September 11, 2008 - 12:44pm - ಹರಿ ಪ್ರಸಾದ್ ನಾಡಿಗ್

- hpn ರವರ ಬ್ಲಾಗ್
- Login or register to post comments
- 1199 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 3 ಸದಸ್ಯರು ಮತ್ತು 83 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
http://government.zdnet.com/?p=3985
ಸವಿತೃ
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
ಸವಿತೃ, ನನ್ನ ಆಶಯ ಇಲ್ಲಿ ಮಾಧ್ಯಮಗಳು ಅದನ್ನು ಬಳಸಿಕೊಳ್ಳುತ್ತಿರುವ ರೀತಿಯ ಕುರಿತು ಹೈಲೈಟ್ ಮಾಡೋದಾಗಿತ್ತು. ಪಬ್ಲಿಕ್ ರಿಯಾಕ್ಷನ್ ಅಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
ಅತ್ಯುತ್ತಮ ಚಿತ್ರ(ಣ) ನಾಡಿಗ್‌ರೇ. ಮೌಢ್ಯ ಹರಡಲು ವಿಜ್ಞಾನವನ್ನೂ ಬಳಸುವ ಮಾಧ್ಯಮದವರಿಗೆ ಚುರುಕು ಮುಟ್ಟಿಸಿದ್ದೀರಿ.
ಸೆರ್ನ್‌ನಲ್ಲಿ ನಡೆದಿರುವುದು ಅದ್ಭುತ ಭೌತ ಪ್ರಯೋಗ. ಅದನ್ನು ಪ್ರಸ್ತುತಪಡಿಸುವವರಿಗೆ ಕೊಂಚವಾದರೂ ವಿಜ್ಞಾನದ ತಿಳಿವಳಿಕೆ ಇರಬೇಕು. ಅದೇನೂ ಇಲ್ಲದೇ, ಪೆದ್ದು ಪೆದ್ದು ಪ್ರಶ್ನೆಗಳು ಕೇಳುತ್ತ ತಮ್ಮ ದಡ್ಡತನವನ್ನೂ, ಜೊತೆಗೆ ಚಾನೆಲ್‌ನ ಮರ್ಯಾದೆಯನ್ನೂ ಹರಾಜು ಮಾಡುತ್ತಿರುವವರಿಗೆ ಈ ವ್ಯಂಗ್ಯಚಿತ್ರ ಚುರುಕು ಮುಟ್ಟಿಸುವಂತಿದೆ.
ಪ್ರಶ್ನೆ ಏನೆಂದರೆ, ಈ ವ್ಯಂಗ್ಯಚಿತ್ರ ಅಂಥವರಿಗೆ ಅರ್ಥವಾಗುತ್ತದಾ?
- ಚಾಮರಾಜ ಸವಡಿ
chamarajsavadi [at] blogspot [dot] com" title="http://chamarajsavadi [at] blogspot [dot] com">http://chamarajsavadi [at] blogspot [dot] com
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
ಥ್ಯಾಂಕ್ಸ್
ಚಾನೆಲ್ಲುಗಳು ಮರ್ಯಾದೆ ಹರಾಜು ಮಾಡುಕೊಳ್ಳುತ್ತಿರುವುದಂತೂ ನಿಜವೇ. ಆದರೆ ನೋಡುಗರಿಗೆ (ಕೇಳುಗರಿಗೆ) ರೇಜಿಗೆಯಾಗುವಷ್ಟು ಏನೇನೋ ಇದ್ದ ಇಲ್ಲದ ವಿಷಯಗಳನ್ನೆಲ್ಲ ಕೆದಕಿ ಹಾಕುತ್ತಿರುವುದು, ಸುದ್ದಿಯನ್ನು ಹಿಂಡಿ ಕೊನೆಗೇನೂ ಬಾರದಿರುವಾಗ ಕಲಸುಮೇಲೋಗರ ಮಾಡಿಟ್ಟು ನಾಳೆ ಮರೆತುಬಿಡುವುದು - ಇವುಗಳಿಂದ ಮರ್ಯಾದೆಗಿಂತ ಹೆಚ್ಚು ಕಳೆದುಕೊಳ್ಳುತ್ತಿದ್ದಾರೆ ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
ಹರಿ, ಸಕತ್ತಾಗಿದೆ ಚಿತ್ರ. ಅವರಿಗೆ ಚುರುಕು ಮುಟ್ಟಿಸುವುದಂತೂ ನಿಜ
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
ಅಯ್ಯಯಾ ಬೈಕೊಳ್ಳೋದಾ? ನಿಜಕ್ಕು "ರೀ ಹರಿಯವ್ರೆ, ಏನ್ರಿ ನೀವು ಇಂಥಾ ಒಳ್ಳೊಳ್ಳೆ(ಅರ್ಥಪೂರ್ಣ) ಚಿತ್ರಗಳನ್ನ ದಿನಾಲೂ ಬರೆದು ಸಂಪದಕ್ಕೆ ಯಾಕ್ರಿ ಹಾಕೊಲ್ಲ?" ಅಂತ ಬಯ್ಯೋಣ ಅನಿಸ್ತಿದೆ!
ಜಯಲಕ್ಷ್ಮೀ.ಪಾಟೀಲ್.
ಉ: ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
ತುಂಬಾ ಚೆನ್ನಾಗಿ ಇನ್ನೂ ಬರೆಯೋಕೆ ಬರೋಲ್ಲ. ಇದು ಸುಮ್ಮನೆ ಬಿಟ್ಟು ಹೋದ ಹವ್ಯಾಸವನ್ನು ಮತ್ತೆ ಪ್ರಾರಂಭಿಸಿದ್ದು. ಕಾಲೇಜಿನಲ್ಲಿದ್ದಾಗ ಕಾರ್ಟೂನು ಬರೆದು ಬಹಳ (ಒಂದು ವರ್ಷ ಕಳಕೊಳ್ಳುವಷ್ಟರ ಮಟ್ಟಿಗೆ) ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದೆ. ಆದರೆ ಈಗ ಅದೆಲ್ಲ ತಮಾಷೆ ಅನಿಸಿಬಿಡುತ್ತೆ.
ಒಳ್ಳೆಯ ಐಡಿಯಗಳು ಬಂದಂತೆ ಈ ಡಿಜಿಟಲ್ ಪೆನ್ನಿಂದ ಗೀಚಿದ ರೇಖೆಗಳು ಮತ್ತಷ್ಟು ಉತ್ತಮಗೊಂಡಂತೆ ಖಂಡಿತ ಮತ್ತಷ್ಟು ವ್ಯಂಗ್ಯಚಿತ್ರಗಳನ್ನು ಬರೆದು ಹಾಕುವೆ. ನೀವೆಲ್ಲ ನೋಡುತ್ತೀರಿ ಎಂಬುದು ಖಾತ್ರಿಯಾಗಿದೆಯಲ್ಲ ಈಗ.
--
ನನ್ನ ಬ್ಲಾಗ್:
ಪರಿವೇಶಣ | PariveshaNa