ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
ಪ್ರತಿ ದಿನವೂ ಅದು ಹೇಗೋ ಶೀಘ್ರ ಅಂತ್ಯ ಕಾಣುತ್ತೆ. ಬೆಳಗಾಗೆದ್ದು ರೆಡಿಯಾಗಿ ಎತ್ತ ಹೊರಟಿರುತ್ತೇವೋ ಅತ್ತ ಹೊರಟು ನಡೆದು ತಲುಪಿದುದರ ನೆನಪಿಲ್ಲದಷ್ಟು, ಪರಿವೆಯೂ ಇಲ್ಲದಷ್ಟು ಯಾಂತ್ರಿಕವಾಗಿ ದಿನ ಪ್ರಾರಂಭಿಸಿ ಹಾಗೆಯೇ ಮುಗಿಸಿರುತ್ತೇವೆ. ಹೀಗೆ ಸರಿದ ದಿನಗಳು ಎಷ್ಟೆಷ್ಟೋ.
ಈ ದಿನ ಹೇಳಿಕೊಳ್ಳುವಂತಾದ್ದು ಏನು ಮಾಡಿದೆ ಎಂಬುದನ್ನು ಸ್ವತಃ ಪ್ರಶ್ನಿಸಿಕೊಳ್ಳಿ (What did you do that was worth mentioning today?) ಎಂದು ಅನುಭವವುಳ್ಳವರು ಹೇಳಿದ ಮಾತೊಂದನ್ನು ಗೋಡೆಯ ಮೇಲಂಟಿಸಿದ ಬ್ಯಾನರಿನಲ್ಲೋದಿ "ಬೈಕು ತೆಗೆದುಕೊಂಡು ಹೋದೆ, ಟ್ರಾಫಿಕ್ ನಲ್ಲಿ ನಿಂತಿದ್ದೆ, ಲೈಬ್ರರಿಗೆ ಹೋಗಿದ್ದೆ, ವಾಪಸ್ಸು ಬಂದೆ" ಎಂದು ನೆನಪಿಸಿಕೊಂಡಾಗ ಬರುವುದು ಕೆಲವು ಕ್ಷಣಗಳ ನಂತರದ ಗೊಳ್ಳೆಂಬ ನಗು ಮಾತ್ರ.
ಮಾಡಬೇಕಾಗಿರುವುದು ಬಹಳಷ್ಟಿರುತ್ತದೆ, ಮಾಡದೇ ಬಿಟ್ಟದ್ದು ಬಹಳಷ್ಟಿರುತ್ತವೆ. ಮಾಡಿ ಮುಗಿಸಿ ಮತ್ತೆ ಕೈಗೆತ್ತಿಕೊಳ್ಳುವ ಕೆಲಸಗಳೂ ನೆನಪಿಸುವಷ್ಟು ಸನಿಹದಲ್ಲಿರುತ್ತವೆ. ಈ ಮಧ್ಯೆ ಅರಿವಿಗೆ ಬಾರದಂತೆ ಸಮಯ ಹೋದದ್ದು, ಕಳೆದ ಸಮಯದಲ್ಲಿ ಸ್ವತಃ ಕಳೆದುಹೋದದ್ದು ಕಳೆದುಕೊಂಡದ್ದು ನೆನಪಾದರೂ ನೆನಪಿನಲ್ಲುಳಿಯದೆ ಅವೂ ಕಳೆದುಹೋಗುತ್ತವೆ.
ಹೀಗೆ ಕಳಕೊಂಡದ್ದು, ಪಡಕೊಂಡದ್ದರ ನಡುವೆ ಉಳಿದುಕೊಳ್ಳುವುದು, ತೆಗೆದುಕೊಂಡು ಹೋಗುವುದು, ಮಾಡಬೇಕಾಗಿರುವುದರ ಆಲೋಚನೆಗಳು ಮತ್ತೊಂದು ದಿನ, ಮತ್ತಷ್ಟು ಕೆಲಸಗಳಿಗೆ ಎಳೆದೊಯ್ಯುತ್ತವೆ. ಗೋಡೆಗೆ ತಗಲು ಹಾಕಿದ ಕ್ಯಾಲೆಂಡರ್ ಮೇಲಿನ ಸಂಖ್ಯೆ ಮಾತ್ರ ಬದಲಾಗುತ್ತಲೇ ಇರುತ್ತದೆ!

- hpn ರವರ ಬ್ಲಾಗ್
- Login or register to post comments
- 509 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
ಇಷ್ಟೆಲ್ಲ ಮಾಡುತ್ತಿರುವ ನೀವೇ ಹೀಗೆ ಹೇಳಿದ್ರೆ ಹೇಗೆ ಸ್ವಾಮಿ? ನನ್ನದಂತೂ ಕೆಲವು ಸರ್ತಿ "ಉ,ಮ,ಹೇ" ಬದುಕು ಅಂತ ಅನ್ನಿಸಿಬಿಡುತ್ತದೆ
ಉ: ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
ನಾಡಿಗ್, ಈಗ ದಿನ ಬಿಟ್ಟಾಕಿ, ವಾರ ವಾರಾನೇ ಓಡ್ತಾ ಇದೆ. ವೀಕೆಂಡು, ವೀಕ್‍ಡೇ ಅಷ್ಟೇ ಕಾಣ್ಸ್ತಾ ಇರೋದು
ಉ: ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
ಜೀವನದಲ್ಲಿ ಒಂದು ಹೊತ್ತಿಗೆ ಹೊಸವರ್ಷದ ಥ್ರಿಲ್ಲೂ ಮಮೂಲಿ ಆಗಿ , ಸದ್ಯದ ವರ್ಷ ೨೦೦೬ ಓ , ೨೦೦೭ ಓ , ೨೦೦೮ ಓ ಫಕ್ಕನೆ ನೆನಪಾಗದಂತಾಗುತ್ತದೆ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
ನಾಡಿಗರನ್ತೆ ಒಂದೊಂದು ದಿನಾನೂ ಹಾಗೆ ಕೆಳ್ಕೊಳ್ಳದೇ ಹೋದರೆ, ವರ್ಷಗಳೇನು, ಇಡೀ ಜೀವನಾನೇ ಕಳೆದು ಹೋಗಿರುತ್ತೆ, ಹೀಗೆ ಸುಮ್ಮನೇ...ಅಲ್ವಾ??
ಉ: ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
ನನಗೆ ಈ ಕುಯ್ಯೋ ಕೋಟ್ ನೆನಪಾಯಿತು!
" ನಿಮ್ಮ ಜೀವನದ ಪ್ರತಿದಿನ, ರಿಮಿಕ್ಸ್ ಇಲ್ಲದೆ ಪದೇ ಪದೇ ಪ್ರಸಾರವಾಗುವ 24 ತಾಸಿನ ತೋಪು ಸಿನೆಮಾ... ಬೋರಾದ್ರೆ ಸ್ವಲ್ಪ ಐಟಮ್ ನಂಬರ್ ಹಾಕಿಸಿ! "
ನೆನಪುಗಳಿಲ್ಲದಂತೆ ಕಳೆದುಹೋಗುತ್ತಿರುವುದರ ಅರಿವೇ ಆಧ್ಯಾತ್ಮದ ಕರೆ ತಾನೆ?! ಅರಿಯದೆ ನೆನಪುಗಳಲ್ಲಿ ಕಳೆದುಹೋಗುವುದಕ್ಕಿಂತ ಅರಿತು ಕಳೆದುಹೋದ ಆತ್ಮವ ನೆನಪಿಸಿ ಹೊರಡುವುದು ಒಳಿತೇನೋ!