ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಎಲ್ರಿಗೂ ವಿಶೇಷವಾಗಿ ಕಹಳೆ ಊದಬೇಕೆ?

January 3, 2006 - 9:58pm — hpn

ಇತ್ತೀಚೆಗೆ
"ಯೂನಿಕೋಡ್ ಎನೇಬಲ್ ಮಾಡೋದು ಹೇಗೆ ಸಾರ್?"
"ವಿಂಡೋಸ್ ಎಕ್ಸ್ ಪಿ ನಲ್ಲಿ ಕನ್ನಡ ಬರುತ್ತಲೇ ಇಲ್ವಲ್ಲ ಸಾರ್, ಒತ್ತಕ್ಷರಗಳು ಸರಿಯಾಗಿ ಬರುತ್ತಿಲ್ಲ"
"ನಿಮ್ಮ ಸೈಟನ್ನು ಕಂಗ್ಲಿಷಿನಲ್ಲಿ ಹಾಕಿಬಿಡಿ, ನಾವು ವಿಂಡೋಸ್ %$#% ಬಳಸೋದು, ಅದರಲ್ಲಿ ನಿಮ್ಮ ಯೂನಿಕೋಡ್ ಕಾಣೋದಿಲ್ಲ"
"ಮ + ಊ ಯಾಕೋ ಸರಿಯಾಗಿ ಬರುತ್ತಿಲ್ಲ, ಸಾರ್"
"ನಿಮ್ಮ ವೆಬ್ಸೈಟು ಸರಿಯಾಗಿಲ್ಲ, ನೋಡ್ರಿ. ಕನ್ನಡ ಒತ್ತಕ್ಷರಗಳೇ ಕಾಣೋದಿಲ್ಲ. ತಪ್ಪುತಪ್ಪಾಗಿ ಕನ್ನಡ ಉಪಯೋಗಿಸುತ್ತಿದ್ದೀರಿ. ಕನ್ನಡವನ್ನೇ ಹಾಳು ಮಾಡ್ತಾ ಇದ್ದೀರಿ"

ಎಂದೆಲ್ಲ ಸುಮಾರು ಇ-ಮೇಯ್ಲುಗಳು ಬಂದುಬೀಳುತ್ತಿವೆ.
ಇವರಿಗೆಲ್ಲ ಎಷ್ಟು ಬಾರಿ ಹೇಳೋದು? ಅಷ್ಟೊಂದು ಸಮಯ ವ್ಯಯ ಮಾಡಿ ಹೆಲ್ಪ್ ಡಾಕ್ಯುಮೆಂಟ್ ಒಂದು ಪೇರಿಸಿಟ್ಟರೆ
"ನನಗದನ್ನು ಓದಲಾಗದು. ನೀವೇ ಬಾಯ್ಬಿಟ್ಟು ಹೇಳಿ"
ಎಂದರೆ ಹೇಗೆ?

ಎಲ್ಲರಿಗೂ ವಿಶೇಷವಾಗಿ ಕಹಳೆ ಊದಬೇಕೆ?

ಪ್ರತಿಯೊಬ್ಬರಿಗೂ ಉದ್ದುದ್ದ ಇ-ಮೇಯ್ಲುಗಳನ್ನು ಕಳಿಸಿ ಕಳಿಸಿ ಬೇಸರವಾಗಿ ಹೋಗಿದೆ.

ಎಲ್ಲರಿಗೂ ಯೂನಿಕೋಡ್ ಬಗ್ಗೆ ತಿಳಿಯುವಂತೆ, ಪೆದ್ದು ಪೆದ್ದಾಗಿ "ಕನ್ನಡವನ್ನೇ ಹಾಳು ಮಾಡುತ್ತಿದ್ದೀರಿ" ಎಂದು ದೂರದಂತೆ ಮಾಡುವುದು ಹೇಗೆ? ಎಲ್ಲರಿಗೂ ಬರೆದಿರುವ ಡಾಕ್ಯುಮೆಂಟೇಶನ್ ಓದುವಂತೆ ಮಾಡುವುದು ಹೇಗೆ?

ಓದುಗರು ನಿಮ್ಮ ಅಭಿಪ್ರಾಯಗಳೊಂದಿಗೆ, ಸಲಹೆಗಳೊಂದಿಗೆ ಭಾಗವಹಿಸಿ ಸಹಾಯ ಮಾಡಿ. ಚರ್ಚೆ ನಡೆಯಲಿ.

~.~
  • hpn ರವರ ಬ್ಲಾಗ್
  • Login or register to post comments
  • 782 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 3, 2006 - 11:25pm — Sunil Jayaprakash

ತಪ್ಪು ಕಲ್ಪನೆಗಳು

Sunil Jayaprakash's picture

ಇದಕ್ಕೆ ಪರಿಹಾರವೊಂದೇ. ತಪ್ಪು ಕಲ್ಪನೆಗಳನ್ನ ಹೋಗಲಾಡಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಇದ್ದವರಿಗೆ ಗಣಕಯಂತ್ರದಲ್ಲಿ ಕನ್ನಡ ಉಪಯೋಗಿಸಬಹುದು ಎಂದು ಪ್ರಚುರಪಡಿಸುವುದು. ಇಂಗ್ಲೀಷನ್ನು ಎಷ್ಟು ಸಲೀಸಾಗಿ ಟೈಪಿಸಬಹುದೋ ಹಾಗೆಯೇ ಕನ್ನಡವನ್ನೂ ಅಷ್ಚೇ ಸುಲಭವಾಗಿ ಉಪಯೋಗಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಯೂನಿಕೋಡ್ ಎನೇಬಲ್ಡ್ ಮೇಲ್ ಕ್ಲಯಂಟ್ನಿಂದ ಕನ್ನಡದ ಮೇಲ್ ಕಳುಹಿಸುವುದು.

ಕೇವಲ ಹಲೋ ಮೇಯ್ಲ್ ನಿಂದಲೇ ಕನ್ನಡದಲ್ಲಿ ಮೇಯ್ಲ್ ಕಳುಹಿಸಬಹುದು, ಚಾಟ್ ಮಾಡಬಹುದು ಎಂದು ಬಹಳ ಜನಗಳಿಗೆ ತಿಳಿ ಹೇಳಿದ್ದೇನೆ. ಆದರೂ ಏನು ಮಾಡುವುದು. ನಾವಿರೋದೇ ಹಾಗೆ, ಯಾರಾದರೂ ತಿಳಿಸಿಕೊಡಲಿ ಅಂತಲೇ ಕಾಯ್ತಿರ್ತೀವಿ. ಸುಲಭವಾಗಿ ಕಂಗ್ಲೀಷ್ ಟೈಪಿಸಿಬಿಡುತ್ತೇವೆ. ಅದರ ಜೊತೆಗೆ, ಕೆಟ್ಟ ಪತ್ರಿಕಾ ಲೇಖನಗಳೂ ಬೇರೆ.

ಉದಾ: ಇತ್ತೀಚಿನ ಪ್ರಜಾವಾಣಿಯ ಒಂದು ಲೇಖನ.

ಪವನಜರು ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದರು ಕೂಡ ಸರಿಯಾಗಿಯೇ ಇದೆ..  http://sampada.net/node/808

ಆ ಲೇಖನ ಪ್ರಕಟವಾದ ದಿನ ನಮ್ಮ ಮನೇಲೂ ಚರ್ಚೆ ನಡೀತು. ನಾನು ನಮ್ಮ ತಂದೆಗೆ ಇದು ಎಷ್ಟು ಸುಳ್ಳು ಎಂದು ತೋರಿಸಿಕೊಟ್ಟೆ.

ಯಾವಾಗ ಜನರಿಗೆ (ಇಲ್ಲಿ ಜನ ಎಂದರೆ ಎಲ್ಲರೂ, ಕೇವಲ ತಾಂತ್ರಿಕ ಮಂದಿಯಲ್ಲ) ಕನ್ನಡ ಟೈಪಿಸುವುದು ಸುಲಭ ಎಂದು ಮನವರಿಕೆ ಯಾಗುವುದೋ ಅಂದೇ ಅವರು ವಿಷಯ ತಿಳಿಯಲು ತವಕಪಡುತ್ತಾರೆ.

ಉದಾ: ಪವನಜರೇ ಅನೇಕ ಲೇಖನ ಬರೆದಿದ್ದಾರೆ. ಆದರೆ ಅದನ್ನು ಎಷ್ಟು ಮಂದಿ ಓದಿದ್ದಾರೋ ಕಾಣೆ. ಇದಕ್ಕೆ ಕಾರಣ, ಅನೇಕ ವೇಳೆ ಇಂತಹ ಲೇಖನಗಳು ವಾರದ ಪುರವಣೆಗಳಾಗುತ್ತವೆ. ಬಹಳ ಮಂದಿಗೆ ಮುಖ್ಯ ಸಮಾಚಾರಗಳು ಮಾತ್ರ ಬೇಕಿರುತ್ತವೆ. ಪುರವಣೆಗಳನ್ನು ಓದುವವರು ಕಡಿಮೆ. ನಮ್ಮ ಪತ್ರಿಕಾ ವಲಯಕ್ಕೆ ಈ ಸುದ್ದಿಗಳು ಪ್ರಮುಖವೆನಿಸುವುದಿಲ್ಲ. ಅವಕ್ಕೆ ಕೇವಲ ಜಗಳ, ಯುದ್ಧ, ಕೊಲೆ, ಪಕ್ಷಾಂತರ ಇಂತಹ ಸುದ್ದಿಗಳೇ ಬೇಕಿರುತ್ತವೆ.

ಏನು ಮಾಡುವುದು ...ದೊಡ್ಡ ?????

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 22, 2006 - 5:41pm — ಪ್ರದೀಪ್ ಬೆಳಗಲ್

ಕನ್ನಡ ಬಳಕೆಯ ಬಗೆಗೆ ಆಸಕ್ತಿ

ಪ್ರದೀಪ್ ಬೆಳಗಲ್'s picture

ವಾಸ್ತವದಲ್ಲಿ ಇದು ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಯ ಬಗೆಗೆ ಸಾರ್ವತ್ರಿಕ ಅನಾಸಕ್ತಿಯನ್ನು ಸಹ ತೋರುತ್ತದೆ. ಅದಕ್ಕಾಗಿಯೇ ಪವನಜ ಅವರ ಖಾರದ ಪ್ರತಿಕ್ರಿಯೆ ಸರಿಯಾಗಿಯೇ ಇದೆ. ನಾನು ಹಲವು ವಿಂಡೋ ಎಕ್ಸ್ ಪಿಗಳಲ್ಲಿ ಕನ್ನಡ ಎನೇಬಲ್ ಮಾಡಿದ್ದಾರೆಯೇ ಚೆಕ್ ಮಾಡಿದ್ದೇನೆ. ಯಾವುದರಲ್ಲಿಯೂ ಹಾಗೆ ಮಾಡಿರಲಿಲ್ಲ.(ಇದು ಯಾವ ಭಾರತೀಯ ಭಾಷೆಯನ್ನು ಬಳಸದಂತೆ ಮಾಡುತ್ತದೆ). ಒಮ್ಮೆ ಕಂಗ್ಲೀಷ್ ನಲ್ಲಿ ಟೈಪಿಸುವುದು ಅಭ್ಯಾಸವಾದ ನಂತರ ಇನ್ ಸ್ಕ್ರಿಪ್ಟ್ ಗೆ ಹೊರಳುವುದು ಕಷ್ಟವೆಂದೇ ಹಲವರು ಭಾವಿಸುತ್ತಾರೆ. ಆದರೆ ಇದು ಕನ್ನಡ ಟೈಪಿಸುವ ವೇಗವನ್ನು ಹೆಚ್ಚಿಸುತ್ತದೆ. ಕಷ್ಟವಾದಲ್ಲಿ ಕಂಗ್ಲೀಷ್ ನಲ್ಲೇ ಟೈಪಿಸಿ ಬರಹ ಕನ್ ವರ್ಟರ್ ಗಳನ್ನು ಬಳಸಿ, ಯುನಿಕೋಡ್ ಗೆ ಬದಲಾಯಿಸಿಕೊಳ್ಳಬಹುದು. ಆದರೆ ವಿಶಿಷ್ಟ ಕೀಲಿ ಮಣೆ ಬಳಸುವ ಆನಂದವೇ ಬೇರೆ.
ಮೂಲತಃ ಅಗತ್ಯವಿರುವುದು ಈ ಬಗೆಗೆ ಆಸಕ್ತಿ.

ಪ್ರದೀಪ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 22, 2006 - 7:51pm — tvsrinivas41

ಮೊದಲ ಹಲ್ಲು

tvsrinivas41's picture

ಈಗಿನ ಪರಿಸ್ಥಿತಿ ಮೊದಲ ಹಲ್ಲು ಬರುವಾಗ ನವೆ ಇರುವ ಹಾಗೆ ಇದೆ. ಇಂತಹ ಅಂತರ್ಜಾಲ ತಾಣ ಮತ್ತೊಂದಿಲ್ಲದಿರುವುದರಿಂದ ಮತ್ತು ಎಲ್ಲರಿಗೂ ಉತ್ತರಿಸುವುದರಿಂದ ಬರ್ತಾರೆ, ಕೇಳ್ತಾರೆ. ನನಗೆ ಇದುವರೆವಿಗೂ ಯಾರೂ ಜಾಸ್ತಿಯಾಗಿ ಅಂಚೆ ಕಳುಹಿಸಿಲ್ಲ. ಆದ್ದರಿಂದ ನಿಮ್ಮಲ್ಲಿಗೆ ಬರುವ ಒಂದಷ್ಟು ಅಂಚೆಗಳನ್ನು ನನಗೆ ರವಾನಿಸಿ. ನನಗೂ ಸ್ವಲ್ಲ್ಪ ತಲೆಕೆಡಲಿ.

ಅಂತರ್ಜಾಲ ತಾಣದಲ್ಲಿ ಕನ್ನಡ ಬಳಕೆ ೧೦೦% ಆಗುವವರೆವಿಗೂ ನಾವು ತಾಳ್ಮೆ ತಳೆಯಬೇಕು. ನೀವೇ ನೋಡಿದ್ದೀರಲ್ಲ - ಬೇರೆ ತಾಣಗಳಲ್ಲಿ ಇನ್ನೂ ಕಂಗ್ಲೀಷಿನಿಂದ ಮುಂದಕ್ಕೆ ಹೋಗೇ ಇಲ್ಲ. ಜನರನ್ನು ಬದಲಿಸೋಕ್ಕಾಗೋಲ್ಲ. ನಾವೇ ಬದಲಾಗೋಣ.

ಅಂಚೆಗಳನ್ನು ನನಗೆ ಕಳುಹಿಸಿ - ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ಕೊಡಿ ಎಂದು ಕೋರುವೆ. ನಿಮ್ಮ ಆ ಕೆಲಸ ಬಹಳ ಮುಖ್ಯ. ಅದರ ಅರಿವು ಇಂದು ನಮಗಾಗದು - ಮುಂದೆ ಅದರ ಫಲ ಅನುಭವಿಸುವಾಗ ಆಗುವುದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ
  • ಸಂಪದ ಸುದ್ದಿ ಪತ್ರ - ಜನವರಿ ೧೫ ೨೦೦೬
  • ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?
  • ದಟ್ಸ್ ಕನ್ನಡ ಮತ್ತು ಕನ್ನಡ ಪ್ರಭ ಸೈಟುಗಳನ್ನು ನೀವೀಗ ಯೂನಿಕೋಡ್ ನಲ್ಲಿ ಓದಬಹುದು...
  • ಪ್ರತ್ಯಕ್ಷ ನೋಡಿದರೂ...
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator