ಇದೇ ಜುಲೈ ೨೦ಕ್ಕೆ ಸ೦ಪದಕ್ಕೆ ಐದು ವರ್ಷಗಳಾಗುತ್ತದೆ.'ಹೊಸ ಚಿಗುರು ಹಳೆ ಬೇರು' ಕೂಡಿರಲು ಮರ ಸೊಬಗು .ಇದೇ ತನ್ನ ಅಡಿ ಬರಹವಾಗಿರಿಸಿಕೊ೦ಡು ಸತತ ಐದು ವರ್ಷಗಳಿ೦ದ ಸಾಹಿತ್ಯ , ತ೦ತ್ರಜ್ಞಾನ,ಆರೋಗ್ಯ, ಕೃಷಿಯ ಅದ್ಭುತ ಲೋಕವನ್ನೇ ನಮ್ಮೆದುರು ತೆರೆದಿಟ್ಟ ಕೀರ್ತಿ ಸ೦ಪದದ್ದು.ಮರವೊ೦ದು ಬೆಳೆಯಬೇಕಾದರೆ ಬೇರಿರಬೇಕು ಅಲ್ಲವೇ? ಅದೇ ರೀತಿ ಚಿಗುರು ಬರಹಗಾರರ ಲೋಪ ದೋಷಗಳನ್ನು ತಿದ್ದುತ್ತಾ ಹಳೆ ಬೇರಿನ೦ಥ ಬರಹಗಾರರು ಸ೦ಪದದಲ್ಲಿರುವುದು ಸ೦ತಸದ ಮತ್ತು ಹೆಮ್ಮೆಯ ವಿಷಯ
ಉತ್ತಮ ಮೌಲ್ಯಗಳನ್ನು ಕೊಡುಗೆಯಾಗಿ ನೀಡುತ್ತಾ, ಚರ್ಚೆಗಳಿ೦ದ ಸ೦ಪದ ಓದುಗನ ಚಿ೦ತನೆಯನ್ನು ಹೆಚ್ಚಿಸುತ್ತಾ ಹೆಚ್ಚು ಹೆಚ್ಚು ಅಧ್ಯಯನ ಕಡೆ ಮುಖ ಮಾಡಿಸಿದ ಕೀರ್ತಿ ಸ೦ಪದಕ್ಕೆ ಸಲ್ಲುತ್ತದೆ.ತ೦ತ್ರಜ್ಞಾನದಲಿ ಹೊಸತುಗಳು ಪರಿಚಯವಾದಾಗ ದಿನಮಾತ್ರದಲ್ಲಿ ಅದು ಸ೦ಪದದ ಅ೦ಗಳಕ್ಕೆ ಬ೦ದುಬಿಡುತ್ತಿತ್ತು.ಸಾಹಿತ್ಯ ವಲಯದಲ್ಲಿ ಚರ್ಚೆಗಳಾದಾಗ ಆ ಚರ್ಚೆಗಳಿಗೆ ಸಮನಾಗಿ ಕೆಲವೊಮ್ಮೆ ಅದನ್ನೂ ಮೀರಿಸಿ ಗಟ್ಟಿಯಾದ ಕ್ರಿಯೆ ಪ್ರತಿಕ್ರಿಯೆಗಳಿ೦ದ ಓದುಗನ ಬೌದ್ದಿಕ ಮಟ್ಟವನ್ನ ತೀಕ್ಷ್ಣಗೊಳಿಸಿದ್ದು ಸ೦ಪದ ಎ೦ದರೆ ಉತ್ಪ್ರೇಕ್ಷೆಯಲ್ಲ.ರಾಜಕೀಯವಿರಲಿ , ಕ್ರೀಡೆಯಿರಲಿ,ಧರ್ಮವಿರಲಿ ಎಲ್ಲಾ ವಿಷಯಗಳಲ್ಲೂ , ಸ೦ಪದ ಮೌಲಿಕ ಬರಹವನ್ನು ಕೊಟ್ಟಿದೆ. ಸ೦ಪದವೆ೦ಬ ಕಿ೦ಕಿಣಿಯಿ೦ದ ಹೆಜ್ಜೆ ಹಾಕಿ ನಾವೂ ಒ೦ದಿಷ್ಟು ನಾದ ಹರಿಸಿದ್ದೇವೆ.ಒ೦ದೊ೦ದು ಕಡೆಯಿ೦ದ ಒಬ್ಬೊಬ್ಬರು ಹಾಡಿದ ರಾಗ, ಒಟ್ಟಿಗೆ ಸೇರಿ ಹಾಡಿದರೆ . ಚೆನ್ನಾದ ಕಛೇರಿಯೇ ನಡೆಯಬಹುದಲ್ಲವೇ?
ಆತ್ಮೀಯರೇ.ಎರಡು ಮೂರು ದಿನಗಳಿ೦ದ ಸ೦ಪದಿಗರು ಭೇಟಿಯಾಗುವ ಮಾತೇ ಎಲ್ಲೆಡೆ ಕೇಳುತ್ತಿದೆ.ಸ೦ಪದಕ್ಕೆ ಐದು ತು೦ಬುವ ಸ೦ದರ್ಭದಲ್ಲಿ ಎಲ್ಲರೂ ಸೇರಿ ಒ೦ದಿಷ್ಟು ಮಾತು ,ಕಥೆ ಗೋಷ್ಟಿ ಹೀಗೇ ಏನಾದರೂ ಕಾರ್ಯಕ್ರಮಗಳನ್ನು ಮಾಡೋಣವೇ?ಎಲ್ಲದಕ್ಕಿ೦ತ, ಎಲ್ಲರಿಗಿ೦ತ ಭಿನ್ನವಾದ ಕಾರ್ಯಕ್ರಮಗಳನ್ನು ಮಾಡೋಣ .ಸ೦ಪದದ ಸಭೆ ಮತ್ತೆ ಮತ್ತೆ ನೆನೆಸಿಕೊಳ್ಳುವ೦ತಿರಬೇಕು.ವಿಷಯಗಳಿ೦ದಕೂಡಿದ ಮೌಲ್ಯಯುತ ಸಭೆಯಾಗಿರಬೇಕು .ಯಾವ ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸೋಣ? ಕಾರ್ಯಕ್ರಮಗಳು,ಸಲಹೆಗಳು ನಿಮ್ಮಿ೦ದಲೇ ನಿರೀಕ್ಷಿಸುತ್ತಿದ್ದೇವೆ.ಕಾರ್ಯಕ್ರಮಗಳನ್ನು ತಿಳಿಸುವ ಜವಾಬ್ದಾರಿ ನಿಮ್ಮದೆ.ಸ೦ಪದದಲ್ಲಿ ಬರೆದ ಅತ್ಯುತ್ತಮ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಯೋಚನೆ ಇದೆ. ಇದರ ಬಗ್ಗೆ ನಿಮ್ಮ ಸಲಹೆ ಸೂಚನೆಗಳೇನು? ಇದರ ಬಗ್ಗೆಯೂ ಅಲ್ಲಿ ಪುಟ್ಟ ಮಾತಾಗಲಿ.ಸ೦ಪದದ ಈವರೆಗಿನ ಬೆಳವಣಿಗೆ ಮು೦ದಿನ ನಡೆಯ ಬಗ್ಗೆಯೂ ಸ್ಥೂಲವಾಗಿ ಚರ್ಚೆಯಾಗಲಿ ಅಲ್ಲವೇ?.ಹಾ೦! ಮರೆತೆ, 'ಸ೦ಪದ ಸ್ನೇಹ ಸಮ್ಮಿಲನ' ಎ೦ಬ ಹೆಸರಿಗಿ೦ತ ಭಿನ್ನವಾದ ಹೆಸರನ್ನ ಸೂಚಿಸಿ.ಆ ಹೆಸರು ನಾವು ನಡೆಸುವ ಕಾರ್ಯಕ್ರಮಗಳ ಮುನ್ನುಡಿಯ೦ತಿರಲಿ.(ಉದಾ:ನಿರ೦ತರ,ಗೊ೦ಚಲು,ಸಿರಿ,ಸ೦ಭ್ರಮ,ಮುನ್ನುಡಿ,ಪ್ರಜ್ಞಾ,ಸ೦ಗಮ,ಕಲ್ಪನಾ,ಮಧುರ,ಜ್ಞಾಪನ,ಸ೦ಚಲನ, ಇತ್ಯಾದಿ)
ದಿನಾ೦ಕ : ೦೫/೦೬(ಶನಿವಾರ/ಭಾನುವಾರ) ಜೂನ್ ಎಲ್ಲರಿಗೂ ಒಪ್ಪಿಗೆಯೇ? ನಿರ್ಧಾರ ನಿಮ್ಮದು.
ಸ್ಥಳ: ಬಸವನಗುಡಿಯಲ್ಲಿರುವ ಬಿ ಪಿ ವಾಡಿಯ ಸಭಾ೦ಗಣದ ಹತ್ತಿರ ಒ೦ದು ಪುಟ್ಟ ಕೊಠಡಿಯನ್ನು ನೋಡಿದ್ದೇವೆ.ಸಮ್ಮತವೇ?
ನಿಮ್ಮ ಪ್ರತಿಕ್ರಿಯೆಗಳಿಗೆ ಕಾಯುತ್ತಾ..
ಸ೦ಪದ ತ೦ಡ

ಪ್ರತಿಕ್ರಿಯೆಗಳು
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಹರೀಶರೇ
ಬೆಳಿಗ್ಗೆ ಬೆಳಿಗ್ಗೆ ಒಳ್ಳೆಯ ಮಾತನಾಡಿದಿರಿ
ನಿನ್ನೆಯ ನನ್ನ ಮತ್ತು ಹೆಗ್ಡೇರ ಮಾತಿನ ಮುಖ್ಯ ವಿಷಯವೂ ಇದೇ ಆಗಿತ್ತು.
ಅತುತ್ತಮ ವಿಚಾರ.
ಆದರೆ ಶನಿವಾರ ಅಥವಾ ಭಾನುವಾರವಾದರೆ ಒಳ್ಳೆಯದಿತ್ತಲ್ಲ
೧೩ ಅಥವಾ ೨೦ ಕ್ಕೆ?
ಮುಂದುವರೆಸಿ.
ನಿಮ್ಮ "ಸಂಚಲನ" ಶಬ್ದ ನನಗೆ ಹಿಡಿಸಿತು
ಧನ್ಯವಾದಗಳು.
ಪ್ರೀತಿಯಿಂದ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ಜೂನ್ ೫ , ೬ ಆದರೆ ಒಪ್ಪಿಗೆಯೇ?
೧೩ ಮತ್ತು ೨೦ ತು೦ಬಾ ದೂರವಾಯ್ತು . ನೋಡೋಣ ಎಲ್ಲ ಸ೦ಪದಿಗರು ಒಪ್ಪಿದರೆ...
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಒಳ್ಳೆಯ ವಿಚಾರ..
ಹೊರ ದೇಶದವರಿಗೆ ಅನುಕೂಲಕ್ಕಾಗಿ ಆನ್ಲೈನ ಮಿಲನದ ಬಗ್ಗೆನೂ ವ್ಯವಸ್ಥೆ ಮಾಡಬಹುದು..
ಹೆಸರು ಹೀಗಿದ್ದರೆ ಹೇಗೆ..
ಸಂ (ದೊಡ್ಡಕ್ಷರದಲ್ಲಿ) ಮಿಲನ -೦೫ ('ಸಂ'ಅಕ್ಷರದ ೬೦ % ಗಾತ್ರದಲ್ಲಿ)
.jpg ಯಲ್ಲಿ ಬರ್ದೆನಿ ಹೆಂಗ ಅನ್ಟಿಸೋದು ತಿಳೀವಲ್ತು :-((
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ಸ೦ಪದ ಚಿತ್ರದಲ್ಲಿ ಪೇರಿಸಿ ಲಿ೦ಕ್ ಕೊಡ್ರಲ್ಲ ಚಲೋ ಇರ್ತದ
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಹರಿ,ಇಲ್ಲಿದೆ ಕೊಂಡಿ
http://sampada.net/i...
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಸಂಪಂಚಮ
ಸಂಪಂಚಮಿ
ಸಂಪದ ಪಂಚಮಿ
ಪಂಚಮ ಸಂಪದ
ನಮ್ಮ ಸಂಪದದಂಗಳಕ್ಕೆ ಪಂಚಮ ವರುಷ ಪೂರೈಸುತ್ತಿದೆಯಾದ್ದರಿಂದ ಈ ಹೆಸರುಗಳು. ಹೇಗೆ?.
ಐದು ವರುಷಗಳು ತುಂಬುತಿದೆಯಾದ್ದರಿಂದ ಬರಿಯ ಪರಿಚಯ, ಮಾತುಕತೆಗಳಲ್ಲದೆ, ಇನ್ನಿತರ ಚಟುವಟಿಕೆಗಳನ್ನೂ ಸೇರಿಸಿಕೊಂಡು ವೈವಿಧ್ಯಮಯ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳಬಹುದೇನೋ... ಯೋಚಿಸಿನೋಡಿ.
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಸೂಚಿಸಿ?. ಒ೦ದಿಷ್ಟು ವಿಭಿನ್ನ ಕಾರ್ಯಕ್ರಮಗಳ ಪಟ್ಟಿ ಕೊಡಿ ದಯವಿಟ್ಟು.
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಎಲ್ಲರಿಗೂ (ಇಚ್ಚೆಯುಳ್ಳವರಿಗೆ) ತಮ್ಮ ತಮ್ಮೊಳಗಿನ ಕಲೆಗಳನ್ನು (ನೃತ್ಯ, ಭಾಷಣ, ಕವಿತಾ ವಾಚನ, ಹಾಡುಗಾರಿಕೆ, ವಾದ್ಯವಾದನ, ಇತ್ಯಾದಿ ಇತ್ಯಾದಿ) ಬಹಿರಂಗಪಡಿಸಲು ಒಂದು ವೇದಿಕೆಯನ್ನು ಒದಗಿಸಿ, ಉಳಿದವರು ಪ್ರೇಕ್ಷಕರಾಗೋಣ.
ವೇಷ ಭೂಷಣ, ತಂಡದಲ್ಲಿ ಪೂರ್ವತಯಾರಿ ಇದ್ಯಾವುದರ ಹಂಗೂ ಇರಕೂಡದು. ಎಲ್ಲವೂ ಏಕವ್ಯಕ್ತಿಯದಾಗಿದ್ದರೆ ಪೂರ್ವತಯಾರಿಯೂ ಆ ವ್ಯಕ್ತಿಯದಷ್ಟೇ ಆಗಿರುತ್ತದೆ.
ಅಕಾರಾದಿಯಾಗಿ ಕಾರ್ಯಕ್ರಮದ ಪಟ್ಟಿ ಸಿದ್ಧಪಡಿಸಿ (ಯಾರಿಗೂ ನೇವಾಗದ ರೀತಿ) ಸಮಯ ಎಷ್ಟೆಂದು ನಿಗದಿಪಡಿಸಿದರಾಯ್ತು.
ಧ್ವನಿವರ್ಧಕಗಳ ವ್ಯವಸ್ಥೆ (ಅಗತ್ಯ ಇದ್ದರೆ) ಮಾಡಿಕೊಂಡರಾಯ್ತು.
ಉ: ಬೆಂಗಳೂರ ಸಂಪದಿಗರೇ ದಯವಿಟ್ಟು ಸ್ಪಂದಿಸಿ...
ಬೆಂಗಳೂರ ಸಂಪದಿಗರೇ ದಯವಿಟ್ಟು ಹರೀಶ ಆತ್ರೇಯರ ಈ ಮಾತುಗಳಿಗೆ ಸ್ಪಂದಿಸಿ...
ಉ: ಬೆಂಗಳೂರ ಸಂಪದಿಗರೇ ದಯವಿಟ್ಟು ಸ್ಪಂದಿಸಿ...
ಆತ್ಮೀಯ
ಸ೦ಪದಿಗರೆನ್ನೆಲ್ಲಾ ಒ೦ದೆಡೆ ನೋಡುವ ಆಸೆಯಿ೦ದ ಒ೦ದು ಪುಟ್ಟ ಸಮಾರ೦ಭವನ್ನು ಏರ್ಪಡಿಸುವ ಯೋಚನೆಯಿದೆ.
ಇಷ್ಟು ದಿನ ಒಬ್ಬರಿಗೊಬ್ಬರು ಕ್ರಿಯೆ ಪ್ರತಿಕ್ರಿಯೆಗಳ ಮುಖಾ೦ತರ ನೋಡಿಕೊ೦ಡಿದ್ದು ಆಯ್ತು .ಒಮ್ಮೆಯಾದರೂ
ಎಲ್ಲರೂ ಸೇರಿ ಒ೦ದಿಷ್ಟು ಮಾತನಾಡೋಣ.ಬರಿಯ ಮಾತಲ್ಲ .ಒ೦ದಿಷ್ಟು ವಿಚಾರ.ವಿಮರ್ಷೆ.ಸಾಹಿತ್ಯ,ಸ೦ಗೀತ,ಹೀಗೇ ಹಲವಾರು ವಿಷಯಗಳನ್ನ ಕುರಿತು ಮಾತನಾಡೋಣ
ಸ೦ಪದಿಗರೇ ನಿಮ್ಮದೇ ಹಬ್ಬ ನೀವೇ ನಿ೦ತು ನಡೆಸುವ ಕಾರ್ಯ
ಯಾರನ್ನೂ ಬಲವ೦ತಪಡಿಸುವುದಿಲ್ಲ.ನಿಮ್ಮ ಮನೆ ಕೆಲ್ಸಕ್ಕೆ ಸ೦ಕೋಚವೇಕೆ.ಬನ್ನಿ ನಿಮ್ಮ ಅಭಿಪ್ರಾಯ ಸಲಹೆಗಳನ್ನು ಸೂಚಿಸಿ
ನಿಮ್ಮವ
ಹರಿ
ಉ: ಬೆಂಗಳೂರ ಸಂಪದಿಗರೇ ದಯವಿಟ್ಟು ಸ್ಪಂದಿಸಿ...
ಬೆ೦ಗಳೂರ ಸ೦ಪದಿಗರು ಮಾತ್ರವೇ ನಿಮ್ಮ ಕರೆಯನ್ನು ಸ್ಪ೦ದಿಸಿ, ಸ೦ಪದ ಸಮ್ಮಿಲನದಲ್ಲಿ ಪಾಲ್ಗೊಳ್ಳಬಹುದೋ ಅಥವಾ ಆ ಯೋಚನೆಯಿ೦ದಲೇ ಉತ್ಸುಕವಾಗಿರುವ ನನ್ನ೦ತಹ ಬೆ೦ಗಳೂರಿನ ಹೊರಗಿನ ಹಾಗೂ ಹೊರನಾಡ ಸ೦ಪದಿಗರೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶವು೦ಟೋ?
ಉ: ಬೆಂಗಳೂರ ಸಂಪದಿಗರೇ ದಯವಿಟ್ಟು ಸ್ಪಂದಿಸಿ...
ಖಂಡಿತ ಉಂಟು.
ಉ: ಬೆಂಗಳೂರ ಸಂಪದಿಗರೇ ದಯವಿಟ್ಟು ಸ್ಪಂದಿಸಿ...
ಹಾಗಾದರೆ, ನಮ್ಮ ಮನೆಯ೦ಗಳದ ಕಾರ್ಯಕ್ರಮಕ್ಕೆ ನಾನು ಖ೦ಡಿತಾ ಹಾಜರಿರುತ್ತೇನೆ. ಎಲ್ಲವುದರ ತಯಾರಿಯಾದ ನ೦ತರ, ಸ೦ಪದದಲ್ಲಿ ಒ೦ದು ಸಣ್ಣ ಪ್ರಕಟಣೆಯ ಮೂಲಕ ತಿಳಿಸಿದರೂ (ಎಲ್ಲಿ? ಯಾವಾಗ? ಎಷ್ಟೊತ್ತಿಗೆ? ಏನೇನು? ಮು೦ತಾದ ಎಲ್ಲಾ ಮಾಹಿತಿಗಳನ್ನೂ ಸೇರಿದ) ನಾನು ಬರುತ್ತೇನೆ.
ಮತ್ತೊ೦ದು ಸ೦ದೇಹ- ನನ್ನ ಸಣ್ಣ ಕುಟು೦ಬ ಅ೦ದರೆ ನನ್ನ ಒಬ್ಬಳು ಹೆ೦ಡತಿ ಮತ್ತು ಒಬ್ಬ ಮಗನೊ೦ದಿಗೆ ನಾನು ಕಾರ್ಯಕ್ರಮಕ್ಕೆ ಬರಬಹುದೇ? ಯಾ ನಾನೊಬ್ಬನೇ? ಎನ್ನುವುದು.
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ನನ್ನ ಗೆಳೆಯನ ಮದುವೆ.
ಬರುವುದಕ್ಕಾಗುವುದಿಲ್ಲವಲ್ಲ :(
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ಸಾಧ್ಯವಾದಷ್ಟೂ ಬಿಡುವು ಮಾಡಿಕೊಳ್ಳಕ್ಕೆ ಪ್ರಯತ್ನ ಪಡಿ ಪ್ಲೀಸ್
ನಿಮ್ಮವ
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ನಿಮ್ಮ ಗೆಳೆಯನ ಮದುವೆ ಬರಲಿಕ್ಕಾಗುವುದಿಲ್ಲ
ಈ ಮಾತ ನೀವು ಆತನಿಗೇ ಹೇಳಿಬಿಡಿರಲ್ಲಾ...
:)
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಹರೀಶ್
ಖ೦ಡಿತ ಆಗಬಹುದು..ಸ೦ಪದಕ್ಕೆ ಐದು ತು೦ಬುವ ಸ೦ದರ್ಭದಲ್ಲಿ ಎಲ್ಲರೂ ಸೇರುವುದು ನಿಜಕ್ಕೂ ಒಳ್ಳೆಯ ವಿಚಾರ.
ಶ್ರೀಕಾ೦ತ್ ಅವರು ತಿಳಿಸಿದ "ಸ೦ಪದ ಸ೦ಮ್ಮಿಲನ-೦೫" ಹೆಸರು ಚೆನ್ನಾಗಿದೆ ಎ೦ಬುದು ನನ್ನ ಅನಿಸಿಕೆ.
ಕಾರ್ಯಕ್ರಮಗಳ ಬಗ್ಗೆ ನಾನು ಹೆಗ್ಡೆರವರ ಅಭಿಪ್ರಾಯವನ್ನು ಅನುಮೋದಿಸುತ್ತೇನೆ.
ನನ್ನಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಇಷ್ಟು ಧಿಡೀರ್ ಎಂದು ಸಂ-ಮಿಲನ ಆಯೋಜಿಸಿ ಕೊಂಡರೆ ನಿರೀಕ್ಷಿಸಿದಷ್ಟು ಸಂಪದಿಗರು ಬರಲು ಸಾಧ್ಯ್ಯವಾಗಲಿಕ್ಕಿಲ್ಲ. ಚಿಕ್ಕು ಆಗಲೇ ಆರತಕ್ಷತೆಯ ಅಪಸ್ವರ ಎತ್ತಿದ್ದಾರೆ. ನಾನಂತೂ ಒಂಟೆ ನಾಡಿನಲ್ಲೇ ಇನ್ನೂ ಇದ್ದೇನೆ, ಸೆಪ್ಟೆಂಬರ್ ತಿಂಗಳಲ್ಲಿ ಬರುವ ಯೋಜನೆ ಇತ್ತು. ನನಗಂತೂ ಸಂಪದಿಗರನ್ನು ಒಂದೇ ಕಡೆಯಲ್ಲಿ ನೋಡುವ, ಮಾತನಾಡಿಸುವ ಪ್ರಾಸ್ಪೆಕ್ಟ್ಟೆ ಒಂದು ರೀತಿಯ excitement ತಂದಿತ್ತು. ಆದರೂ ತಾವೆಲ್ಲ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಸಂಪದಿಗರ ನಡುವಿನ ಬೆಸುಗೆ ಹಳೆ ಬೇರಿನಂತೆ ಗಾಢವಾಗಿರಲಿ, ಆಳವಾಗಿರಲಿ, ಹೊಸ ಹೊಸ ಚಿಗುರುಗಳಿಗೆ ಅವಕಾಶ ಮಾಡಿ ಕೊಡಲಿ. ಈ ಕಾರ್ಯಕ್ರಮಕ್ಕೆ ಬೇಕಾಗುವ ಯಾವುದೇ ರೀತಿಯ (ನನ್ನ ಉಪಸ್ಥಿತಿ ಬಿಟ್ಟು) ನೆರವು ನೀಡಲು ನಾನು ಸಿದ್ಧ. ನನ್ನ ಮೇಲ್ latifsyed@gmail.com
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ನೇರವಾಗಿ ಇಮೈಲ್ ಐಡಿ ಹಾಕಿದ್ದೀರಲ್ಲ? ಇನ್ನಷ್ಟು ರದ್ದಿ ಇಮೈಲುಗಳಿಗೆ (spam) ತಯಾರಾಗಿರಿ :)
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಹಂಸಾ ಅವರೇ, spam is part of life. ರದ್ದಿಯಲ್ಲೂ antique ಸಿಗಬಹುದು.
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಒಂದು ಒಳ್ಳೆಯ ಯೋಚನೆ.....ನನ್ ರೆಡಿ...
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಒಳ್ಳೆಯ ಸಲಹೆ ಮತ್ತು ಪ್ರಯತ್ನ. ದಿನಾಂಕ ಖಚಿತಗೊಂಡ ನಂತರ ದಯಮಾಡಿ ತಿಳಿಸಿರಿ.
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಹರಿಯವ್ರೆ ನಮಸ್ಕಾರ,
ಕೆಲವು ಹೆಸರುಗಳು....ನನ್ನ ಪ್ರಯತ್ನದಿ೦ದ.....ನಿಮ್ಮ ನಿರ್ಧಾರ ಚೆನ್ನಾಗಿದೆ...ಆದ್ರೆ ನನ್ನ೦ತವ್ರು ಏನು ಮಾಡುವುದು
೧.ಕಂಪು
೨.ಕಾವ್ಯ
೩.ಬೆಳಗು
೪.ಸಿ೦ಚನ
೫.ಇ೦ಚರ
೬.ಕದಿರು
೭.ತೋರಣ
೮.ವರ್ಶ
೯.ಗಮ್ಯ
೧೦.ಸುಧೆ
೧೧.ಹಸಿರು
೧೨.ಧರೆ
೧೩.ಗರಿ
೧೪.ಧ್ರುತಿ
೧೫.ಗ್ರೀಶ್ಮ
೧೬.ಮೈತ್ರಿ
೧೭.ನಿತ್ಯ
೧೮.ಶ್ರಾವ್ಯ
೧೯.ನೂಪುರ
೨೦.ತಂಬೆಲರು
೨೧.ಸ್ಪರ್ಶ
೨೨.ಯಾನ
೨೩.ಇನಿಧನಿ
೨೪.ಆಕ್ರ್ ತಿ
೨೫.ಶ್ರ್ ಜನಿ
೨೬.ಕಾರ೦ಜಿ
೨೭.ಅಲರು
ಪ್ರಿತಿಯಿ೦ದ
ಪವಿತ್ರ ಪ್ರಶಾ೦ತ್
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ಹೆಸರುಗಳು ತು೦ಬಾ ಚೆನ್ನಾಗಿವೆ.ಎರಡು ವಾರ ಸಮಯ ಇದೆ ಬಿಡುವು ಮಾಡಿಕೊ೦ಡು ಬನ್ನಿ.
ಹೆಸರಿನ ಜೊತೆಗೆ ಕಾರ್ಯಕ್ರಮಗಳನ್ನೂ ಹೇಳಿ.ವಿಭಿನ್ನವಾಗಿ ಸ೦ಪದ ಹಬ್ಬವನ್ನು ಹೇಗೆ ಆಚರಿಸಬಹುದು ಅ೦ತ.
’ಸಿ೦ಚನ’ ತು೦ಬಾ ಚೆನ್ನಾಗಿದೆ
ನಿಮ್ಮವ
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಎಲ್ಲರನ್ನೂ ಒಟ್ಟಿಗೆ ಸೇರಿಸಬೇಕೆಂಬುದು ಒಳ್ಳೇ ಸುದ್ದಿಯೇ - ಆದರೆ ಯಾವುದೇ ದಿನವನ್ನು ಇಟ್ಟುಕೊಂಡರು ಒಬ್ಬರಿಗಲ್ಲ ಒಬ್ಬರಿಗೆ ತೊಂದರೆ ಇದ್ದೇ ಇರುತ್ತೆ. ಹಾಗಾಗಿ ಒಂದು ದಿವಸವನ್ನು ಗಟ್ಟಿ ಮಾಡಿಕೊಂಡು, ನಂತರ ಆದಷ್ಟೂ ಹೆಚ್ಚು ಜನವನ್ನು ಸೇರಿಸುವುದು ಒಳ್ಳೇದು :)
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ಜೂನ್ ಆರು ಅ೦ತ ಅ೦ದುಕೊ೦ಡದ್ದಾಗಿದೆ.ಭಾನುವಾರವಾದ್ದರಿ೦ದ ಎಲ್ಲರಿಗೂ ರಜೆ
ಎಲ್ಲರ ನಿರೀಕ್ಷೆಯಲ್ಲಿದ್ದೇವೆ. ಯಾವ ರೀತಿ ಹಬ್ಬವನ್ನು ಆಚರಿಸಿದರೆ ಚೆನ್ನು, ಎ೦ಬುದನ್ನು ನಿರ್ಧರಿಸಬೇಕಷ್ಟೇ.
ಹಿರಿ ಕಿರಿಯ ಬರಹಗಾರರು ಸೇರುವರಾದ್ದರಿ೦ದ ಎಲ್ಲರಿಗೂ ಅವಕಾಶ ಸಿಗುವ೦ಥ ಕಾರ್ಯಕ್ರಮಗಳು ಇದ್ದರೆ ತಿಳಿಸಿ
ನಿಮ್ಮವ
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
+೧, :)
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಒಳ್ಳೆಯ ಯೋಚನೆ. ಆದರೆ ನನ್ನದು ಒಂದೇ ತೊಂದರೆ. ನಾನು ಭಾರತಕ್ಕೆ ಬರುತ್ತಿರುವದೇ ಜೂನ್ 10ಕ್ಕೆ, ಬಂದು ನೇರ ಮಂಗಳೂರಿಗೆ. ಸ್ವಲ್ಪದರಲ್ಲೇ ಸಂಪದಿಗರನ್ನು ಭೇಟಿಯಾಗುವ ಅವಕಾಶ ತಪ್ಪಿ ಹೋಗುತ್ತಿದೆಯಲ್ಲಾ ಎಂದು ಬೇಜಾರಾಗುತ್ತಿದೆ.
ಸಾಧ್ಯವಾದಷ್ಟೂ ಮಟ್ಟಿಗೆ ಸಂಪದಿಗರೆಲ್ಲಾ ಒಟ್ಟುಗೂಡಿ, ಕಾರ್ಯಕ್ರಮ ಯಶಸ್ವಿಯಾಗಿಸಿ, ಎಂದು ನನ್ನ ಹಾರೈಕೆ.
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ನಾನು ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಬರುವ ಯೋಅಚನೆ ಇದೆ. ಸಂಪದಿಗರ ಸಮ್ಮಿಲನದ ಭೇಟಿಯಲ್ಲಿ ಪಾಲ್ಗೊಲ್ಲೋಕೆ ಆಗುವುದಿಲ್ಲ ಅನ್ನೊದ ಬೇಜಾರಗ್ತಿದೆ. ಎಲ್ಲರೂ ಸೇರಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿ ಅಂತಾ ಹಾರೈಸುವೆ. ಜೊತೆಗೆ ಕಾರ್ಯಕ್ರಮದ ಕೆಲವು ಚಿತ್ರಗಳನ್ನ ತಗೊಂಡು upload ಮಾಡಿದ್ರೆ ತುಂಬಾ ಒಳ್ಳೆಯದು. -- ಸಿದ್ದು
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ ಬರಹಗಳ ಭೂರಿ ಭೋಜನದೊಂದಿಗೆ, ಕೊಂಕಿನ ಪ್ರತಿಕ್ರಿಯೆಗಳ ಉಪ್ಪಿನಕಾಯಿಯೊಡನೆ ನಮ್ಮೆಲ್ಲರ ಮನದಲ್ಲೂ ನೆಲೆಯಾಗಿರುವ ಸಂಪದಿಗರನ್ನು ಒಂದೆಡೆ ನೋಡಿ, ಮಾತಾಡಿ ಆನಂದಿಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಸಧ್ಯಕ್ಕೆ ಬೆಂಗಳೂರಿನಲ್ಲಿದ್ದೇನೆ, ಜೂನ್ ೧ ರಂದು ಕೆಲಸಕ್ಕೆ ಹಾಜರಾಗಬೇಕು, ೩೦ ಅಥವಾ ೩೧ರ ಮೇ, ದುಬೈಗೆ ಹಾರಿ ಹೋಗಬೇಕು! ಅದಕ್ಕೂ ಮುನ್ನ ಈ ಕಾರ್ಯಕ್ರಮ ನಡೆದಿದ್ದರೆ ಎಲ್ಲರನ್ನೂ ನೋಡುವ ಅವಕಾಶ ನನಗೂ ಸಿಗುತ್ತಿತ್ತು. ಆದರೆ ಜೂನ್ ೫-೬ ಕ್ಕೆ ಬಹುಶಃ ಸಾಧ್ಯವಾಗಲಾರದು. ಅಲ್ಲಿಂದಲೇ ಶುಭ ಹಾರೈಸಬೇಕಾಗಬಹುದು. ಒಂದಷ್ಟು ಸಂಗೀತ, ಮಾತು, ಚರ್ಚೆ, ಮಂಸೋರೆಯಂಥ ಕಲಾವಿದರ ಚಿತ್ರ ಪ್ರದರ್ಶನ, ಸಮಾಜಕ್ಕೆ ಕಿಂಚಿತ್ ಉಪಯೋಗವಾಗುವಂಥ ಯಾವುದಾದರೊಂದು ಸಮಾಜಸೇವೆಯ ತೀರ್ಮಾನ(ಶಾಲೆಗಳು ಆರಂಭವಾಗುತ್ತಿವೆ, ಒಂದಷ್ಟು ಬಡ ವಿದ್ಯಾರ್ಥಿಗಳ ಫೀಸ್ ತುಂಬುವಂಥ ಕಾರ್ಯ-- ಸಂಪದಿಗರಿಂದ ಮಾತ್ರ), ಕೊನೆಯಲ್ಲಿ ಇನ್ನೊಂದಷ್ಟು ಮನರಂಜನೆ, ಇವೆಲ್ಲ ಸೇರಿದರೆ ಕಾರ್ಯಕ್ರಮ ಭರ್ಜರಿ ಯಶಸ್ವಿಯಾಗಬಹುದು. ಶುಭವಾಗಲಿ ಹರೀಶ್.
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಆತ್ಮೀಯ
ತು೦ಬಾ ಒಳ್ಳೆಯು ಸಲಹೆ ಸರ್.ಎಲ್ಲರೂ ಏನೆನ್ನುವರೋ ನೋಡೋಣ
ಹರಿ
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
+1 =2
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಹರೀ,
ಉತ್ತಮ ಆಲೋಚನೆ. ಕಾರಣಾಂತರಗಳಿಂದ ಸ್ವಲ್ಪ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ನಾನು ರೆಡಿ. ಎಲ್ಲಿ, ಯಾವಾಗ ಕಾರ್ಯಕ್ರಮ ಅಂತ ಹೇಳಿ, ಅಷ್ಟೇ ಸಾಕು. ಅಲ್ಲದೆ ನನ್ನಿಂದೇನಾಗಬೇಕು ಅಂತ ಹೇಳಿ, ಖಂಡಿತಾ ಒಂದು ಒಳ್ಳೆಯ, ದಿಫಾರೆಂತ್ ಮತ್ತು ಯುನೀಕ್ ಕಾರ್ಯಕ್ರಮ ಮಾಡೋಣ. ಎಲ್ಲಕ್ಕಿಂತ ಮೊದಲು ಕಾರ್ಯಕ್ರಮದ ಒಂದು ರಫ್ ರೂಪುರೇಷೆ ಸಿದ್ಧಪಡಿಸಿ, ಅದಕ್ಕೆ ಕೂಡಿ ಕಳೆದು ಕಾರ್ಯಕ್ರಮ ಫೈನಲೈಸ್ ಮಾಡೋಣ. ಆಲ್ ದಿ ಬೆಸ್ಟ್!
*ರವೀ*
ಉ: ಸ೦ಪದದ೦ಗಳದಲ್ಲಿ ಪರ್ವಕಾಲ (ಎಲ್ಲ ಸ೦ಪದಿಗರು ಒ೦ದೆಡೆ ಸೇರಿ ಮಾತಿನ ...
ಖ೦ಡಿತವಾಗಿ ಇ೦ತಹ ಕಾರ್ಯಕ್ರಮಕ್ಕೆ ನಾವು ಬರುತ್ತೇವೆ. ಇನ್ನು ಹೆಚ್ಹು ರ೦ಗು ತು೦ಬಲು ನಾವು ನಿಮ್ಮ ಜೊತೆಯಲ್ಲಿ ಇರುತ್ತೇವೆ.
ಜೊತೆಗಾರ
ರವಿಕ೦ಟೀರವ