ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಸಾಹಿತ್ಯ ಮೇಳ

August 7, 2005 - 8:27pm — hpn

ರವಿವಾರ, ಬೆಳಗಾಗುತ್ತಿದ್ದಂತೆ ಸ್ನೇಹಿತರೊಬ್ಬರ ಫೋನು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯವರು ನಡೆಸುತ್ತಿರುವ ಪುಟ್ಟ 'ಬುಕ್ ಶೋ'ಗೆ ಹೋಗುವುದೆಂದು ಹಿಂದಿನ ದಿನ ಮಾತನಾಡಿಕೊಂಡಿದ್ದೆವು. ಹಾಗೆಯೇ ನನ್ನ ಸ್ನೇಹಿತರಿಗೆ 'ಉಬುಂಟು' ಲಿನಕ್ಸ್ ನಲ್ಲಿರುವ ಕನ್ನಡ ಸಪೋರ್ಟ್ ತೋರಿಸುವುದಾಗಿ ಸ್ಕೆಚ್ ಹಾಕಿದ್ದೆ. ನಿಶಾಚರನ ನಿದ್ದೆಗೆ ಕತ್ತರಿ ಬಿದ್ದಿತು. Smiling

ಸರಿ, ಅಷ್ಟೇನೂ ಟ್ರಾಫಿಕ್ ಇರಲಿಕ್ಕಿಲ್ಲವೆಂದೆಣೆಸಿ ಬೈಕೇರಿ ಚಾಮರಾಜಪೇಟೆಯ ಕಡೆಗೆ ಪ್ರಯಾಣ ಬೆಳೆಸಿದೆ. ಆದರೆ ವಿಚಿತ್ರವೆಂಬಂತೆ ಭಾನುವಾರದಂದೂ ಸಾಕಷ್ಟು ಟ್ರಾಫಿಕ್ ಇದ್ದೇ ಇತ್ತು. ಗೊತ್ತಿದ್ದ ಎಲ್ಲಾ ಶಾರ್ಟ್ ಕಟ್ ಗಳನ್ನ ಬಳಿಸಿ ಬಸವನಗುಡಿ ಹಾದು ಕನ್ನಡ ಸಾಹಿತ್ಯ ಪರಿಷತ್ತಿಗೆ ರವಾನೆಯಾದದ್ದಾಯಿತು. ಅಪ್ಪ ಅಮ್ಮ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರಿಂದ 'ಎಸ್ ಎಲ್ ವಿ'ಯಲ್ಲೇ ಅಲ್ಲಿಗೆ ಬಂದಿದ್ದ ಸ್ನೇಹಿತರೊಡನೆ ತಿಂಡಿ. ಮಾಮೂಲಿನಂತೆ ಹೋಟೆಲ್ ಗಳಲ್ಲಿ ಅಲ್ಲಿ ಸಿಗುವ (ಅಥವಾ ಬಂದವರ ಬಾಯಲ್ಲಿ ನೀರೂರಿಸಬೇಕೆಂದೇ ಸೇರಿಸಿರುವ) ತಿಂಡಿ ತೀರ್ಥಗಳ ಫೋಟೊಗಳು ರಾರಾಜಿಸಿದರೆ, 'ಎಸ್ ಎಲ್ ವಿ'ಯಲ್ಲಿ ರಾಜರತ್ನಂ, ಕುವೆಂಪು, ಬೇಂದ್ರೆ, ಮತ್ತಿತರ ಸಾಹಿತಿಗಳ ಫೋಟೊಗಳು! Smiling ಎಸ್ ಎಲ್ ವಿಯವರ ಕನ್ನಡಾಭಿಮಾನದ ಬಗ್ಗೆ ಸ್ನೇಹಿತರೊಡನೆ ಪ್ರಾರಂಭವಾದ ಮಾತು ಪುಸ್ತಕಗಳವರೆಗೆ ಬಂದಿತು.

ಪುಸ್ತಕಗಳನ್ನು ನೋಡಲು ಹೋಗುವಷ್ಟರಲ್ಲಿ ಪುಸ್ತಕಗಳನ್ನಿಟ್ಟಿದ್ದ ಮಳಿಗೆ ಬಿಕೋ ಎನ್ನುತ್ತಿತ್ತು. ನನ್ನ ಸ್ನೇಹಿತರು ಮುಂಚೆಯೇ ಅಲ್ಲಿ ತಲುಪಿದ್ದರಿಂದ ಸುಮಾರು ಪುಸ್ತಕಗಳನ್ನು ಅವರು ಆಗಲೇ ತೆಗೆದಿರಿಸಿಕೊಂಡಿದ್ದರು. ಮೊದಲಿಗೆ 'ಇಲ್ಲೇನಿರಬಹುದಪ್ಪಾ, ತೀರಾ ನೀರಸವಾಗಿ ಕಾಣುತ್ತಿದೆ' ಎಂದು ಆಲೋಚಿಸಿ ಒಳಗೆ ನಡೆದೆ. ಆದರೆ ನನ್ನ ಫರ್ಸ್ಟ್ ಇಂಪ್ರೆಶ್ಶನ್ ಸುಳ್ಳಾಗಿತ್ತು. ಒಳ ಹೊಕ್ಕಿ ನೋಡಿದರೆ ಎಲ್ಲಾ ಭಾಷೆಗಳ ಪುಸ್ತಕಗಳನ್ನಿಟ್ಟಿದ್ದರು (ಕೇಂದ್ರ ಸಾಹಿತ್ಯ ಆಕಾಡೆಮಿಯಲ್ಲವೆ?). ಕನ್ನಡ, ಇಂಗ್ಲಿಷ್ ಪುಸ್ತಕಗಳ ವಿಭಾಗಗಳತ್ತ ಕಣ್ಣು ಹಾಯಿಸಿ ಸಂಸ್ಕೃತ ವಿಭಾಗವನ್ನು ನೋಡಿ ಬರುವ ಹೊತ್ತಿಗೆ ಒ ಎಲ್ ನಾಗಭೂಷಣ ಸ್ವಾಮಿಯವರ "Rocks of Hampi", ದೀನಾನಾಥ ತ್ರಿಪಾಠಿ ಯವರ "ಮಧುಸೂದನಸರಸ್ವತೀಚರಿತಮ್", ಹಾಗೂ "ಭಾರತೀಯ ಸಾಹಿತ್ಯ ನಿರ್ಮಾಪಕರು" ಸಿರೀಸ್ ನಲ್ಲಿ ಹೊರಬಂದಿರುವ "ದೇವುಡು", "ಕೃಷ್ಣದೇವರಾಯ", "ತ್ಯಾಗರಾಜ", "ಕುಮಾರವ್ಯಾಸ", "ಆನಂದವರ್ಧನ" ನನ್ನ ಕೈ ಸೇರಿದ್ದವು. ಎಲ್ಲ ಪುಸ್ತಕಗಳೂ ಸೇರಿ ಆದದ್ದು ೧೨೦ ರೂ ಅಷ್ಟೆ!

ಜೊತೆಗೆ ಬಂದಿದ್ದ ಸ್ನೇಹಿತರನ್ನು ಪುಸಲಾಯಿಸಿ, ಕೆಲಸವಿದೆಯೆಂದರೂ ಬಿಡದೆ ನನ್ನೊಡನೆ ಮನೆಗೆ ಕರೆದುಕೊಂಡು ಬಂದು ಉಬುಂಟುವಿನಲ್ಲಿ ಕನ್ನಡ ಬಳಕೆಗಿರುವ ಸೌಲಭ್ಯಗಳನ್ನು ತೋರಿಸಿದೆ. ಸ್ನೇಹಿತರು ಆಶ್ಚರ್ಯದಿಂದ ಬೀಗಿದರು. ಇನ್ನು ಸಂಪದ, ಕನ್ನಡ ವಿಕಿಪೀಡಿಯ ತೋರಿಸುತ್ತಲೇ ಮಾತುಕತೆಯಲ್ಲಿ ಮಧ್ಯಾಹ್ನವಾಗಿ ಹೋಯ್ತು. ಸಂಜೆ ಕ್ರಿಕೆಟ್ ನೋಡಿ, "ಪರ್ವಾಗಿಲ್ಲ, ಸೋಲಿನ ದವಡೆಗೆ ಸಿಕ್ಕು ಕೊನೆಗೂ ಹಾಗೂ ಹೀಗೂ ಗೆಲುವು ಸಾಧಿಸಿದರಲ್ಲ, ನಮ್ಮ ಭಾರತ ತಂಡದವರು" ಎಂದು ನಿಟ್ಟುಸಿರು ಬಿಟ್ಟು "ದೇವುಡು"ರವರ ಬಗ್ಗೆ ಇರುವ ಪುಸ್ತಕ ಕೈಯಲ್ಲಿ ಹಿಡಿದವನು, ಈ ಮೂಲಕ ಸಂಪದದ ನನ್ನ ಬ್ಲಾಗ್ ಅಪ್ಡೇಟ್ ಮಾಡುತ್ತಿರುವೆನು. "ದೇವುಡು"ರವರ ಬಗ್ಗೆ ನಾನು ಓದಿದ್ದು, ಹಾಗೂ ಈವರೆಗೆ ತಿಳಿದಿರುವುದರ ಬಗ್ಗೆ ಇನ್ನೊಮ್ಮೆ ಬರೆಯುವೆ. ನನ್ನ ಬ್ಲಾಗ್ ಚೆಕ್ ಮಾಡುತ್ತಲಿರಿ Eye-wink

- ಹೆಚ್. ಪಿ.

~.~
  • hpn ರವರ ಬ್ಲಾಗ್
  • Login or register to post comments
  • 1107 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾವಿರ ರೂಪಾಯಿಗೆ ಇಪ್ಪತ್ತು ಪುಸ್ತಕ ಖರೀದಿ.
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
  • ಯಾರ ಸಾಹಿತ್ಯ
  • ಮೊದಲನೆಯದಾಗಿ....
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator