"Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಕನ್ನಡದಲ್ಲಿ ಮೊದಲ ಬಾರಿಗೆ ಹಿಪ್ ಹಾಪ್ ಹಾಡು ಗಳನ್ನೂ (Urbanlads) ಮಾಡಿದ ನಮ್ಮ ಬೆಂಗಳೂರಿನ ಹುಡುಗರು ಈಗ "Bachelors" ಎಂಬ ಚಲನ ಚಿತ್ರ ಮಾಡಲು ಹೊರಟಿದ್ದಾರೆ. ಅವರಿಗೆ ಈ "Bachelors" ಅನ್ನುವ ಹೆಸರಿಗೆ ಬದಲು ಮತ್ತೊಂದು ಹೆಸರು ಬೇಕಂತೆ. ನಿಮ್ಮ ಪ್ರಕಾರ ಆ ಚಿತ್ರಕ್ಕೆ ಯಾವ ಹೆಸರನ್ನು ಕೊಡಬಹುದು?
- hndivya's blog
- Login or register to post comments
- 734 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ದಿವ್ಯ
"Bachelors"ಗೆ ಬದಲು "ಅರವಿಂದ್" ಅಂತಾನೇ ಹೆಸರಿಡಕ್ಕೆ ಹೇಳ್ರಿ
(ಯಾಕಂದ್ರೆ ನಾನೂ ಇನ್ನೂ "Bachelor") :)
ಅರವಿಂದ್
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹ ಹ ಹ ... Article ನಲ್ಲಿ ತರಲೆ ಉತ್ತರಗಳಿಗೆ ಅವಕಾಶ ಇಲ್ಲ ಅಂತ ಹಾಕಬೇಕಿತ್ತು D
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಗುಂಡ್ರು ಗೂವಿ ಅಂತ ಹೇಸರಿಡಕ್ಕೆ ಹೇಳಿ :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಯಾಕ್ರಿ ನಿಮಗೆ ಬೇರೆ ಯಾವ ಹೆಸರು ಸಿಗಲಿಲ್ವಾ? :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ದಿವ್ಯಾ,
"ಸ್ವತಂತ್ರರು" ಅಂತ ಇಡಬಹುದೇನೋ...
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಸರ್ ಇನ್ನು ಸ್ವಲ್ಪ ಚೆನ್ನಾಗಿರೋ ಹೆಸರು ಇದ್ದೀಯ ನೋಡಿ ಯೋಚನೆ ಮಾಡಿ. ಹಿಂದಿ ಅಥವಾ ಆಂಗ್ಲ ಮಿಶ್ರಣ ಇದ್ದರು ಪರವಾಗಿಲ್ಲ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಆಂಗ್ಲ ಬರೆಸಿದ ಹೆಸ್ರು ಓಕೆ ಹಿಂದಿ ಯಾಕೆ???
ಒಲುಮೆಯಿಂದ,
ಗಿರೀಶ ರಾಜನಾಳ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಸುಮ್ಮನೆ ಹೇಳಿದ್ದೀನಿ ನೋಡೋಣ ಯಾವ ರೀತಿ ಹೆಸರು ಗಳು ಬರಬಹುದು ಅಂತ. :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ನೀವ ಒಂದು ಹೆಸರಿಡ್ರಿ ನೋಡೂನು...:)
ಮೂಗುದಾರ ಇಲ್ದೋರು...ಇದು ಹೆಂಗೈತಿ ದಿವ್ಯಾ :D
ಒಲುಮೆಯಿಂದ,
ಗಿರೀಶ ರಾಜನಾಳ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಅಯ್ಯೋ ಯಾಕೆ ಎಲ್ರು ಈ ರೀತಿ ಹೆಸರು ಗಳನ್ನ ಕೊಡುತ್ತಿದ್ದೀರಾ? ಸ್ವಲ್ಪ ನಾದ್ರೂ ಚೆನ್ನಾಗಿರೋ ಹೆಸರು ಹೇಳ್ರಿ. :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬ್ಯಾಚುಲರ್‍ಸ ಇನ್ನೂ ಹೆಂಗಪಾ ಹೇಳಬೇಕು....
ಹ್ಞೂ ಸಿಕ್ತು....
ಕುಮಾರರು...(ನಿಮಗೆ ಬೇಕಾದರೆ ಗಮಾರರು ಅಂತ ಕರೀರಿ) ಅಂತ ಇಡಬಹುದು..:D
ಇದಕ್ಕಿಂತ ಚೊಲೊ ಹೆಸರು ಎಲ್ಲಿ ಸಿಗತ್ರೀ ನಿಮಗ...
ಒಲುಮೆಯಿಂದ,
ಗಿರೀಶ ರಾಜನಾಳ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ದಿವ್ಯಾ,
"ಚೆನ್ನಾಗಿರೋದು" ಇದನ್ನು ವಿವರಿಸಿ (define ಮಾಡಿ) ಮೊದಲು.
ಆಮೇಲೆ ಹೆಸರಿಡೋಣವಂತೆ.
:-)
ಗಿರೀಶ್,
>>ಆಂಗ್ಲ ಬರೆಸಿದ ಹೆಸ್ರು ಓಕೆ ಹಿಂದಿ ಯಾಕೆ???
ಹಿಂದಿ ಓಕೆ (ನಮ್ಮ ರಾಷ್ಟ್ರ ಭಾಷೆ) ಆಂಗ್ಲ ಯಾಕೆ? ಹೇಳ್ತೀರಾ?
:-)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಚೆನ್ನಾಗಿರೋದು ಅಂದ್ರೆ ಆ ಹೆಸರು ಕೆಲ್ತಿದ್ರೆನೆ ಆ ಸಿನಿಮಾ ನೋಡ್ಬೇಕು ಅನ್ನಿಸಬೇಕು ಸರ್ :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹಿಂದಿ ರಾಷ್ಟ್ರ ಭಾಶೆನಾ....ನೀವು ಅದೇ ಗುಂಗಲ್ಲಿ ಇದ್ದೀರ..
ಹಿಂದಿ ರಾಷ್ಷ್ರಭಾಶೆ ಅಲ್ಲಾ ಸಾರು...ಅದೆಲ್ಲ ಹಿಂದಿ ಪ್ರಚಾರ ಮಾಡಲಿಕ್ಕೆ ತಲೆಮಾರುಗಳಿಂದ ನಮಗೆ ಮಾಡಿದ ಮೋಸ.
ಹಿಂದಿ ಕೇಂದ್ರ ಸರ್ಕಾರದ ಆಡಳಿತ ಭಾಶೆಯೇ ಹೊರತು ರಾಷ್ಟ್ರಭಾಶೆ ಅಲ್ಲ ಸರ್,
ಒಂದು ಸರತಿ ಏನ್ಗುರು ಬ್ಲಾಗ್ ನೋಡಿ..

ಸುರೇಶ್ ಸಾರ್,
ಕನ್ನಡ ರಾಷ್ಟ್ರಭಾಷೆಯಲ್ವ? ನಮ್ಮ ಸಂವಿಧಾನದಲ್ಲಿ ಗುರುತಿಸಿರುವ ಎಲ್ಲ ಭಾಷೆಗಳು ರಾಷ್ಟ್ರಭಾಷೆಗಳೆ ಅಲ್ವೆ? ದಯವಿಟ್ಟು ಇದರ ಮೇಲೆ ಬೆಳಕು ಚೆಲ್ಲಿ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"ಜಾಲಿ ಹುಡುಗರೂ" ಇದು ಹೇಗಿದೆ ರೀ................
ನಿಮ್ಮವ
ಮಧುಸೂದನ್ ಗೌಡ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹಾ .. ಇದು ಚೆನ್ನಾಗಿದೆ. :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ದಿವ್ಯ
ಕಥೆಯ ಸಾರಾಂಶ ಹೇಳ್ರಿ, ಒಂಚೂರು ತಲೆಗೆ ಕೆಲಸ ಕೊಟ್ಟುನೋಡೋಣ,
ನನ್ನ ಹೆಸರೇನ್ರಿ ಆಗಿದೆ :)
ಅರವಿಂದ್
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ನಿಮ್ಮ ಹೆಸರೇನೂ ಚೆನ್ನಾಗಿದೆ ಆದ್ರೆ ಅದುನ್ನ ಇತರೆ ನೀವೊಬ್ಬರೇ ಆ ಸಿನಿಮಾ ನೋಡಬೇಕಾಗುತ್ತೆ :)
ಮತ್ತು ಸಿನಿಮಾ ಸ್ಟೋರಿ ಇಲ್ಲೇ ಹೇಳ್ಬಿಟ್ರೆ ನಾಳೆ ಚಲನ ಮಂದಿರ ದಲ್ಲಿ ಹೋಗಿ ಯಾರು ನೋಡ್ತಾರೆ?
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"ಉಂಡಾಡಿ ಗುಂಡರು"
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"ಚಾತಕ ಪಕ್ಷಿಗಳು"
"The Waiting Birds"
"The Birds in Waiting"
"दम - ಪದಿಗರು" (ಸಂಪದಿಗರ ತರಹ)
:-)
ಸಾಕೇನ್ರೀ ದಿವ್ಯಾ?
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಯಾಕೋ ಯಾವ್ದು ಸರಿ ಹೋಗ್ತಿಲ್ವಲ್ಲ :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬಿಸಿರಕ್ತದ ಯುವಕರು , ಜಾಲಿ ಹುಡುಗರು , ಕನ್ನಡ ಕುವರರು , ಸಾಹಸಿಗರು, ಇನ್ನು ಯಾವ ರೀತಿ ಬೇಕು ನಿಮಗೆ ಸ್ವಲ್ಪ ಕಥೆ ಹೇಳಿಪ
ನಿಮ್ಮವ
ಮಧುಸೂದನ್ ಗೌಡ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಕಥೆ ಎಲ್ಲಾ ಹೇಳಿದರೆ ಡೈರೆಕ್ಟರ್ ಬಂದು ನನ್ ತಿತಿ ಮಾಡ್ತಾರೆ ಅಸ್ಟೆ ಹ ಹ್ಹ ಹ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"ಉಡಾಳರು" ಅಂತಾ ಇಡ್ರಿ
ಕೆಳಗೆ ಪಂಚಿಂಗ್ ಲ್ಯೆನಿನಲ್ಲಿ "ಎಲ್ಲಾ ಟ್ಯೆಮ್ ಉಡೀಸ್" ಅಂತಾ ಇಡ್ರಿ
ಅರವಿಂದ್
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹ್ಹ ಹ್ಹ ಹ್ಹ ಪರವಾಗಿಲ್ಲ ತಲೆ ಗೆ ಸ್ವಲ್ಪ ಕೆಲಸ ಕೊಟ್ಟಿದ್ದೀರ :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"ನಿರಾಳರು" ಹೇಗೆ?
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಉಡಾಳ ಓಣಿ ಕೆಡಸಿದರ, ಸಂಭಾವಿತ ಊರನ್ನೇ ಕೆಡಸಿದನಂತೆ...:D
ಒಲುಮೆಯಿಂದ,
ಗಿರೀಶ ರಾಜನಾಳ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಚಿತ್ರದ ಹೆಸರನ್ನು ಕಥೆಗೆ ಅನುಗುಣವಾಗಿ ಇಟ್ಟರೆ ಬಲು ಉತ್ತಮ......ನೀವೇನಂತೀರಾ ದಿವ್ಯ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಚಿತ್ರದಲ್ಲಿ ಏನಾದರೂ ಕಥೆ ಇದೆಯಾ ಅನ್ನುವುದು ಮೊದಲನೇ ಪ್ರಶ್ನೆ ಹಾಗೂ ನನ್ನ ಅನುಮಾನ ಕೂಡ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಕಥೆ ಇದೆ ಸರ್. ಯಾವ ಅನುಮಾನವು ಬೇಡ :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹಾಗಾದರೆ "अकेलाರು"
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ದಿವ್ಯ
ಕಥೆಯ ತಿರುಳು ಹೇಳಿದ್ರೆ ಇಷ್ಟು ಯೋಚನೆ ಇರೋಲ್ರಿ, ಆಗ ನಿಮಗೂ ಉತ್ತರ ಬೇಗ್ ಸಿಕ್ತದೆ, ಯೋಚಿಸ್ರಿ, ಹಂಗಾ ಸ್ವಲ್ಪ ಕಥೆ ತಿರುಳು ಹೇಳ್ರಲಾ
ಇಲ್ಲಂದ್ರೆ ಬ್ಲಾಗ್ನಲ್ಲಿ ಭಾಷಾ ನೀತಿ ಶುರು ಆಗಿ ನಿಮ್ಮ ಪ್ರಶ್ನೆಗೆ ಉತ್ತರನೇ ಹೊಳೆಯೊದಿಲ್ಲ್ ನೋಡ್ರಿ
ಅರವಿಂದ್
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬಿಡ್ರಪ್ಪ ದಿವ್ಯ ಕಥೆಯೆಳಕ್ಕಿಲ್ಲ ಅದಕ್ಕೆ ಉತ್ತರ ಸಿಗಕ್ಕಿಲ್ಲ ,ಒಂದು ತರಹ ತಲೆಗೆ ಹುಳ ಬಿಡುತ್ತಾರೆ ಇವರೂ ಎಷ್ಟು ಹೇಸರು ಹೇಳಿದರೂ ಅವ್ರು ಒಪ್ಪುತ್ತಾ ಇಲ್ಲ ಅಂದರೆ ಅದು ಎಂತ ಕಥೆ ಇದೆ ಅದರಲ್ಲಿ ನನಗಂತೂ ಗೊತ್ತಾಗುತಿಲ್ಲಪ್ಪ..................
ನಿಮ್ಮವ
ಮಧುಸೂದನ್ ಗೌಡ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"ಒಂಟಿ ಹೃದಯಗಳು"
"Lonely ದಿಲ್ಸ್" (ಆಂಗ್ಲ - ಹಿಂದಿ ಬೆರಕೆ)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹಾ ಇದು ಚೆನ್ನಾಗಿದೆ ಸರ್..
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಅಂತೂ ಇಂತೂ ಕೊನೆಗೂ ಚೆನ್ನಾಗಿದೆ ಅಂತ ಹೇಳಿದ್ರಲ್ಲಾ...ಅದೇ ಸಂತೋಷ ನಮಗೆ.
ಇನ್ನು ಶೂಟಿಂಗ್ ಶುರು ಹಚ್ಕೊಳ್ಳಿ....
:-)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬಿಂದಾಸ್, ಅಡನಾಡಿ, ಹೆಣ್ಣು ಹೆತ್ತವರ ಬೇಟೆ, ಪಾಪಿಪರದೇಶಿ, ಒಂಟಿಜೀವ, ಹರಕೆಯ ಕುಱಿ ಇನ್ನೂ ಇತ್ಯಾದಿ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬ್ರಹ್ಮಚಾರಿ ಅಥವಾ ವರ ಅಥವಾ ಲಗ್ನವಾಗದವ.....ಇವೆ ಕನ್ನಡ ಮೂಲ ಅರ್ಥ
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
" ಒಂಟಿ ಪಿಶಾಚಿ "........ನನ್ನನ್ನ ನೋಡೋ ಹುಡುಗಿರ್ನೆಲ್ಲ ನಾ ನೋಡಲ್ಲ...ಇದು ಅ ಸೆನೆಮಾದ "Caption" ...:)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
"jollyಗುರುಸ್" ಇಟ್ಟರಾಗುತ್ತಾ? ಇಲ್ಲಾ "ಜಾಲಿgurus"?
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಎಲ್ರು "Bachelors" ಗೆ ಸಮನಾರ್ತಕ ಪದಗಳನ್ನೇ ಹೇಳುತ್ತಿದ್ದೀರಲ್ಲ?? ಬೇರೆ ಏನಾದ್ರು ಹೇಳಿ.
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಪಡ್ಡೇ ಹುಡುಗರು
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
'ಹುಡುಗಾಟ ಹುಡುಕಾಟ', 'ಹುಡುಗಾಟದ ಹುಡುಗರು'
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಹುಡುಗಾಟ ಆಗಲೇ ಬಳಕೆ ಆದ ಪದ . :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬಿಂದಾಸ್ boys.. ಮಸ್ತಿ boys...
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬಿಂದಾಸ್ ಆಗ್ಲೇ ಬಂದಿದೆ .. ಮಸ್ತಿ ಕೂಡ :)
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಬಿಂದಾಸ್ ಬಂದಿದೆ.. ಆದ್ರೆ ಬಿಂದಾಸ್ boys ಬಂದಿಲ್ಲಾ.. ಹಾಗೆ ಮಸ್ತಿ ಕೂಡ..
ಉ: "Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!
ಆದರು ಹೊಸದು ಅಂತ ಅನ್ಸೋದಿಲ್ವಲ್ಲ :)