ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › harshab ರವರ ಬ್ಲಾಗ್

ನಾ ಹೇಗೆ ಹೇಳಲಿ.....

October 1, 2008 - 7:40pm — harshab

ನಿನ್ನುಸಿರು ನನ್ನುಸಿರಿಗೆ ತಾಕುವುದ ತಡೆಯಲಾಗದೆ
ಕೋಪಿಸಿಕೊಳ್ಳುವ ನಿನ್ನ ಮೂಗುಬಳೆಗೆ,
ನಾ ಹೇಗೆ ಹೇಳಲಿ.....
ಆ ಉಸಿರು ನನದೆಂದು.....

ನಿನ್ನ ಬೆವರ ಹನಿಗಳು, ನೀ ಮುಡಿದ ಮಲ್ಲಿಗೆಯನು ತೋಯಿಸಿದಾಗೆದ್ದ
ಘಮವನ್ನೆತ್ತಿ, ತಪ್ಪಿಸಿಕೊಳ್ಳಲಾಗದೆ-ನನ್ನೆಡೆಗೇ ತೇಲಿ ಬರುವ ಆ ಗಾಳಿಗೆ,
ನಾ ಹೇಗೆ ಹೇಳಲಿ.....
ಆ ಘಮವು ನನದೆಂದು.....

ನಿನ್ನ ಕೈ-ಬಳೆಗಳು ನನ್ನೆದೆಯ ಮೇಲೆ ಮೂಡಿಸುವ ಹೊಸ ಗುರುತುಗಳನ್ನು
ಕಂಡು, ಮೆಲ್ಲ-ಮೆಲ್ಲನೆ ಮಡಿಯುತಿರುವ ಹಳೆ-ಗುರುತುಗಳು ಹೊಟ್ಟೆಕಿಚ್ಚುಪಟ್ಟಾಗ,
ನಾ ಹೇಗೆ ಹೇಳಲಿ.....
ಆ ಹೊಸ ಗುರುತುಗಳು ನನಗಿಷ್ಟವೆಂದು.....

ನಾನಾಡುವ ಪಿಸುಮಾತಿಗೆ, ನೀ ನಕ್ಕಾಗ,
ಬೇಸರಿಸಿಕೊಳ್ಳುವ ನಿನ್ನ ಕಿವಿಯೋಲೆಗೆ
ನಾ ಹೇಗೆ ಹೇಳಲಿ.....
ಆ ನಗು ಬರೀ ನನಗೆಂದು.....

ಮತ್ತೆ-ಮತ್ತೆ ನನ್ನ ಬೆರಳಿನಿಂದ ತಪ್ಪಿಸಿಕೊಂಡು
ಮೊಗವ ಮುಚ್ಚಿ, ಅಣಕಿಸಿ-ಆಟವಾಡುವ ನಿನ್ನ ಮುಂಗುರುಳಿಗೆ,
ನಾ ಹೇಗೆ ಹೇಳಲಿ.....
ಆ ಹಣೆಯ ಸಾಲು ನನಗಿಷ್ಟವೆಂದು.....

  • ಕವಿತೆ
~.~
  • harshab ರವರ ಬ್ಲಾಗ್
  • Login or register to post comments
  • 199 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೇಗೆ ಹೇಳಲಿ
  • ಹೇಗೆ ತೊರೆಯಲಿ...?
  • ಮನದಾಳದ ಮಾತುಗಳು
  • ಮತ್ತೆ ಕಂಡಂತಾಯ್ತು ನಿನ್ನ ಒನಪು!!!
  • ಒಂಚೂರು ಕೋಗಿಲೆ
Syndicate content

ಲೇಖಕರು

harshab's picture

ಪೂರ್ಣ ಹೆಸರು
ಹರ್ಷ ಬಿ

ಪರಿಚಯ

ಒಬ್ಬ ಸಾಮಾನ್ಯ ಮನುಷ್ಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 2:28pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:26pm
  • asuhegde
    ಉ: ಉದ್ದ ಕಾಲಿನ ನೊಣ ೨
    January 9, 2009 - 2:24pm
  • Virupakshagouda
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 2:20pm
  • Rakesh Shetty
    ಉ: ಆಕಾಶದ ಮೋಡದಲ್ಲಿ
    January 9, 2009 - 2:15pm
  • palachandra
    ಉ: ಉದ್ದ ಕಾಲಿನ ನೊಣ ೧
    January 9, 2009 - 2:15pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:11pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:07pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:05pm
  • mahesha
    ಉ: ಮೌನ ಎದೆ
    January 9, 2009 - 2:03pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator