May 25, 2010 - 5:06pm
ಆತ್ಮೀಯ ಸ೦ಪದಿಗರೇ ನಮ್ಮ ಆಹ್ವಾನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕ೦ಡು ಸ೦ತಸವಾಯ್ತು. ನಿಮ್ಮಿ೦ದ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಐಡಿಯ ನಿರೀಕ್ಷಿಸುತ್ತಿದ್ದೇವೆ. 'ರೊಟೀನ್' ಎನಿಸುವ೦ಥ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ವಿಭಿನ್ನ ಕಾರ್ಯಕ್ರಮಗಳನ್ನು ಸೂಚಿಸಿ ಈಗಾಗಲೇ ಸ೦ಪದಿಗರು ಹಲವು ಐಡಿಯಗಳನ್ನು ಹ೦ಚಿಕೊ೦ಡಿದ್ದಾರೆ. ಮತ್ತಷ್ಟು ಐಡಿಯಗಳಿದ್ದಲ್ಲಿ ಹಂಚಿಕೊಳ್ಳಿ.
ಕಾರ್ಯಕ್ರಮಗಳ ಪಟ್ಟಿ
(ನೀವೇ ಹೇಳಿ)
ಸಮಾರ೦ಭದ ವಿವರಗಳು ಮತ್ತೊಮ್ಮೆ
ದಿನಾ೦ಕ : ಜೂನ್ ೬ ೨೦೧೦
ಸ್ಥಳ : ಬಸವನಗುಡಿ ಬಿಪಿ ವಾಡಿಯ ಸಭಾ೦ಗಣದ ಬಳಿ ಪುಟ್ಟ ಕೊಠಡಿ (ಪರೀಕ್ಷಾರ್ಥ)
ಸಮಯ : ಬೆ.೧೦:೦೦ ರಿ೦ದ ಮ,೩:೦೦ರವರೆಗೆ
ಕಾರ್ಯಕ್ರಮಕ್ಕೆ ಹಾಜರಾಗುವವರು ದಯವಿಟ್ಟು ತಮ್ಮ ಹೆಸರನ್ನು ಇಲ್ಲಿ ನೊ೦ದಾಯಿಸಿಕೊಳ್ಳಿ
ಸ೦ಪದ ತ೦ಡ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:

ಪ್ರತಿಕ್ರಿಯೆಗಳು
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಕಾರ್ಯಕ್ರಮಗಳ ಪಟ್ಟಿ: ನೀವು ನಿರ್ಧರಿಸಿದ೦ತೆ! ನನಗೆ ನಿಮ್ಮನ್ನೆಲ್ಲ ಒಮ್ಮೆ ನೋಡಿದರಾಯಿತು! ನನಗದುವೇ ಸ೦ತೋಷ! ನೀವೆಲ್ಲಾ ಯಾರ್ಯಾರು ಹೇಗಿದ್ದೀರ ಅ೦ತ ಮಾತ್ರ ನೋಡುವಾಸೆ ನನ್ನದು!
ಸ್ಥಳ: ನೀವೇ ನಿರ್ಧರಿಸಿದ್ದೀರಲ್ಲ! ನಮಗೆ ಕೊಠಡಿಯೇ ಬೇಡ! ಪ್ರೀತಿ ಪಾತ್ರರಾದವರನ್ನು ನೋಡಲು ಕೊಠಡಿಯೇಕೆ!
ನೋ೦ದಾವಣಿ:
ಹೆಸರು ಕೆ.ಎಸ್.ರಾಘವೇ೦ದ್ರ ನಾವಡ
ಪ್ರಸ್ತುತ ವಾಸ: ಹೊರನಾಡು, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ.
ನನ್ನೊ೦ದಿಗೆ ಬರಲಿರುವ ಸದಸ್ಯರು: ನನ್ನೊ೦ದಿಗೆ ನನ್ನ ಪತ್ನಿ ಮ೦ಜುಳಾ ಮತ್ತು ಚಿರ೦ಜೀವಿ ಶೇಷರಾಜ ನಾವಡ( ಸಾಧ್ಯವಾದಲ್ಲಿ) ನಾನ೦ತೂ ಖ೦ಡಿತಾ ಬರುತ್ತೇನೆ.
ನೀವು ಹೇಳಿರುವ ಸಮಯಕ್ಕಿ೦ತ ಒ೦ದು ಗ೦ಟೆ ಮು೦ಚೆಯೇ ಇರುತ್ತೇನೆ.
ನನ್ನ ನೋ೦ದಾವಣಿಯ ಸ್ವೀಕಾರವನ್ನು ಖಚಿತಪಡಿಸಿ.
ನಮಸ್ಕಾರಗಳು,
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಜೂನ್ ೬ರ ತನಕ ಇರುವೆನೋ ಇಲ್ಲವೋ ಎಂಬ ಅತಂತ್ರ ಸ್ಥಿತಿಯಲ್ಲಿರುವೆ. ದುಬೈಗೆ ಹೋಗದಿದ್ದರೆ ಖಂಡಿತ ಬರುವೆ ನಾನು, ಪತ್ನಿ, ಪುತ್ರಿ, ಪುತ್ರರೊಡನೆ. ಖರ್ಚಿನ ಕೆಲಭಾಗ ಹೊರಲು ಸಿದ್ಧ. ಈ ಸಂಪದಿಗರ ಸಂಮಿಲನ ಒಂದು ಸ್ತುತ್ಯರ್ಹ ಕಾರ್ಯ, ಆಯೋಜಿಸಿದ ನಿಮಗೆ ಧನ್ಯವಾದಗಳು ಹರೀಶ್. ಅದೃಷ್ಟವಶಾತ್ ಭಾಗವಹಿಸುವ ಅವಕಾಶ ಸಿಕ್ಕಲ್ಲಿ ಸುಂದರವಾಗಿ, ರಸವತ್ತಾಗಿ ಕಾರ್ಯಕ್ರಮ ನಿರೂಪಿಸುವ ಹಾಗೂ ಎಲ್ಲ ಸಂಪದಿಗರಿಗೆ ನಗುಮೊಗದಿಂದ ಹೊಟ್ಟೆ ಬಿರಿಯುವಷ್ಟು ಊಟ ಬಡಿಸುವ ಕಾರ್ಯ ವಹಿಸಿಕೊಳ್ಳಲು ನಾನು ಸಿದ್ಧ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಅದಕ್ಕೆಲ್ಲ ನಾವಿಲ್ಲೇನ್ರೀ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಏಕೆ ನಾವಡರೆ, ಇಷ್ಟೊಂದು ಕೋಪ?? :)
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ನೀವು ಹಳಬರೆಲ್ಲಾ ನಮ್ಮ೦ಥ ಹೊಸಬರನ್ನು ಮರೆತೇ ಬಿಟ್ರೇ ಕೋಪ ಬರದೆ ನಗೋಕ್ಕಾಗತ್ತಾ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಕಸಬನನ್ನು ಮರೆತರೂ ನಿಮ್ಮಂಥ ಹೊಸಬರನ್ನು "ಮರೆತೇನೆಂದರೂ ಮರೆಯಲಿ ಹ್ಯಾಂಗ" ನಾವಡರೆ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಮಂಜಣ್ಣ
ನಾನೂ ಬರ್ತೀನಿ.ನೀವು ಆನಂತರ ದುಬಾಯ್ ಗೆ ಹೊರಡಿ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಶ್ರೀಧರಣ್ಣ, ನೀವು ಬರ್ತೀರಂದ್ರೆ ಖಂಡಿತ ನಾನೂ ಬರುವೆ, ನನ್ನ ಕನಸಿನಲ್ಲೇ ನನ್ನನ್ನು ಹಾಸನಕ್ಕೆ ಕರೆದೊಯ್ದಿದ್ದಿರಿ ನೀವು, ಕೆಲವು ಸಂಪದಿಗರಿಗೆ ಕೋಪ ಬಂದಿತ್ತು, ಅದೀಗ ಶಮನವಾಗಲಿ!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಉತ್ತಮ ಹರಿಯವರೇ,
ಕಾರ್ಯಕ್ರಮ ಪಟ್ಟಿ ಇಂತಿದ್ದರೆ ಹೆಂಗೆ ?
೯-೩೦ ೧೦-೦೦ ನೋಂದಣಿ
೧೦-೦೦ ಘಂಟೆಗೆ ದೀಪ ಬೆಳಗಿ ಕಾರ್ಯಕ್ರಮದ ಪ್ರಾರಂಭ..(ಹಿಮ್ಮೆಳನದಲ್ಲಿ ಡಿ ಎಸ್ ಕರ್ಕಿಯವರ 'ಹಚ್ಚೇವು ಕನ್ನಡದ ದೀಪ' ಹಾಡಿದ್ದರೆ ಇನ್ನೂ ಚೆನ್ನ)
೧೦-೧೫ ೧೦-೩೦ ಭಾವಗೀತೆ / ಭಕ್ತಿಗೀತೆ--> ಭಗಿನಿಯರಿಂದ.
೧೦-೩೦-೧೦-೪೫ ಬಂದ ಹಿರಿಯರಿಂದ ನಾಲ್ಕು ಮಾತು.(ಅಧ್ಯಕ್ಷರು ಅಥವಾ ಅತಿಥಿಗಳು)
೧೦-೪೫ -೧೧-೧೫ 'ಸಂಪದ' ದ ಐದು ಪುಟ್ಟ ಹೆಜ್ಜೆಗಳು ನಡೆದು ಬಂದ ದಾರಿ..
೧೧-೧೫ -೧೨-೧೫ ಅನಿಸಿಕೆ ಹಂಚಿಕೆ--> ಸಂಪದ ಮಿತ್ರರಿಂದ..
೧೨-೧೫-೧-೩೦ ಕವನ,ಹಾಸ್ಯಗವನ,ಚುಟುಕು.. ಒಟ್ಟಿನಲ್ಲಿ ಅವರವರ ಕಲೆ ಪ್ರದರ್ಶನ (ಚುಟುಕಾಗಿ, ಏಕೆಂದರೆ ಎಲ್ಲರಿಗೂ ಅವಕಾಶ ಸಿಗಬೇಕಲ್ಲಾ)
೧-೩೦ -೨-೦೦ ಆಶು ಕವನಗಳು ಅಥವಾ ಕನ್ನಡ ಸಾಹಿತ್ಯ ನಾಡು ನುಡಿ ಗಳ ಬಗ್ಗೆ ಒಂದು ೫-೬ ಗುಂಪು ಮಾಡಿ ಪ್ರಶ್ನೋತ್ತರ ಮಾಲೆ..
೨-೦೦ - ೩-೦೦ ಭೋಜನ..(ಎಲ್ಲಿಯೂ ಹರಿಯವರು ಉಲ್ಲೇಖಿಸಿಲ್ಲ ..ಆದರೂ ವ್ಯವಸ್ಥೆ ಇದೆ ಅಂತ ತಿಳ್ಕೋತೇನಿ ;)
*****ಯಾವುದೇ ರೀತಿಯ ಚರ್ಚೆಗೆ ಆಸ್ಪದ ಕೊಡಬೇಡಿ ;) :)
ಎಲ್ಲ ಒಳ್ಳೆಯದಾಗಲಿ..
'ಸಂ ಮಿಲನ' ನನ್ನ ಪ್ರಸ್ತಾವನೆ ಇಂದ ಆಯ್ದದ್ದು ಅಂತ ಅಂದುಕೋತೇನಿ ..ಹೌದಾದರೆ ಧನ್ಯವಾದ..ಅನುಮೋದಿಸಿದ ವೆಂಕಟೇಶ ಮೂರ್ತಿಯವರಿಗೂ ಕೃತಜ್ನ್ಯತೆ..
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಸಂಪದಿಗರೆಲ್ಲರಗೂ ನಮಸ್ಕಾರ,
ಈ ಅವಕಾಶಕ್ಕಾಗಿ ಕಾಯ್ತಾಯಿದ್ದೆ, ನಿಮ್ಮೆಲ್ಲರನ್ನು ನೋಡುವಾಸೆ, ನಾನೂ ಕೂಡಾ ಹಾಜರಾಗುತ್ತೇನೆ.
ನಿಮ್ಮ
ವೀರಭದ್ರಪ್ಪ ಅಂಗೂರ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹರಿ, ನಮಸ್ಕಾರಗಳು.
ಕಾರ್ಯಕ್ರಮದ ಸ೦ಪೂರ್ಣ ವೆಚ್ಚವನ್ನು ಹೇಗೆ ಭರಿಸುತ್ತೀರಿ? ಅದರ ಬಗ್ಗೆ ಯಾವುದೇ ವಿಚಾರದ ಪ್ರಸ್ತಾಪವಿಲ್ಲವಲ್ಲ! ಎಲ್ಲಾ ಸ೦ಪದಿಗರೂ ಸೇರಿ ಇಷ್ಟಿಷ್ಟು ಅ೦ಥ ನಿರ್ಧರಿಸೋದು ಉತ್ತಮವಲ್ಲವೇ? ಒಬ್ಬರೇ ಭರಿಸುವುದು ಆರ್ಥಿಕವಾಗಿ ತು೦ಬಾ ಹೊರೆಯಾಗುತ್ತದೆ. ಆದ್ದರಿ೦ದ ಅದರ ಬಗ್ಗೆ ತಮ್ಮ ನಿರ್ಧಾರವನ್ನು ಕೂಡಲೇ ಖಚಿತಪಡಿಸಿ! ಯಾಕೆ೦ದರೆ ಹಣ ಹೊ೦ದಿಸಬೇಡವೇ?
ವ೦ದನೆಗಳೊ೦ದಿಗೆ, ನಿಮ್ಮವ ನಾವಡ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹೌದು ಅದೂ ಮುಖ್ಯ .ಎಲ್ಲರೂ ಹಂಚಿಕೊಂಡರೆ ಹೊರೆ ಕಡಿಮೆ ಆಗುತ್ತದೆ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹರೀಶ್
ನಾನೂ ರೆಡಿ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ರೂಪ, ನಾನೂ!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹರೀಶರೇ
ಬರ್ಕೊಳ್ಳಿ ಸಾರ್
ನಮ್ಮ ಕಡೆಯಿಂದ ಇಬ್ಬರು,
ನಾನು, ಬೆಳ್ಳಾಲ ಗೋಪಿನಾಥ ರಾವ್
ಮತ್ತು ನನ್ನ ಶ್ರೀಮತಿಯವರು .
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹರಿ...
ಕೊನೆಗೂ ಜೂನ್ ೬ಕ್ಕೇ ನಿರ್ಧಾರ ಮಾಡಿಬಿಟ್ಟಿರಾ....? ನಾನು ೪ಕ್ಕೇ ಊರಿಗೆ ಹೋಗ್ತೀನಿ.. ೭ಕ್ಕೆ ಅಕ್ಕನ ಮಗಳ ಮದುವೆ....!!! ಛೆ.. ಎಷ್ಟೊಂದು ನಿರಾಸೆ ಆಯ್ತಲ್ಲಾ ಹರಿ....
ಜೂನ್ ೭ಕ್ಕೆ ಬಿಟ್ಟು... ಮತ್ತೆ ಯಾವಾಗಾಗಿದ್ದರೂ ನಾನು ಇರುತ್ತಿದ್ದೆ..... :-( :-( :-(
ಶ್ಯಾಮಲ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಶಾಮಲಾ,
ಮದುವೆ ೭ ಕ್ಕೆ. ಸಮ್ಮಿಲನ ೬ ಕ್ಕೆ. ಇಲ್ಲಿ ಇರ್ಬೇಕೆಂಬ ಮನಸ್ಸಿದ್ದರೆ ಖಂಡಿತಾ ಇರಬಹುದು. ಆದರೆ, ತಂಗಿ ಮದುವೆ ಜವಾಬ್ದಾರಿ ನನಗೆಲ್ಲಿ ಗೊತ್ತಾಗುತ್ತೆ! ಅಲ್ವಾ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಗೋಪಿನಾಥರೆ ನಿಮ್ಮ ಕಡೆಯಿಂದ ಒಟ್ಟು 5 ಜನ.
ನಮ್ಮ ಕಡೆಯಿಂದ ಇಬ್ಬರು,
ನಾನು, ಬೆಳ್ಳಾಲ ಗೋಪಿನಾಥ ರಾವ್
ಮತ್ತು ನನ್ನ ಶ್ರೀಮತಿಯವರು .
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಅವರು ಯಾರು "ನಮ್ಮ ಕಡೆಯಿಂದ ಇಬ್ಬರು" ಅಂತ ಹೇಳಲೇ ಇಲ್ಲ. ಗುಟ್ಟೋ... ಅಲ್ಲಾ ಭದ್ರತೆ ಸಿಬ್ಬಂದಿಯೋ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಗೋಪಿನಾಥ್,
ನಿಮ್ಮನ್ನು ನೋಡಿದಂತಾಗುತ್ತೆ!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಆತ್ಮೀಯ
ಪಕ್ಕದಲ್ಲೇ ನೊ೦ದಾಯಿಸಲು ಅರ್ಜಿ ಇದೆ ಅದರಲ್ಲಿ ನಿಮ್ಮ ಹೆಸರು ನ೦ ನಿಮ್ಮ ಐಡಿಯಾಗಳನ್ನು ಬರೆದು ಕಳುಹಿಸಿ
ನಿಮ್ಮವ
ಹರಿ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಕಾರ್ಯಕ್ರಮದ ವೆಚ್ಚದ ಕಥೆ ಏನ್ರೀ ಆತ್ರೇಯರೇ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಆತ್ಮೀಯ
ಹೇಳ್ತೀವಿ ಸರ್. ಕೊಠಡಿಯ ಬಾಡಿಗೆ ಗ೦ಟೆಯ ಲೆಕ್ಕದಲ್ಲಿ ಅ೦ತ ಹೇಳಿದಾರೆ.ಸ್ವಲ್ಪ ಚೌಕಾಸಿ ನಡೀತಿದೆ. ಇನ್ನೊ೦ದೆರಡು ದಿನದಲ್ಲಿ ಎಲ್ಲಾ ಪಕ್ಕಾ ಆಗುತ್ತೆ
ನಿಮ್ಮವ
ಹರಿ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹರೀಶ್ ರವರೇ 'ಸ೦'ಮಿಲ CIS ನಲ್ಲಿ ಮಾಡಿದ್ರೆ ಹೇಗೆ ಅಲ್ಲಿ ಕೊಠಡಿಯನ್ನು ಉಚಿತವಾಗಿ ನೀಡುತ್ತಾರೆ. ತುಂಬಾನೇ ಚೆನ್ನಾಗಿದೆ ಜಾಗ ಹರಿಪ್ರಸಾದ್ ನಾಡಿಗ್ ಗೆ ತುಂಬಾನೇ ಪರಿಚಯವಿದೆ ಕಳೆದ ಸಂಪದ ಮಿಲನ ಹಾಗೂ ಸಂಪದದ ಹಲವು ಬೇಟಿಗಳು ಅಲ್ಲಿಯೇ ಆದವು. ಈಗ CIS ದೊಮ್ಮಲೂರಿಗೆ ಶಿಪ್ಟ್ ಆಗಿದೆ ಜಾಗ ತುಂಬಾನೇ ಚೆನ್ನಾಗಿದೆ ಖರ್ಚು ಸಹ ಆಗೋದಿಲ್ಲ ಒಮ್ಮೆ ಯೋಚಿಸಿ.
ನಾಗರಾಜ್
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ನಾಗರಾಜ್,
ಹೊಸ ಜಾಗ ಇರಲಿ. ಎಲ್ಲಾ ಸೇರಿ ಬಾಡಿಗೆ ಕೊಡೋಣ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹರೀಶ್,
ಅರ್ಜಿಯಲ್ಲಿ ಹೆಸರಿನ ಬಾಕ್ಸ್ ನ ಜೊತೆಗೆ ಎಷ್ಟು ಜನ ಜೊತೆಯಲ್ಲಿ ಬರುತ್ತಾರೆ ಅನ್ನೋ ಬಾಕ್ಸ್ ಇದ್ದರೆ ಚೆನ್ನಾಗಿರ್ತಿತ್ತು.
-ಚೈತನ್ಯ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಆಕಸ್ಮಿಕಗಳೇನೂ ನಡೆಯದಿದ್ದಲ್ಲಿ ನಾನಂತೂ ಬರುತ್ತೇನೆ ನನ್ನ ಕಾಲ್ಪನಿಕ ಸಖಿಯೊಂದಿಗೆ
ನನ್ನ ಪತ್ನಿ ಇರುತ್ತಾಳೆ ಮನೆಯಲ್ಲೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಮಗಳೊಂದಿಗೆ
:)
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಏನಿದ್ದರೂ ಮೊದಲು ನಿಮ್ಮನ್ನು ನೋ೦ದಾಯಿಸಿಕೊಳ್ಳಿ! ಅದೇ ನಮಗೆ ಖಚಿತತೆ!
ನೀವು ಬರಬೇಕೆ೦ಬುದು ಹಾಗೂ ನಿಮ್ಮನ್ನು ಮುಖತ: ನೋಡಬೇಕೆ೦ಬುದೇ ನನ್ನ ಆಸೆ. ಭಾವಚಿತ್ರದಲ್ಲಿನ ರಾಜಗಾ೦ಭೀರ್ಯ ನಮ್ಮೊ೦ದಿಗೆ ಬೆರತಾಗಲೂ ಇರುವುದೇ? ಎ೦ಬ ನನ್ನ ಪ್ರಶ್ನೆಯ ಉತ್ತರವನ್ನು ಕ೦ಡುಕೊಳ್ಳಲಿಕ್ಕಾದರೂ ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿದ್ದೇನೆ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ದಯವಿಟ್ಟು ಬರಬೇಡಿ ಅತೀ ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡು
ನಾನು ಬಾಳುವುದು ತೀರ ಸರಳ ಆದರ್ಶಗಳನ್ನಿಟ್ಟುಕೊಂಡು!!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಇಲ್ಲ! ಇಲ್ಲ! ನನಗೆ ನಿರೀಕ್ಷೆ ಸಿಕ್ಕಾಪಟ್ಟೆ
ಅದಿದ್ದರೆ ಆಗುವ ಫಜೀತಿಯೂ ಸಿಕ್ಕಾಪಟ್ಟೆ!!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಸುರೇಶ ಹೆಗ್ಡೇರು ಜಗಜಟ್ಟಿ,
ಅವರ ಮಾತು ಬಲು ಗಟ್ಟಿ,
ಅವರೊಡನೆ ಗುದ್ದಾಡಿ,
ಆಗದಿರಿ ಮೂರಾಬಟ್ಟೆ!
:):):)
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಅದಕ್ಕೇ ಹೆಚ್ಚಿನೆಲ್ಲಾ ಸಂಪದಿಗರು ಮೊರೆಹೋಗಿರುವ ದೇವರು ಆ ಸ್ವಘಟ್ಟಿ!
:)
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಸಕತ್ ಪಂಚಿಂಗ್ ಲೈನ್!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಅದೆಲ್ಲಾದ್ರೂ ಉ೦ಟೇ ಸ್ವಾಮಿ! ಏನೋ ಅವರಿ೦ದ ನಾವೂ ಒ೦ಚೂರು ಕವನ ಕಲಿಯುವ ಎ೦ದು ! ಆ ಹೂವಿನ ಜೊತೆಗೊ೦ದು ನಾರು ನಾವು! ಅಷ್ಟೇ.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
>>ಅವರೊಡನೆ ಗುದ್ದಾಡಿ,
ಆಗದಿರಿ ಮೂರಾಬಟ್ಟೆ!<<
"ಅವರೊಡನೆ ಗುದ್ದಾಡಿ
ಆಗದಿರಿ ಮಣ್ಣಂಗಟ್ಟಿ"
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಪ್ರಾಸ ಬೋಧನೆಯೋ...?
ಹೀಗಿದ್ದರೆ ಹೇಗೆ?
"ಅವರೊಡನೆ ಗುದ್ದಾಡಿ
ನೆಕ್ಕುವಿರೋ ರಾಡಿ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಪ್ರಾಸ ಆಗಲೀ ತ್ರಾಸ ಆಗಲೀ ನಾವು ತಿನ್ನೋದು ಮಣ್ಣೇ ಅ೦ಥಲ್ವೇ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
"ಅವರೊಡನೆ ಗುದ್ದಾಡಿ
ಆಗದಿರಿ ವೇಸ್ಟ್ ಬಾಡಿ"
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಸುರೇಶ್, ನಿಮ್ಮ ಸಂಪದದ ಪೋಟೋ ನೋಡಿ ಬಹಳಷ್ಟು ಜನ ಸಂಪದಿಗರು ನಿಮ್ಮ ಬಗ್ಗೆ ಹಲವಾರು ನಿರೀಕ್ಷೆ ಇಟ್ಟಿದ್ದಾರೆ. ಹೇಗೆ ಸಂಭಾಳಿಸುತ್ತೀರೋ ಗೊತ್ತಿಲ್ಲ. ಆದರೆ ಅಲ್ಲಿ ನಿಮ್ಮ ಅವಶ್ಯಕತೆಯಿದೆ ಸಾಕಷ್ಟು ಇದೆ ಅಂತ ಅನ್ನಿಸುತ್ತದೆ.
ತಮಾಷೆಗೊಂದು ಕವನ
ಸುರೇಶ್ ಕುಟುಂಬ ಸಮೇತ ಹಾಜರಾಗಲಿ ಸಂಪದದ ಮಿಲನದಲ್ಲಿ
ಅವರಿಗೊಂದು ನಾವೆಲ್ಲರೂ ಕೊಡುವ ವಿಶೇಷ ಉಡುಗರೆಯನ್ನಲ್ಲಿ
ಅದಕ್ಕೊಂದು ಅವರು ಬರೀತಾರೆ ಕವನ
ಅದನ್ನ ಓದಿ ನಾವೆಲ್ಲರೂ ಧನ್ಯ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಕೊನೆ ವಾಕ್ಯ ಪ್ರಾಸಬದ್ದವಾಗಲಿಲ್ಲ, ಕಣಮ್ಮೋ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಆಕಸ್ಮಿಕಗಳೇನೂ ನಡೆಯುವುದಿಲ್ಲ.ಎಷ್ಟೊಂದು ದಿನ ಆಯ್ತಲ್ವಾ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ನಿಮ್ಮ ಕಾಲ್ಪನಿಕ ಸಖಿಗೆ ಊಟ ಸಿಗೋದಿಲ್ವಲ್ಲ!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಸೋದರ ಮಾವ ತೀರ್ಕೊಂಡ್ರು ಅಂತ ಊರಿಗೆ ಬಂದೋಳು ಇನ್ನು ಬೆಂಗಳೂರಿಗೆ ವಾಪಸ್ಸಗಿಲ್ಲ್ರೀ,
ತಿರುಗಿ ಬರೋದು ಜೂನ್ ೯ ಕ್ಕ, ನಿಮ್ಮೆಲ್ಲರನ್ನು ಭೆಟ್ಟಿಯಾಗೋ ಅವಕಾಶ ತಪ್ತಲ್ಲಾ, ಛೇ..
ಹರಿ ಛಲೋ ಪ್ಲಾನ್ ಮಾಡಿರೀ, ಕುಟುಂಬದವರೆಲ್ಲರು ಒಂದ್ ಕಡೆ ಸೇರ್ತಿದ್ದಿರಾ ಅನುಭವ ಹಂಚಿಕೊಳ್ಳ್ರೀ....
-ಅಶ್ವಿನಿ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಮ೦ಜು, ಕಾಲೆಳೆಯೋದು ಅ೦ದ್ರೆ ಹೀಗೇನಾ?
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ರಾಜಿ, ನಾನೇ ವೇಸ್ಟ್ ಆದ ಮೇಲೆ ನನ್ನ ಬಾಡಿ ಕಥೆ ಯಾಕ್ಬಿಡ್ರೀ!!!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ನಾವಡರೆ ತಮಾಷೆಗೆ ಪ್ರಾಸಕ್ಕೆಂದು ಬರೆದಿದ್ದು, ಅದನ್ನು ನೀವು ಸೀರಿಯಸ್ಸಾಗಿ ತೊಗಬೇಡಿ ಸಾರ್. ಸುರೇಶ್ ರವರ ಪ್ರಾಸ ಮುಂದೆ ಏನಿರಬಹುದೆಂಬ ಕುತೂಹಲಕ್ಕೆ ಬರೆದೆ. ಅದರ ಅರ್ಥ ಅವರೊಡನೆ ಏನಾದರೂ ತಿಳಿದುಕೊಳ್ಳಿ. ಬದಲಾಗಿ ಗುದ್ದಾಡಿ ವೇಸ್ಟ್ ಬಾಡಿಯಾಗಬೇಡಿ ಎಂದು.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ರಾಜಿ, ಪ್ರಾಮಾಣಿಕವಾಗಿ ಹೇಳ್ತೇನೆ, ನಾನದನ್ನು ಗ೦ಭೀರವಾಗಿ ತಗೊ೦ಡೇ ಇಲ್ಲ! ನನ್ನ ಪ್ರತಿಕ್ರಿಯೆಯಲ್ಲಿನ ಹಾಸ್ಯವನ್ನು ನೋಡಿಯೂ ನಿಮಗೆ ಗೊತ್ತಾಗಿಲ್ವ?
ಎಲ್ಲವೂ ತಮಾಷೇಗಾಗಿ.
ನಮಸ್ಕಾರಗಳು.
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಹ್ಮ್ಮ್, ಚರ್ಚೆ ಎಲ್ಲೆಲ್ಲೋ ಹೋಗ್ತಾ ಇದೆ !!!
-ಚೈತನ್ಯ
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಇಲ್ಲ ಚೈತೂ! ನಾನಾವಾಗಲೇ ವಿತ್ ಡ್ರಾವಲ್ ಫಾರಮ್ಮಿಗೆ ಸೈನ್ ಹಾಕಾಯ್ತು!
ಉ: 'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ
ಸಂಮಿಲನದ ಆರಂಭದ ಉತ್ಸಾಹ ಆಗಲೇ ತಗ್ಗಿರುವ ಹಾಗೆ ಕಾಣುತ್ತೆ!
Pages