ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕೈ ಕೊಟ್ಟ ಜೆಟ್ ಏರ್

ಒಂದಾದ ಮೇಲೆ ಒಂದು ದೇಶೀಯ ಖಾಸಗಿ ಹಾಗು MNC ಗಳ ಬಣ್ಣ ಬಯಲಾಗೊ ಕಾಲ ಈಗ ಬರ್ತಾ ಇದೆ.
ಮೊದಲನೇ ಕಂತು ಜೆಟ್ ಏರ್ !!

೧೯೦೦ ಜನರನ್ನ ಮನೆಗೆ ಕಳಿಸಿ ಕೈ ತೊಳೆದುಕೊಂಡು ಕೂತಿದೆ.
ಜೆಟ್ ನ ಕತೆ ಏನೇ ಇರಲಿ...ದೂರಾಲೋಚನೆ ಇಲ್ಲದೆ ಸಾವಿರಾರು ಜನರನ್ನ ಕೆಲಸಕ್ಕೆ ತೆಗೆದುಕೊಂಡು ಈಗ ಒಂದು ದಿನದ ನೋಟೀಸೂ ಕೊಡದೆ ಹೀನಾಯವಾಗಿ ತೆಗೆದಿದ್ದು ಬೇಜವಾಬ್ದಾರಿಯ ಪರಮಾವಧಿ.

ಈ ಪಿಂಕ್ ಸ್ಲಿಪ್/retrenchmentಗಳ ಕಥೆ ಇಲ್ಲಿಗೆ ಹೊಸದೇನೂ ಅಲ್ಲ...

ವಿಪ್ರೊದಲ್ಲಿ ಆಗಿದ್ದು ಸ್ವಲ್ಪ ದಿನಗಳ ಹಿಂದೆ ನೀವೂ ಕೇಳಿರಬಹುದು....ಐ.ಬಿ.ಎಂ, ಸತ್ಯಮ್....ಮುಂತಾದ ಕಡೇನೂ ನಡೀತು...

ಈ ಎಲ್ಲಾ ವಿಷಯಗಳನ್ನು ನೋಡಿದಾಗ ಅನ್ನಿಸೋದು ಇಷ್ಟೇ - ಇವರುಗಳು ಅಂದುಕೊಂಡಷ್ಟು ಟರ್ನ್ ಓವರ್ ಆಗಲಿಲ್ಲ, ಲಾಭಾಂಶ ಕಮ್ಮಿ ಮಾಡಿಕೊಳ್ಳಕ್ಕೆ ಇವರ ದುರಾಸೆಯ ಮನಸ್ಸು ಒಪ್ಪೋದಿಲ್ಲ...ಅದಕ್ಕೆ ದುಡ್ಡು ಉಳಿಸೋದಕ್ಕೆ ಇರೋ ಒಂದೇ ಉಪಾಯ ಕೆಲಸಗಾರರನ್ನು ತೆಗೆದು ಹಾಕೋದು...

ಜನರನ್ನು ಬೇಕಾದ ಹಾಗೆ ತೆಗೆಯೋದಕ್ಕೆ ಇವರ ಹತ್ತಿರ ಇರೋ ಉಪಾಯಗಳಲ್ಲಿ ಒಂದು performance apprisal
ದೂರಾಲೋಚನೆ ಇಲ್ಲದೆ ಕೇವಲ short term ಲಾಭಕ್ಕಾಗಿ, ಹಿಂದೆ ಮುಂದೆ ನೋಡದೆ ನೇಮಕ ಮಾಡಿಕೊಂಡು ಚೆನ್ನಾಗಿ ಕೆಲಸ ಮಾಡಿಸಿಕೊಳ್ಳುತ್ತಾರೆ.
ಆಗ ಇವರಿಗೆ performance apprisal ಆಗಲಿ ಇನ್ನು ಯಾವುದೇ ಆಗಲಿ ನೆನಪಿಗೆ ಬರೋದಿಲ್ಲ...ಬಿಸಿನೆಸ್ ಸ್ವಲ್ಪ ಡೌನ್ ಆಗಕ್ಕೆ ಶುರು ಆದಾಗ ಇವೆಲ್ಲಾ ಪಿಳ್ಳೆ ನೆವಗಳು ಶುರು ಆಗುತ್ತೆ (ಕೆಲವು ಕಂಪನಿಗಳು ಇದಕ್ಕೆ ಅಪವಾದ...ಆದರೆ ಇಂಥವು ತುಂಬಾ ವಿರಳ). ಇಷ್ಟು ದಿನ ಕಷ್ಟ ಪಟ್ಟು ದುಡಿದ ಜನ ಇವರ ಕಣ್ಣಿಗೆ ಈಗ non-performers!!. ಬಾಸ್ ಗಳ ಚಮಚಾಗಳು , ಹೊಗಳು ಭಟ್ಟರು ತಮ್ಮ ಕೆಲಸ ಉಳಿಸಿಕೊಳ್ಳುತ್ತಾರೆ!!! ಬೇರೆ ಭಾಷೆಯವರಾದರೆ ತಮ್ಮವರನ್ನ protect ಮಾಡುತ್ತಾರೆ ಆದರೆ ಗುಂಪುಗಾರಿಕೆ ಮಾಡದ ಕನ್ನಡದವರಲ್ಲಿ ಇದೂ ಇಲ್ಲ. apprisal ನ ನಿಜವಾದ ಉದ್ದೇಶ ಭಾರತದ ಸಾಫ಼್ಟ್ವೇರ್ ಕಂಪನಿಗಳಲ್ಲಿ ಯಾವತ್ತೋ ಮಂಗಮಾಯ ಆಯ್ತು.

ನನ್ನ ಅನಿಸಿಕೆ ಇಷ್ಟೇ :
೧. ನಿಜವಾಗೂ ಕೆಲಸದಿಂದ ತೆಗೆದಿದ್ದು ಅಯೋಗ್ಯರನ್ನೇ ಅಂತ ಇಟ್ಟುಕೊಂಡರೂ ....ಇಂಟರ್ವ್ಯೂ ಸಮಯದಲ್ಲಿ ಇಂಟರ್ವ್ಯೂ ಮಾಡುವವರ ಬುದ್ದಿ ಎಲ್ಲಿ ಹೋಗಿತ್ತು...ಈ ರೀತಿ ಅಪಾಯಿಂಟ್ ಮಾಡಿದವನೂ ಇದಕ್ಕೆ ಜವಾಬ್ದಾರ ತಾನೆ? ಅವನನ್ನು ಮೊದಲು ಕೆಲಸದಿಂದ ತೆಗೀಬೇಕು!!
೨. ಕೇವಲ ಆರ್ಥಿಕ ಕಾರಣಕ್ಕೆ ಜನರನ್ನು ಕೆಲಸದಿಂದ ತೆಗೆಯೋದು ಅಪರಾಧ!!!- ಸರಿಯಾಗಿ plan ಮಾಡದೇ ಕೆಲಸಗಾರರನ್ನು ಹುಚ್ಚು ಹುಚ್ಚಾಗಿ ನೇಮಕ ಮಾಡಿ..ಆಮೇಲೆ ಕಸದ ತೊಟ್ಟಿಗೆ ಹಾಕೊ ಈ ಮನಸ್ಥ್ತಿತಿ ತುಂಬಾ ಹೇಸಿಗೆ ತರಿಸುವಂತದ್ದು. use and throw policy ಮೊದಲು ತೊಲಗಬೇಕು. ಸರ್ಕಾರ ಮೊದಲು ಇದರ ಬಗ್ಗೆ ಗಮನ ಹರಿಸಬೇಕು. ನಾಯಿ ಕೊಡೆಗಳ ತರಹ ಹುಟ್ಟಿಕೊಳ್ಳುತ್ತಿರುವ BPO,call center ಮುಂತಾದ service sector ಕಂಪನಿಗಳನ್ನು ನಿಯಂತ್ರಿಸಬೇಕು.
೩. ಸಾಫ಼್ಟ್ವೇರ್ ಕಂಪನಿಗಳ ನೌಕರರು ಮೊದಲು ಸಂಘಟಿತರಾಗಬೇಕು...ಈಗಿನ ಅವಶ್ಯಕತೆ ಹರತಾಳ ಬಂಧ್ ಮಾಡುವ ಮನಸ್ಥಿತಿಯಾಗಲೀ, ಏನೂ ಜವಾಬ್ದಾರಿ ಇಲ್ಲದೇ ಜನರನ್ನು ಕಸಕ್ಕಿಂತ ಕೀಳಾಗಿ ಕಾಣುವ capitalism ಆಗಲೀ ಅಲ್ಲ. ನಮಗೆ ಬೇಕಾಗಿರುವುದು communism ಹಾಗೂ capitalism ಗಳ ಒಳ್ಳೆಯ ಅಂಶಗಳುಳ್ಳ ಸಮನ್ವಯದ ಮಾರ್ಗ...

ಇದಾಗಲು ಇನ್ನೆಷ್ಟು ದಿನ ಬೇಕೋ...ಕಾದು ನೋಡಬೇಕು!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕೈ ಕೊಟ್ಟ ಜೆಟ್ ಏರ್

createam's picture

ದುರಾಸೆ ಬಗ್ಗೆ ಬರ್ದಿದ್ದೀರಾ, ಆದರೆ capitalismನಲ್ಲಿ ದುಡ್ಡೂ ಮಾಡೋದೇ ಮೂಲ ಮಂತ್ರ. ಈ ಅಮೇರಿಕದ ಕಂಪೆನಿಗಳು ಇಲ್ಲಿಗೆ ಬಂದು, ಅಥವಾ ಅಲ್ಲಿಂದಲೇ ಇಲ್ಲಿನ ಕಂಪೆನಿಗಳಿಗೆ ಕೆಲಸವನ್ನ outsource ಮಾಡುತ್ತಿದ್ದಾಗ ಎಲ್ಲರು ಖುಶಿ ಪಟ್ಟಿದ್ದೇ ಬಂತು. ಎಲ್ಲಾರು ಗ್ಲೊಬಲೈಜ಼ೇಶನ್‍ ಮತ್ತು free market ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅನ್ನೋ ತರ ಮಾತಾಡಿದ್ರು. Trickle down effect ಅಂತ ಕ್ಯಾಬ್ ಓಡಿಸೋರವರ ಕೈಯಲ್ಲಿರೋ ಮೊಬೈಲ್ ಕಡೆ ಕೈ ತೋರಿಸಿದ್ರು. ಆದರೆ ಈ ಕಂಪೆನಿಗಳು ಇಲ್ಲಿಗೆ ಬರ್ತಿರೋದೆ ಕಡಿಮೆ ಬೆಲೆಗೆ ಸಿಗ್ತಿರೋ ಮಾನವ ಸಂಪಲ್ಮೂಲಗಳಿಗೆ ಅಂತ ಹೇಳ್ದ್ರೆ ಯಾರೂ ನಂಬಲಿಲ್ಲ, ನಾವು ಭಾರತೀಯರು ಅತಿ ಬುದ್ದಿವಂತರು, ಅದಕ್ಕೆ ನಮ್ಮನ್ನೆಲ್ಲ ಹುಡುಕಿಕೊಂಡು ಈ ಕಂಪನಿಗಳು ಬರ್ತಾ ಇರೋದು ಅಂತ ಬಾಯಿ ಮುಚ್ಚಿಸಿದ್ರು. ಇಲ್ಲಿ job security ಇಲ್ಲ ಅಂತ ಹೇಳಿದ್ರೆ ಅದೆಲ್ಲ ಯಾಕೆ ಬೇಕು ಇಷ್ಟೊಂದು ಕೆಲ್ಸ ಸಿಗೊವಾಗ, ಅವ್ರು ಕಿತ್ತಾಕೋದೇನು ನಾವೆ ಬೇರೆ ಕೆಲ್ಸ ನೋಡ್ಕೊಳೊ ಕಾಲ ಇದು ಇದು ಅಂತ ನಕ್ಕರು. ಇಲ್ಲ ೮ ವರ್ಷದ ಕೆಳಗೆ bubble burst ಆದಾಗ ಜನರನ್ನ ಅಮೇರಿಕದಲ್ಲಿ ಹಿಗ್ಗಾ ಮುಗ್ಗಾ ಕಿತ್ತಾಕಿದ್ರು, ಇಲ್ಲೂ ಒಂದು ದಿನ ಹಂಗೆ ಅಂತ ಹೇಳಿದ್ರೆ, ಅದೆಲ್ಲ perform ಮಾಡದೆ ಇರೊವ್ರನ್ನ ಕಿತ್ತು ಹಾಕಿದ್ದು, ಜಾವಾ ಬಿತ್ತೋಯ್ತಂತೆ (ಎಲ್ಲಿಗೆ ಅಂತ ನನಗೆ ಇನ್ನೂ ಗೊತ್ತಾಗಿಲ್ಲ) ಅದಕ್ಕೆ ಜಾವಾದಲ್ಲಿ ಕೆಲ್ಸ ಮಾಡೋವ್ರನ್ನೆಲ್ಲ ಕಿತ್ತಾಕಿದ್ರು, ಅವ್ರು ಹೊಸ ಟೆಕ್ನಾಲಜಿಗಳನ್ನ ಕಲಿತಿದ್ರೆ ಕೆಲ್ಸ ಉಳಿತಿತ್ತು ಅಂದ್ರು.
ನಾನೂ ಇಂತದೇ ಒಂದು ಕಂಪೆನಿಯಲ್ಲಿ ಕೆಲಸ ಮಾಡುವವ. ಹಾಗಾದ್ರೆ ಬೇರೆ ಏನು ಮಾಡಬಹುದಿತ್ತು, ಗೊತ್ತಿಲ್ಲ. ಆದರೆ ಒಂದಂತು ನಿಜ, ನನ್ನನ್ನ ಕಿತ್ತು ಹಾಕಿದ್ರೆ ನಾನು ಆ ಕಂಪೆನಿಗಳನ್ನು ಅಪರಾಧಿ ಅಂತೆಲ್ಲ ಕರೆಯೋದಿಲ್ಲ, ಯಾಕೆಂದ್ರೆ ನನಗೆ ಗೊತ್ತು, free market economy ಕೆಲಸ ಮಾಡೋದೆ ಹಾಗೆ. ನಾಳೆ ನನ್ನ ಕೆಲಸವನ್ನ ನನ್ನ ಅರ್ಧ ಸಂಬಳಕ್ಕೆ ಕೆಲಸ ಮಾಡೋ ಆಫ್ರಿಕದವನಿಗೆ ಕೊಟ್ಟರೆ ನಾನು ಅವ್ರನ್ನ ಬ್ಲಡಿ ಆಫ್ರಿಕನ್ ಅಂತ ಕರೆಯೋದಿಲ್ಲ, ಯಾಕೆಂದರೆ ಆಗ್ಲೆ ಒಬ್ಬ ಅಮೇರಿಕನ್ನನಿಗೆ ನಾನು ಬ್ಲಡಿ ಇಂಡಿಯನ್ ಆಗಿಬಿಟ್ಟಿದ್ದೇನೆ.
ನಮಗೆ ಭಾರತದಲ್ಲಿ ಇದೆಲ್ಲ ಹೊಸದು, ಸಿಟ್ಟು ಬರುತ್ತೆ ನಮಗೆ ಇದನ್ನೆಲ್ಲಾ ನೋಡಿದಾಗ. ಆದರೆ ಫ್ರೀ ಮಾರ್ಕೆಟ್‍ನ ಪ್ರತಿಪಾದಕ ಅಮೇರಿಕಾದಲ್ಲಿ ಇದೆಲ್ಲ ಮುಂಚಿಂದಲೂ ನಡೆದುಕೊಂಡು ಬಂದಿದ್ದು. ಫ್ರೀ ಮಾರ್ಕೆಟ್‍ನಿಂದ ಸಿಗುವ ಕೆಲಸಗಳಿಂದ ನಾವು ಸಂಬಳ ಪಡೆಯೋದಾದ್ರೆ ಅದರಿಂದ ಆಗುವ ಪರಿಣಾಮಗಳನ್ನೂ ನಾವು ಎದುರಿಸಬೇಕು.

ಬೇಜಾರಾಗುತ್ತೆ, ಆದ್ರೆ ಇಲ್ಲಿ ನಡಿಯೋದೇ ಹಾಗೆ.