ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಉಡುಪಿ: ಮತ್ತಷ್ಟು ಚಿತ್ರಗಳು
ಉಡುಪಿಯ ಮತ್ತಷ್ಟು ಚಿತ್ರಗಳು - ಡಿಸೆಂಬರ್ ಆರ್ಕೈವಿನಿಂದ:
ಮಠಗಳ ಫೋಟೋ ಹೊಡೆಯುತ್ತ ಉತ್ತರಾದಿ ಮಠಕ್ಕೆ ಬಂದಾಗ ಅದೇನೋ ಒಳ ಹೋಗಿ ಒಂದೆರಡು ಫೋಟೋ ಹೊಡೆಯೋಣ ಅನ್ನಿಸಿತು. ಉತ್ತರಾದಿ ಮಠದಲ್ಲಿ ನಮ್ಮ ಅಜ್ಜ ಡ್ರೈವರ್ ಆಗಿದ್ದರಂತೆ. ಹೀಗಾಗಿ ಯಾವ ಮಠ ಇದು ಎನ್ನುವ ಕುತೂಹಲವಿತ್ತು.
ಅಲ್ಲಿತ್ತು ಈ ಕರು.
ಕನಕ ಗೋಪುರ. ವಿವಾದಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು ಅಂತ ಅಶೋಕ್ ಹೇಳುತ್ತಿದ್ದರು.
ಉಡುಪಿಯ ತೇರು (ತೇರು ಅಂತಾರೆ ತಾನೆ ಅಲ್ಲೂ?)
ಈ ಫೋಟೋ ತೆಗೆಯೋಕೆ ಬಹಳ ಕಷ್ಟ ಆಯ್ತು. ಹಿಂದೆ ಗಮನಿಸಿ ನೋಡಿ, ಶೌಚಾಲಯದ ಬೋರ್ಡು ಕೂಡ ಬಂದುಬಿಟ್ಟಿದೆ! ಅದು ಕಾಣದಂತೆ ಮಾಡಬೇಕೆಂದು ಫೋಕಸ್ ಮೂಲಕ ಪ್ರಯತ್ನಿಸಿದೆ... ಮುಂದಿರುವ ಕಲ್ಲು ಬ್ಲರ್ ಆಯ್ತು. ಹಿಂದೆ ಸೌಧೆಗಳನ್ನು ಒಟ್ಟುಗೂಡಿಸಿ ರಥದಂತೆ ಮಾಡಿರುವುದೂ ಫೋಟೋನಲ್ಲಿ ಬರಬೇಕು! ಅರೆ, ಎಂಥ ಮಾಡೋದು? ಹಾಗೇ ಕ್ಲಿಕ್ಕಿಸಿದೆ!
ಕೊನೆಗೂ ಸ್ವಲ್ಪ ರಿಫ್ಲೆಕ್ಷನ್ ಕಟ್ ಆಗಿ ಹೋಯ್ತು. ಫ್ರೇಮ್ ಸ್ವಲ್ಪ ಕೆಳಗೆ ಇಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು.
ಸಾಗದ ದೋಣಿ. ಆ ದಿನ ಉಡುಪಿಯಲ್ಲಿ ತೆಗೆದ ಎಲ್ಲ ಫೋಟೋಗಳಲ್ಲಿ ನನಗೆ ಬಹಳ ಇಷ್ಟವಾದ ಫೋಟೋ ಇದು.
ಸರಿ, ಕೆಳಗಿನ ಫೋಟೋದಲ್ಲಿ ಇರೋದು ಏನು ಅಂತ ಹೇಳ್ತೀರ? ನನಗಂತೂ ಈ ಫೋಟೋ ಹೊಡೆದಾಗ ಅದು ಹೊಸತು!
- hpn's blog
- Login or register to post comments
- 1259 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಉಡುಪಿ: ಮತ್ತಷ್ಟು ಚಿತ್ರಗಳು
ಎಲ್ಲಾ ಚಿತ್ರಗಳೂ ಸೂಪರ್... :)
ಕೊನೆಯ ಚಿತ್ರ ಅಡಿಕೆ ಶಿಂಗಾರ(ಹೂವು) ಇರ್ಬೋದು... ಹೌದಾ ?
ಉ: ಉಡುಪಿ: ಮತ್ತಷ್ಟು ಚಿತ್ರಗಳು
"ಉಡುಪಿಯ ಕಂಡಿರಾ ಉಡುಪಿಯ ಕೃಷ್ಣನ ಕಂಡಿರ.........."
ಊರನ್ನು ನೆನಪಿಸಿದಕ್ಕೆ ವಂದನೆಗಳು. ಹಾಗೆ ಚಿತ್ರಗಳು ಚೆನ್ನಾಗಿವೆ.
ಕಡೆಯದು ಪಿಂಗಾರ. ಅಡಿಕೆ ಮರದ ಹೂವು. ನಾಗನಿಗೆ ಬಹಳ ವಿಶೇಷ.
ತಿಣುಕಾಟ
ಚಿತ್ರ ಸೆರೆ ಹಿಡಿಯಲು ಅದ್ಯಾಕೆ ಅಷ್ಟು ತಿಣುಕುತ್ತಿದ್ದೀರಿ ಅಂತ ಈಗ ಚಿತ್ರಗಳನ್ನು ನೋಡಿದಾಗ ಗೊತ್ತಾಯಿತು.
ಉ: ಉಡುಪಿ: ಮತ್ತಷ್ಟು ಚಿತ್ರಗಳು
ಫೋಟೋಗಳು ತುಂಬಾ ಚೆನ್ನಾಗಿವೆ...
>>ಸಾಗದ ದೋಣಿ.
ದೋಣಿ ಸಾಗುವುದು ಕಾರ್ತೀಕ ಮಾಸದ ತೆಪ್ಪೋತ್ಸವದಂದು.
ಅವತ್ತು ಈ ದೋಣಿ ಜೋಡಿಯ ಮೇಲೆ ಚಂದದ ಮಂಟಪ ಕಟ್ಟಿ ಅದರಲ್ಲಿ ಉತ್ಸವ ಮೂರ್ತಿ ಕೂರಿಸಿ ಮಧ್ವಸರೋವರದ ಮಂಟಪದ ಸುತ್ತಾ ಸುತ್ತಿಸುತ್ತಾರೆ.
ಜಗಮಗಿಸುವ ವಿದ್ಯುತ್ ಅಲಂಕಾರದ ನಡುವೆ ನಡೆಯುವ ಈ ಸಂಭ್ರಮ ಫೋಟೋಗ್ರಫಿಗೆ ಹೇಳಿ ಮಾಡಿಸಿದ ಕ್ಷಣ :-)
ಉ: ಉಡುಪಿ: ಮತ್ತಷ್ಟು ಚಿತ್ರಗಳು
ಚಿತ್ರಗಳು ಚೆನ್ನಾಗಿವೆ ಹರಿ. ನಾನು ಅಡಿಕೆ ಹೂ ನೋಡಿಲ್ಲ. ಪ್ರತಿಕ್ರಿಯೆಗಳನ್ನು ನೋಡುವುದಕ್ಕೂ ಮುನ್ನ ಅದನ್ನು ಚರ್ಮ ಸುಲಿದ ಸೌತೆ ಹೋಳು ಅಂದುಕೊಂಡಿದ್ದೆ :)
ಸಾಗದ ದೋಣಿ ಚೆನ್ನಾಗಿದೆ. ಅದಕ್ಕಿಂತ ಸೊಗಸು, ಕೊಳದ ಮಧ್ಯದ ದೇವಳ.
ಉ: ಉಡುಪಿ: ಮತ್ತಷ್ಟು ಚಿತ್ರಗಳು
ಚಿತ್ರಗಳು ಚೆನ್ನಾಗಿವೆ ಹರಿ.
ಅಡಿಕೆ ಹೂವು ಚೆನ್ನಾಗಿದೆ. (ಮೊಗ್ಗಾ ಇದು, ಅರಳುವುದೋ) ?ಚಾಮರಾಜ್ ಅವರೆ, ಸೌತೆಕಾಯಿ, ಸಿಪ್ಪೆ ತೆಗೆದ ಅಂದ್ಕೊಂಡ್ರಲ್ವ? ಸೌತೆಯ ತಿರುಳು ಬೀಜದೊಂದಿಗೆ ಕಾಣ್ತಾ ಇಲ್ವಲ್ಲಾ?
~ಮೀನಾ
ಉ: ಉಡುಪಿ: ಮತ್ತಷ್ಟು ಚಿತ್ರಗಳು
ಚಿತ್ರಗಳೆಲ್ಲವೂ ಮಸ್ತಾಗಿದೆ.
ಎಲ್ಲಾ ಮೊದಲು ಬಹಳಷ್ಟು ಸಲ ನೋಡಿದ್ದರಿಂದ ಊರು ನೆನಪಾಯ್ತು.