ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕರ್ನಲ್ ಪ್ಯಾನಿಕ್

ನೀವು ವಿಂಡೋಸ್ OS use ಮಾಡ್ತೀರಾ? ಹಾಗಿದ್ದ್ರೆ ನಿಮಗೆ ವಿಂಡೋಸ್ ನ famous BSOD ಬಗ್ಗೆ ಗೊತ್ತಿರಲೇಬೇಕು. ನೀವು ಲಿನಕ್ಸ OS ನು use ಮಾಡ್ತೀರಾ? ಲಿನಕ್ಸ ನ BSOD ಯಾವುದು ಗೊತ್ತಾ? ಅದೆ ಕರ್ನಲ್ ಪ್ಯಾನಿಕ್.  ನಾನು ಸುಮಾರು 7 ವರ್ಷದಿಂದ ಲಿನಕ್ಸ use ಮಾಡ್ತಾಯಿದ್ದ್ರು ಒಂದು ಸಾರಿನು ಈ ಕರ್ನಲ್ ಪ್ಯಾನಿಕ್ ನೊಡಿರ್ಲಿಲ್ಲ. ಮೊನ್ನೆ ಕಛೇರಿಯಲ್ಲಿ CentOS ಲಿನಕ್ಸ  ಸರ್ವರ್ crash ಅಯ್ತು. ಹೋಗಿ ನೊಡಿದ್ಧ್ರೆ monitor ನಲ್ಲಿ ಈ ಕರ್ನಲ್ ಪ್ಯಾನಿಕ್ ಸಂದೇಶ . ವಿಕಿಪೀಡೀಯಾದಲ್ಲಿ search ಮಾಡಿದಾಗ ಹೆಚ್ಚಿನ ಮಾಹಿತಿ ಸಿಕ್ತು. ಇಲ್ಲಿದೆ ಲಿಂಕ್.

PS1: ಇದು ನನ್ನ ಮೊದಲ ಕನ್ನಡ ಬ್ಲಾಗು :)

PS2: ಬರಹದಲ್ಲಿ ತಪ್ಪುಗಳ್ಳಿದ್ದಲ್ಲಿ adjust ಮಾಡ್ಕೊಳಿ. ಕನ್ನಡ ಬರಿಯದೆ 6 ವರ್ಷ ಆಯ್ತು :-(

 

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕರ್ನಲ್ ಪ್ಯಾನಿಕ್

Aravinda's picture

>> ಸೋಮಾರಿ, ಹಟಮಾರಿ and ಮರಿ.
ಸಂಪದಕ್ಕೆ ಸ್ವಾಗತ ನಿಮಗೆ...

ಮಾಹಿತಿಗಾಗಿ ಧನ್ಯವಾದಗಳು... :)

ಉ: ಕರ್ನಲ್ ಪ್ಯಾನಿಕ್

harshah's picture

ಧನ್ಯವಾದಗಳು ಅರವಿಂದ. regular ಆಗಿ ಬರಿಯಲು ಪ್ರಯ್ತ್ನಿಸುತ್ತೇನೆ :-)

ಉ: ಕರ್ನಲ್ ಪ್ಯಾನಿಕ್

raghava's picture

ಅಯ್ಯ್! ಹರ್ಷಾ, ಸಂಪದಕ್ಕೆ ಸ್ವಾಗತ! :)

>>ನಾನು ಸುಮಾರು 7 ವರ್ಷದಿಂದ ಲಿನಕ್ಸ use ಮಾಡ್ತಾಯಿದ್ದ್ರು ಒಂದು ಸಾರಿನು ಈ ಕರ್ನಲ್ ಪ್ಯಾನಿಕ್ ನೊಡಿರ್ಲಿಲ್ಲ.
ಭಾಳ ಭಾಗ್ಯವಂತ್ರು ಬಿಡ್ರಿ ನೀವು! ;) ನಾನು ಬಳ್ಸೋಕ್ಶುರುಮಾಡಿದ್ ನಾಕ್ನೇದಿನಕ್ಕೇ ನೋಡಿ ಗಾಬ್ರಿ ಆಗಿ ಸ್ವಲ್ಪ ತಲೆ ಕೆಡ್ಸ್ಕೊಂಡು ಆಮೇಲೆ ಏನುಎತ್ತಾಂತ ತಿಳ್ಕೊಂಡೆ. :)
/* ಸೋರ್ಸ್ನೋಡಿ , panic.c ದು, ಒಳ್ಳೊಳ್ಳೇ ಕಮೆಂಟ್ಗಳಿವೆ ಅದ್ರಲ್ಲಿ. :D ಇದು ನನ್ವಾಲ್ಪೇಪರಾಗಿತ್ತು ಸ್ವಲ್ಪ್ದಿನಾ. */

ಉ: ಕರ್ನಲ್ ಪ್ಯಾನಿಕ್

harshah's picture

panic.c ಸೊರ್ಸ್ ಕೊಡ್ ನೊಡ್ದೆ. comments ಮಾತ್ರಲ್ಲ, ಕೊಡ್ ಕೂಡ funny style ನಲ್ಲಿ writtenu :)
ಅಂದಹಾಗೆ ನಿಮ್ಮ ವಾಲ್ಪಪೆರ್ ಚೆನ್ನಗಿದೆ but ಚಿಕ್ಕ ಮಕ್ಳು ನೊಡಿ ಹೆದ್ರತಾವೆ ಅನ್ಸುತ್ತೆ ;-)

ಉ: ಕರ್ನಲ್ ಪ್ಯಾನಿಕ್

omshivaprakash's picture

ಸಂಪದದಲ್ಲಿ ನಿಮ್ಮನ್ನು ನೋಡಿ ಸಂತೋಷ ಆಯ್ತು. ಇನ್ನೂ ಬರೀರಿ, ಬರೀತಾನೇ ಇರಿ..

ನಿಮಗ್ಸೊಲ್ಪಾ ಕರ್ನೆಲ್ ಕಂಪೈಲಿಂಗ್ ಕೆಲ್ಸ ಕೊಟ್ಟು ಕೂರಿಸ್ಬೇಕು.. ಜಿ.ಆರ್.ಸೆಕ್ ಪ್ಯಾಚ್ ಹಾಕಿ ಕರ್ನೆಲ್ ಹಾರ್ಡ್ನಿಂಗ್ ಮಾಡಿ ಕೂಡ ಹ್ಯಾಕ್ ಆದ್ರೆ ನೀವು ಕರ್ನೆಲ್ ಪ್ಯಾನಿಕ್ ಬರಕ್ಕಿಂತ ಮೊದಲೇ ಆಪರೇಟಿಂಗ್ ಸಿಸ್ಟಂ ಬದ್ಲಿಸ್ತೀರಿ ಅಂತ ಗೊತ್ತಾಗತ್ತೆ :P

ಉ: ಕರ್ನಲ್ ಪ್ಯಾನಿಕ್

harshah's picture

ಧನ್ಯವಾದಗಳು :-)

ನಿಮ್ಮ ಗ್ರೀಕ್ ಲ್ಯಾಟಿನ್ ಭಾಷೆ ನಂಗೆ ಅರ್ಥ ಆಗಲ್ಲ. ನಾನು ಒಬ್ಬ ಸಾಮಾನ್ಯ ಲಿನಕ್ಸ user. ಕಂಪ್ಯೆಲರ್ ನೇನೊ ಬರ್ದಿದಿನಿ ಆದ್ರೆ ಲಿನಕ್ಸ ಕರ್ನೆಲ್ ಕಂಪ್ಯೆಲ ಮಾಡಿಲ್ಲ. time ಸಿಕ್ಕಾಗ tryಮಾಡ್ತಿನಿ :)

ಉ: ಕರ್ನಲ್ ಪ್ಯಾನಿಕ್

omshivaprakash's picture

ಹೆದರ್ಕೋಬ್ಯಾಡ್ರಿ ಅರ್ಥ ಮಾಡ್ಸಿದರಾಯ್ತು :)

ಉ: ಕರ್ನಲ್ ಪ್ಯಾನಿಕ್

Aravinda's picture

ನಂಗೂ ನೋಡ್ಬೇಕು ಅನ್ನಿಸ್ತಿದೆ... :)

ಏನು ಮಾಡಿದ್ರೆ ಹಂಗಾಗ್ಬೋದು? ಐಡಿಯಾ ಇದ್ರೆ ಕೊಡಿ ಯಾರಾದ್ರು

ಉ: ಕರ್ನಲ್ ಪ್ಯಾನಿಕ್

omshivaprakash's picture

ಅರವಿಂದ, ಇಲ್ಬೇಡ ಬೇಕಿದ್ರೆಮೈಲಾಕು ಇಲ್ಲಾ ಕಾಲ್ಮಾಡು ೨ ಸೆಕೆಂಡು ನೀನ್ ಆಮೇಲೆ ಸಕತ್ ಮಜಾ ತಗೋಬಹುದು.. ಅದ್ರೆ ಮತ್ತೆ ಹೇಳ್ತೀನಿ ಇಲ್ಮಾತ್ರ ಬೇಡ :)

ಉ: ಕರ್ನಲ್ ಪ್ಯಾನಿಕ್

karihaida's picture

ಕರ್ನಲ್ ನಮ್ ಕಂಪ್ಯೂಟರ್ಗಳಲ್ಲಿ ಹಲವಾರು ಬಾರಿ "ಪಾನಿಕ್" ಆಗವ್ರೆ. ಪ್ರತಿ ಬಾರಿಯೂ ಯಾವುದೋ RAM ತೊಂದರೆನೋ ಅಥವಾ ಫೈಲ್ಸಿಸ್ಟಮ್ ಕಸಿವಿಸಿಯಿಂದಾನೋ ಆಗಿದ್ದಿದ್ದು. ಬದಲಾಯಿಸಿದ ತಕ್ಷಣ ಸರಿ ಹೋಗೋದು. ಹಾಗೆ PCI ಕಾರ್ಡ್ ಸೊಟ್ಟಕ್ಕೆ ಕೂತಿದ್ರು ಈ ತೊಂದರೆ ಬರುತ್ತೆ. ಇವೆಲ್ಲಾ ಹಾರ್ಡ್ವೇರ್ನಿಂದ ಉಂಟಾಗಿದ್ ತರಲೆಗಳು. ಬರೀ ಕರ್ನಲ್ ಸರಿಯಾಗಿ ಕಂಪೈಲ್ ಆಗಿಲ್ಲದ್ದರಿಂದ ಪಾನಿಕ್ ಆಗಿದ್ದುದು - root ಫೈಲ್ಸಿಸ್ಟಮ್ ಆಗಿದ್ದಿದ್ದ ext3/reiserfsನ moduleನಂತೆ ಕಂಪೈಲಿಸಿದಾಗ.
ಅಂದ ಹಾಗೆ ಅಪ್ಲಿಕೇಶನ್ಗಳು ಸೆಗ್ಫಾಲ್ಟ್ ಆಗೋ ಸ್ಥಿತಿಗಳು ಕರ್ನಲ್ಲಿಗೆ ಬಂದರೆ ಅದು "ಪಾನಿಕ್ಕೇ" :-)

ಉ: ಕರ್ನಲ್ ಪ್ಯಾನಿಕ್

raghava's picture

ಅಯ್ಯೋ, ಪ್ಯಾನಿಕ್ನೋಡ್ಬೇಕಾ! ಯಾಕಷ್ಟು ಕಷ್ಟಾ?

ಸುಮ್ನೇ ಕೆಳ್ಗಿರೋದನ್ನಾ ಮಾಡು, ಕರ್ನಲ್ಲು ಪ್ಯಾನಿಕ್ಕಾಗಿ ಹೊಡ್ಕೊಂಡು ಕಿರ್ಚ್ಕೊಂಡು ನಿನ್ ಕ್ಯಾಪ್ಸ್ಲಾಕ್ ನೋಟಿಫೈಯರ್ ಎಲ್ಲೀಡಿ ಪಿಳ್ಪಿಳೀಂತ ಬಡ್ಕೊಂಡು ಸಿಸ್ಟಂ ಸ್ಪೀಕರ್ರೂ ಒಂದೆರ್ಡ್ ಬೀಪ್ ಹಾಕತ್ತೆ. 'tainted' ಮೆಸೇಜ್ಗಳು ಒಂದೆರ್ಡ್ ಬರ್ತಾವೇ. ಇದು ಪೂರ್ತೀನೂ ಆಗಲ್ಲ, ಅರ್ಧಕ್ಕೇ ಸಿಸ್ಟಮ್ಮು ಎಡ್ವಿಬಿದ್ದುಮಲ್ಗಿ ಯಾವ್ ಕೀಸ್ಟ್ರೋಕಿಗೂ ಆ-ಊ ಅನ್ನದೇ ಕೂತ್ಕಳತ್ತೆ. ಆಮೇಲ್ಮಾಮೂಲಿ ಇದ್ದಿದ್ದೇ ಪುಲ್ ದ ಪ್ಲಗ್ /* ಪವರ್ ಸ್ವಿಚ್ನಾ ಒತ್ತಿ ಹಿಡ್ಕೋ , ರೀಬೂಟಾಗೋವರ್ಗೂ :P */

#ಕನ್ಸೋಲಲ್ಲಿ ಮಾಡ್ಬೇಕಿರೋದು
su
<ವತ್ಸಾ, ತಮ್ಮ ಸೂಪರ್ಯೂಸರ್ ಪಾಸ್ವರ್ಡನ ಇಲ್ಲಿ ಟೈಪಿಸುವಂಥವನಾಗು>
for mod in `lsmod | awk '{print $1}'`
do
rmmod -f $mod
done
# ಏನಿಲ್ಲಾ, ಇದ್ಬದ್ಕರ್ನಲ್ಮಾಡ್ಯೂಲ್ನೆಲ್ಲಾ ಮಶೀನ್ನಡಿತಿರೋ ಹಂಗೇ ಕಿತ್ತಾಕ್ತಿದೀವಿ , ಅಷ್ಟೇ ...

ಇಷ್ಟೇ , ಮಜಾಮಾಡು :) ಇದ್ಮಾಡೋಕ್ಮುಂಚೆ ಏನೇನ್ಬೇಕೋ ಎಲ್ಲಾ ಡೇಟ ಸೇವ್ ಮಾಡ್ಕೋ (ಅಪ್ಲಿಕೇಶನ್ಗಳಲ್ಲಿ).
ಇದ್ರಲ್ಲೂ ಕೆಲ್ವು ಇಂಪಾರ್ಟಂಟ್ಕರ್ನಲ್ಮಾಡ್ಯೂಲ್ಗಳಾದ processor, ext3, mbcache, dock, jbd, evdev, usb_hid, hid, sata_nv, ata_generic ಇವ್ಗಳ್ನಾ ತೆಗ್ದ್ರೂ ಸಾಕೇ ಅಂದ್ಕೋತೀನಿ. :) ಟ್ರೈ ಮಾಡಿ ನೋಡು. ;)

/* ಸಾಮಾನ್ಯ ಲಿನಕ್ಸ್ ಬಳಕೆದಾರರು ಮೇಲಿರೋದನ್ನ ಮಾಡೋಕ್ಕೆ ಹೋಗೋದೇ ಆದ್ರೆ ಒಮ್ಮೆ ನೋಡ್ಕೊಂಡು ಹುಶಾರಾಗ್ಮಾಡಿ. ಹೆದ್ರುಕೋಬೇಡಿ, ಲಿನಕ್ಸು ಭಾಳ ಗಟ್ಟಿ. ಕರ್ನಲ್ಪ್ಯಾನಿಕ್ಕಿಂದ ಮಶೀನ್ಗೇನೂ ಧಕ್ಕೆ ಇಲ್ಲ. :) */

ಉ: ಕರ್ನಲ್ ಪ್ಯಾನಿಕ್

Aravinda's picture

ಸಕತ್ ಕಣಯ್ಯ ನೀನು.. ಈಗ ತಾನೇ ಟ್ರೈ ಮಾಡಿದೆ.. ಸೂಪರ್ ಆಗಿತ್ತು.. ಕರ್ನಲ್ ಪ್ಯಾನಿಕ್ ನ ದರ್ಶನ ನಂಗೂ ಸಿಕ್ತು... :)

Quote:

ನಿನ್ ಕ್ಯಾಪ್ಸ್ಲಾಕ್ ನೋಟಿಫೈಯರ್ ಎಲ್ಲೀಡಿ ಪಿಳ್ಪಿಳೀಂತ ಬಡ್ಕೊಂಡು ಸಿಸ್ಟಂ ಸ್ಪೀಕರ್ರೂ ಒಂದೆರ್ಡ್ ಬೀಪ್ ಹಾಕತ್ತೆ. 'tainted' ಮೆಸೇಜ್ಗಳು ಒಂದೆರ್ಡ್ ಬರ್ತಾವೇ.

ಒಂದೇ ಸಮ ಬಡ್ಕೊಳತ್ತೇನೋ ಅಂತ ಕಾಯ್ತಾ ಇದ್ದೆ.. ಆದ್ರೆ ಒಂದ್ ಸಲ ಟೋಯ್ ಅಂತು ಅಷ್ಟೆ :D

ಉ: ಕರ್ನಲ್ ಪ್ಯಾನಿಕ್

omshivaprakash's picture

ನೀನೂ ಸಕತ್ ಇದ್ದೀಯಾ.. ಅಲ್ಲಯ್ಯ, ಇಷ್ಟೆಲ್ಲಾ ಮಾಡಿ ಸ್ಕ್ರೀನ್ಶಾಠಾಕ್ವಿಡ್ಯೋಮಾಡ್ಪಾಡ್ಕಾಸ್ಟ್ಮಾಡ್ಬಾರ್ದಿತ್ತೆ. _ರಾಘವ_ ಮತ್ತೂ ಖುಷಿ ಆಗೋನು :)