ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಬದಲಾಗಲಿದೆ 'ಸಂಪದ' - ನಿಮ್ಮ ಸಲಹೆಗಳನ್ನಾಧರಿಸಿ!

March 2, 2006 - 9:00pm — hpn

ಸಂಪದದಲ್ಲಿ ಸದ್ಯದಲ್ಲೇ‌ ಸಾಕಷ್ಟು ಬದಲಾವಣೆಗಳು ಆಗಬೇಕಿವೆಯೆಂದು ನಿರ್ಧರಿಸಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಸಂಪದದ ಹೊಸ ಆವೃತ್ತಿ ಸದ್ಯದಲ್ಲೇ - ಇನ್ನಷ್ಟು ಚೊಕ್ಕವಾಗಿರುವ ಇಂಟರ್ಫೇಸ್ ನೊಂದಿಗೆ, ಬಳಕೆಗೆ ಇನ್ನಷ್ಟು ಸುಲಭವಾಗಿರುವಂತೆ ಹೊಸ ಆಕರದೊಂದಿಗೆ ಲಭ್ಯವಾಗಲಿದೆ. ಈ‌ ಮಾರ್ಪಾಡುಗಳನ್ನು ಮಾಡುವಾಗ ಸಂಪದದ ಎಲ್ಲ ಸದಸ್ಯರಿಂದಲೂ ಒಂದಷ್ಟು feedback ಬರಲಿ ಅಂತ ಇಲ್ಲಿ ಬರೆಯುತ್ತಿದ್ದೇನೆ.

ಸಂಪದದಲ್ಲಿ ಏನೆಲ್ಲ ಮಾರ್ಪಾಡುಗಳು ಬಯಸುವಿರಿ, ಏನೇನು ಹೊಸ ಫೀಚರ್ ಗಳನ್ನ ಕಾಣಲು ಬಯಸುತ್ತೀರಿ ಎಂಬುದನ್ನ ಚಿಕ್ಕದಾಗಿ ಚೊಕ್ಕವಾಗಿ ಒಂದೆರಡು ಲೈನುಗಳಲ್ಲಿರಿಸಿ ತಪ್ಪದೆ ಕಾಮೆಂಟ್ ಹಾಕಿ. ಎಲ್ಲರಿಗೂ ಒಪ್ಪಿಗೆಯಾಗುವ ಹೊಸ ಸವಲತ್ತುಗಳನ್ನ ಸಂಪದದಲ್ಲಿ ಅಳವಡಿಸೋದಕ್ಕೆ ಪ್ರಯತ್ನ ಮಾಡುವೆವು.

ಸದ್ಯಕ್ಕೆ ಬಂದಿರುವ ಕೆಲವು ಸಲಹೆಗಳು ಇಂತಿವೆ:
೧)‌ ಇಂಟರ್ಫೇಸ್ ಆಕಾ ಡಿಸೈನ್ ಸುಂದರಗೊಳಿಸಿ, ಕಲರ್ ಪುಲ್ ಮಾಡಿ ಅಂತ ಬಹಳ ಜನರಿಂದ ಅಹವಾಲು ಬಂದಿತ್ತು.
೨)‌ ಬ್ಲಾಗುಗಳನ್ನ ಹೆಚ್ಚು individualistic ಮಾಡಿ ಅಂತ ಕೆಲವರು ಕೇಳಿಕೊಂಡಿದ್ದರು. ಸ್ವಂತದ ಬ್ಲಾಗಿನಂತೆ ಮಾಡಿಕೊಡಿ ಎಂದು ವಿಜ್ಞಾಪನೆಯಾಗಿತ್ತು.
೩) ಬರಹ ಎನ್ಕೋಡಿಂಗ್ ನಲ್ಲೂ ಸಂಪದವನ್ನು ಹಾಕಿ. ಹಳೆಯ ಕಾಲದ ಆಪರೇಟಿಂಗ್ ಸಿಸ್ಟಮ್ ಇಟ್ಟುಕೊಂಡವರಿಗೆ ಓದುವ ಅವಕಾಶ ಮಾಡಿಕೊಡಿ ಎಂದು ಕೆಲವರು ಕೇಳಿದ್ದರು.

ನಿಮ್ಮ ಸಲಹೆಗಳು ಬರಲಿ, ಕಾಮೆಂಟ್ಸ್ ಕುಟ್ಟಿ(ಟೈಪಿಸಿ)! Smiling

~.~
  • hpn ರವರ ಬ್ಲಾಗ್
  • Login or register to post comments
  • 1049 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 2, 2006 - 11:30pm — bhatpp

ಸ್ಪೆಲ್ ಚೆಕ್ ಅಳವಡಿಸಬಹುದೆ?

bhatpp's picture

ಈಗಾಗಲೇ ಒಮ್ಮೆ ನಿಷ್ಕರ್ಷಿಸಿದಂತೆ (http://sampada.net/node/1222), ಸಂಪದದ ಪುಟಗಳಲ್ಲಿ (online) ಸ್ಪೆಲ್ ಚೆಕ್ ಅಳವಡಿಸಬಹುದೆ?

ಬಹುಶಃ ಇದನ್ನು ಬೇಗನೆ ಅಳವಡಿಸಲು ಸಾಧ್ಯವಾಗದಿರಬಹುದು, ಆದರೆ ಇದನ್ನೊಂದು ದೂರಾಲೋಚನೆಯಾಗಿಟ್ಟುಕೊಳ್ಳಬಹುದಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 2:00pm — ಮಹೇಶ ಭೋಗಾದಿ

ಕನ್ನಡ ಕಲಿ ತಾಣ

ಮಹೇಶ ಭೋಗಾದಿ's picture

ಅನ್ಯ ಭಾಷಿಕರು ಕನ್ನಡ ಕಲಿಯಲು ಒಂದು ಜಾಗ.
ಕನ್ನಡ ಬಲ್ಲವರು ಕನ್ನಡ ಬಲ್ಮೆಯನ್ನು ಹೆಚ್ಚಿಸಿಕೊಳ್ಳಲು ಒಂದು ಜಾಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 2:53pm — hpn

ಉ: ಕನ್ನಡ ಕಲಿ ತಾಣ

hpn's picture

ಈಗಾಗಲೇ ಸಂಪದದಲ್ಲೇ‌ ಲರ್ನಿಂಗ್ ಸೆಂಟರ್ ಒಂದಿದೆ. ಜಗತ್ತಿನ ಹಲವಾರು ದೇಶಗಳ ನೂರಾರು ಜನ ಆಗಲೇ‌ ಇದಕ್ಕೆ ಸದಸ್ಯರಾಗಿ ನೊಂದಾಯಿಸಿದ್ದರೂ ಅದರಲ್ಲಿ ಕನ್ನಡ ಹೇಳಿಕೊಡುವವರ ಕೊರತೆಯಿಂದ ಅದು ಹೇಗಿತ್ತೋ ಹಾಗೆಯೇ ಇದೆ. Sticking out tongue

ಸಾಧ್ಯವಾದಲ್ಲಿ ಈ ಸರ್ತಿ ಸಂಪದ ಲಾಗಿನ್ ಮತ್ತು ಲರ್ನಿಂಗ್ ಸೆಂಟರ್ ಲಾಗಿನ್ ಮಾಹಿತಿ ಸಿಂಕ್ ಮಾಡಲು ಪ್ರಯತ್ನ ಮಾಡಬಹುದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 3:03pm — ಮಹೇಶ ಭೋಗಾದಿ

ಕನ್ನಡ ಹೇಳಿಕೊಡುವವರ ಕೊರತೆ.

ಮಹೇಶ ಭೋಗಾದಿ's picture

ಈ ವಿಷಯವಾಗಿ ನಾನೇನಾದರು ಸಹಾಯ ಮಾಡಬಹುದೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 1:29am — gvmt

ಪೋಸ್ಟುಗಳನ್ನು save ಮಾಡಲಾಗುವಂತೆ ಮಾಡಬಹುದೆ?

gvmt's picture

Save ಮಾಡಬಹುದಾದರೆ ಒಮ್ಮೆಗೇ ಬರೆದು ಮುಗಿಸಬೇಕಾದ ಪ್ರಸಂಗವಿರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 7:37pm — hpn

ಇನ್ನಷ್ಟು ಸಲಹೆಗಳು ಬರಲಿ

hpn's picture

ತಕ್ಷಣ ಸ್ಪಂದಿಸಿ ಸಲಹೆಗಳನ್ನು ಮುಂದಿಟ್ಟ ಭಟ್, ಜಿವೆಂ ಹಾಗೂ ಸ್ಮಿತಾ - ಎಲ್ಲರಿಗೂ ಧನ್ಯವಾದಗಳು.

ಇನ್ನಷ್ಟು ಸಲಹೆಗಳು ಬರಲಿ Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 9:20am — ಸ್ಮಿತಾ

buddy list

ಸ್ಮಿತಾ's picture

ನನಗರಿವಿಲ್ಲದೆಯೆ ಕೆಲವು ಮಂದಿಗೆ ನಾನು "Buddy" ಆಗಿದ್ದೇನೆ.  ಇದರ ಬದಲಿಗೆ ನನ್ನ ಒಪ್ಪಿಗೆಯ ನಂತರ ಹಾಗಾಗುವಂತಿದ್ದರೆ ಚೆನ್ನಾಗಿರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 8:11pm — tvsrinivas41

ಇದೇ ಚೆನ್ನಾಗಿದೆ

tvsrinivas41's picture

ಬ್ಲಾಗ್‍ಗಳನ್ನು ಬ್ಲಾಗರ್.ಕಾಂ ನಂತೆ ಮಾಡಬಹುದು ಅನ್ಸತ್ತೆ. ಆದ್ರೆ ಸಂಪದ ಮಾತ್ರ ಹೀಗೆಯೇ ಇರಲಿ. ಸಂಪದ ಬೇರೆ ತಾಣಗಳಂತಿಲ್ಲ. ಇದರ ಸ್ಟೈಲೇ ಬೇರೆ ಅಲ್ವೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 8:38pm — ismail

ಗಿಫ್ಟ್ ಕೊಡೋಣ

ismail's picture

ಶ್ರೀನಿವಾಸ್ ಅವರು ಬಹಳ ಕ್ರಿಯಾಶೀಲರಾಗಿರುವ ಸಂಪದ ಸದಸ್ಯರು. ಅವರು ಗಳಿಸಿರುವ ಪಾಯಿಂಟ್ಸ್ ಈ ಅಭಿಪ್ರಾಯಕ್ಕೆ ಅಡಿಗೆರೆ ಹಾಕುತ್ತಿವೆ. 500 ಪಾಯಿಂಟ್ಸ್ ಗಳಿಸಿದ ತವಿಶ್ರೀನಿವಾಸ್ ಅವರಿಗೆ ನನ್ನ ಅಭಿನಂದನೆಗಳು. ಅವರಿಗೊಂದು ಗಿಫ್ಟ್ ಕೊಟ್ಟರೆ ಹೇಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 9:30pm — vvdooshaka

ಟಿಪ್ಪಣಿ ಬಿಡುವಾಗ ಯೂನಿಕೋಡ್ ಕನ್ವರ್ಟರ್

vvdooshaka's picture

ಟಿಪ್ಪಣಿ ಬಿಡುವಾಗ ಯೂನಿಕೋಡ್ ಕನ್ವರ್ಟರ್ ಅಲ್ಲಿಯೇ ಲಭ್ಯವಿದ್ದರೆ ಸಹಾಯವಾಗುತ್ತದೆ.

ವಂದನೆಗಳೊಂದಿಗೆ,

ವಿ.ವಿ.

ನನ್ನ ಬ್ಲಾಗ್: ಮಜಾವಾಣಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 2:48pm — hpn

ಧನ್ಯವಾದಗಳು

hpn's picture

ಖಂಡಿತ. ಬೇಕಾದವರಿಗೆ ಮಾತ್ರ ಪ್ರೊಫೈಲಿನಲ್ಲಿ ಎನೇಬಲ್ ಮಾಡಲಾಗುವಂತೆ ಒಂದು ಜಾವಾಸ್ಕ್ರಿಪ್ಟ್ ಕೀಬೋರ್ಡ್ ಈಗಾಗಲೇ ಬರೆಯಲ್ಪಟ್ಟಿದೆ (ಸದ್ಯಕ್ಕೆ ಎನೇಬಲ್ ಮಾಡಿಲ್ಲ). ಕನ್ವರ್ಟರ್ ಕೂಡ ಫಾರ್ಮುಗಳಿರುವ ಕಡೆ ಬರುವಂತೆ ನೋಡಿಕೊಳ್ಳಬಹುದು.

ಧನ್ಯವಾದಗಳು, ವಿ ವಿ ರವರೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 9, 2006 - 10:32pm — Sunil Jayaprakash

ಖಾಸಗಿ ಮೆಸೇಜುಗಳು

Sunil Jayaprakash's picture

ಒಂದೇ ವಿ - ಟಪಾಲಿನಿಂದ ಒಟ್ಟಿಗೆ ಒಬ್ಬರಿಗಿಂತ ಹೆಚ್ಚಿನವರಿಗೆ ವಿ - ಮೆಸೇಜು ಕಳುಹಿಸುವ ಅವಕಾಶ ಇದ್ದರೆ ಚೆನ್ನಾಗಿರುತ್ತದೆ. ಇದು ನಿರ್ವಾಹಕರಿಗೆ ಅನುಕೂಲವಾಗಿ ಪರಿಣಮಿಸುತ್ತದೆ.

ಉದಾ :

Send Private Message ನ 

To ಎಂಬಲ್ಲಿ,

kannadanadu, hpn, tvs, sunil ಹೀಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 10:39am — suchara

ನನ್ನ ಸಲಹೆಗಳು

suchara's picture

ಮೊದಲಿಗೆ ನಿಮ್ಮ ಈ ಉತ್ತಮ ಪ್ರಯತ್ನಕ್ಕೆ ನಾವೆಲ್ಲ ಚಿರಋಣಿಗಳು.

ನಾನಿನ್ನೂ ಸಂಪದಕ್ಕೆ ಬಹಳ ಹೊಸಬ. ನನ್ನ ಸಲಹೆಗಳಲ್ಲಿ ಎಷ್ಟು ಸ್ವೀಕರಿಸಬೇಕೆಂಬುದು ನಿಮಗೆ ಬಿಟ್ಟದ್ದು.

- ಈ ತಾಣದ ವೇಗ - ನನಗೆ ನಿಧಾನವೆನಿಸುತ್ತಿದೆ - ಇದು ಈ ತಾಣದ ಮೂಲಸೌಕರ್ಯಗಳ ಕಾರಣದಿಂದ ಇದ್ದರೂ ಇರಬಹುದು - ಸಾಧ್ಯವಾದರೆ ಸಂಪದ ತಾಣದ ಪ್ರತಿಕ್ರಿಯೆಯ ವೇಗವನ್ನು ಹೆಚ್ಚಿಸಿ.

- ಇಂಟರ್ಫೇಸ್ ಬಗ್ಗೆ ನನ್ನ ಸಲಹೆಗಳೇನು ಇಲ್ಲ - ಹೀಗೆ ನಡೆಸಬಹುದು
- ಲೇಖನಗಳ ೨೫ ಪದಗಳ ಕನಿಷ್ಠಮಿತಿ ನನ್ನ ಹನಿಗವನಗಳಿಗೆ ತೊಂದರೆ ಕೊಟ್ಟಿದೆ - ಸಾಧ್ಯವಿದ್ದರೆ - ಕವನಗಳಿಗೆ ಮಾತ್ರ ವಿನಾಯತಿ ಕೊಡಿ. ಇಲ್ಲದಿದ್ದರೆ ಲೇಖನದಲ್ಲಿ ಎಷ್ಟು ಪದಗಳಿವೆ ಎಂಬುದನ್ನಾದರೂ ತೋರಿಸಿ.
- ಲೇಖನಗಳನ್ನು - ಆಗಾಗ ಉಳಿಸುವ ಸಾಧನ ವಿದ್ದರೆ ಬಹಳ ಸಹಾಯವಾಗುತ್ತದೆ.
- ಲೇಖನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅದರ ಮೂಲ ಶೀರ್ಷಿಕೆ ತನಗೆ ತಾನೆ ಉತ್ತರದ ಶೀರ್ಷಿಕೆಯೊಳಗೆ ಬಂದರೆ ಬಹಳ ಉತ್ತಮ.
- ಲೇಖಕರು ತಾವು ಸಲ್ಲಿಸಿದ ಎಲ್ಲಾ ಲೇಖನಗಳನ್ನೂ ಒಂದೆಡೆ ನೋಡಬಹುದಾದರೆ ಚೆನ್ನಾಗಿರುತ್ತದೆ. ಈಗಾಗಲೇ ಆ ವ್ಯವಸ್ಟೆ ಇದ್ದರೂ ಇರಬಹುದು.

ಮತ್ತೊಮ್ಮೆ ಅಭಿನಂದನೆಗಳು, ಧನ್ಯವಾದಗಳು.

-ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮ್ಮ ಸಲಹೆ/ಅಭಿಪ್ರಾಯಗಳನ್ನು ನಮಗೆ ಕಳುಹಿಸಿ
  • ಸಂಪದ *ಏನಲ್ಲ* - What Sampada is *not*
  • ಸಂಪದದಲ್ಲಿ ಮತ್ತಷ್ಟು ಹೊಸತು
  • ದಿನಕ್ಕೆ ನೂರು ಪದ ಬರೆಯಿರಿ!
  • ಸಂಪದದಲ್ಲಿ ಕೆಲವು ಬದಲಾವಣೆಗಳು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator