ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Sampada Blogs › hndivya ರವರ ಬ್ಲಾಗ್

hndivya

ನನ್ನ ಅನಿಸಿಕೆಗಳು.

ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

October 3, 2008 - 5:43pm — hndivya

ನಾನು ಮತ್ತು ನನ್ನ ತಾಯಿ ಇಬ್ಬರು ಅಂಗಡಿಗೆ ಹೋಗಬೇಕು ಎಂದು ನಾನು ನನ್ನ ಪಾಸ್ ನ ಬ್ಯಾಗ್ ಇಂದ ತೆಗೆದು ಕೊಂಡು ಅಂಗಡಿಗೆ ಹೋಗಿ ಬಂದ್ವಿ . ಮಾರನೇ ದಿನ ಕಾಲೇಜ್ ಗೆ ಹೋಗೋ ಗಡಿ ಬಿಡಿ ಯಲ್ಲಿ ಪಾಸ್ ನ ಬ್ಯಾಗ್ ಗೆ ಹಾಕಿ ಕೊಳ್ಳುವುದನ್ನ ಮರೆತು ಬಿಟ್ಟೆ . ಹಾಗೆಯೇ ಬಸ್ ಹತ್ತಿಬಿಟ್ಟೆ . ನನ್ನ ದುರದೃಷ್ಟಕ್ಕೆ ಚೆಕ್ಕಿಂಗ್ ನವರು ಬಂದಿಬಿಟ್ಟರು . ನನಗೆ ಏನು ಮಾಡುವುದು ಎಂದು ತೋಚಲೇ ಇಲ್ಲ. ನನ್ನನು ಗಮನಿಸಿದ ಚೆಕ್ಕಿಂಗ್ ನವರು ಪಾಸ್ ಇಲ್ಲ ಎನ್ನುತಿದ್ದ ಹಾಗೆ, ಎದ್ದು ಬಾಮ್ಮ ಈ ಕಡೆ ಎಂದು ಅವಾಜ್ ಹಾಕಿ ಕರುದ್ರು. ನಂಗೆ ಏನು ತೋಚಲೇ ಇಲ್ಲ. ಇಡೀ ಬಸ್ ಜನ ನನ್ನ ನೋಡುತಿದ್ದರು. ನಂಗೆ ಅಳು ತಡೆಯಲು ಆಗಲಿಲ್ಲ. ಚೆಕ್ಕಿಂಗ್ ನವರು ಒಬ್ಬರು ಗಂಡಸು ಇನ್ನೊಬ್ಬರು ಹೆಂಗಸು.ಏನು ಬಯ್ಯಲಿಲ್ಲ ಅವರು ಆದರೆ ನನಗೆ ಆಗಿರುವ ಅವಮಾನನ ತಡಿಯೋಕೆ ಆಗಲಿಲ್ಲ ನನಗೆ. ನಾ ತುಂಬ ಅಳುತ್ತಿದೆ ಕಡೆಗೆ ಆ ಇಬ್ಬರು ಚೆಕ್ಕಿಂಗ್ ನವರು ನನ್ನ ಪರಿಸ್ತಿತಿ ನೋಡಿ ನಂಗೆ ವಾರ್ನ್ ಮಾಡಿ ಹಾಗೆಯೇ ನನ್ನನು ಸಮಾದಾನ ಮಾಡಿ ಹೋದರು. ಅವರು ನನಗೆ, ಇದು ಸಹಜ ಹೋಗ್ಲಿ ಬಿಡಮ್ಮ ನಾವು ಆಗಿರೋದಕ್ಕೆ ನೀನ್ ಬಚಾವ್ ಆಗಿದೀಯ ಅಂತ ನಂಗೆ ಸಮಾದಾನ ಮಾಡ್ತಿದ್ರು ನಾನ್ ಅಳ್ತಾನೆ ಇದ್ದೆ . ನನ್ನನು ನೋಡಿ ಅಲ್ಲಿ ಇರೋ ಜನಕೆಲ್ಲಾ ಹಾಗು ಆ ಚೆಕ್ಕಿಂಗ್ ನವ್ರಿಗೆಲ್ಲ ನಗು ಬರ್ತಿತ್ತು. ಆದ್ರೆ ನಂಗೆ ಅಳು ತಡಿಯೋಕೆ ಆಗ್ಲಿಲ್ಲ . ನಾನ್ ಕಾಲೇಜ್ ಗೆ ಹೋಗಲಿಲ್ಲ ತುಂಬ ತಲೆ ನೋವ್ವು ಬಂದಿತ್ತು. ನಾ ಮನೆಗೆ ವಾಪಾಸ್ ಬಂದು ಬಿಟ್ಟೆ .

~.~
  • hndivya ರವರ ಬ್ಲಾಗ್
  • Login or register to post comments
  • 426 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2008 - 6:08pm — vikashegde

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

vikashegde's picture

ಹ್ಮ್.. ಸಹಜ. ಅಳು ಬರತ್ತೆ.

ಈಗ ನೀವು ತಪ್ಪಿಲ್ಲದೇ ಬರೀಬೇಕು ಅಂತ ನಾನು ನೈಸಾಗಿ ಆವಾಜ್ ಹಾಕ್ತಾ ಇದೀನಿ. ಅಳ್ಬೇಡಿ ಮತ್ತೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:09pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ಹ ಹ ಹ .. ಸರಿ ಸರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 7:30pm — shreedevikalasad

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

shreedevikalasad's picture

ದಿವ್ಯಾ, ನೀವು ತುಂಬಾ ಸೆನ್ಸಿಟಿವ್ ಅದಕ್ಕೇ ಹೀಗಾಗತ್ತೆ. ಹೋಗ್ಲಿ ಬಿಡಿ ಅಳಬೇಡಿ. ನೀವು ಹೀಗೆ ಅಳ್ತಾ ಇದ್ರೆ ವಿಕಾಸ್‌ನಂಥವ್ರು ಮತ್ತೆ ಮತ್ತೆ ತಮಾಶೆ ಮಾಡ್ತಿರ್‍ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಬೇಕೂಂತ ಮಾಡಿದ ತಪ್ಪಲ್ಲವಲ್ಲ ಅಷ್ಟಕ್ಕೂ. ಬಿ ಕೂಲ್‌........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 10:28am — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ಹೌದು ನಂಗೆ ಈಗ ಅನಿಸ್ತಿದೆ. ನನ್ನ ನೋಡಿ ಬಸ್ ಜನ ಮಾತ್ರ ನಕ್ಕಿದರು. ಆದ್ರೆ ಇಲ್ಲಿ ಎಲ್ಲರೂ ನನ್ನ ಗೇಲಿ ಮಾಡ್ತಿದ್ದಾರೆ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:27am — shreedevikalasad

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

shreedevikalasad's picture

ಅಯ್ಯೋ ದಿವ್ಯ.... ಗೇಲಿ ಮಾಡ್ತಿಲ್ಲ. ನಿಮ್ಮನ್ನ ಸ್ಟ್ರಾಂಗ್ ಮೈಂಡೆಡ್ ಮಾಡ್ತಿದಾರೆ. ಥಿಂಕ್ ಇಟ್ ಪಾಸಿಟಿವ್‌. ಬಿ ಹ್ಯಾಪಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 10:28pm — muralihr

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

muralihr's picture

ನ೦ಗೂ ನಿಮ್ಮ ಕತೆ ಕೇಳಿ ಅಳು ಬ೦ತೂ ! ಪಾಪ ನಿಮ್ಮ೦ತವರಿಗೆ ಹಿ೦ಗಾಗ್ ಬಾರ್ ದಾಗಿತ್ತು.
ಈ ವಯಸ್ಸಲ್ಲಿ ಮರೆವು ಬರ್ ಬಾರದಾಗಿತ್ತು .ಈ ರೋಗ ಒ೦ದ್ಸಾರಿ ಬ೦ದರೆ ಹೋಗೋದಿಲ್ವ೦ತೇ ....ಅಯ್ಯೋ .. ಓಓ ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 10:29am — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ರೀ ಸಾಕು ರೀ ಗೇಲಿ ಮಾಡಿದ್ದೂ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:50am — shaamala

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

shaamala's picture

ದಿವ್ಯಾ,

ಒಂದು ರೀತಿಯಲ್ಲಿ ನೀನು ಅತ್ತಿದ್ದು ಒಳ್ಳೇದಾಯಿತು, ಚೆಕಿಂಗ್ ಮಾಡೋವ್ರು ಬರೀ ವಾರ್ನ್ ಮಾಡಿ ಬಿಟ್ಬಿಟ್ರು:)
ಆದರೆ ಅದರಲ್ಲಿ ಅವಮಾನ ಏನಿದೆ? ಎಲ್ಲರೂ ಒಂದಲ್ಲಾ ಒಂದು ಸಲ ಏನಾದರೂ ಮರೀತೀವಿ. ಯಾರೂ perfect ಅಲ್ಲವಲ್ಲ? ಇದೆಲ್ಲಾ ಚೆಕಿಂಗ್ ಮಾಡೋವ್ರಿಗೂ ಗೊತ್ತಾಗತ್ತೆ, ಯಾರು ಹೇಗೆ ಅಂತ. ಇನ್ನು ಜನ ನೋಡಿ ನಕ್ರು ಅಂದ್ರೆ, ನಗಲಿ ಬಿಡು. ಪ್ರಪಂಚದಲ್ಲಿ ಎಲ್ಲಾ ಥರಾ ಜನಾನೂ ಇದ್ದಾರೆ - ಕೆಲವರಿಗೆ ಬೇರೆಯವರು ಸಂಕಟ ಪಟ್ಟರೆ ಖುಷಿ, ಇನ್ನು ಕೆಲವರು ಅಯ್ಯೋ ಪಾಪ ಅಂತಾರೆ, ಇನ್ನು ಕೆಲವರು (ಕೈಬೆರಳೆಣಿಕೆಯಷ್ಟು ಮಂದಿ) ಸಹಾಯಾನೂ ಮಾಡ್ತಾರೆ. ಏನಾದರೂ ಧೈರ್ಯ ಕಳೆದುಕೊಳ್ಳಬಾರದು. ನನ್ನಿಂದ ತಪ್ಪಾಗಿದೆ, ಮತ್ತೊಮ್ಮೆ ಹಾಗಾಗದಂತೆ ಎಚ್ಚರ ವಹಿಸುತ್ತೇನೆ ಎನ್ನುವ ಅರಿವು ಬಂದರೆ ಸರಿ.

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 12:25pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ನಿಮ್ಮ ಮಾತು ನಿಜ. ಈಗ ಪಾಸ್ ನ ಬಗ್ಗೆ ಹೆಚ್ಹು ಕಾಳಜಿ ನನಗೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:57am — mowna

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

mowna's picture

ರೀ ದಿನ್ಯ, ಅಳು ಹೆಂಗಸರ ಅಸ್ತ್ರವಂತೆ. ಬಸ್ಸ್ ಪಾಸ್ ಮರೆತರೇನಂತೆ, ಜನರ ಎದುರು ಪಾಸ್ ಅದಿರಲ್ಲಾ........ನಿಟ್ಟುಸಿರು ಬಿಟ್ಟಿರಬೇಕು ಅಲ್ಲವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 12:26pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ಇಲ್ಲ ರೀ ನಾ ತುಂಬಾ ಅಳುತಲೇ ಇದ್ದೆ. ಅವಮಾನ ಆಯಿತು ಅನ್ನೋ ಭಾವನೆ ನನಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 12:02am — Nagaraj.G

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

Nagaraj.G's picture

ರೀ ದಿವ್ಯಾರವರೇ ನಿಮ್ಮ ಕಥೆ ಕೇಳಿ ನನ್ನ ಸ್ನೇಹಿತನ ಸ್ಟೋರಿ ಜ್ಞಾಪಕ ಬಂತು ಕಣ್ರೀ. ಕಳೆದ ತಿಂಗಳು ನಮ್ಮ ಸ್ನೇಹಿತ ನಿಮ್ಮ ತರಾನೇ ಪಾಸು ಬಿಟ್ಟು ಹೋಗಿ ಚೆಕ್ಕಿಂಗ್ ಕೈಲಿ ಸಿಕ್ಕಿ ಹಾಕಿಕೊಂಡಿದ್ದ ಆದ್ರೆ ಅವನು ನಿಮ್ಮ ತರಾನೇ ಬಚಾವ್ ಆದ ಯಾವ ರೀತಿ ಅಂತಿರಾ? ಮುಂದೆ ಒಬ್ಬ ಚೆಕಿಂಗ್ ಇದ್ದ , ಹಿಂದೆ ಇನ್ನೊಬ್ಬ ಚೆಕ್ಕಿಂಗ್ ಇದ್ದ . ಇವನು ಹಿಂದೆ ಇದ್ದದ್ದರಿಂದ ಹಿಂದೆ ಇದ್ದ ಚೆಕಿಂಗ್ ಗೆ ಮುಂದೆ ನನ್ನ ಗೆಳತಿ ಇದ್ದಾಳೆ ಅವಳ ಹತ್ರ ಇದೆ ಟಿಕೆಟ್ ಅಂದ ಅಷ್ಟೆ ಆ ಬಕ್ರ ಚೆಕಿಂಗ್ ನಿಜಾ ಅಂದುಕೊಂಡು ಹೋಗಿ ತಗೋ ಬಾ ಅಂದನಂತೆ ಸಿಗ್ನಲ್ ಬೇರೆ ಬಿದ್ದಿದ್ದರಿಂದ ಬಸ್ ನಿಲ್ಲಿಸಿತ್ತು ಜೊತೆಗೆ ಸ್ವಯಂಚಾಲಿತ ಬಾಗಿಲುಗಳು ಸಹ ಇಲ್ಲ ಕೆಳಗೆ ಇಳಿದು ಎಸ್ಕೇಪ್ ಆಗಿಬಿಟ್ಟ ಹ್ಹ ಹ್ಹ ಹ್ಹ ಹ್ಹಾ ಹ್ಹಾ ............
ನಾಗರಾಜ್. ಜಿ
www.maraa.in

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 5:36pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ಹ್ಹ ಹ್ಹ ಹ್ಹ ಅವರ ಧಯ್ರ್ಯ ಮೆಚ್ಕಾಬೇಕದ್ದೆ ಬಿಡಿ.
ಕನ್ನಡದ ಕುವರಿ
ದಿವ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 12:46pm — gurubaliga

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

gurubaliga's picture

ನಮ್ಮ ಬಂಟ್ವಾಳ ಕಾಲೇಜು ಊರಿನಿಂದ ಸ್ವಲ್ಪ ಹೊರಗೆ. ಅದಕ್ಕೆಂದೇ ಸರಕಾರೀ ಬಸ್ಸು. ಎಲ್ಲಾ ಪಾಸ್ ಪಾಸ್ ಅನ್ನೋರು. ಎಲ್ಲಿ ತೋರ್ಸಿ ಅಂದ್ರೆ ಬಸ್ಸಲ್ಲಿ ಗಿಜ್ಜೋ ಗಿಜ್ಜು. ಒಮ್ಮೆ ಒಬ್ಬ ಕಂಡಕ್ಟರ್ ಸ್ಟ್ರಿಕ್ಟ್ ಆಗಿ ನೋಡಿ ಎಲ್ಲ ಪಾಸ್ ತೋರಿಸಲೇಬೇಕು ಅಂದ. ಸರಿ. ಇವನತ್ರ ಪಾಸ್ ಇಲ್ಲ. ಈಗ ತೋರಿಸ್ತೀನಿ ಈಗ ತೋರಿಸ್ತೀನಿ ಅಂತ ಕಾಲೇಜು ಬರೋವರೆಗೂ ಮುಂದರ್ಸ್ಕೊಂಡು ಹೋದ. ಕಾಲೇಜು ಬಂತು. ಕಂಡಕ್ಟರೂ ಬಿಡಲಿಲ್ಲ. ಎಲ್ಲಿ ತೋರಿಸಿ ಅಂತ ಬಾಗಿಲಿಗೆ ಅಡ್ಡ ನಿಂತ್ಕೊಂಡ. ಇವನು ತಡೀರಿ ಸ್ವಲ್ಪ ಇಳಿಲಿಕ್ಕೆ ಬಿಡಿ. ತೋರಿಸಿತೀನಿ ಅಂದ. ಆಯ್ತು ಅಂತ ಕಂಡಕ್ಟರ್ ಇಳಿಯಲು ಬಿಟ್ಟ. ಇವನು ಬಸ್ಸಿನಿಂದ ಇಳಿದವನೇ "ಏನು ಕಣ್ಡಕ್ಟರೆ! ನಾನು ನಿಮ್ಮ ಬಸ್ಸಿನಲ್ಲಿ ಬರಲೇ ಇಲ್ಲ. ಬೇಕಾದರೆ ಬಸ್ಸಿನಲ್ಲಿದ್ದವರನ್ನೆಲ್ಲ ಕೇಳಿ ಅಂದ. ಬಸ್ಸಿನಲ್ಲಿದ್ದವರೆಲ್ಲ (ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು. ) ಹೋ ಅಂತ ಗೌಜಿ ಮಾಡಿದರು. ಕಂಡಕ್ತರಿಗೂ ನಗು ಬಂತು.

ಅದಕ್ಕೆ ಹೇಳೋದು ಹಾಗೆಲ್ಲ ಆದ್ರೆ ಅಳಬಾರದು.
ವಿದ್ಯಾರ್ಥಿ ಶಕ್ತಿ ದೇಸ ಸಕ್ತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 9:59am — Aravind M.S

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

Aravind M.S's picture

ಬಾಳಿಗರೇ,

ಬಸ್ ಎಂದಂತೆ ಹಲವು ತಮಾಷೆಯ ನೆನಪು ಆಗ್ತದೆ :
೧. ನಮ್ಮ ಬಿ.ಟಿ.ಎಸ್ ಒಮ್ಮೆ ನಿಂತು ಬಿಟ್ಟಿತು. ತಳ್ಳಿರೋ ಎಂದರೆ ಕೆಲವು ಒಳಗೇ ಇದ್ದ ತುಂಟ ಹುಡುಗರು ಒಳಗಿಂದಲೇ ತಳ್ಳಿದರು ! ತಳ್ಳು ತಳ್ಳು, ಐಸ್ಸ ಐಸ್ಸ ಎಂದು ಸುಮ್ಮನೇ ಹೇಳುತ್ತಾ - ಮುಂದೆ ಕಂಡಕ್ಟರ್ "ಏನ್ರೀ, ಬಸ್ ಮುಂದೇ ಹೋಗ್ತಾ ಇಲ್ಲ, ನೂಕ್ತನೇ ಇದೀರಿ" ಎಂದು ಗೋಳಿಟ್ಟ
೨. ರಷ್ ಬಸ್ ನಲ್ಲಿ ಕೊನೆಗೆ ಕಂಡಕ್ಟರ್ಗೇ ಜಾಗ ಇರ್ಲಿಲ್ಲ. ಒಳಗೆ ಹೋಗ್ರೀ ಎಂದರೆ "ಜಾಗ ಇಲ್ಲ ರಿ" ಎಂಬ ಉತ್ತರ ಬಸ್ ಒಳಗಿಂದ. "ನಾನು ಬಸ್ ಕಂಡಕ್ಟರ್, ನನಗೇ ಜಾಗ ಇಲ್ಲ" ಎಂದು ಗೋಳಿಟ್ಟ ಬಡಪಾಯಿ ಕಂಡಕ್ಟರ್
೩. ಕಾಲು ಇಡಬೇಡ್ರೀ ಎಂದ ಯುವತಿಯೊಬ್ಬಳಿಗೆ "ಕಾಲಿಗೆ ಕಣ್ಣುಂಟಾ, ಹೇಗೆ ಗೊತ್ತಾಗ್ತದೆ" ಎಂದು ಜವಾಬಿಸಿದ ನನ್ನ ಫ್ರೆಂಡ್ ಒಬ್ಬ

- ಅರವಿಂದ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 4:51pm — gurubaliga

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

gurubaliga's picture

ಹ.. ಹ.. Smiling :-))

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 3:06pm — girish.rajanal

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

girish.rajanal's picture

ನಾನು ಪಾಸು ಮರೆತರೆ ಅಥವಾ ಟಿಕೆಟ್ ತಗೊಳ್ಳೋಕೆ ದುಡ್ಡೂ ಇಲ್ಲದಿದ್ದರೆ ಮರೆತರೆ ನೆನಪಾದ ತಕ್ಷಣ ಬಸ್ಸಿಂದ ಇಳಿದು ಬಿಡ್ತೀನಿ.
ತಕ್ಷಣ ನನ್ನ ಗೆಳೆಯರಿಗೆ ಅಥವಾ ಹತ್ತಿರದ ಪೋನಾಯಿಸುತ್ತೇನೆ. ಅಥವಾ ನಾನು ಹೋಗೋ ಜಾಗ ಅಥವಾ ಮನೆ ೫ಕಿ.ಮಿ ಒಳಗೆ ಇತ್ತಂದರೆ ನೆಡೆದು ಸಾಗುತ್ತೇನೆ..ಅಷ್ಟೇ... ಕಿರಿಕಿರಿನೇ ಬೇಡ...ಅದೂ ಬೆಂಗಳೂರಲ್ಲಿ ಇಂತಹ ಅನುಭವ ಆಗಿದೆ..

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 3:08pm — girish.rajanal

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

girish.rajanal's picture

ಗೆಳೆಯ,
ನಾನು ಪಾಸು ಮರೆತರೆ ಅಥವಾ ಟಿಕೆಟ್ ತಗೊಳ್ಳೋಕೆ ದುಡ್ಡೂ ಇಲ್ಲದಿದ್ದರೆ ಮರೆತರೆ ನೆನಪಾದ ತಕ್ಷಣ ಬಸ್ಸಿಂದ ಇಳಿದು ಬಿಡ್ತೀನಿ.
ತಕ್ಷಣ ನನ್ನ ಗೆಳೆಯರಿಗೆ ಅಥವಾ ಹತ್ತಿರದ ಪರಿಯದವರಿಗೆ ಪೋನಾಯಿಸುತ್ತೇನೆ. ಅಥವಾ ನಾನು ಹೋಗೋ ಜಾಗ ಅಥವಾ ಮನೆ ೫ಕಿ.ಮಿ ಒಳಗೆ ಇತ್ತಂದರೆ ನೆಡೆದು ಸಾಗುತ್ತೇನೆ..ಅಷ್ಟೇ... ಕಿರಿಕಿರಿನೇ ಬೇಡ...ಅದೂ ಬೆಂಗಳೂರಲ್ಲಿ ಇಂತಹ ಅನುಭವ ಆಗಿದೆ..

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 5:35pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ನೆಮ್ಮೆಲರ ಪ್ರತಿಕ್ರಿಯೆ ಗಳು ತುಂಬಾ ಚೆನ್ನಾಗಿ ಬಂದಿದೆ. ನನಗೆ ನೋಡಿ ತುಂಬ ಸಂತೋಷ ಆಯಿತು. ಅದರಲ್ಲೂ ಅರವಿಂದ್ ರವರು ಕಂಡಕ್ಟರ್ ಆಗಿ ಅನುಬವಿಸಿರುವ ಕತೆ ನೋಡಿ ಪಾಪ. Smiling
ಕನ್ನಡದ ಕುವರಿ
ದಿವ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 5:38pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ನಿಮ್ಮ ಗೆಳೆಯ ತುಂಬ ಬಿದ್ದಿವಂತ ಬಿಡಿ.
ಕನ್ನಡದ ಕುವರಿ
ದಿವ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 5:39pm — hndivya

ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

hndivya's picture

ನಿಮ್ಮ ಗೆಳೆಯ ತುಂಬ ಬಿದ್ದಿವಂತ ಬಿಡಿ.
ಕನ್ನಡದ ಕುವರಿ
ದಿವ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೂವಿನ ಹುಡುಗಿ....
  • ಸರ್ ಕಾಫೀ/ಟೀ???
  • IPL ಎಂಬ ಅತಿ ಕ್ರಿಕೇಟು
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
  • ನನ್ನ ಮೊಬೈಲು
Syndicate content

ಲೇಖಕರು

hndivya's picture

ಪೂರ್ಣ ಹೆಸರು
divya hn

ಪರಿಚಯ

I am divya...
Studying.. and like to write some thing intresting articles
ನಾ ಬರಯುವ articles ಗಳಲ್ಲಿ ತಪ್ಪಿದ್ದರೆ ದಯವಿಟ್ಟು ನನ್ನನು ಬಯ್ಯಬೇಡಿ. ಬದಲಿಗೆ ತಿದ್ದಿಕೊಳ್ಳಲು ಅವಕಾಶ ಮಾಡಿ ಕೊಡಿ Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
  • 'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'
  • ಕಳಚಿಬೀಳುವ ಮುಖವಾಡ
  • ಕಲಿಕೆಗೆಲ್ಲಿದೆ ಕೊನೆ...
  • bio data
  • ಸಂತೋಷಕ್ಕೆ............. (ಗೀತಾ) ಜಪಾನಿ ವೇದಿಕೆಯಲ್ಲಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 5:10am
  • venkatesh
    ಉ: ಮರುಕಳಿಸಿದ ನೆನಪು
    December 3, 2008 - 4:45am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator