ಬರೆಯದವರ ಮನದ ತಲ್ಲಣ!
ಬರೆಯೋಣು ಅಂತ ಹೊರಟಾಗ ಏನೂ ಮನಸ್ಸಿಗೆ ಬಾರದೆ ಮತ್ತೆ ಯಾವಾಗಲೋ ಪುಸ್ತಕ ಹಿಡಿದು ಕುಳಿತಾಗ, ಫೋನಿನಲ್ಲಿ ಮಾತನಾಡುತ್ತಿರುವಾಗ ತಟ್ಟನೆ ಹೊಳೆಯುವುದು. ಆಗ ಬರೆಯಲಾಗದೆ ನಂತರಕ್ಕಿಟ್ಟು ಕೊನೆಗೆ ಏನೂ ಬರೆಯದೇ ಇರುವುದು ಒಂದು ವಿಚಿತ್ರ ರೀತಿಯದೇ ಆದ ತಮಾಷೆ. ಬೆಳಿಗ್ಗಿನಿಂದ ನಾಲ್ಕಾರು ಬಾರಿ ಬರೆಯಲು ಕುಳಿತು "ಏನು ಬರೆಯಬೇಕು" ಎಂದು ಆಲೋಚಿಸುವಷ್ಟರಲ್ಲಿ ಏನೋ ಮತ್ತೊಂದು ಕೆಲಸ - ಮತ್ತೊಂದು ಫೋನು, ಮತ್ತೊಂದು ಇ-ಮೇಯ್ಲು. ಬರೆಯುವಷ್ಟಕ್ಕೆ ಬಂದು ಬರೆಯಲಾದದ್ದು ಇಷ್ಟೇ. ಈಗಷ್ಟೇ ಸಂಪದ ಸರ್ವರಿಗೆ ಲೋಡು ಹೆಚ್ಚಾಗಿ (ಅದ್ಯಾಕೋ ಭಾನುವಾರ ಕೂಡ ಈಗ ಈ ಸ್ಥಿತಿ) ಅದನ್ನು ಸರಿ ಮಾಡಲು ಮತ್ತೆ ಕಂಪ್ಯೂಟರಿನತ್ತ ಓಡಿ ಬಂದು ಕೈಯಲ್ಲಿದ್ದ ಪುಸ್ತಕ ಪಕ್ಕಕ್ಕಿಟ್ಟು ಬೆಳಿಗ್ಗೆ ಏನೋ ಬರೆಯಲು ಹೊರಟ ಸಾಲುಗಳನ್ನು ಮತ್ತೆ ಹಿಡಿದು ತಿರುಚಿ ಗುದ್ದಾಡಿದ್ದು ಹೀಗಾಗಿದೆ. ಓದಬೇಡಿ!
- hpn's blog
- Login or register to post comments
- 659 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬರೆಯದವರ ಮನದ ತಲ್ಲಣ!
ಸಮಸ್ಕಾರ ಹರಿ ಅವರೆ,
ಶೀರ್ಷಿಕೆ ತುಂಬ ಚೆನ್ನಾಗಿದೆ. ನನ್ನ ಮನದ ಮಾತೆ ತಾವು ಬರೆದಂತಿದೆ. ನಿಜವಾಗಿಯೂ ನಾನು ಏನಾದರೂ ಬರೆಯಬೇಕು ಎನಿಸಿ ಸಂಪದ ತೆರೆಯುತ್ತೇನೆ, ಆದರೆ ಏನು ಬರೆಯಬೇಕು ಎನ್ನುವ ದ್ವಂದ್ವದಲ್ಲಿ ಇತರರ ಲೇಖನ ಓದಿ ಅದಕ್ಕೆ ಪ್ರತಿಕ್ರಯಿಸಿ ಸುಮ್ಮನಾಗುತ್ತೇನೆ. ಏಕೆ ಹೀಗೆ ಎಂದು ಎಷ್ಟೋ ಬಾರಿ ನನ್ನನ್ನೆ ಪ್ರಶ್ನಿಸಿಕೊಂಡು ಉತ್ತರ ಹೊಳೆಯದೆ ಮೌನವಾಗಿದ್ದೇನೆ.
ಆಕ್ಷರಗಳನ್ನು ಜತೆ ಜತೆಯಾಗಿಸಿ
ವಾಕ್ಯಮಾಡುವ ರೀತಿ ತಿಳಿಯದೆ,
ಬರೆಯ ಬೇಕಾದದ್ದು ಒಳಗುಳಿದು
ತರುವ ಮನದ ತಲ್ಲಣ
ಬಲ್ಲವರೆ ಬಲ್ಲರೂ ಹರಿಯೇ!!!!!!!!!!
ವಂದನೆಗಳು
ಮೌನ
ಉ: ಬರೆಯದವರ ಮನದ ತಲ್ಲಣ!
ಒಂದನೆಯ :-) = ’ಮಾತೆಯರ ದಿನ’ ಆದ್ದರಿಂದ "ನನ್ನ ಮನದ ಮಾತೆ ತಾವು ಬರೆದಂತಿದೆ"?
ಎರಡನೆಯ :-) = ’ಏನು ಬರೆಯಬೇಕು’ ಎಂಬ ಪ್ರಶ್ನೆಯಷ್ಟೇ ಇದ್ದರೆ ಅದು ದ್ವಂದ್ವ ಆಗುವುದೇ? "ಬರೆಯಲೋ ಬೇಡವೋ ಅಂತಿದ್ದರೆ ಅದಕ್ಕೆ ದ್ವಂದ್ವ ಎನ್ನಬಹುದು, ಏಕೆಂದರೆ ಅಲ್ಲಿ ಆಯ್ಕೆಗಳು ಎರಡು.
ಮೂರನೆಯ :-) "ಉತ್ತರ ಹೊಳೆಯದೆ ಮೌನವಾಗಿದ್ದೇನೆ", ಓಹ್ ಹಾಗಾಗಿಯೇ ನಿಮ್ಮ ಗುರುತು mowna ಎಂದು?
ಉ: ಬರೆಯದವರ ಮನದ ತಲ್ಲಣ!
ಬೇಗ ಬರೀರಿ! ನಾನು ಮುಂಚೆಯೆಲ್ಲ ಸುಮಾರು ನನಗೆ ಬೇಕಾದಂತೆ ಬರೆದುಕೊಂಡಿರುವೆ. ;)
ಜೋಷಿಯವರು ಹೇಳಿದಂತೆ ಧ್ವಂಧ್ವ ಸರಿಯಾದ ಪದವಾಗಲಿಕ್ಕಿಲ್ಲ. :)
ಉ: ಬರೆಯದವರ ಮನದ ತಲ್ಲಣ!
ಒಂದನೆಯ :-) = "ಓದಬೇಡಿ" ಎಂಬ ಪ್ರೀತಿಯ (ಕಾಳಜಿಯ?) ಆದೇಶ ಕೊನೆಯ ಪದವಾಗಿದೆ!
ಎರಡನೆಯ :-) = ಸಂಪದ ಸರ್ವರಿಗೆ (= ಎಲ್ಲರಿಗೆ) ಲೋಡು ಹೆಚ್ಚಾಗಿದೆ?
ಉ: ಬರೆಯದವರ ಮನದ ತಲ್ಲಣ!
ನನ್ನದೂ ಅದೇ ಪರಿಸ್ಥಿತಿ ಹರಿಯವರೆ, thank you for expressing my feeling with your own words.
ಉ: ಬರೆಯದವರ ಮನದ ತಲ್ಲಣ!
:-)
ಉ: ಬರೆಯದವರ ಮನದ ತಲ್ಲಣ!
ಸಖತ್ ಪನ್ :-)
ಉ: ಬರೆಯದವರ ಮನದ ತಲ್ಲಣ!
ಬ್ಲೊಗ್ಗೆರ್ಸ್ ಬ್ಲಾಕ್, ವ್ರ್ಯಟ್ರಸ್ ಬ್ಲಾಕ್.. ಹಾಗೆ ಸಂಪದ ಬ್ಲಾಕ್ ( ಸಂಪದ ಸರ್ವರಿಗೆ ಲೋಡು ಹೆಚ್ಚಾಗಿ ಮತ್ತು ಏನು ಬರಿಬೇಕು ಅಂತ ಗೊತ್ತಗ್ದೆ ಸಂಪದಿಗ ಬ್ಲಾಕ ಆಗಿರುದಕ್ಕೆ ) :-)
ಉ: ಬರೆಯದವರ ಮನದ ತಲ್ಲಣ!
ಹುಷಾರು, ಸಂಪದವೇ ಒಂದು ಬ್ಲಾಕ್ ಆದೀತು.
ಉ: ಬರೆಯದವರ ಮನದ ತಲ್ಲಣ!
ನಿಜ ಹರಿ, ಎಷ್ಟೋ ಸಾರಿ ಬರವಣಿಗೆ ಎಂಬುದು ಕೊಳವೆ ಬಾರಿ ಕೊರೆದು ನೀರೆತ್ತಿದಂತೆ.
ಉ: ಬರೆಯದವರ ಮನದ ತಲ್ಲಣ!
ಕೊರೆದು ನೀರು ಖಾಲಿಯಾಗುವ ಸಂಭವವೂ ಉಂಟೋ? ಅಥವ ರಿಚಾರ್ಜ್ ಮಾಡುತ್ತಿರಬಹುದೋ? ;)
ಉ: ಬರೆಯದವರ ಮನದ ತಲ್ಲಣ!
ಹೌದು ಕಣೊ ಹರಿ ನನಿಗು ಅಷ್ಟೆ ಏಷ್ಟೊ ಸಾರಿ ನಮ್ಮ ಮನಸಿನ ಭಾವನೆಗಳನ್ನ, ಅನಿಸಿಕೆಗಳನ್ನ ಹೊರಗೆಡವಕಾಗ್ದೆ ಒದ್ದಾಡೊ ಹಾಗಾಗುತ್ತೆ.
ಉ: ಬರೆಯದವರ ಮನದ ತಲ್ಲಣ!
ಶಿವಮೊಗ್ಗದವರು ಅನ್ತೀರ. ಸಲುಗೆಯಿಂದ ಬರೆದಿದ್ದೀರ. ಪರಿಚಯ ಉಂಟೋ? ನೆನಪು ನೆರವಾಗುತ್ತಿಲ್ಲ! :-)
ಉ: ಬರೆಯದವರ ಮನದ ತಲ್ಲಣ!
ಹೌದು ಹಲವು ಸಲ ಬರೆಯೋಕೇ ಏನು ಮಾತಾಡೋಕೂ ಅಷ್ಟೇ. ಟೈಮೂ ಇರಲ್ಲ ಪುರುಸೊತ್ತೂ ಇರಲ್ಲ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಬರೆಯದವರ ಮನದ ತಲ್ಲಣ!
ಏನಾದ್ರೂ ಬರೆಯಲೇಬೇಕಂತ ಕೂತು ಆಮೇಲೇ ಏನು ಬರಿಯಲಿ ಅಂತ ವಿಚಾರ ಮಾಡ್ತೀರಾ ? :)