ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಎನ್ನ ಕಾಡುತಿರುವಪ್ರಶ್ನೆಗಳು

ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?

ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?

ಕಾಲ ಬದಲಾದಂತೆ ನಾವು ಬದಲಾಗುತ್ತೇವೆ, ಆದರೆ ಗಡಿಯಾರದಲ್ಲಿ ಅದೇ ಸಮಯ, ಆದೆ ಮುಳ್ಳು?

ದೇವರು ಇದ್ದಾನೆ ಅಂದರೆ ಇದ್ದಾನೆ ಇಲ್ಲ ಅಂದರೆ ಇಲ್ಲ, ಯಾಕೀ ಗೊಂದಲ?

ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ದಡ್ಡನೆ?

ಕಾಸಿದ್ದರೆ ಕೈಲಾಸ, ಇಲ್ಲದಿದರೆ ನರಕವೆಕೆ?

ಹುಟ್ಟು ಸಾವಿನಾಚೆ ಏನಿದೆ?

ಅಮೆರಿಕಕ್ಕೆ ಶೀತವಾದರೆ ನಮಗೆ ಏಕೆ ನೆಗಡಿ?

ಎಲ್ಲರು ಬುದ್ದ, ವಿವೇಕಾನಂದ, ಗಾಂಧೀ....ಆಗುವುದಿಲ್ಲ ಏಕೆ?

ಹಣವಂತನಿಗೆ ರತ್ನಗಂಬಳಿ, ಬಡವನಿಗೆ ಯಾಕೆ ಕ್ಷುಲ್ಲಕ ಸ್ತಿತಿ?

ITಗೆ ಗೋಸ್ಕರ, ಇಂಡಿಯಾ ಬುದ್ದಿವಂತರ ಸಂತೆಯಾಯಿತು, ಅದಕ್ಕೆ ಮೊದಲು ನಾವೆಲ್ಲ ದಡ್ದರೆ?

ಅಮೇರಿಕಾ ಮಾತ್ರ ಯುದ್ದ ಮಾಡ ಬಹುದು, ನಾವೇಕೆ ಮಾಡುವ ಹಾಗಿಲ್ಲ?

ಅಮೇರಿಕಾ ಬಜೆಟ್ ಮಂಡಿಸಿದರೆ, ನಮ್ಮ ಬಿಸ್ನೇಸ್ಸ್ ಗೈಂಟ್'ಸ ಯಾಕೆ ಜಾತಕ ಪಕ್ಷಿಯಂತೆ ಗತಿ ಗೆಟ್ಟವರಂತೆ ಕಾಯುತ್ತಾರೆ, ಸ್ವಾಭಿಮಾನವಿಲ್ಲವೇ?

ನಮ್ಮ ದೇಶವನ್ನು ಬಿಟ್ಟು ಬೇರೆ ದೇಶವನ್ನು ಹೊಗಳುವ ಹೋಗಳು ಬಟ್ಟರು, ನಮ್ಮ ಸಂಸ್ಕೃತಿಯನ್ನು ಕಿಳುತನದಲ್ಲಿ ನೋಡುವವರಿಗೆ ಮುಕ್ತಿ ಎಂದು?

ಅಯ್ಯೋ ಹೀಗೆ ಎಷ್ಟೋ, ಉತ್ತ್ತರವಿಲ್ಲದ ಪ್ರಶ್ನೆಗಳಿವೆ...ಉತ್ತರಿಸುವಿರ ಗೆಳಯರೇ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಎನ್ನ ಕಾಡುತಿರುವಪ್ರಶ್ನೆಗಳು

msudan86's picture

ಹರ್ಷ ,

>>ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?
ಅಂತವರಿಗೆ ಸಹಾಯ ಮಾಡುತ್ತಿನಿ ಅನ್ನು ಆದರೆ ಮಾಡಬ್ಯಾಡ ಅಷ್ಟೆ

>>ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?
ದಾಡಿ ಬಿಟ್ಟು ಕುಡಿತಾ ಕೂತಿದ್ದರೆ ದೇವದಾಸ ಅಂತಾರೆ ಯಾಕೆಂದರೆ ಅವನೂ ಆ ಗೇಟಪ್ ನಲ್ಲೆ ಇದ್ದನೆನೊ ಆದಕ್ಕೆ

>>>ಕಾಲ ಬದಲಾದಂತೆ ನಾವು ಬದಲಾಗುತ್ತೇವೆ, ಆದರೆ ಗಡಿಯಾರದಲ್ಲಿ ಅದೇ ಸಮಯ, ಆದೆ ಮುಳ್ಳು?
ಕಾಲ ಬದಲಾಗುತ್ತೆ ಆದರೆ ಗಡಿಯಾರ ಬದಾಲಾಗೊದಿಲ್ಲವೆ ?

>>ದೇವರು ಇದ್ದಾನೆ ಅಂದರೆ ಇದ್ದಾನೆ ಇಲ್ಲ ಅಂದರೆ ಇಲ್ಲ, ಯಾಕೀ ಗೊಂದಲ?
ಆಗಾಂತ ಹೇಳಿದ್ದಾವರ್ಯಾರು ? ನೀನೂ ಗೊಂದಲ ಅಂತ ಅಂದು ಕೊಂಡರೆ ನಿನ್ನ ಎದುರಿರುವವರಿಗೆಲ್ಲ ಗೊಂದಲವೇನೆ , ಇಲ್ಲ ಅಂದ್ರೆ ಇಲ್ಲ

>>ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ದಡ್ಡನೆ?
ಅವನೆಲ್ಲೊ ಕಾಪಿ ಮಾಡಿ ಪಾಸಾಗಿರಬೇಕು ಅದಕ್ಕೆ ಅವನು ಬುದ್ದಿವಂತ

>>ಕಾಸಿದ್ದರೆ ಕೈಲಾಸ, ಇಲ್ಲದಿದರೆ ನರಕವೆಕೆ?
ಭೂಕೈಲಾಸ (ಕಾಸು ಇದ್ದರೂ,ಇಲ್ಲದಿದ್ದರೂ ಭೂಮಿ ಮ್ಯಾಲೆ ಇರುತ್ತೆವೆ)

>>ಹುಟ್ಟು ಸಾವಿನಾಚೆ ಏನಿದೆ?
ನೆನ್ನೆ ,ಇವತ್ತು ,ನಾಳೆಗಳ ಅನುಭವ ( ನೆನ್ನೆ --ಹುಟ್ಟು ,ಇವತ್ತು -- ನಾವಿರುವುದು, ನಾಳೆ -- ಸತ್ತ ಮ್ಯಾಲೆ)

>>ಅಮೆರಿಕಕ್ಕೆ ಶೀತವಾದರೆ ನಮಗೆ ಏಕೆ ನೆಗಡಿ?
ಅಮೆರಿಕಾದಲ್ಲಿ ನಿಂತಿದ್ದರೆ ಅದಕ್ಕೆ (ಮೂಗು ಇದ್ದ ಮ್ಯಾಲೆ ನೆಗಡಿ ಆಗಬೇಕಲ್ಲ)

>>ಎಲ್ಲರು ಬುದ್ದ, ವಿವೇಕಾನಂದ, ಗಾಂಧೀ....ಆಗುವುದಿಲ್ಲ ಏಕೆ?
ನನ್ನದು ಅನ್ನೊ ಸ್ವಾರ್ಥ ಇರುತ್ತೆಲ್ಲ ಅದಕ್ಕೆ

>>ಹಣವಂತನಿಗೆ ರತ್ನಗಂಬಳಿ, ಬಡವನಿಗೆ ಯಾಕೆ ಕ್ಷುಲ್ಲಕ ಸ್ತಿತಿ?
ಒಬ್ಬನಿಗೆ ತಿನ್ನಲಿಕ್ಕೆ ಬದುಕಬೇಕು ಅಂತ ,ಇನ್ನೊಬ್ಬನಿಗೆ ಬದುಕಲಿಕ್ಕೆ ತಿನ್ನಬೇಕು ಅಂತ

>>ITಗೆ ಗೋಸ್ಕರ, ಇಂಡಿಯಾ ಬುದ್ದಿವಂತರ ಸಂತೆಯಾಯಿತು, ಅದಕ್ಕೆ ಮೊದಲು ನಾವೆಲ್ಲ ದಡ್ದರೆ?
ಸಂತೆ ನಡೆಯೊದು ಒಂದು ದಿನ ಅಲ್ಲವೆ ....

>>ಅಮೇರಿಕಾ ಮಾತ್ರ ಯುದ್ದ ಮಾಡ ಬಹುದು, ನಾವೇಕೆ ಮಾಡುವ ಹಾಗಿಲ್ಲ?
ನಾವೂ ಶಾಂತಿ ಪ್ರಿಯರೂ ಅದಕ್ಕೆ

>>>ಅಮೇರಿಕಾ ಬಜೆಟ್ ಮಂಡಿಸಿದರೆ, ನಮ್ಮ ಬಿಸ್ನೇಸ್ಸ್ ಗೈಂಟ್'ಸ ಯಾಕೆ ಜಾತಕ ಪಕ್ಷಿಯಂತೆ ಗತಿ ಗೆಟ್ಟವರಂತೆ ಕಾಯುತ್ತಾರೆ, ಸ್ವಾಭಿಮಾನವಿಲ್ಲವೇ?
ಅವರು ನಮಗೂ ಸ್ವಲ್ಪ ಕೊಡಬಹುದೆನೊ ಅಂತ

>>ನಮ್ಮ ದೇಶವನ್ನು ಬಿಟ್ಟು ಬೇರೆ ದೇಶವನ್ನು ಹೊಗಳುವ ಹೋಗಳು ಬಟ್ಟರು, ನಮ್ಮ ಸಂಸ್ಕೃತಿಯನ್ನು ಕಿಳುತನದಲ್ಲಿ ನೋಡುವವರಿಗೆ ಮುಕ್ತಿ ಎಂದು?
ಅಂತಹವರಿಗೆ ನಾವೂ ನೀವೂ ಸೇರಿಕೊಂಡು ನಾಲ್ಕು ಬಿಟ್ಟಾಗ

-- ತಮಾಷೆಯಿಂದ
ಗೌಡ್ರು

ಉ: ಎನ್ನ ಕಾಡುತಿರುವಪ್ರಶ್ನೆಗಳು

ranjith's picture

ಇಂತಹ ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತಲೇ ಇರುತ್ತದೆ.

ನಾವು ಅದರ ಕತ್ತು ಹಿಸುಕಿ ಸಾಯಿಸುತ್ತಲೇ ಇರುತ್ತೇವೆ!

ಉತ್ತರ ಹುಡುಕಹೋದಷ್ಟೂ ಮತ್ತಷ್ಟು ಪ್ರಶ್ನೆಗಳೊಳಗೆ ಸಿಲುಕುವೆವು ಎಂಬ ಭಯವಿರಬಹುದು..:)

ಉ: ಎನ್ನ ಕಾಡುತಿರುವಪ್ರಶ್ನೆಗಳು

asuhegde's picture

>>ಕಾಲ ಬದಲಾದಂತೆ ನಾವು ಬದಲಾಗುತ್ತೇವೆ, ಆದರೆ ಗಡಿಯಾರದಲ್ಲಿ ಅದೇ ಸಮಯ, ಆದೆ ಮುಳ್ಳು?

ಗಡಿಯಾರಗಳೇ ಬದಲಾಗುತ್ತವೆ.

>>ಹುಟ್ಟು ಸಾವಿನಾಚೆ ಏನಿದೆ?

ಹುಟ್ಟು, ಸಾವಿನಾಚೆ ಮತ್ತೆ ಹುಟ್ಟು.

>>ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ದಡ್ಡನೆ?

ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ಫೇಲು.

>>ಅಮೆರಿಕಕ್ಕೆ ಶೀತವಾದರೆ ನಮಗೆ ಏಕೆ ನೆಗಡಿ?
>>ಅಮೇರಿಕಾ ಬಜೆಟ್ ಮಂಡಿಸಿದರೆ, ನಮ್ಮ ಬಿಸ್ನೇಸ್ಸ್ ಗೈಂಟ್'ಸ ಯಾಕೆ ಜಾತಕ ಪಕ್ಷಿಯಂತೆ ಗತಿ ಗೆಟ್ಟವರಂತೆ ಕಾಯುತ್ತಾರೆ, ಸ್ವಾಭಿಮಾನವಿಲ್ಲವೇ?

ಪರಾವಲಂಬನೆ. ಸ್ವತಂತ್ರನಿಗೆ ಈ ಚಿಂತೆ ಇಲ್ಲ.

>>ನಮ್ಮ ದೇಶವನ್ನು ಬಿಟ್ಟು ಬೇರೆ ದೇಶವನ್ನು ಹೊಗಳುವ ಹೋಗಳು ಬಟ್ಟರು, ನಮ್ಮ ಸಂಸ್ಕೃತಿಯನ್ನು ಕಿಳುತನದಲ್ಲಿ ನೋಡುವವರಿಗೆ ಮುಕ್ತಿ ಎಂದು?

ನಮ್ಮನ್ನು, ನಮ್ಮದನ್ನು ಹೊಗಳಲು ಬೇರೆ ದೇಶದಿಂದ ಬರುತ್ತಿರುತ್ತಾರೆ.

>>ಎಲ್ಲರು ಬುದ್ದ, ವಿವೇಕಾನಂದ, ಗಾಂಧೀ....ಆಗುವುದಿಲ್ಲ ಏಕೆ?

ಅವೆಲ್ಲ need based. ಈ ಭಾರತ ಮಾತೆಗೆ ಈಗ ಅಷ್ಟೊಂದು ಅಂತಹ ಜನರ ಅಗತ್ಯ ಇಲ್ಲ.

>>ಅಮೇರಿಕಾ ಮಾತ್ರ ಯುದ್ದ ಮಾಡ ಬಹುದು, ನಾವೇಕೆ ಮಾಡುವ ಹಾಗಿಲ್ಲ?

ಮಾಡುತ್ತಿದ್ದೇವಲ್ಲಾ, ಆಂತರಿಕ ಯುದ್ಧ, ದಿನ ಪ್ರತಿದಿನ? ಈ ರಾಜಕಾರಣಿಗಳು ಮಾಡುತ್ತಿರುವುದೇನು, ಮತ್ತೆ?

>>ITಗೆ ಗೋಸ್ಕರ, ಇಂಡಿಯಾ ಬುದ್ದಿವಂತರ ಸಂತೆಯಾಯಿತು, ಅದಕ್ಕೆ ಮೊದಲು ನಾವೆಲ್ಲ ದಡ್ದರೆ?

ಸಂತೆ ಮೊದಲೂ ಇತ್ತು. ಸಂತೆಯಲ್ಲಿ ಗಿರಾಕಿಗಳಿರಲಿಲ್ಲ.

>>ಕಾಸಿದ್ದರೆ ಕೈಲಾಸ, ಇಲ್ಲದಿದರೆ ನರಕವೆಕೆ?

ಅದಿಲ್ಲದಿದ್ದರೆ ಇದು ತಾನೆ? ಇಲ್ಲಾಂದ್ರೆ ತ್ರಿಶಂಕು, ಅದು ಆ ತ್ರಿಶಂಕುವಿಗೆ ಮಾತ್ರ.

>>ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?

ಆಗ ಮನಸ್ಸೇ ಸತ್ತಿರುತ್ತದೆ. ಎಲ್ಲಿ ಯಾವ ಗೋಣಿಚೀಲಕ್ಕೆ ಧೈರ್ಯ ತುಂಬೋಣ ಹೇಳೀ?

>>ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?
ಹಣೇ ಪಟ್ಟಿ ಕಟ್ಟುವ ಮೊದಲೇ ಜಾಗರೂಕರಾಗಿ. ಮುಂದೆ ಏನೋ ಕಾದಿದೆ ಎಂದು.

ಉ: ಎನ್ನ ಕಾಡುತಿರುವಪ್ರಶ್ನೆಗಳು

vasu565's picture

ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?
ಹಣೆಪಟ್ಟಿ ನೋಡದಿದ್ದರೆ ಅಯಿತು ... ನಿಮ್ಮ ಕೆಲಸ ನೀವು ಮಾಡಿ.

ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?
ದೇವದಾಸ ಅಂತ ಅಂದ್ರೆ ದಿನಾ ಪಾರ್ಟಿ ತಾನೆ :) ಅದಕ್ಕೆ

ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ದಡ್ಡನೆ?
ಶಾಲೆಗೆ ಬರದವರನ್ನ ಏನ್ಮಾಡೊದು ;)

ಎಲ್ಲರು ಬುದ್ದ, ವಿವೇಕಾನಂದ, ಗಾಂಧೀ....ಆಗುವುದಿಲ್ಲ ಏಕೆ?
ಎಲ್ಲಾ ಗಾಂಧಿಯಾದರೆ ದಿನಾ ರಜ ಅಲ್ವ!!! ... ತುಂಬಾ ಒಳ್ಳೇದು.

ಕಾಸಿದ್ದರೆ ಕೈಲಾಸ, ಇಲ್ಲದಿದರೆ ನರಕವೆಕೆ?
ನಮ್ಮ ಹತ್ತಿರ ಇರೊ ದುಡ್ಡನೆಲ್ಲಾ ಒಮ್ಮೆ ಬೇರೆಯವರಿಗೆ ಕೊಟ್ಟರೆ ತಿಳಿಯಬಹುದು ಅಲ್ವಾ!!!

ಹುಟ್ಟು ಸಾವಿನಾಚೆ ಏನಿದೆ?
ಹುಟ್ಟು ಸಾವಿನ ಮಧ್ಯೆ ಬದುಕಿದೆ ಏಂದರಿಯದವನಿಗೆ ... ಆಚೆ ಈಚೆ ಬೇಕ?? ಮೊದಲು ಬದುಕೊದನ್ನ ಕಲಿತರೆ ಸಾಕು.

ನಮ್ಮ ದೇಶವನ್ನು ಬಿಟ್ಟು ಬೇರೆ ದೇಶವನ್ನು ಹೊಗಳುವ ಹೋಗಳು ಬಟ್ಟರು, ನಮ್ಮ ಸಂಸ್ಕೃತಿಯನ್ನು ಕಿಳುತನದಲ್ಲಿ ನೋಡುವವರಿಗೆ ಮುಕ್ತಿ ಎಂದು?
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

ಅಮೇರಿಕಾ ಬಜೆಟ್ ಮಂಡಿಸಿದರೆ, ನಮ್ಮ ಬಿಸ್ನೇಸ್ಸ್ ಗೈಂಟ್'ಸ ಯಾಕೆ ಜಾತಕ ಪಕ್ಷಿಯಂತೆ ಗತಿ ಗೆಟ್ಟವರಂತೆ ಕಾಯುತ್ತಾರೆ, ಸ್ವಾಭಿಮಾನವಿಲ್ಲವೇ?
ಹಗಲು ಕಂಡ ಬಾವಿಗೆ ರಾತ್ರಿ ಬೀಳೊದು ಬ್ಯಾಡವೇ ....

ಅಮೆರಿಕಕ್ಕೆ ಶೀತವಾದರೆ ನಮಗೆ ಏಕೆ ನೆಗಡಿ?
ಹೌದು ... ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಯಾಕೆ ಬರೆ.