23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

June 5, 2008 - 12:36am
hpn
"ಇವತ್ತು ಸರಕಾರ ನೋಟಿಫಿಕೇಶನ್ ಹೊರಡಿಸಿದೇರಿ. ಬೈ-ಲಿಂಗ್ಯುಯಲ್ ಫಾಂಟ್ಸ್ ಅಂತೆ" ಪತ್ರಕರ್ತ ಸ್ನೇಹಿತರೊಬ್ಬರು ಫೋನಿನಲ್ಲಿ ತಿಳಿಸಿದರು. "ಹಾಂ?" ನಿದ್ರೆಯಲ್ಲಿದ್ದೀನಾ ಅನ್ನಿಸಿತು. ಒಂದೆರಡು ಕ್ಷಣಗಳ ನಂತರವೇ ಕ್ಲಿಯರ್ ಆಗಿದ್ದು: ಎಚ್ಚರವಾಗಿಯೇ ಇದ್ದೀನಿ, ಫೋನಿನಲ್ಲಿ ಆ ಕಡೆಯಿಂದ ಬಂದ ಮಾಹಿತಿಯೂ ನಿಜವೇ ಎಂಬುದು! ನನಗೆ ತಲೆಯಲ್ಲಿ, "ಏನಿದು? ಇದ್ಯಾಕೆ ಈಗ ಇಂತದ್ದನ್ನು ಹೊರತರುತ್ತಿದ್ದಾರೆ? ಹೋಗಲಿ, ಇದೇನು ಬೈಲಿಂಗ್ಯುಯಲ್ ಫಾಂಟ್? ಈಗಾಗಲೇ ಪ್ರಪಂಚದಾದ್ಯಂತ ಎಲ್ಲರಿಂದಲೂ ಬಳಕೆಯರೋ, ವಿಶ್ವವಿಡೀ ಮಾನ್ಯತೆ ಪಡೆದಿರೋ ಯೂನಿಕೋಡ್ ಹಾಗೂ ಅದರಲ್ಲಿನ ಮಲ್ಟಿಲಿಂಗ್ಯುಯಲ್ ಫಾಂಟುಗಳೇ ಇರುವಾಗ! ಅದೂ ಹಳೆಯ [:http://en.wikipedia....|ಎನ್ಕೋಡಿಂಗ್!] ಇದನ್ನು ಪ್ರಪಂಚದ ಇನ್ನೆಲ್ಲೂ ಸಪೋರ್ಟ್ ಮಾಡೋದಿಲ್ಲ, ಯಾವ ತಂತ್ರಾಂಶದಲ್ಲೂ ನೇಟಿವ್ ಆಗಿ ಸಪೋರ್ಟ್ ಮಾಡೋದಿಲ್ಲ. ಅತ್ತ ತಮಿಳು, ತೆಲುಗು, ಮಲಯಾಳ, ಹಿಂದಿ ಕಂಪ್ಯೂಟರಿನಲ್ಲಿ ವಿಜೃಂಭಿಸುತ್ತಿರುವಾಗ ಮೊದಲೇ ಹಿಂದಿರುವ ಕನ್ನಡ ಇನ್ನೂ ಹಿಂದುಳಿಯೋದಿಲ್ಲವೆ?" ಎಂದೆಲ್ಲಾ ಆಲೋಚನೆಗಳು ಹರಿದಾಡಿದವು. ಗೂಗಲ್ ಯೂನಿಕೋಡ್ ಬಳಸುತ್ತದೆ. ಯಾಹೂ ಯೂನಿಕೋಡ್ ಬಳಸುತ್ತದೆ. ಪ್ರಪಂಚದ ಎಲ್ಲ ಮಾನ್ಯತೆ ಪಡೆದಿರುವ ತಂತ್ರಾಂಶಗಳು ಯೂನಿಕೋಡ್ ಬೆಂಬಲದೊಂದಿಗೆ ಹೊರಬರುತ್ತಿವೆ. ನೀವೀಗ ಇಲ್ಲಿ ಓದುತ್ತಿರುವ ಕನ್ನಡವೂ ಯೂನಿಕೋಡ್ ಮೂಲಕ! (ನಾಳೆ ಗೂಗಲ್ಲಿನಲ್ಲಿ "ದ್ವಿಭಾಷಾ ಅಕ್ಷರರೂಪ" ಎಂದು ಸರ್ಚ್ ಮಾಡಿದರೆ ಯೂನಿಕೋಡ್ ನಲ್ಲಿರುವ ಈ ಪುಟ ಸಿಗತ್ತೆ!) ಭಾಷೆಗಳನ್ನು ಕಂಪ್ಯೂಟರ್ ಜಗತ್ತಿನಲ್ಲಿ ಇಂಗ್ಲೀಷಿಗೆ ಸಮವಾಗಿ ತರಲು ಇರುವ ಹೆದ್ದಾರಿ ಯೂನಿಕೋಡ್ ಎನ್ನಬಹುದು. ಇಷ್ಟೆಲ್ಲದರ ನಡುವೆಯೂ [:http://www.karnataka...|ಕರ್ನಾಟಕದ ಸರಕಾರ ಹತ್ತು ಹೆಜ್ಜೆ ಹಿಂದಕ್ಕೆ ಇಡುತ್ತಿರುವುದು ನೋಡಿದರೆ] ಸುಮಾರು ಪ್ರಶ್ನೆಗಳೇ ಕಾಡುತ್ತವೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಕೇವೆಂ on
ಇನ್ನೂ ಗೆಜೆಟ್ಟೆಗೆ ಸೇರಿಸಿಲ್ಲ. ೨೧ರ ತನಕ ಕಾಲ ಇದೆ. ನೀವೆ ಒಂದು ಪತ್ರದ ಕರಡು ತಯಾರು ಮಾಡಿ . ನಾವೆಲ್ಲಾ ಸಹಿ ಹಾಕಿ ಎಲ್ಲಾರಿಗು ಒಂದು ಕಾಪಿ ಕೊಟ್ಟು ಬರೋಣ. ಮುಮಂ( ಸಿ ಎಂ) ಗೂ ಕಳಿಸಿದರಾಯ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by girish.rajanal on
ಹೌದು ಸರ್‍ ಈ ರೀತಿಲಾದರೂ ಉನಿಕೋಡ್ ಬಳಸೋ ಹಾಗೆ ಮತ್ತು ಅದರ ಬಗ್ಗೆ ಅರಿವು ಮೂಡಿದಬಹುದು. ನಿಮ್ಮವ, ಗಿರೀಶ ರಾಜನಾಳ ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sprasad on
ನಿಜಕ್ಕೂ ಇದೊಂದು ಖೇದದ ವಿಷಯವೆ ಸರಿ!! ಎಲ್ಲೆಲೋ ಯೂನಿಕೋಡ್ ರಾರಾಜಿಸುತ್ತಿರುವಾಗ. ASCII ಬಳಸುತ್ತಿದ್ದ ಎಲ್ಲಾ ತಾಣಗಳು ಯೂನಿಕೋಡ್‍ಗೆ ಬದಲಾಗುತ್ತಿದ್ದರೆ, ಈ ನಮ್ಮ ರಾಜ್ಯ ಸರ್ಕಾರ ಅದೆ ಹಳೆ ಗಂಡನ ಪಾದಕ್ಕೆ ಮೊರೆ ಹೋಗುತ್ತಿದೆ!! ಐಟಿಯ ರಾಜಧಾನಿ ಎನಿಸಿಕೊಂಡ ಬೆಂಗಳೂರು ಪಟ್ಟಭದ್ರ ಹಿತಾಸಕ್ತಿಗಳ ದೆಸೆಯಿಂದ ಈ ಮಟ್ಟದಲ್ಲಿ 'ಹಿಂದುವರೆಯುವುತ್ತಿರುವುದಕ್ಕೆ" ಏನನ್ನಬೇಕೋ ಗೊತ್ತಾಗುತ್ತಿಲ್ಲಾ!! ಹರಿ, ಇದನ್ನು ತಡೆಯಲು ಏನಾದರೂ ಉಪಾಯವಿದೆಯೆ!!?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pavanaja on
ಖಂಡಿತ ಇದೆ. ಪ್ರತಿಯೊಬ್ಬರೂ ಸರಕಾರವು ನೀಡಿದ ವಿಳಾಸಕ್ಕೆ ಪತ್ರ ಬರೆಯಬೇಕು. ಪತ್ರ ತರ್ಕಬದ್ಧವಾಗಿರಲಿ. ಹಾಗೆಯೇ ನನ್ನ ಲೇಖನ ಓದಿ - http://sampada.net/b... -ಪವನಜ ----------- [http://www.vishvakan...|Vishva Kannada] Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pavanaja on
ನನ್ನ ಪತ್ರ [http://sampada.net/b...|ಇಲ್ಲಿದೆ]. ನೀವೂ ಪ್ರತಿಭಟಿಸಿ. -ಪವನಜ ----------- [http://www.vishvakan...|Vishva Kannada] Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಕೆಲವು ಟಿ ವಿ ಚ್ಯಾನಲ್ಲುಗಳು ಈ ಬಗ್ಗೆ ಸುದ್ದಿಯಲ್ಲಿ ಪ್ರಸಾರ ಮಾಡುವ ಸಂಭವ ಇದೆ. ಟಿ ವಿ ಚ್ಯಾನಲ್ಲುಗಳಲ್ಲಿರುವ ಸಂಪದಿಗರೇ ಕೆಲವರು ಈ ಬಗ್ಗೆ ಸ್ವತಃ ಆಸಕ್ತಿವಹಿಸಿ ನನಗೆ ಮೆಸೇಜ್ ಮಾಡಿದ್ದರು. ಅಲ್ಲದೆ ನಾವುಗಳು ಕೆಲವರು ಸೇರಿ ಒಂದು ಪೆಟಿಶನ್ ಹಾಗೂ ಡಾಕ್ಯುಮೆಂಟ್ ರೆಡಿ ಮಾಡುತ್ತಿದ್ದೇವೆ. ಆಸಕ್ತರು ಇದರಲ್ಲಿ ಕೈ ಜೋಡಿಸಬಹುದು. ಹೆಚ್ಚಿನ ಮಾಹಿತಿಗೆ [:http://hpnadig.net/c...|ನನಗೆ ಮೇಯ್ಲ್ ಮಾಡಿ]. -- ನನ್ನ ಬ್ಲಾಗ್: [:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಕರ್ನಾಟಕ ನೋಡಿದರೆ ಅಯಿಟಿ ಮಂದಿಯ ದೊಡ್ಡೂರು.. ನಾಳೆ ಕರ್ನಾಟಕ ಸರಕಾರ ಹಿಂದಿಯಲ್ಲಿ ಏನಾರ ಬರೇಬೇಕಾದರೆ trilingual ಪಾಂಟ್ ಮಾಡಿಕೋತಾರ? :) ಅಯ್ಯೋ ಜಗತ್ತೆಲ್ಲ ಒಂದು ಕಡೆ ಹೋದರೆ ಇವರಿಗೆ ಏನು ದಡ್ಡತನ.. ಈ ಪಾಂಟನ್ನು ನಾವು ಹೊರದೇಶಕ್ಕೆ ಹೋದಾಗ ಓದೋದು ಹೇಗೆ? ಮೊದಲೇ firefoxಅಲ್ಲಿ ಪಾಂಟ್ ಕಿರೀಕು! ===================================== ಮಾಯ್ಸ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ishwar.shastri on
ಕುತ್ತಿಗೆ ಮೇಲೆ ತಲೆ ಇರುವವರು ಯಾರೂ ಸರಕಾರಿ ಕೆಲಸದಲ್ಲಿ ಇರುವುದಿಲ್ಲ. ಯಾರೂ ಬಳಸದ/ ಇಷ್ಟಬಟ್ಟು ಬಳಸಲಸಾಧ್ಯವಾದ ನುಡಿ ತಂತ್ರಾಶದ ಬದಲಿಗೆ ಯೂಸರ್ ಪ್ರೆಂಡ್ಲಿಯಾದ ಬರಹ ತಂತ್ರಾಶವನ್ನು ಆಳವಡಿಸಿಕೊಳ್ಳುವಂತೆ ನಾನು ಸರಕಾರಿ ಸೇವೆಯಲ್ಲಿರುವಾಗ ಬರೆದುಕೊಂಡಿದ್ದೆ. ಮುಂದಿನ ದಿನಗಳಲ್ಲಿ ಕನ್ನಡವು, ತನ್ಮೂಲಕ ಕನ್ನಡಿಗರು ಬದುಕಿ ಇರಬೇಕಾದಲ್ಲಿ ಈ ಕೃಮ ಅವಶ್ಯಕ ಎಂದು ಭಾವಿಸಿದ್ದೆ. ಈಗ ಯಾವುದೋ ಹೊಸರೋಗ ಸರಕಾರದ ತಲೆಗೆ ಹತ್ತಿದೆ ಎಂದೆನಿಸುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.