18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸುಮ್ಮನೆ ಬೇಜಾರು

February 19, 2009 - 4:35pm
Harsha Vardhan
ಸುಮ್ಮನೆ ಬೇಜಾರು, ಗೆಳಯರೇ, ಸುಮ್ಮ ಸುಮ್ಮನೆ ಬೇಜಾರಾಗುತ್ತೆ ಯಾಕೆ? ಏನು ಮಾಡಲು ತೋಚುವುದಿಲ್ಲ?... ಸುಮ್ನೆ ಕಾಲಹರಣ ಮಾಡುತ್ತೇನೆ ?? ಜೋಶ್ ಇದ್ದಾಗ ಎಲ್ಲರು ಮಾಡುವ ಕೆಲಸವನ್ನ ಒಬ್ಬನೇ ಮಾಡುತ್ತೇನೆ? ಯಾವಾಗಲು ಒಂದೇ ರೀತಿಯಲ್ಲಿ, ಜೋಶ್ನಲ್ಲಿ ಕೆಲಸ ಮಾಡಲು ಮತ್ತು ಬ್ಯಾಲೆನ್ಸ್ ಮಾಡಲು ಏನು ಮಾಡಬೇಕು ತಿಳಿಸುತ್ತೀರಾ?
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಸೋಮಾರಿ ಕಟ್ಟೆ on
ಹರ್ಷಪ್ಪೋ ಸುಮ್ಕೆ ತಲೆಗೆ ಅಂಗೆಲ್ಲಾ ಯೋಚಿಸೋಕ್ ಬಿಡ್ಬೇಡಪ್ಪೋ, ಏನಾದ್ರೂ ಕೆಲ್ಸ ಇದ್ದೇ ಇರ್ತದಾ, ನೀನು ಬೆಳುಗ್ಗೆಯಿಂದಾ ಚಂಜೆಗಂಟ ಏನು ಮಾಡ್ಬೇಕು ಅಂತಾ ಪಟ್ಟಿ ಮಾಡ್ಕಾ, ಆಮೇಲೆ ಅವೆಲ್ಲ ಮುಗ್ಸೋ ಅಟ್ರಾಗೆ, ಒತ್ತು ಮುಳುಗಿರ್ತಾದಾ, ಚಂಜಿಗೆ ಉಂಡು ಸಿವಾ ಅಂತಾ ಮಕ್ಕೊಂಬುಡು, ಆಗ ಯಾವ್ ಚಿಂತಿನೂ ಇರಾಕಿಲ್ಲಾ ಸೋಮಾರಿಕಟ್ಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ನೀ ಯಾರಾನೇ ಆಗಿರು ಯಪ್ಪಾ,ಸಿವಾಅಂತಾ ನಕ್ಕಂಡ್ ಇರು ಯಪ್ಪಾ, ಸಂಪದದಲ್ಲಿ ನಮ್ ಕಡೆ ಅಳ್ಳಿಐದರನ್ನ ನೋಡ್ದೆ ಬೇಜಾರಾಗಿತ್ತು, ಇನ್ ಬುಡು ನಮ್ಮಿಬ್ಬರ ಜೋಡಿ ಪಸಂದಾಗಿರ್ತದೆ. ಈ ಪ್ಯಾಟೆಜನ ನೋಡಿ ಒಂತರಾ ಜಿಡ್ಡುಗಟ್ಟ್ತಂಗಾಗಿತ್ತು. ಉಣ್ಣಕ್ಕೋಯ್ತ್ತೀನಿ, ನಾಳೇಮ್ಯಾಕೆ ಸಿಕ್ಕು ಸಿವಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಕೆಳಗಿನ ಕೊಂಡಿಯಲ್ಲಿ ಓದಿ ನಂತರ ಪ್ರತಿಕ್ರಿಯಿಸಿ http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ನಿಮ್ಮ ಮಾತು ಕೇಳೀ ಈಗ ನನಗೂ ಬೇಜಾರು ಆಗ್ತಿದೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ranjith on
ನಿಮ್ಮ ಬೇಜಾರಿಗೆ ಪರಿಹಾರ ಹುಡುಕಲು ಅಲೋಚನೆ ಮಾಡತೊಡಗಿದಾಗ.. ನನಗೂ ಬೇಜಾರು ಶುರುವಾಗಿಬಿಟ್ಟಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಅಯ್ಯೊ, ಸಂಪದ ನೋಡ್ರೀ. ಅದಕ್ಕಿಂತ ಬೇರೆ ಬೇಕಾ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
೧ [quote]ಏನು ಮಾಡಲು ತೋಚುವುದಿಲ್ಲ?... ಸುಮ್ನೆ ಕಾಲಹರಣ ಮಾಡುತ್ತೇನೆ ?? [/quote] ಏನೂ ಮಾಡದೆ ಇದ್ದಾಗ ಸುಮ್ನೆ 'ಕಾಲಹರಣ' ಮಾಡ್ತೀರಲ್ರೀ ? ೨. ಯಾವಾಗ್ಲೂ ಒಂದೇ ತರಹ ಯಾಕೆ ಇರ್ಬೇಕು ? ಬೋರಾಗಲ್ವ? ಒಂದು ಝೆನ್ ಕತೆ ಹೇಳ್ತೀನಿ ಕೇಳಿ. ಒಬ್ಬ ಶಿಷ್ಯ ತನ್ನ ಗುರು ಹತ್ರ ಬಂದು ಹೇಳ್ತಾನೆ - ಈ ಧ್ಯಾನ , ಸಾಧನೆ , ಏಕಾಗ್ರತೆ ನನ್ ಕೈಲಿ ಸಾಧ್ಯ ಆಗ್ತಿಲ್ಲ ; ನಾನೊಬ್ಬ ಯಾತಕ್ಕೂ ಬಾರದೋನು ಅಂತ ಅನ್ನಿಸ್ತಿದೆ . ಗುರು - ಒಂದೊಂದ್ಸಲ ಹಾಗನ್ನಿಸುತ್ತೆ ; ಅದಕ್ಕೆಲ್ಲ ಹೆಚ್ಚು ಗಮನ ಕೊಡ್ಬಾರ್ದು ... ... ಆಮೇಲೆ ಇನ್ನೊಂದ್ಸಲ .... ಅವನೇ ಬಂದು ಗುರು ಹತ್ರ ಬಂದು ಹೇಳ್ತಾನೆ - ಗುರುಗಳೇ ನನ್ನ ಸಾಧನೆ ಪೂರ್ತಿ ಆಗಿದೆ . ನನಗೆ ಜ್ಞಾನ ಸಿಕ್ಕುಬಿಟ್ಟಿದೆ ಅಂತ ಅನ್ನಿಸ್ತಿದೆ . ಆಗ್ಲೂ ಗುರು ಹೇಳ್ತಾನೆ - ಒಂದೊಂದ್ಸಲ ಹಾಗನ್ನಿಸುತ್ತೆ ; ಅದಕ್ಕೆಲ್ಲ ಹೆಚ್ಚು ಗಮನ ಕೊಡ್ಬಾರ್ದು ... :) ..... ೩. ಯಾವ್ದೇ ಕೆಲ್ಸ ಇಲ್ಲದೆ ಬೇಜಾರಾಗ್ತಿದ್ರೆ .. ೧) ಟೀವೀ ನೋಡ್ರೀ .... ನೂರಾರು ಛಾನೆಲ್ ಬರ್ತಾ ಇದೆ . ೨) ಕೇಬಲ್ಲು ಇಲ್ವಾ ? ದೂರದರ್ಷನ / ಡೀವೀಡಿ / ಸೀಡೀ ನೋಡ್ರೀ ೩) ಟೀವೀನೇ ಇಲ್ವಾ ? ಕ್ಯಾಸೆಟ್ಟ್ / ಸೀಡೀ ಕೇಳಿ ೪) ಮ್ಯೂಸಿಕ್ ಸಿಸ್ಟಮ್ ಇಲ್ವಾ - ಎಫ್ ಎಮ್ ಅಥವಾ ಸರಕಾರೀ ಸ್ಟೇಶನ್ ಕೇಳಿ ೫) ಇಂಟರ್ನೆಟ್ ನಲ್ಲಿ ಅಲೆದಾಡಿ ..... ೬) ಪುಸ್ತಕಾ ಓದಿ ೭) ಅದೂ ಬೇಡ ಅಂದ್ರೆ ಜನರ ಜತೆ ಮಾತಾಡಿ ೮) ಅದೂ ಬೇಡ ಅಂದ್ರೆ ಹೊರಗೆ ಓಡಾಡಿ ... ಆಕಾಶ , ಗಿಡಮರ ನೋಡ್ರಿ ೯) ಅದೂ ಬೇಡ್ವಾ 10) ಸೂರು ನೋಡ್ತಾ ಮಲಕ್ಕೊಳ್ಳಿ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಬೇಸಱ ಅಥವಾ ಬೇಜಾರಿನ ಮೂಲ (ಬೇರು) ಹುಡುಕಿ. ಬೇಸಱ ತಂತಾನೇ ಹೊಱಟುಹೋಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
'ಬೇಸಱ' ನೋಡಿದ್ರೆ ಬೇಸ್ರಾನೇ ಎದ್ದು ಹೊರಟುಹೋದೀತು ಅಂದ್ರೆ ನಿಮಗೆ ಸಿಟ್ಟು ಬಂದೀತೇನೋ :( ನನ್ ತಲೆಹರಟೆನ ನಕ್ಕು ಮರೆತ್ಬಿಡಿ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ನಮಸ್ಕಾರ್ರೀ ಶ್ರೀಕಾಂತ್ ಅವರೇ, ನೀವೇನಾದ್ರೂ ಅಂದ್ಕೊಳ್ಳಿ. ಬೇಸಱ ಮತ್ತು ಆಸಱ ಹೞಗನ್ನಡದಲ್ಲಿರುವುದೇ ಹಾಗೆ. ಮೂಲ ಬೇಸಱ್=ಬೇಜಾರಾಗು, ಮ್ಲಾನನಾಗು, ಆಸಱ್=ಸುಸ್ತಾಗು, ಬೆಂಡಾಗು. ಇವುಗಳ ಭೂತರೂಪ ಬೇಸತ್ತು, ಆಸತ್ತು. ಹಾಗಂತ ನನ್ನ ಮಾತುಗಳಿಗೆ ಬೇಸತ್ತಾಸತ್ತು ಹೆದಱಬೇಡಿ. ಹೆದಱುವಾಗ ನಡುಕವುಂಟಾಗುವುದಱಿಂದ ನಡುಗುವ ಱಕಾರ ಬೞಸಬೇಕೆಂಬ ನನ್ನಾಗ್ರಹಕ್ಕೆ ಮತ್ತೊಮ್ಮೆ ಹೆದಱಬೇಡಿ. ಶುಭರಾತ್ರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಈ ಗಾದೆ ಮಾತು ಕೇಳಿದ್ದೀರಾ ? "ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದ್ರೆ ಅಕ್ಕನ ಗಂಡ ಅವುಕ್ ಅಂದನಂತೆ" "ಆಸರ-ಬೇಸರ" ಜೋಡು ಪದವಾಗಿ ನಾವು ಮಾತಲ್ಲಿ ಬಳಸ್ತೀವಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಅಲ್ಲ ಶ್ರೀಕಾಂತ್ ಅವರೇ, ಇಷ್ಟೆಲ್ಲ ಗೊತ್ತಿದ್ದು ಆಸಱು, ಬೇಸಱು ಭೂತಕಾಲದಲ್ಲಿ ಆಸತ್ತು ಬೇಸತ್ತು ಯಾಕಾಗುತ್ತದೆ ಎಂದು ವಿಚಾರ ಮಾಡಿದ್ದರೆ ಅದು ಱ್, ರ್ ಅಲ್ಲ ಎಂದು ನಿಮಗೆ ತಿಳಿಯುತ್ತಿತ್ತಲ್ಲ. ಉದಾಹರಣೆಗೆ ಇರು, ಬರು, ತರು ಕ್ರಮವಾಗಿ ಇದ್ದು, ಬಂದು, ತಂದು ಆಗುತ್ತದೆ. ಆದರೆ ಹೊಱು, ಹೆಱು, ತೆಱು, ಆಸಱು, ಬೇಸಱು ಕ್ರಮವಾಗಿ ಹೊತ್ತು, ಹೆತ್ತು, ತೆತ್ತು, ಆಸತ್ತು, ಬೇಸತ್ತು ಆಗುತ್ತದೆಯಲ್ವಾ. ಹೀಗೆ ಬಿಡಿಸಬಹುದಿತ್ತಲ್ಲ ಱ ಮತ್ತು ರಗಳ ಬ್ರಹ್ಮರಹಸ್ಯ. ಏನಂತೀರಿ? ಇದಕ್ಕೂ ಹೆದಱ್ಕೋಬೇಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಶ್ರೀಕಾಂತ್, ೧೦-೨+೧ : ೧. ಟೀವೀ ನೋಡ್ರೀ .... ನೂರಾರು ಛಾನೆಲ್ ಬರ್ತಾ ಇದೆ . ೨.ಎಫ್ ಎಮ್ ಅಥವಾ ಸರಕಾರೀ ಸ್ಟೇಶನ್ ಕೇಳಿ.. --ಇದರಿಂದ- ಸುಮ್ಮನೆ ಬೇಜಾರು+ತಲೆನೋವು :) ಅದರ ಬದಲು , ಸಮೀಪದ ದರ್ಶಿನಿಗೆ ಹೋಗಿ ಸ್ಟ್ರಾಂಗ್ ಕಾಫಿ ಕುಡಿಯಿರಿ.ಅಕ್ಕಪಕ್ಕದಲ್ಲಿ ೩ ದಿನದಿಂದ ಉಪವಾಸ ಇದ್ದವರಂತೆ ಮುಕ್ಕುತ್ತಿರುವವರನ್ನು ನೋಡಿ-ಬೇಜಾರು ಮಂಗಮಾಯ. ಅಂದಹಾಗೆ 'ಹರ್ಷ' 'ವರ್ಧನ್'‌ಗೇ ಬೇಜಾರು? ನಮಗೆಲ್ಲಾ :( -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on
ಏನ್ರೀ ಹರ್ಷಾ ಅವರೆ, ಸುಮ್ನೆ ಬೇಜಾರು ಅಂತ ಬರೆದು ಒಂದು ಡಸನ್ ಪ್ರತಿಕ್ರಿಯೆ ಗಿಟ್ಟಿಸಿಬಿಟ್ರಲ್ಲಾ? ಏನ್ ಸಮಾಚಾರ? ಏಷ್ಟೊಂದು ಸಂಪದಿಗರು ಏನೇನೋ ಯೋಚಿಸಿ ಏಷ್ಟೆಲ್ಲಾ ಬರೆದರೂ ಏನೂ ಪ್ರತಿಕ್ರಿಯೆ ಇಲ್ಲ.ಈಗ ನಿಮಗೊಂದು ಹೋಮ್ ವರ್ಕ್. ನಿಮಗೆ ಈತರಹ ಬೇಜಾರಾದಾಗ...ಸಂಪದಕ್ಕೆ ಹೋಗಿ, ಯಾವ ಬರಹಗಳಿಗೆ ಪ್ರತಿಕ್ರಿಯೆ ಇಲ್ಲವೋ ಅದನ್ನ ಓದಿ ನಿಮಗೆ ಏನನ್ನಿಸಿತೋ ಅದನ್ನ ಪ್ರತಿಕ್ರಿಯೆಯಾಗಿ ಹಾಕಿರಿ. ( ಮೆಚ್ಚುಗೆ, ಸಂತೋಷ, ವಿಷಾದ, ಚರ್ಚೆ, ಮುಂತಾದ). ಅಷ್ಟಾದರೂ ಬೇಜಾರು ಹೋಗಲಿಲ್ಲ ಅಂದರೆ, ನನಗೆ ಸ್ವಲ್ಪ ಸಹಾಯ ಬೇಕಿದೆ , ನನ್ನ ಕೆಲಸದ ನಡುವೆ, ಸಾಹಿತ್ಯ ಕೃಷಿಗೆ ಸಮಯ ಸಿಗುತ್ತಿಲ್ಲ, ನನ್ನನ್ನು ಕೇಳಿ, ನಿಮಗೊಂದು ಕೆಲಸ ಯಾವಾಗಲೂ ರಡಿ ಇರತ್ತೆ. ವಿಶ್ವಾಸದಿಂದ, ಮೀನಾ. ( ನನ್ನಲ್ಲಿ ಬೇಜಾರು ಹೋಗುವುದಕ್ಕೆ, ತುಂಬಾ ಸೂತ್ರಗಳಿವೆ, ಇನ್ನೊಮ್ಮೆ ಸಮಯವಾದಾಗ ಬರೆಯುವೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಈ ಸಮಯದಲ್ಲಿ ಇಲ್ಲಿ ಕನ್ನಡ ಶಾಲೆಯಲ್ಲಿ ಕಲಿಸಲು ಸಂಧ್ಯಾ ರವೀಂದ್ರನಾಥ್ ಅವರು ಬರೆದಿದ್ದ ಮಕ್ಕಳ ಪದ್ಯ ನೆನಪಾಯ್ತು. (ಇಂಗ್ಲಿಷಿನ Five little monkeys ಅನ್ನುವ ಪದ್ಯದ ಅನುವಾದ) ಐದು ಬೆಕ್ಕಿನ ಮರಿ ಮಂಚದ ಮೇಲೆ ಪುಟಾಣಿ ಮರಿ ಹೇಳಿತು ಕೇಳಿ "ಜಾಗ ಇಲ್ಲ. ಸ್ವಲ್ಪ ಜರುಗಿ"; ಜರುಗಿದರೆಲ್ಲರು ಬಿತ್ತು ಒಂದು ನಾಕು ಬೆಕ್ಕಿನ ಮರಿ ಮಂಚದ ಮೇಲೆ ಪುಟಾಣಿ ಮರಿ ಹೇಳಿತು ಕೇಳಿ "ಜಾಗ ಇಲ್ಲ. ಸ್ವಲ್ಪ ಜರುಗಿ"; ಜರುಗಿದರೆಲ್ಲರು ಬಿತ್ತು ಒಂದು ಮೂರು ಬೆಕ್ಕಿನ ಮರಿ ಮಂಚದ ಮೇಲೆ ಪುಟಾಣಿ ಮರಿ ಹೇಳಿತು ಕೇಳಿ "ಜಾಗ ಇಲ್ಲ. ಸ್ವಲ್ಪ ಜರುಗಿ"; ಜರುಗಿದರೆಲ್ಲರು ಬಿತ್ತು ಒಂದು ಎರಡು ಬೆಕ್ಕಿನ ಮರಿ ಮಂಚದ ಮೇಲೆ ಪುಟಾಣಿ ಮರಿ ಹೇಳಿತು ಕೇಳಿ "ಜಾಗ ಇಲ್ಲ. ಸ್ವಲ್ಪ ಜರುಗಿ"; ಜರುಗಿದರೆಲ್ಲರು ಬಿತ್ತು ಒಂದು ಒಂದು ಬೆಕ್ಕಿನ ಮರಿ ಮಂಚದ ಮೇಲೆ ಪುಟಾಣಿ ಮರಿ ಹೇಳಿತು ಕೇಳಿ "ನಾನೊಬ್ಳೇ ಬೇಜಾರು!";
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harsha Vardhan on
ನನಗೆ ಸಲಹೆಗಳನ್ನು ನೀಡಿದ ಎಲ್ಲರಿಗೂ, ನನ್ನ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.