ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಸಂಪದ ಆರ್ಕೈವಿನಿಂದ

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ‌, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮೊದಲ ಚಿತ್ರ

Hari Prasad Nadig Cartoon
ಪೂರ್ಣ ಆವೃತ್ತಿಗೆ ಮೇಲೆ ಕ್ಲಿಕ್ ಮಾಡಿ.
ಮಕ್ಕಳು ಮೊದಲ ಬಾರಿ ಚಿತ್ರ ಬಿಡಿಸಿದಾಗ, ಮೊದಲ ಬಾರಿ ಪೆನ್ನು ಹಿಡಿದು ಗೀಚಿದಾಗ ಅದನ್ನು ಜೋಪಾನ ತೆಗೆದಿಡುತ್ತೇವೆ, ಅಲ್ವ? ಇದೋ, ನನ್ನ ಮೊದಲ ಚಿತ್ರ - ಮಕ್ಕಳು ಪೆನ್ನು ಹಿಡಿದು ಬರೆಯುವುದ ಕಲೆತಂತೆ ಇವತ್ತು ಈ ಡಿಜಿಟಲ್ ಪೆನ್ನು ಹಿಡಿದು ಕಲೆಯುವಾಗ ಗೀಚಿದ ಮೊದಲ ಚಿತ್ರ! ಬಹಳ ದಿನಗಳ ನಂತರ ಗೊತ್ತು ಗುರಿಯಿಲ್ಲದೆ ಪರಿಚಯವಿಲ್ಲದ ಕಂಪ್ಯೂಟರ್ ಸಾಧನವೊಂದನ್ನು ಪ್ರಯತ್ನಿಸಿ ಕಲೆತದ್ದು ಖುಷಿಕೊಟ್ಟಿತು. ಇದನ್ನು ಸಂಪದದಲ್ಲಿ ತೆಗೆದಿಡುತ್ತಿದ್ದೇನೆ.
 
ಈ device ನಿನ್ನೆಯೇ ತಲುಪಿದರೂ ನೋಡಲಾಗಿರಲಿಲ್ಲ. ಈಗಷ್ಟೇ ಸ್ವಲ್ಪ ಹೊತ್ತಿನ ಮುಂಚೆ install ಮಾಡಿದೆ.
ಈ ಪೆರಿಫೆರಲ್ ಗ್ನು/ಲಿನಕ್ಸ್ ನಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. install ಮಾಡುವಲ್ಲಿ ಹೆಚ್ಚು ಕಷ್ಟವಾಗಲಿಲ್ಲ. ಮೇಲಿನ ಚಿತ್ರ ಕೂಡ ಇಂಕ್ ಸ್ಕೇಪಿನಲ್ಲಿ ಕೆಲವೇ ನಿಮಿಷಗಳೊಳಗೆ ಗೀಚಿದ್ದು.
ಈ device ನನಗೆ ತಲುಪಿಸುವಲ್ಲಿ ಸಹಾಯ ಮಾಡಿದ ಹಂಸಾನಂದಿಯವರಿಗೆ ವಂದನೆ.  ಜೊತೆಗೆ ಇದರ ಕುರಿತು ಹಾಗು ಗ್ನು/ಲಿನಕ್ಸ್ ಸುತ್ತ ಹಲವು ಚರ್ಚೆಗಳಿಗೆಳೆಯುತ್ತ ಆಗಾಗ ತಲೆ ತಿಂದರೂ ಬೇಸರ ಮಾಡಿಕೊಳ್ಳದ ತಂತ್ರಜ್ಞ ಶಿವುಗೆ ಕೂಡ! 
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮೊದಲ ಚಿತ್ರ

kalpana's picture

ಚೆನ್ನಾಗಿದೆ. ಎಲ್ಲಿ ಸಿಗುತ್ತೆ ಈ ಗುಳಿಗೆ(ಟ್ಯಾಬ್ಲೆಟ್) ? ಎಷ್ಟು ಖರ್ಚಾಗುತ್ತೆ?

~ಕಲ್ಪನ

ಉ: ಮೊದಲ ಚಿತ್ರ

createam's picture

wacom ಇದರಲ್ಲಿ ಒಳ್ಳೆ ಬ್ರ್ಯಾಂಡ್ (ಅಥವ ತುಂಬಾ ಪರಿಚಿತ ಬ್ರಾಂಡ್) . ಖರ್ಚು ನೀವು ಎಷ್ಟು ಖರ್ಚು ಮಾಡೊದಿಕ್ಕೆ ತಯಾರಿದೀರೋ ಅಷ್ಟು ;). ಅಂದ್ರೆ ತುಂಬಾ ತರಹದ ಮಾಡೆಲ್‍ಗಳಿವೆ, ನಾನು ಒಂದು ತಗೊಬೇಕು ಅಂತ ತುಂಬಾ ದಿನದಿಂದ ತಗೊಬೇಕು ಅಂತ ಪ್ಲಾನ್ ಮಾಡ್ತಾನೇ ಇದೀನಿ, ಭಾರತಕ್ಕೆ ವಾಪಸ್ ಹೋಗೋ ಮುಂಚೆ ತಗೊಳೊದ್ಯ್ ಅಂತ ಸಮ್ನೆ ಇದಿನಿ. Amazon ನಲ್ಲಿ ಹುಡುಕಿ ಒಂದು idea ಬರಬಹುದು.

ಉ: ಮೊದಲ ಚಿತ್ರ

hpn's picture

ನಿಜ. ನನ್ನ ಹತ್ತಿರ ಇರುವುದು ಎಂಟ್ರಿ ಲೆವೆಲ್ ಮಾಡೆಲ್. ಸುಮಾರು $88. Wacom ಬಂಬು, ಅಲ್ಲಲ್ಲ Wacom bamboo.

ಲಕ್ಷಗಟ್ಟಲೆ ಬೆಲೆ ಇರುವ ಮಾಡೆಲ್ ಗಳೂ ಇವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಮೊದಲ ಚಿತ್ರ

createam's picture

ಹರಿ, ಕಾರ್ಟೂನ್‍ ಸೂಪರ್. ನಾನು ಒಂದು ತೊಗೊಳೊ ಮುಂಚೆ ನಿಮ್ಮ ತಲೆ ತಿಂತೀನಿ :)

ಉ: ಮೊದಲ ಚಿತ್ರ

hpn's picture

sure ಸಾರ್. :)
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಮೊದಲ ಚಿತ್ರ

srinivasps's picture

ಬೊಂಬಾಟ್ !
ನಂಗೂ ಒಂದು ಮಾತ್ರೆ ಬೇಕಲ್ಲ...

ಹಂಸಾನಂದಿಯವರೆ/ನಾಡಿಗರೆ ,
ಸ್ವಲ್ಪ ಮಾಹಿತಿ ಕೊಡಿ...

ಉ: ಮೊದಲ ಚಿತ್ರ

hpn's picture

ಸರ್, ಮಾತ್ರೆ ಅಂತೆಲ್ಲ ಅನ್ಬ್ಯಾಡ್ರೀ... ಅದನ್ನ ದಿನಾ ಮುಂದಿಟ್ಟುಕೊಂಡು ಕೆಲ್ಸಾ ಮಾಡ್ಬೇಕು! :-)

ನಾ ಇದನ್ನ ತಗೊಂಡಿದ್ದರ ಉದ್ದೇಶ ಕಾರ್ಟೂನ್ ಬರೆಯೋದಲ್ಲ ಬೇರೆ ಒಂದು ಬಹುಮುಖ್ಯ ಕಾರಣ ಇದೆ ;-)
ಆ ಕೆಲಸ ಮುಗಿದ ಮೇಲೆ ನಿಮ್ಮೆಲ್ಲರಿಗೂ ತಿಳಿಸುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಮೊದಲ ಚಿತ್ರ

srinivasps's picture

:)
ಏನ್ರೀ ಹೀಗೆ suspense ಇಡ್ತೀರ...ಅದೇನು ಅಂಥ ಬೇಗ ಹೇಳಿ...
ಜನಕ್ಕೆ ಉಪಯೋಗ ಆಗೋ ಅಂಥದ್ದೇ ಅಂಥ ಗೊತ್ತು :)

--ಶ್ರೀ

ಉ: ಮೊದಲ ಚಿತ್ರ

kalpana's picture

hpnರು ತಮ್ಮ ಕನಸಿನ ಕನ್ಯೆಯ ಚಿತ್ರ ಬಿಡಿಸಬೇಕಂತ "ಗುಳಿಗೆ" ತೊಗೊಂಡಿದ್ದಾರಂತೆ. ಇದರಿಂದ ಅವರ ಅಮ್ಮನಿಗೆ ಸೊಸೆ ಹುಡುಕುವಲ್ಲಿ ಸಹಾಯವಾಗಲೀಂತ ಅಂತೆ. ;-)

~ಕಲ್ಪನ

ಉ: ಮೊದಲ ಚಿತ್ರ

createam's picture

typography ಮೇಲೆ ಏನೋ ಮಾಡ್ತಾ ಇರ್ತಿರ ;)

ಉ: ಮೊದಲ ಚಿತ್ರ

yuvapremi's picture

ಮಸ್ತ್ ಇದೆ ಈ ವ್ಯಂಗ್ಯ ಚಿತ್ರ ಹೆಚ್.ಪಿ.ಎನ್ನರೆ...!! :)

-ಯುವಪ್ರೇಮಿ

ಉ: ಮೊದಲ ಚಿತ್ರ

ಸಂಗನಗೌಡ's picture

ತುಂಬ ಚೆನ್ನಾಗಿದೆ ಚಿತ್ತಾರ.
ಮತ್ಯಾಕ್ ತಡ HPN, ಶುರು ಹಚ್ಚಿಕೊಳ್ಳಿ, ಹೊಸದೊಂದು, ಕಾರ್ಟೂನ್ ಸೈಟ್... :-)
ನಂಗೆ ಕಾರ್ಟೂನ್ ಓದೋದು ತುಂಬ ಇಸ್ಟ..

ಉ: ಮೊದಲ ಚಿತ್ರ

raghava's picture

ಬೆಲೆಪಟ್ಟಿ ಇಲ್ಲಿ ಸಿಗ್ತು ...
http://www.wacom.co....
ಯೂಎಸ್ಸಾಫೆ ನಲ್ಲಿ ಇನ್ನು ಕಡ್ಮೆ ರೇಟಿಗೆ ಗಿಟ್ಟ್ಬೋದೆನೋಪ್ಪಾ :)

--_ರಾಘವ_
http://raghavan.vina...

ಉ: ಮೊದಲ ಚಿತ್ರ

anil.ramesh's picture

ಕಾರ್ಟೂನು ತುಂಬಾ ಚೆನ್ನಾಗಿದೆ...

ಅಂದ ಹಾಗೆ, ಹೊಸ ಕಾರ್ಟೂನು ವೆಬ್ ಸೈಟ್ ಶುರು ಮಾಡೋ ಪ್ಲಾನ್ ಇದೆಯಾ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.