ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ನಿಮಗಿದು ಗೊತ್ತೆ?
* ಜನಪ್ರಿಯ ಮೊಬೈಲ್ ಫೋನು ಕಂಪೆನಿ ನೋಕಿಯ ಪ್ರಾರಂಭದಲ್ಲಿ ಪೇಪರ್ ತಯಾರಿಕೆಯಲ್ಲಿ ತೊಡಗಿದ್ದ ಕಂಪೆನಿಯಾಗಿತ್ತಂತೆ. ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಬೂಟುಗಳನ್ನೂ ತಯಾರಿಸುತ್ತಿತ್ತಂತೆ! (೧)
* ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಾಬರ್ಟ್ ಕ್ಲೈವ್, ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದನಂತೆ. ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಗುಮಾಸ್ತನಾಗಿ ಮೊದಲು ಅವನು ಕೆಲಸಕ್ಕೆ ಸೇರಿದ್ದಂತೆ!
* ಓಶೋ ಎಂದೇ ಹೆಚ್ಚು ಪರಿಚಿತರಾದ ಪುಣೆ ಮೂಲದ ರಜನೀಶ್ ರವರ ಶಿಷ್ಯರು ಅಮೇರಿಕದಲ್ಲಿ 'ರಜನೀಶಪುರಂ' ಎಂಬ ಒಂದು ಊರನ್ನೇ ಹುಟ್ಟುಹಾಕಿದ್ದರಂತೆ. (೨)
* ಕನ್ನಡಕ್ಕೆ ಹಲವು ವಿಶ್ವಕೋಶಗಳು ಬಳಸುವ ಹೆಸರು - 'ಕನರೀಸ್'! (೩)
[ಇನ್ನುಳಿದದ್ದು ನಾಳೆಗೆ - ನಿದ್ರೆ ಬರುತ್ತಿದೆ
]
ಸೂ: ಕಿಟ್ಟೆಲ್ ಬಗ್ಗೆ ಯಾರ ಬಳಿಯಾದ್ರು ಹೆಚ್ಚು ಮಾಹಿತಿ ಉಂಟಾ?

- hpn ರವರ ಬ್ಲಾಗ್
- Login or register to post comments
- 697 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಕಿಟ್ಟಲ್ ಬಗ್ಗೆ.
ಬೆಂಗಳೂರಿನ ಮೆಯೋ ಹಾಲ್ ಬಳಿ ಕಿಟ್ಟಲ್ ಪ್ರತಿಮೆಯೊಂದು ಇದೆ. ನವೆಂಬರ್ ತಿಂಗಳಲ್ಲಿ ಅವರ ಕೈಯಲ್ಲಿ ಕನ್ನಡ ಬಾವುಟ ಹಿಡಿಸುತ್ತಾರೆ
ಆ ಪ್ರತಿಮೆಯ ಭಾವಚಿತ್ರ ಬೆಕಿದ್ದರೆ ತಂದು ಕೊಡುತ್ತೆನೆ. ಸ್ವಲ್ಪ ಸಮಯ ಬೇಕು.
ಪ್ರಶಾಂತ
ರೆವ್. ಕಿಟ್ಟಲ್
ರೆವೆರೆಂಡ್ ಕಿಟ್ಟಲ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಗಳಿಗೆ ತಾಗಿಕೊಳ್ಳಿ
http://thatskannada.oneindia.in/sahitya/jana/kittel.html
http://www.languageinindia.com/sep2005/kannadadictionary1.html
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net