ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಆದಿಮ - ಒಂದಷ್ಟು ಚಿತ್ರಗಳು

ಹೋದವಾರ ಕೋಲಾರದಲ್ಲಿ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆಂದು ಹೋದಾಗ 'ಆದಿಮ'ಕ್ಕೂ ಭೇಟಿ ಕೊಟ್ಟಿದ್ದೆವು ಎಂದು ಬರೆದಿದ್ದೆ. ಅಲ್ಲಿಯ ಕೆಲವು ಚಿತ್ರಗಳು ಇಲ್ಲಿವೆ. ಇನ್ನೂ ನೂರಾರು ಫೋಟೋಗಳು ಕಂಪ್ಯೂಟರಿನಲ್ಲಿಯೇ ಕುಳಿತಿವೆ. ಅವಕಾಶವಾದಂತೆಲ್ಲ ಸೇರಿಸುತ್ತ ಹೋಗುತ್ತಿರುತ್ತೇವೆ.
ಆದರೆ ಕೆಳಗಿರುವ ಕಲಾಕೃತಿಗಳ ಕಲಾಮಯ ಜಗತ್ತು ಸಂಪದಿಗರ ಕಲೆಯ ಸಂಪತ್ತನ್ನು ಹೊರಗೆಳೆಯುವುದೋ ನೋಡೋಣ್ವ?
(ಇಂದು ಹುಣ್ಣಿಮೆ. 'ಆದಿಮ'ದಲ್ಲಿ ಇಂದು ನಾಟಕ, ಜಾನಪದ ಉತ್ಸವ ಮತ್ತಷ್ಟು! ಕೆಲಸದ ಪ್ರಯುಕ್ತ ಹೋಗಲಾಗದಿದ್ದರೂ ಈ ಜಾಗ ಆಗಲೇ ಮನಸ್ಸಿನಲ್ಲಿ ಅಚ್ಚಾಗಿ ಬೇರೂರಿವ ನೆನಪಿನ ಗುಂಗಿನಲ್ಲಿ ಈ ಚಿತ್ರಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತಿರುವೆ)

ಇವಳ್ಯಾರು ಗೊತ್ತ?

ನಾಲ್ಕು ಪರಿಧಿ, ಮತ್ತೆ ಒಂದಷ್ಟು

ನಾನ್ಯಾರ ನೆನಪ ತಂದೀನಿ? 

ಕೆಂಪು ಹಣೆಬಟ್ಟು, ಮೂಗುತಿ
ನಾ ಕ್ಷಮಯಾಧರಿತ್ರಿ!

ಮರದ ಮರೆಯಲ್ಲಿ ನಾನಿಲ್ಲ, ಮರವೇ ನಾನು, ನಾನದರಲ್ಲಿ!

ಎಂತ ಹೇಳುತಿ? ನೀರು ಸಿಗದಿಲ್ಲಿ! ಬಾಡಿ ಬಾಯಾರಿ ನೀರಡಿಕೆಯಾದೀತು, ಬೇಗ ನಡಿ ಮನೆಗೆ!

ಚಿತ್ರಗಳು: ನಾನೇ ತೆಗೆದದ್ದು. ಚಿತ್ರಗಳನ್ನು ಬೇರೆಡೆ ಬಳಸಿದರೆ ಅನುಮತಿ ಪಡೆದು ಬಳಸುತ್ತೀರಲ್ವ? :)

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಆದಿಮ - ಒಂದಷ್ಟು ಚಿತ್ರಗಳು

ASHOKKUMAR's picture

ಕಲಾಕೃತಿಗಳ ಚಿತ್ರಗಳು ಚೆನ್ನಾಗಿವೆ.

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

ಥಾಂಕ್ಸ್, ಅಶೋಕ್.

ಉ: ಆದಿಮ - ಒಂದಷ್ಟು ಚಿತ್ರಗಳು

drushya pradeep's picture

ಸಕ್ಕತ್ ಚಿತ್ರಗಳು!!

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

ಥ್ಯಾಂಕ್ಸ್ ದೃಶ್ಯ.

ಉ: ಆದಿಮ - ಒಂದಷ್ಟು ಚಿತ್ರಗಳು

savithasr's picture

ಹರಿ,
ಚಿತ್ರಗಳು ಚೆಂದಿವೆ :)
>>ಇವಳ್ಯಾರು ಗೊತ್ತ? ತುಂಬಾ ಚೆನ್ನಾಗಿದೆ.
-ಸವಿತ

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

>>ಇವಳ್ಯಾರು ಗೊತ್ತ? ತುಂಬಾ ಚೆನ್ನಾಗಿದೆ.

:-)

ಉ: ಆದಿಮ ಚಿತ್ರ ಬಳಸಿದರೆ "ಸಂಪದದಿಂದ ಕದ್ದಿದ್ದು" ಅಂತ ಬರೆಯುತ್ತೇವೆ!!!

asuhegde's picture

ಹರಿ,

ಅಪರೂಪದ ಚಿತ್ರಗಳು ತುಂಬಾ ಚೆನ್ನಾಗಿವೆ.

>>ಚಿತ್ರಗಳು: ನಾನೇ ತೆಗೆದದ್ದು. ಚಿತ್ರಗಳನ್ನು ಬೇರೆಡೆ ಬಳಸಿದರೆ ಅನುಮತಿ ಪಡೆದು ಬಳಸುತ್ತೀರಲ್ವ? >>

ಚಿತ್ರಗಳನ್ನು ಬೇರೆಡೆ ಬಳಸಿದರೆ "ಸಂಪದದಿಂದ ಕದ್ದಿದ್ದು" ಅಂತ ಬರೆಯುತ್ತೇವೆ, ಆದೀತೇ?
:)

ಉ: ಆದಿಮ ಚಿತ್ರ ಬಳಸಿದರೆ "ಸಂಪದದಿಂದ ಕದ್ದಿದ್ದು" ಅಂತ ಬರೆಯುತ್ತೇವೆ!!!

hpn's picture

ಚಿತ್ರ ನಾನು ತೆಗೆದದ್ದು. ಕ್ರೆಡಿಟ್ಸ್ ನನಗೆ ಸಿಗಲಿ ಅಂತ. :)

ಉ: ಆದಿಮ ಚಿತ್ರ ಬಳಸಿದರೆ "ಸಂಪದದಿಂದ ಕದ್ದಿದ್ದು" ಅಂತ ಬರೆಯುತ್ತೇವೆ!!!

asuhegde's picture

ಅದರ ಜೊತೆಗೆ ಕದ್ದ ಕ್ರೆಡಿಟ್ ನಮಗೆ.
:)

ಉ: ಆದಿಮ - ಒಂದಷ್ಟು ಚಿತ್ರಗಳು

vinideso's picture

ಚಿತ್ರಗಳು ಚೆನ್ನಾಗಿವೆ ಹರಿಯವರೇ

ಉ: ಆದಿಮ - ಒಂದಷ್ಟು ಚಿತ್ರಗಳು

Shamala's picture

ಚಿತ್ರಗಳು ತುಂಬಾ ಚೆನ್ನಗಿವೆ.

ಇವಳ್ಯಾರು ಬಲ್ಲಿರೆ ? - "ಕೂಸ ಹೊತ್ತ ಮಾತೆ" ?

ಹರಿ ಸರಿಯಾಗಿದೆಯಾ ಉತ್ತರ ?

ಶ್ಯಾಮಲ

ಉ: ಆದಿಮ - ಒಂದಷ್ಟು ಚಿತ್ರಗಳು

palachandra's picture

ಚೆನ್ನಾಗಿವೆ ಚಿತ್ರ,
"ನಾನ್ಯಾರ ನೆನಪ ತಂದೀನಿ? " - ಒಳ್ಳೇ ಕಂಪೋಸಿಶನ್,, ಈ ಕಂಪೋಸಿಶನ್ ನನಗೆ ಹೊಳ್ದೇ ಇರ್ಲಿಲ್ಲ.. ಸ್ವಲ್ಪ ಬ್ಲರ್ ಆಗಿದೆ ಮಾತ್ರ

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

ಹೌದು, ಶಾರ್ಪ್ನೆಸ್ ಇಲ್ಲ. ಶಾರ್ಪ್ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. :)

ಉ: ಆದಿಮ - ಒಂದಷ್ಟು ಚಿತ್ರಗಳು

ಅರವಿಂದ್'s picture

ಹರಿ

ಇನ್ನೂ ತುಂಬಾ ಚಿತ್ರಗಳಿದ್ದವಲ್ಲಾ,

ಅರವಿಂದ್

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

ಯೆಸ್ ಸರ್, ಇನ್ನೂ ತುಂಬಾ ಚಿತ್ರಗಳಿವೆ. ಸಮಯ ಸಿಕ್ಕಾಗೆಲ್ಲ ಹಾಕುತ್ತ ಹೋಗೋದು. :)

ಉ: ಆದಿಮ - ಒಂದಷ್ಟು ಚಿತ್ರಗಳು

palachandra's picture

ನಂಗೆ ಒಳ್ಳೋಳ್ಳೆ ಐಡಿಯಾ ಬರ್ತಾ ಇವೆ, ಸಂಪದದಲ್ಲಿ ಪಬ್ಲಿಶ್ ಸೌಲಭ್ಯ ಇದೆ, ಸೇವ್-ಪಬ್ಲಿಶ್ ಲೇಟರ್ ಇದ್ದಿದ್ರೆ ಚೆನ್ನಾಗಿರ್ತಿತ್ತಲ್ವ :)

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

ಇವತ್ತು ಕೆಲಸಗಳ ನಡುವೇನೆ ಫ್ಲಾಟ್ ಕಣೋ ಮಾರಾಯ. ಈಗ ಸಂಪದ ಹಿಡ್ಕೊಂಡ್ ಕೂತ್ರೆ ಮುಗಿಯಿತು ನನ್ನ ಕಥೆ!

ಡ್ರಾಫ್ಟ್ ಸೌಲಭ್ಯಕ್ಕೆ ಒಂದು ಮಾಡ್ಯೂಲ್ ಮೇಲೆ ಕೆಲಸ ಮಾಡ್ತಿದೀನಿ. ನಿನಗೂ ಆಸಕ್ತಿ ಇದ್ದರೆ ಕಳುಹಿಸಿಕೊಡುತ್ತೇನೆ... code ನೋಡ್ತೀಯ?

ಉ: ಆದಿಮ - ಒಂದಷ್ಟು ಚಿತ್ರಗಳು

palachandra's picture

:)
ಕಾಂಬ

ಉ: ಆದಿಮ - ಒಂದಷ್ಟು ಚಿತ್ರಗಳು

Jayalaxmi.Patil's picture

ಒಳ್ಳೊಳ್ಳೆ ಶೀರ್ಷಿಕೆಗಳನ್ನು ಕೊಟ್ಟಿದ್ದೀರಿ ಹರಿ. ಕಲಾಕೃತಿಗಳು ಚೆನ್ನಾಗಿವೆ. "ನಾನ್ಯಾರ ನೆನಪ ತಂದೀನಿ?" ಚಿತ್ರ ನೋಡಿದ ತಕ್ಷಣ ಮಾರೀಚ(ರಾಮಾಯಣ) ನೆನಪಾದ!! ಬಹುಶಃ ಜಿಂಕೆ , ಡೊಳ್ಳು ಮತ್ತು ಮುಖವಾಡಗಳು ಕಾರಣವಿರಬೇಕು. :-)

ಉ: ಆದಿಮ - ಒಂದಷ್ಟು ಚಿತ್ರಗಳು

hpn's picture

ಮಾಯಾಮೃಗ. ನನಗೂ ಅದೇ ನೆನಪಾದದ್ದು ಮೊದಲ ಬಾರಿ. :)

ಆದರೆ ಪ್ರತಿಕ್ರಿಯೆ ಹಾಕಿದ ಉಳಿದ ಯಾರಿಗೂ ಏನೂ ನೆನಪಾಗದ್ದು ಆಶ್ಚರ್ಯ!
ಶೀರ್ಷಿಕೆ ಬರೆಯಲು ಕೆಲಸದ ನಡುವೆ ಪುರುಸೊತ್ತು ಮಾಡಿಕೊಂಡದ್ದು ಓದುಗರಲ್ಲಿ ಅಷ್ಟು ಪರಿಣಾಮ ತರಲಿಲ್ಲಾಂತ ಕಾಣುತ್ತೆ, ಚೆನ್ನಾಗಿದೆ ಅನ್ನಿಸಿಕೊಂಡದ್ದಷ್ಟೆ! :)

ಉ: ಆದಿಮ - ಒಂದಷ್ಟು ಚಿತ್ರಗಳು

malathi shimoga's picture

ತುಂಬಾ ಸುಂದರವಾದ ಕಲಾಕೃತಿಗಳು...
ಚೆನ್ನಾಗಿವೆ....

ಉ: ಆದಿಮ - ಒಂದಷ್ಟು ಚಿತ್ರಗಳು

hariharapurasridhar's picture

ಸಕತ್.

ಉ: ಆದಿಮ - ಒಂದಷ್ಟು ಚಿತ್ರಗಳು

smurthygr's picture

ನಿಮ್ಮ ಚಿತ್ರಗಳನ್ನೂ, ಶೀರ್ಷಿಕೆಗಳನ್ನೂ ನೋಡಿ ಮೆಚ್ಚಿದ್ದರೂ ಅದನ್ನು ಬರೆದು ತಿಳಿಸಿರಲಿಲ್ಲ, ಇನ್ನೂ ಅನೇಕ ಜನರಂತೆ. ನಿಮ್ಮ ಪ್ರತಿಕ್ರಿಯೆ ನೋಡಿ ಈಗ ಬರೀತಾ ಇದ್ದೇನೆ. ಚೆನ್ನಾಗಿದೆ ಅಂದರೆ ಸಾಕು ಅಲ್ಲವೇ...

ಉ: ಆದಿಮ - ಒಂದಷ್ಟು ಚಿತ್ರಗಳು

vinutha.mv's picture

>>ಮರದ ಮರೆಯಲ್ಲಿ ನಾನಿಲ್ಲ, ಮರವೇ ನಾನು, ನಾನದರಲ್ಲಿ!
ಶೀರ್ಷಿಕೆ ತು೦ಬಾ ಇಷ್ಟವಾಯಿತು :)