ಕಕಂಕೆಂಕಿಹಹನೀನೇಬೂಬಿ
ಇದೇನು ವಿಚಿತ್ರ ತಲೆಬರಹ ಎಂದಿರಾ? ಇವು ಕೆಳಗೆ ಕೊಟ್ಟಿರುವ 10 ಬಣ್ಣಗಳ ಹೆಸರುಗಳ ಮೊದಲ ಅಕ್ಷರಗಳು. ಆಂಗ್ಲ ಭಾಷೆಯಲ್ಲಿ ಇವನ್ನು BBROYGBVGW ಕರೆಯುತ್ತಾರೆ. Electronics ಓದಿದ್ದವರು ತಕ್ಷಣ ಇದನ್ನು ಗುರುತು ಹಿಡಿಯಬಲ್ಲರು.
ಕಪ್ಪು = Black = 0
ಕಂದು = Brown = 1
ಕೆಂಪು = Red = 2
ಕಿತ್ತಳೆ = Orange = 3
ಹಳದಿ = Yellow = 4
ಹಸಿರು = Green = 5
ನೀಲಿ = Blue = 6
ನೇರಳೆ = Violet = 7
ಬೂದಿ = Gray = 8
ಬಿಳಿ = White = 9
ಇವು ರೋಧಕದಲ್ಲಿ ಬಳಸುವ ಬಣ್ಣಗಳು. ಇವನ್ನು ರೋಧಕಗಳ ರೋಧಕತೆಯ ಮಟ್ಟವನ್ನು ಗುರುತಿಸಲು ಉಪಯೋಗಿಸುವರು. ಆಂಗ್ಲ ಭಾಷೆಯಲ್ಲಿ ಇವನ್ನು ನೆನಪಿನಲ್ಲಿ ಇಡಲು ಅನೇಕ ಸೂತ್ರಗಳಿವೆ (Mnemonics). ನಾವು ನಮ್ಮ ಕಾಲೇಜಿನ ದಿನಗಳಲ್ಲಿ ಇದನ್ನು ನೆನಪಿಡಲು ಉಪಯೋಗಿಸಿದ ವಾಕ್ಯ "B B ROY of Great Britain has a Very Good Wife". ಹೆಚ್ಚಿನ ಉದಾಹರಣೆಗಳಿಗಾಗಿ ವಿಕಿಪಿಡಿಯ ನೋಡಿ.
ಆಂಗ್ಲ ಭಾಷೆಯಲ್ಲಿರುವಂತೆಯೇ ಕನ್ನಡದಲ್ಲಿ ಈ ಹತ್ತು ಬಣ್ಣಗಳ ಸರಳ ಸೂತ್ರ ತಯಾರಿಸಲು ಸಾಧ್ಯವೇ? ನೆನಪಿಡಲು ಸಹಾಯಕಾರಿಯಾಗುವ ಅರ್ಥಪೂರ್ಣ ವಾಕ್ಯ ರಚನೆಯೇ ಇದರ ಹಿಂದಿನ ಉದ್ದೇಶ. ಈ ಹುಳ ತಲೆಗೆ ಹೊಕ್ಕ ನಂತರ ಸದಾ ಇದೇ ಧ್ಯಾನ. ಪದಬಂಧ, ಸುಡೊಕು ಎಲ್ಲಕ್ಕಿಂತ ಹೆಚ್ಚು ಬಿಡಿ ಸಮಯವನ್ನು ಇದರಲ್ಲೇ ಕಳೆಯುತ್ತೇನೆ. ನೀವೂ ಸಹ ಪ್ರಯತ್ನಿಸಿ. ಸಿಕ್ಕರೆ ಇಲ್ಲಿ ಹಂಚಿ ಪುಣ್ಯ ಕಟ್ಟಿಕೊಳ್ಳಿ.

- honnung ರವರ ಬ್ಲಾಗ್
- Login or register to post comments
- 508 hits
- Email this blog




RSS:
ಪ್ರತಿಕ್ರಿಯೆಗಳು
ರೋಧಕ ಸೂತ್ರ
ನನ್ನ ಸಣ್ಣ ಪ್ರಯತ್ನ ಹೀಗಿದೆ:
ಕಪ್ಪು ಕಂದು ಕೆಂಪು ಕಿತ್ತಲೆ ಹಳದಿ ಹಸಿರು ನೀಲಿ ನೇರಳೆ ಬೂದಿ ಬಿಳಿ
ಕರಿ ಮರದ ಕೆಂಪು ಕಿತ್ತಲೆ ಹಳಸಿ ಹಸಿರಾದರೆ, ನೀಲಿ ನೇರಳೆ ಬೂದಿಗೆ ಬಿದ್ದು ಬಿಳಿಯಾಯಿತು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ರೋಧಕ ಸೂತ್ರ
ನನ್ನ ಪ್ರಯತ್ನ ಹೀಗಿದೆ.
ಕಡು ಕಂಪಿನ ಕೆಂಪಗಿರುವ ಕಿರಿದಾದ ಹಲಸಿನ ಹಪ್ಪಳವ ನೀನು ನೇಸರನಿಗಿಟ್ಟರೆ ಬೂದಿಯಾಗಿ ಬಿಟ್ಟಿತು.
ನಿಮ್ಮವ
ಪ್ರಕುರ
ಸೂ: ಈವತ್ತು ನಾನು ಸಂಪದದ ಸದಸ್ಯನಾದೆ. ಇದು ನನ್ನ ಮೊದಲನೇ ಉತ್ತರ. ಎಲ್ಲರಿಗೂ ವಂದನೆಗಳು.