ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಇಪ್ಪತ್ತೈದರ ಬೇಸರ

December 5, 2007 - 10:53pm — hpn

ಬಾಲ್ಯದಲ್ಲಿ ಹುಟ್ಟು ಹಬ್ಬ ಹತ್ತಿರ ಬರುತ್ತಲೇ ಸಂಭ್ರಮ, ಹೆಮ್ಮೆ, ಸಡಗರ. ಚಾಕಲೇಟ್ ಹಂಚುವ ಆಸೆ. ಉಡುಗೊರೆ ಪಡೆಯುವ ಮಹದಾಸೆ.

ಅದು ಹೇಗೋ ವರ್ಷಗಳುರುಳಿದಂತೆ ಹುಟ್ಟು ಹಬ್ಬ ಹತ್ತಿರವಾಗುತ್ತಲೇ ಮನಸ್ಸಿನೊಳಗೇ ಇಷ್ಟೊಂದು ವಯಸ್ಸಾಯಿತಲ್ಲ ಎಂಬ ಚಿಂತೆ ಹಾಗೂ ಚಿಂತನೆಗಳ ಸುರಿಮಳೆಯಾಗುತ್ತದೆ, ಮನದಲ್ಲಿ ಬೇಸರ ಮನೆಮಾಡುತ್ತದೆ. ಹಿಂದಿದ್ದ ಸಡಗರ ಅಡಗಿಬಿಡುತ್ತದೆ. ಚಾಕಲೇಟ್ ಹಂಚುವಾಸೆ ಇರಲಿ, ಹುಟ್ಟಿದ ದಿನವನ್ನು ನೆನಪಿನಲ್ಲಿಟ್ಟುಕೊಂಡು ಕಾಯುವ ನಿರೀಕ್ಷೆಯೂ ಇಲ್ಲದಾಗುತ್ತದೆ.

ಇತ್ತೀಚೆಗೆ ಇಪ್ಪತ್ತೈದು ವರ್ಷಗಳು ತುಂಬಿತು ಎಂಬ ಬೇಸರ - ಹುಟ್ಟು ಹಬ್ಬದ ಶುಭಾಶಯ ಹೇಳಿದವರೆಡೆಗೆ ಕಾಣಿಸಿಕೊಳ್ಳುವ ಇಲ್ಲದ ಮುಗುಳ್ನಗೆ. ಉಡುಗೊರೆ ನೀಡುವಷ್ಟು ನೆನಪಿಟ್ಟುಕೊಂಡವರಿಗೆ ಏನಾದರೂ ಹೇಳಬೇಕೆಂದು ಹೊರಟಾಗ ಮಾತೇ ಹೊರಡದ ಅನುಭವ. ಅರೆ, ಇಷ್ಟೊಂದು ವರ್ಷ ಈ ಜಗತ್ತಿನಲ್ಲಿದ್ದೆನಾ ಎಂದು ಅಚ್ಚರಿಯಾಗುವ ಕೆಲವು ಘಳಿಗೆಗಳು. ಇವೆಲ್ಲದರ ನಡುವೆ - ದಿನಗಳುರುಳುತ್ತಿವೆ.

  • ಹುಟ್ಟುಹಬ್ಬ
~.~
  • hpn ರವರ ಬ್ಲಾಗ್
  • Login or register to post comments
  • 515 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 5, 2007 - 11:18pm — hamsanandi

ಉ: ಇಪ್ಪತ್ತೈದರ ಬೇಸರ

hamsanandi's picture

ಹರಿಪ್ರಸಾದರೆ,

ಇಪ್ಪತ್ತೈದರ ಹುಟ್ತುಹಬ್ಬದ ದಿನಕ್ಕೆ ನನ್ನ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. Smiling

ಇಪ್ಪತ್ತೈದೇ ಆಗಲಿ, ಎಪ್ಪತ್ತೈದೇ ಆಗಲಿ, ಖಂಡಿತ ಬೇಸರಿಸುವ ಮಾತಲ್ಲ ಬಿಡಿ. ದಿನಗಳು ಉರುಳಿಯೇ ಉರುಳುತ್ತವೆ. ಜೀವನೋತ್ಸಾಹ ಮುಖ್ಯವಷ್ಟೇ. ಅಚ್ಚರಿ ಇರಲಿ. ಬೇಸರ ಬೇಡ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 5, 2007 - 11:28pm — hpn

ಉ: ಇಪ್ಪತ್ತೈದರ ಬೇಸರ

hpn's picture

ಹುಟ್ಟು ಹಬ್ಬ ಹೋದ ತಿಂಗಳಿತ್ತು - ನವೆಂಬರ್ ೧೮ರಂದು. ಅದಾದ ನಂತರ ಒಂದು ದಿನ ಕುಳಿತು ಬರೆದದ್ದು.

ಇವತ್ತು ಪೋಸ್ಟ್ ಮಾಡುವ ಮುನ್ನ ಒಮ್ಮೆ ಓದಿ ನನಗೂ ತೀರ ಪೆಸಿಮಿಸ್ಟಿಕ್ ಆಯಿತು ಎಂದನಿಸಿತು Smiling
ಆದರೂ ಪೋಸ್ಟ್ ಮಾಡಿದೆ Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 6, 2007 - 12:26am — ಗಣೇಶ

ಉ: ಇಪ್ಪತ್ತೈದರ ಬೇಸರ

ಗಣೇಶ's picture

ನಿಮಗಿಂತ ಹತ್ತು ದಿನ ಮೊದಲು ನನ್ನ ತಂದೆಯವರ 78ನೇ ಹುಟ್ಟುಹಬ್ಬ. ‘ರಾಶಿ ಬಟ್ಟೆಯಿದೆ. ಪುನಃ ಹೊಸ ಬಟ್ಟೆ ತಂದಿರಲ್ಲಾ....’ಎಂದು ನಮ್ಮನ್ನು ಬೈದು,ಕೇಕು ತಂದುದಕ್ಕೆ ಸಿಟ್ಟಿನಲ್ಲಿ ಒಂದು ರೌಂಡು ಯಕ್ಷಗಾನ ಕುಣಿದು,ಮತ್ತೆ ಮೊಮ್ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಕಟ್ ಮಾಡಿದರು. ಅವರ ಉತ್ಸಾಹವೇ ಅವರ ಆರೋಗ್ಯದ ರಹಸ್ಯ.ಮನೆಯಲ್ಲಿ ಬೈಕ್,ಸ್ಕೂಟರ್,ಕಾರ್(ಡ್ರೈವರ್ ಸಹಿತ)ಇದ್ದರೂ ಸೈಕಲ್‌ನಲ್ಲೇ ಸುತ್ತುವರು.ನಮ್ಮನ್ನು,ಸರಕಾರವನ್ನು ಬೈಯುವುದು ಬಿಟ್ಟರೆ ಬೇರಾವುದೇ ಖಾಯಿಲೆ ಅವರಿಗೆ ಇಲ್ಲ.ಇಪ್ಪತ್ತೈದೇ ಆಗಲಿ ಎಪ್ಪತ್ತೈದೇ ಆಗಲಿ.. ..ಹಂಸಾನಂದಿಯವರ ಮಾತು ಸತ್ಯ.

ನಿಮಗೆ ಹುಟ್ಟುಹಬ್ಬದ ಶುಭಾಶಯಗಳು(ತಡವಾಗಿ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 13, 2008 - 11:17am — mahesha

ಉ: ಇಪ್ಪತ್ತೈದರ ಬೇಸರ

mahesha's picture

ಅಣ್ಣ... Smiling

ನಿನ್ನ ಬರಹ ನೋಡಿ, ಇನ್ನೂ ಇಪ್ಪತಯ್ದನ್ನು ಮುಟ್ಟಲಿರುವ ನಮ್ಮ ಪಾಡೇನು?

ಇಗೋ ಒಂದು ಬರಹ..

ಈ ಇಪ್ಪತಯ್ದದು.. ಸರಿಯಿಲ್ಲ..!!

ಆದ್ರು ನಿಂಗೆ ಇಪ್ಪತಯ್ದು ತುಂಬಿದಕ್ಕೆ ಹಾರೈಕೆಗಳು... ಬೇಗ ಜೋಡಿಯಾಗಿ, ಸಂಸಾರವೇರಲಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 13, 2008 - 12:32pm — csomsekraiah

ಉ: ಇಪ್ಪತ್ತೈದರ ಬೇಸರ

csomsekraiah's picture

ನಿಮಗೆ ಇಪ್ಪತ್ತೈದು ಎಂದು ತಿಳಿದು ಹೆಮ್ಮೆಯಾಯಿತು . ನಾನು ಅಂದುಕೊಂಡದ್ದಕ್ಕಿಂತಲೂ ತುಂಬಾ ಕಡಿಮೆ .ನಿಮ್ಮಿಂದ ಕನ್ನಡ ಜಗತ್ತು ತುಂಬಾ ನಿರೀಕ್ಷೆ ಇಟ್ಟುಕೊಳ್ಳಬಹುದು.ನೀವು ಅಂದುಕೊಂಡದ್ದನ್ನೆಲ್ಲಾ ಸಾಧಿಸುವ ಶಕ್ತಿ ಬರಲಿ ಎನ್ನುವುದೇ ನನ್ನ ಹಾರೈಕೆ ;ಅದು ಕನ್ನಡಿಗರಿಗೆ ಆಗುವ ಲಾಭವಲ್ಲವೆ? ನಿಮಗೆ ನನ್ನ ಮನಸ್ಸು ತುಂಬಿದ ಶುಭಾಶಯಗಳು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 13, 2008 - 1:26pm — mahesha

ಉ: ಇಪ್ಪತ್ತೈದರ ಬೇಸರ

mahesha's picture

Smiling

ಹರಿ ಜೊತೆಗಿನ ಮೊದಲ ಮಾತುಕತೆಯಲ್ಲಿ ಹರಿ ನನಗೆ ಹೀಗೆ ಹೇಳಿದ್ದು ಇನ್ನೂ ನೆನಪಿದೆ "ಓ ನೀನು ನಮ್ಮ ಬ್ಯಾಚೇ" Smiling

ನಮ್ಮ ೨೦೦೪ ಹೊರಬಂದ ಬ್ಯಾಚಲ್ಲಿ ಬಲು ವಿಚಿತ್ರದ ಮಂದಿಯೇ ಇದ್ದಾರೇನೋ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿನ್ನಿಂದ
  • ಮಲ್ಲಿಗೆ ಮಗು.
  • ಹುಟ್ಟು...
  • ಹುಟ್ಟು-ಸಾವು.
  • ನೀಲು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:49pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator