ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕಿವಿಯ ಕಿತ್ತರಡಗಿತು ಹಾವಿನ ವಿಷ?

June 2, 2008 - 1:54am — hpn

ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿಯಾದಂತಾಗಿಬಿಟ್ಟಿದೆ.

ಮೊನ್ನೆ ಪಾರ್ಕಿನಲ್ಲಿ ಕೆಲಸ ಮಾಡುತ್ತಿರುವವರು ಆರಡಿ ಉದ್ದದ ನಾಗರ ಹಾವೊಂದನ್ನು ಕಂಡರಂತೆ. ಕಂಡರೆ ಹೊಡಿಯಬೇಡ್ರಿ, ನನಗೆ ಬಂದು ತಿಳಿಸಿ ಎಂದು ಹೇಳಿದ್ದೆ. ದೊಡ್ಡ ಹಾವು ಕಂಡು ಹೆದರಿದರು ಅನ್ಸತ್ತೆ, ಅದನ್ನು ಹಾಗೇ ಬಿಟ್ಟರೂ ಮಧ್ಯಾಹ್ನ ಕಂಡ ಪುಟ್ಟದೊಂದನ್ನು ಹೊಡೆದೇ ಹಾಕಿಬಿಟ್ಟರು. ಅದಾದ ಮೇಲೆ ಎದುರು ಬಂದ ಒಂದೆರಡು ಚೇಳುಗಳ ಇಹಲೋಕದ ಕಥೆಯನ್ನೂ ಮುಗಿಸಿಬಿಟ್ಟರಂತೆ.

ಸಾಯಂಕಾಲ ನಾವು ಕರೆಸಿದ್ದು ಸೆಲೆಬ್ರಿಟಿ ಸ್ನೇಕ್ ಕ್ಯಾಚರ್ ಒಬ್ಬರನ್ನು (ಟಿ ವಿ ೯ ಖ್ಯಾತಿಯವರಂತೆ). ಅವರು ಬಂದು ಒಂದೆರಡು ಹುತ್ತಕ್ಕೆ ಡ್ರಮ್ಮುಗಟ್ಟಲೆ ನೀರು ಬಿಟ್ಟು 'ಹಾವು ಹೊರಟುಹೋಗಿದೆ' ಎಂದು ತೀರ್ಪಿತ್ತು ಸಂಭಾವನೆ ಪಡೆದು ಹೊರಟುಹೋದರು. ಹೊರಡುವ ಮುನ್ನ ಅವರ ಕೈಗೆ ಸುಮಾರು ನಾಲ್ಕು ಚೇಳುಗಳು ಸಿಕ್ಕಿದ್ದವು! ಪ್ಲಾಸ್ಟಿಕ್ ಕವರ್ರಿನಲ್ಲಿ ಹಾಕಿಕೊಂಡು 'ರೈಟ್' ಹೇಳಿದರು.
(ಹಿಂದೊಂದ್ ಸಾರಿ ಹೀಗೆಯೇ ಕರೆಸಿದ್ದಾಗ ರೈಟ್ ಹೇಳುವ ಮುನ್ನ ಪರಿಚಯ ಮಾಡಿಕೊಂಡು ನಮ್ಮ ಮೇಸ್ತ್ರಿಯ ಕೈ ಕುಲುಕಿದವರು "ಏನಾದರೂ ತಿನ್ನೋಕೆ?" ಎಂದು ಅದೇ ಮೇಸ್ತ್ರಿ ಕೇಳಿದಾಗ ನಯವಾಗಿ "ಇಲ್ಲ ಸರ್, ವಿಷದ ಹಾವು, ಚೇಳೆಲ್ಲ ಮುಟ್ಟಿರ್ತೀವಿ, ಈ ಕೈಯಲ್ಲಿ ಏನಾದರೂ ತಿಂದು ಏನಾದರೂ ಆದ್ರೆ? ಸುಮ್ಮನೆ riskಉ" ಅಂದುಬಿಡಬೇಕೆ? ಮೇಸ್ತ್ರಿಯೂ ಒಂದು ನಿಮಿಷ ಕೈ ನೋಡಿಕೊಂಡವನು, ಸ್ವಲ್ಪ ಹೊತ್ತಿನಲ್ಲಿ ಗಡದ್ದಾಗಿ ಉಪ್ಪಿಟ್ಟು ಕಣ್ಣು ಮುಚ್ಚಿಕೊಂಡು ಹೊಡೆದಿದ್ದ),

ಮಾರನೆಯ ದಿನ ಕುರಿ ಮೇಯಿಸಿಕೊಂಡು ಹೋಗಲು ಬರುವ ಹುಡುಗ ಪಾರ್ಕಿನ ಸುತ್ತ ರೌಂಡು ಹೊಡೆಯುತ್ತಿದ್ದ. ಇವನಿಗೂ ಏನಾದರೂ ಕಂಡಿತೋ ಎಂದು ವಿಚಾರಿಸಿದಾಗ "ಇಲ್ ಸಾಮಿ, ಏನೂ ಇಲ್ಲ. ಅವು ಬಿಸಿಲು ಏರಿದಾಗ ಬರತ್ವೆ. ನಾ ಕುರಿಗ್ ಹಾಕೋಕ್ ಸೊಪ್ಪು ಕೀಳ್ತಿದ್ದೆ" ಅಂದ. ಹಾಗೇ ಮಾತನಾಡುತ್ತ "ಕುರಿಗಳಿಗೆ ಹಾವು ಕಡಿದಿದ್ದು ಇದೆಯೋ?" ಎಂದು ಕುತೂಹಲದಿಂದ ಕೇಳ್ದೆ. "ಹೂ, ಸಾಮಿ. ಅವು ಮೇಯ್ತ ತುಳಿದ್ರಿ ಕಡೀತಾವೆ. ಆ ಕುರಿ ಕಿವಿ ಕತ್ತರಿಸಿ ಸೊಪ್ಪು ಹಚ್ತೀವಿ, ಸರಿಯಾಕ್ಕತೆ" ಅಂದ. ಶಾಕ್ ಆಯ್ತು! ಸೊಪ್ಪು ಓಕೆ - ಬಹುಶಃ ಯಾವುದೋ ಔಷಧದ ಸೊಪ್ಪಿರಬೇಕು. ಆದರೆ ಕಿವಿ ಕಿತ್ತೋದು?

  • ಕೇಳಿದ್ದು
  • ನಂಬಿಕೆಗಳು
  • ಮೇಕೆ
  • ಹಾವು
~.~
  • hpn ರವರ ಬ್ಲಾಗ್
  • Login or register to post comments
  • 344 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 2:50pm — vikashegde

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

vikashegde's picture

ಅಂದಹಾಗೆ, ಹರಿಯವರು ಯಾವ ಏರಿಯಾದಲ್ಲಿ ಮನೆ ಮಾಡಿದ್ದೀರ ಅಂತ ಗೊತ್ತಾಗ್ಲಿಲ್ಲ!
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:12pm — ಸಂಗನಗೌಡ

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

ಸಂಗನಗೌಡ's picture

ವಿಕಾಸ್, ಕೆಲವನ್ನು ಪ್ರೈವೇಟ್ ಆಗಿ ಕೇಳಬೇಕು, ಅದರಲ್ಲಿ ಇದೂ ಒಂದು.

--------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:15pm — vikashegde

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

vikashegde's picture

ಅವರು ಪಬ್ಲಿಕ್ಕಾಗಿ ಹಾಕಿದ್ದು ನೋಡಿ, ನಾನೂ ಪಬ್ಲಿಕ್ಕಾಗೇ ಕೇಳ್ಬೋದೇನೋ ಅನ್ಕೊಂಡೆ Smiling
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:29pm — hpn

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

hpn's picture

ವಿಕಾಸ್, ನೀವು ಕೇಳಿದ ಪ್ರಶ್ನೆಯ ಉತ್ತರವೂ ಪಬ್ಲಿಕ್ ಆಗಿಯೇ ಇದೆ. ನಮ್ಮ ಮನೆ ಹುಡುಕೋದು ನಿಮಗೆ ಕಷ್ಟವಾಗಲಿಕ್ಕಿಲ್ಲ. ಇಲ್ಲಿಗೆ ಬರೋದು ಕಷ್ಟವಾಗಬಹುದು ಅಷ್ಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:36pm — vikashegde

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

vikashegde's picture

Smiling

ಹಾವು , ಹಲ್ಲಿ, ಚೇಳು, ಕೀಟಗಳು ಎಲ್ಲಾ ಇರೋ ನ್ಯಾಚುರಲ್ ಜಾಗ ಬೆಂಗಳೂರಲ್ಲಿ ಅದೆಲ್ಲಿದೇ ಅಂತ ತಿಳ್ಕಳೋ ಆಸೆ. ಸಣ್ಣವರಿದ್ದಾಗ ಅವುಗಳ ಜೊತೆಯೇ ಬದುಕಿ ಅಭ್ಯಾಸ ನೋಡಿ. ಈಗೂ ಇಷ್ಟ. ನಾನೂ ಅಲ್ಲೇ ಮನೆ ಮಾಡೋಣ ಅಂತ ಅಷ್ಟೆ. ಹೇಳಿ, ಬನ್ನೇರುಘಟ್ಟದೆ ತುದಿಯಲ್ಲೋ, ಮೈಸೂರು ರಸ್ತೆಯ ಒಳಗೆಲ್ಲೋ ಅಥವಾ ಇನ್ನೆಲ್ಲೋ!? Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:46pm — hpn

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

hpn's picture

ಫೋನ್ ಮಾಡಿ ಒಮ್ಮ್ ಬನ್ನಿ. ಮಹೇಶನ ಹತ್ತಿರ ನನ್ನ ಫೋನ್ ನಂಬರ್ ಇದೆ. ಈ ಏರಿಯಾದಲ್ಲೆ ಮನೆ ಮಾಡುವಿರಾದರೆ ಅದನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಬಹುದು. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 5:49pm — vikashegde

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

vikashegde's picture

ಥ್ಯಾಂಕ್ಯೂ Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 8:20am — mahesha

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

mahesha's picture

ಏನಪ್ಪ.. ನನ್ನ ಹತ್ತಿರ ಪೋನ್ ನಂಬರ್‍ ಇದೆ ಅಂದು ಬಿಟ್ಟೆ...

ನೋಡೀಗ ನಿನ್ನ ಪೋನ್ ನಂಬರ್‍ಗಾರಿ ಯಾರ್‍ಯಾರೋ ಪೋನ್ ಮಾಡ-ಹತ್ತಿಯಾರು. Smiling

ಯಾಕೆ ಇ-ಮೇಲ್ ಎಂಬ ಹೊಸ ತಂತ್ರಜ್ನಾನ ಬಳಕೆ ಮಾಡಬಾರದೇ.. ಪೋನ್ ಎಂಬ ಹಳೆಗೆ ವಿದಾನವೇಕೆ? Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 9:34pm — hamsanandi

ಉ: ಕಿವಿಯ ಕಿತ್ತರಡಗಿತು ಹಾವಿನ ವಿಷ?

hamsanandi's picture

ಹಿಂದೆ ನಮ್ಮ ಮನೆಯೊಳಗೇ ಹಾವೊಂದು ನುಗ್ಗಿದ್ದುದ್ದು ನೆನಪಾಯಿತು. ಆಗ ನಾವಿದ್ದ ಕಡೆಯಲ್ಲಿ ಹೆಚ್ಚಾಗಿ ಮನೆಗಳಿರಲಿಲ್ಲ. ಮನೆಯ ಮುಂದೆ ಮೂಲೆಯಲ್ಲಿ ಎರಡು ಹುತ್ತಗಳೂ ಇದ್ದವು. ಕೆಲವು ಬಾರಿ ನಾಗರ ಹಾವೊಂದು ನಮ್ಮ ಬೇಲಿಯ ಉದ್ದಕ್ಕೂ ಹೋದದ್ದನ್ನೂ ಕಂಡಿದ್ದೆ.

ವರ್ಷಗಳು ಉರುಳಿದಂತೆ, ಮನೆಗಳು ಹೆಚ್ಚಾಗುತ್ತಿದ್ದಂತೆ, ಪಾಪ ಹಾವುಗಳು ಕಾಲು ಕಿತ್ತವು ಅಂತ ಕಾಣತ್ತೆ..

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಎರಡು ತಲೆಯ ಹಾವು ನಾನಲ್ಲ" ಇದು ಆರ್.ಶರ್ಮಾ. ತಲವಾಟರವರ, ಹೊಸ ’ಬ್ಲಾಗ್” ನ ಹೆಸರು. ಚೆನ್ನಾಗಿದೆಯಲ್ಲಾ ?
  • ಹಾವಿನ ದ್ವೇಷ
  • ಹಾಸಿಗೆ
  • ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ
  • ಚಿಂಟು: ನಂಗೇನಿಷ್ಟ ಅಂದ್ರೆ...
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 122 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator