
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಸಂಪದ ಸಂಮಿಲನ ಸಂಪೂರ್ಣ ಯಶಸ್ವಿಯಾಗಲಿ ಅಂತ ಹಾರೈಸುತ್ತೇನೆ. (ಕಾರ್ಯಕ್ರಮದ ಪೂರ್ಣ ವಿವರಗಳನ್ನು ಯಾರಾದರೂ ಹಾಕುತ್ತೀರಲ್ಲಾ?)
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಛೆ... ನಾನೂ ಬರುವಂತಿದ್ದಿದ್ದರೆ ! ಆಸೆಪಟ್ಟಿದ್ದೆಲ್ಲ ಸಿಗುವುದಿಲ್ಲ ಅಲ್ಲವೇ? ಮುಂದಿನ ಸಲ ಆಗಬಹುದೇನೋ ಅಂತ ಎದುರುನೋಡುತ್ತೇನೆ... :)
ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಾಕಿ, ನಮ್ಮೊಂದಿಗೆ ಹಂಚಿಕೊಳ್ಳಿ...