20
June
2013

ಫರ್ಸ್ಟ್ ಟೈಮ್ ಲಂಚ

April 7, 2009 - 11:40am
Harsha Vardhan
ನಾನು ಮೈಸೂರ್ ಇನ್ಫೋಸಿಸ್ನಿಂದ ಜಾಲಿಯಾಗಿ ಅಣ್ಣವರ "ಎಂದು ನಿನ್ನ ನೋಡುವೆ ಹಾಡನ್ನ" ಗುನುಗುತ್ತ ಸಿಟಿ ಕಡೆಗೆ ಬರ್ತಾ ಇದ್ದೆ. ಇದ್ದಕ್ಕಿದಂಗೆ ನಮ್ಮ ಟ್ರಾಫಿಕ್ ಪೋಲಿಸ್ ಕೈ ತ್ಹೊರ್ಸ್ದ, ನೋಡುದ್ರೆ ನಾನು ಯಾವ ಹೆಲ್ಮೆಟ್ಟು ಹಾಕಿರಲಿಲ್ಲ ಸರಿ ಎಂಗೂ ತಪ್ಪಿಸಿಕೊಳ್ಳ ಬೇಕಲ್ಲ ಎಂದು ನಾನು ಗಾಡಿನ ಹಿಂದಕ್ಕೆ ತಿರುಗಿಸಿ ವೇಗವಾಗಿ ಬಂದ್ರೆ ಅಲ್ಲಿ ಇನ್ನೊಬ್ಬ ಪೋಲಿಸ್ ನಿಂತಿದ್ರು "ಹೋದ್ಯ ಪಿಶಾಚಿ ಅಂದ್ರೆ ಬಂದ್ಯಾ ಗಾವಸ್ಕ್ಷಿ" ಅಂತ ಸಿಕ್ಕಿ ಹಾಕಿ ಕೊಂಡೆ, ನೋಡುದ್ರೆ ನಾನು ಬಂದಿದ್ದು ಒನ್ ವೇ ಹಾಗಿತ್ತು, ಸರಿ ಜಾಸ್ತಿ ತಕರಾರು ಮಾಡಿದರೆ ಕಷ್ಟ ಅಂತ ಆ ಪೋಲಿಸ್ ಕರ್ಕೊಂಡು, ಮುಂದೆ ಇದ್ದ ಪೋಲಿಸ್ ಕಡೆ ಬಂದೆ ಅವ್ನು ೨೦೦(ಒನ್ ವೇ+ ಹೆಲ್ಮೆಟ್) ಫೈನ್ ಕಟ್ಟಿ ಅಂದ, ಡೀ ಲ್ ಇಲ್ಲ ಅಂದ್ರೆ ೪೦೦, ಇನ್ಸೂರೆನ್ಸ್ ಇಲ್ಲ ಅಂತ ಆದ್ರೆ ೫೦೦ ಅಂತ ಹೇಳಿದ, ಪರವಾಗಿಲ್ಲ ಚೌಕಾಸಿ ಮಾಡೋಣ ಅಂತ ಏನು ಮಾತಾಡದೆ ಸುಮ್ನೆ ಡಿಕ್ಕಿಯಲ್ಲಿ ಪಪೆರ್ಸ್ ಹುಡುಕೂತ ಸ್ವಲ್ಪ ನಾಟಕ ಆಡಿದೆ. ಅಮೇಕೆ ಕೈಯಲ್ಲಿ ಎಷ್ಟು ಅಯ್ತೆ ಅಷ್ಟು ಕೊಟ್ಟು ಹೋಗ್ರಿ ಅಂತ ಹೇಳಿದ.... ಒಂದು ಅರ್ದ ತಾಸು ಆದ್ಮೇಲೆ ಅವ್ನೆ ಯಾಕ್ರೀ ಏನು ಇಲ್ವಾ ಅಂದ... ಅಣ್ಣ ನನ್ನತ್ರ....ನನ್ನ ಹತ್ರ ಒಂದು ನಯ ಪಯ್ಸಾನು ಇಲ್ಲ, ಪೆಪರ್ಸು ಇಲ್ಲ ಅಂದೇ, ನಿಮಗೆ ದುಡ್ಡು ಬೇಕಾದ್ರೆ ನನ್ ಗೆಳೆಯಾನಿಗೆ ಫೋನ್ ಮಾಡಿ ತರ್ಸಬೇಕು ಅಂದೇ, ಸರಿ ಪೆರ್ಮಿಸ್ಸಿಒನ್ ಕೊಟ್ಟ, ಫೋನ್ ಮಾಡಿ ಹೇಳಿದ್ದಕ್ಕೆ ನನ್ ಗೆಳಯ ಒಂದು ಅರ್ಧ ಗಂಟೆ ಬಿಟ್ಟು ಬರ್ತೀನಿ ಅಂದ ಆಗ್ಲೇ ಟೈಮ್ ೭ ಆಗಿತ್ತು, ನಮ್ ಪೋಲಿಸ್ ಅವ್ರ್ಗೂ ಮನೆ ಮಠ ಇರುತ್ತೆ ಅಲ್ವ ಅವ್ರ ಹೆಂಡ್ರು ಮಕ್ಳು ನೆನಪಾಗಿರಬೇಕು ಅದಕ್ಕೆ ಸ್ವಲ್ಪ ದ್ವನಿನ ಜೋರಾಗಿ ಮಾಡಿ "ಬೇಗ ಬರೆಕೆ ಹೇಳ್ರಿ ನಿಮ್ ಗೆಳಯನ್ನ ಆಗಲೇ ಟೈಮ್ ಆಯಿತು ಅಂತ ಬಯ್ಯೋದಕ್ಕೆ ಶುರು ಮಾಡದ ಸರಿ ಸುಮಾರು ೪೫ ನಿಮಿಷಗಳ ಕಾಲ ಹಾಗೆ ಸತಾಯ್ಸಿ ಮೇಲೆ ನನ್ನ ಗಾಡಿ ಜೊತೆಗೆ ಸ್ಟೇಷನ್ಗೆ ಕರ್ಕೊಂಡು ಹೋದ್ರು , ನೋಡುದ್ರೆ ನನ್ ಗೆಳಯ ಅಲ್ಲೇ ಇದ್ದ ೨೦೦ ಗಿಂಬಳ ಕೊಟ್ಟು....ಹೊರಗೆ ಬದ್ರೆ ನನ್ಗೆಲ್ಯ ನಮ್ಮ ಕುಮಾರಣ್ಣಗೆ(ದೇವೇಗೌಡರು ಸನ್ನು) ಫೋನ್ ಮಾಡಿದರೆ ಚೆನಾಗಿರ್ತಿತ್ತು ಅಂದ ಅದಕ್ಕೆ ಯಾಕಣ್ಣ ಸುಮ್ಕೆ ಅವರಿಗೆ ದೊಡ್ಡ ಕೆಲ್ಸಾದಗೆ ಬ್ಯುಸಿ ಅವ್ರೆ ಈತರ ಸಣ್ಣ ವಿಷಯಕ್ಕೆ ಯಾಕೆ ಡಿಸ್ಟರ್ಬ್ ಮಾಡೋದು ಅಂತ ಹೇಳಿ ಸುಮ್ನೆ ಮನೆಗೆ ಬಂದೆ...:) ಜೀವನಾದಗೆ ಫರ್ಸ್ಟ್ ಟೈಮ್ ಪೋಲಿಸ್ಗೆ lunch ತಪ್ಪು ತಪ್ಪು ಲಂಚ ಕೊಟ್ಟಿದು ಅಂತ ಸಂತೋಷ ಆಯಿತು.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by thesalimath on
ತಪ್ಪು ತಪ್ಪು ..ಘೋರ ತಪ್ಪು !!! ಹೆಮ್ಮೆ ಪಡುವುದು ಇನ್ನೂ ತಪ್ಪು !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಅಬ್ಬಬ್ಬ! :( ೧. ಹೆಲ್ಮೆಟ್ ಹಾಕ್ಕೊಳ್ದೀರ ಗಾಡಿ ಓಡಿಸಿದ್ದು ತಪ್ಪು ೨. ಪೋಲೀಸ್‍ನವರು ನಿಲ್ಲಿಸಕ್ಕೆ ಹೋದರೆ ತಪ್ಪಿಸ್ಕೊಂಡಿದ್ದು ತಪ್ಪು ೩. ಒನ್ ವೇ ನಲ್ಲಿ ಓಡಿಸಿದ್ದು ತಪ್ಪು ೪. ತಪ್ಪು ಮಾಡಿ ರಾಜಕೀಯದ ಇನ್ಫ್ಲೂಯೆನ್ಸ್ ಪಡೆದು ತಪ್ಪಿಸ್ಕೊಳ್ಳೋ ಯೋಚನೆ ಮಾಡಿದ್ದು ತಪ್ಪು ೪. ಲಂಚ ಕೊಟ್ಟಿದ್ದು ತಪ್ಪು ೫. ಲಂಚದ ಬಗ್ಗೆ ಹೆಮ್ಮೆಯಿಂದ ಬರೆದದ್ದೂ... :( :( :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಏಪ್ರಿಲ್ ಫೂಲ್ ಬರಹ ಅಂದುಕೊಳ್ತೀನಿ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಏಪ್ರಿಲ್ ಫೂಲ್ ಏಪ್ರಿಲ್ ಒಂದರಂದು ಮಾತ್ರ ಅಲ್ವಾ? ತಿಂಗಳು ಪೂರ್ತಿ ಏಪ್ರಿಲ್ ಫೂಲ್ ಮಾಡ್ತಾರಾ? -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಮೈಸೂರ್ನಲ್ಲಿ ಕೆಲವೊಮ್ಮೆ ಎಲ್ಲಾ ಡಾಕ್ಯುಮೆಂಟ್ ತೋರ್ಸಿದ್ರು ಸುಮ್ನೆ ಲಂಚ ಕೇಳ್ತಾರೆ :(. ಹಲವು ಬಾರಿ ಅನುಭವ ಆಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಇದು ತಮಾಶೆಯೆನಿಸಬಹುದು. ಆದ್ರೆ ಭಾರೀ ತಪ್ಪು. :( ಡೀಎಲ್ಲೇ ಇಲ್ದಿರೋ (ಮಾಡ್ಸಿಲ್ಲಾ ಅಂದ್ರೆ) ಮನುಶ್ಯ ಓಡ್ಸೋ ಗಾಡಿ ಆಕ್ಸಿಡೆಂಟ್ ಆದ್ರೆ, ಇನ್ಸ್ಯೂರೆನ್ಸ್(ಇದ್ರುನೂ) ಸಿಗಲ್ಲ. ೧. ಡಿ.ಎಲ್ ೨. ಆರ್.ಸಿ ೩. ಇನ್ಸ್ಯೂರೆನ್ಸ್ ೪. ಎಮಿಶನ್ ಇವು ನಾಲ್ಕು ಇಡ್ಕೊಂಡು ಹೆಲ್ಮೆಟ್ ಹಾಕ್ಕಂಡು ’ಸರಿಯಾಗಿ’ ಗಾಡಿ ಓಡ್ಸಿದರೆ, ಯಾರೂ ಏನೂ ಮಾಡಲ್ಲ, ನಿಮಗೂ ಏನೂ ಆಗಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ನಾನು ಬಾರಿ ಉಷಾರು ನನ್ನ ಹತ್ರ ಡಿ.ಎಲ್ ಇಲ್ಲ ಕಳೆದು ಹೋಗಿ ಒಂದು ವರ್ಷ ಆಯಿತು ಇನ್ನೂ ಮಾಡಿಸಿಲ್ಲ ಜೆರಾಕ್ಸ್ ಪ್ರತಿ ಕೂಡ ಇಲ್ಲ ಆದ್ರೂ ಗಾಡಿ ಓಡಿಸ್ತಾ ;) ನಮ್ಮ ಏರಿಯಾದಲ್ಲಿ ಅಂದ್ರೆ ಇಂದಿರಾನಗರ, ದೊಮ್ಮಲೂರು, ಸಿ.ವಿ ರಾಮನ್ ನಗರ, ಹಳೇ ಮದ್ರಾಸು ರಸ್ತೆ ಈ ಕಡೆಯಲ್ಲಿ ಎಲ್ಲಿ ಯಾವ ಸಮಯಕ್ಕೆ ಮಾಮಾಗಳು(ಪೋಲಿಸರು) ಇರ್ತಾರೆ ಅಂತ ತಿಳಿದುಕೊಂಡಿದ್ದೀನಿ. ಅದರಂತೆ ನಾನು ಇಲ್ಲದ ಕಡೆ ನುಗ್ಗಿ ಬಚಾವ್ ಆಗ್ತಾ ಇದ್ದೀನಿ :) ವಿ.ಸೂ: ನನ್ನ ಹತ್ರ ಡಿ.ಎಲ್ ಇಲ್ಲ ಅಂತ ಮಾಮಾಗಳಿಗೆ ಹೇಳಬೇಡಿ :( ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಒಬ್ಬರು ಲಂಚ ಕೊಟ್ಟೆ ಅಂತ ಹೆಮ್ಮೆ ಪಟ್ಟರೆ ಇನ್ನೊಬ್ಬರು ಡಿ. ಎಲ್. ಇಲ್ಲ ಅಂತ ಖುಷಿ ಪಡ್ತಿದ್ದಾರೆ. :( ತಪ್ಪು. ಈ ರೀತಿ ಮಾಡಬಾರದು. ಸರಿಯಾದ ಡಾಕ್ಯುಮೆಂಟ್ಸ್ ಇಟ್ಕೊಂಡು ವಾಹನ ಓಡಿಸ್ಬೇಕು. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinutha.mv on
ಇದೊಂದು ಹಾಸ್ಯ ಅಥವಾ ವಿಡ೦ಬನೆಯಾಗಿದ್ದರೆ ಚೆನ್ನ. ಇಲ್ಲವಾದಲ್ಲಿ ಪಡೆದಿರುವ ವಿದ್ಯೆ, ಬುಧ್ಧಿ, ನಾಗರೀಕತೆ ಎಲ್ಲವೂ ವ್ಯರ್ಥ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harsha Vardhan on
ಸಂಪದಿಗರೆಲ್ಲರಿಗೂ ನಮಸ್ಕಾರ, ನನ್ನ ಗೆಳೆಯ ಮತ್ತು ನಾನು ಬರುತ್ತಿರುವ ನಿಜವಾಗಲೂ ನಡೆದ ಘಟನೆ ಈದನ್ನು ಸ್ವಲ್ಪ ವಿಡಂಬನೆಯಾ ರೀತಿಯಲ್ಲಿ ಬಳಸಿದ್ದೇನೆ, *ಇಲ್ಲಿನ ಪೋಲಿಸ್ರ ಕರ್ತವ್ಯ ಪರತೆ(ಸುಮ್ನೆ ಸಾವಿರಾರು ರೂಪಾಯಿ ದಂಡ ಯಾಕೆ ತೆತ್ತುತಿರ ಸುಮ್ನೆ ೧೦೦ ೨೦೦ ಕೊಟ್ಟಿ ಹೋಗಿ ಎಂಬ ಉದಾತ್ತ ಭಾವನೆ, ತಿಂಗಳ ಕೊನೆಯಲ್ಲಿ ಮಾತ್ರ) ನಾಗರೀಕ ಮಹಾಶಯರ ಸಾಮಾಜಿಕ ಪ್ರಜ್ಞೆಗೆ ಹಿಡಿದ ಕೈಗನ್ನಡಿ. ೧. ಜಗತ್ತು ಹಾಳದರೇನು ಕೇವಲ ತಾವು ಬದುಕಬೇಕು ಎಂಬ ವಿವೇಚನೆ ಬೆಳಸಿಕೊಂಡ ಸ್ವಾರ್ಥ ಪ್ರಜ್ಞೆ ಇರುವ ಮಹಾಶಯ ೨. ಲಂಚ ಎಂಬ ದೂಳಿತನಕ್ಕೆ ಒಳಾಗಗಿರೋ systemನ ಒಂದು ಚಿಕ್ಕ ಬೇರು ೩. ಲಂಚಕ್ಕಾಗಿ ಹಾತೊರೆಯುವ ಸರ್ಕಾರಿ ನೌಕರರು(ಎಲ್ಲರೂ ಅಲ್ಲ ) ೪. ಯಾರಿಗಾದರು ತೊಂದರೆ ಆಗಲಿ ತನ್ನ "ರಾಜಾ" ಕೀಯ ಪವರ್ ಬೆರಸಿ ಕೊಳೆಸಿ ಸಮಾಜವನ್ನು ನಾರಿಸುತ್ತಿರುವ ಪುಂಡರು ೫. ಏನು ಮಾಡಲಾಗದೆ ಸುಮ್ಮನೆ ಕೈ ಕಟ್ಟಿ ಕುಳಿತಿರುವ, ಕೇವಲ ಮಾತಿನಲ್ಲಿ ತತ್ವ ಹೇಳುವ ಒಂದು ವರ್ಗ(ನಮಗೇಕೆ ದೊಡ್ಡವರ ವಿಷ್ಯ, ಮಡುದಂಗೆ ಇರು ಸಿವ ಅಂತ)................ ಅಬ್ಬ ಎಷ್ಟು ನ್ಯೂನ್ಯತೆಗಳು......:(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.