ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಸ್ವಾಂತಂತ್ರ್ಯ ದಿನದಂದು ಪ್ಲಾಸ್ಟಿಕ್ ಬಾವುಟಗಳನ್ನು ದೂರವಿಡಿ

August 13, 2005 - 4:48pm — hpn

ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಮಾರಾಟಕ್ಕೆಂದು ರಾರಾಜಿಸುತ್ತವೆ. ಕೆಲೆವೆಡೆ ಪೆಟ್ರೋಲ್ ಬಂಕುಗಳ ಬಳಿಯೂ ಹಿಡಿದು ನಿಂತಿರುತ್ತಾರೆ. ಚಿಣ್ಣರಿಗೆ ಇದು ಬೇಕೇ ಬೇಕು!

ಭಾರತೀಯರಲ್ಲಿ ದೇಶಪ್ರೇಮ ಆಗಸ್ಟ್ ೧೫ ಕ್ಕೆ ಅತಿ ಹೆಚ್ಚಿನ ತೀವ್ರತೆ ತಾಳುತ್ತದಷ್ಟೆ. ದೇಶಪ್ರೇಮವೆಂದುಕೊಂಡು 'ಪ್ಲಾಸ್ಟಿಕ್ ಆದರೇನು' ಎಂದು ಬಾವುಟಗಳನ್ನು ಖರೀದಿ ಮಾಡಿಯೇ ಬಿಡುತ್ತಾರೆ. ಕೆಲವರು ಹಿರಿಯರು ಕೂಡ ಇದರ 'ಮಜಾ' ಪಡೆಯಲು ಖರೀದಿ ಮಾಡಿ ತಮ್ಮ ಗಾಡಿಗೋ, ಮನೆಯ ಗೇಟಿಗೋ ಬಾವುಟವನ್ನು ಸಿಕ್ಕಿಸಿ 'ಭಾರತ್ ಮಾತಾ ಕಿ ಜೈ' ಎಂದು ಹೇಳಿ ಮರೆತುಬಿಡುತ್ತಾರೆ.

ಹಿರಿಯರ ಕಥೆಯೇ ಹೀಗಾದರೆ ಸಣ್ಣ ಮಕ್ಕಳಿಗೆ ಏನು ಹೇಳಬೇಕು? ಅಂದಿನ ರಜಾ ದಿನದಂದು ಸ್ನೇಹಿತರೊಂದಿಗೆ ಪ್ಲಾಸ್ಟಿಕ್ ಬಾವುಟ ಹಿಡಿದು ಆಟವಾಡಿ ಕೊನೆಗೆ ಅಲ್ಲೇ ಎಲ್ಲೋ ಬಿಸುಟಾಗಲೋ ಅಥವಾ ಮನೆಯ ಮೂಲೆಯೊಂದಕ್ಕೆ ಸೇರಿಸಿದಾಗಲೋ ಮುಗಿಯಿತು 'ಸ್ವಾತಂತ್ರ್ಯದಿನೋತ್ಸವ'. ಎಲ್ಲೆಯಿಲ್ಲದ ಉತ್ಸಾಹದಿಂದ ಮನೆಗೆ ಬಂದ ಬಾವುಟ ಕಸದ ಬುಟ್ಟಿ ಸೇರುತ್ತದೆ. ಇನ್ನು ಆಗಸ್ಟ್ ೧೫ ಆದ ನಂತರದ ವಾರ ರೋಡಿನಲ್ಲಿ, ಕಸದ ಬುಟ್ಟಿಗಳಲ್ಲಿ ಕೊನೆಗೆ ಕಸವನ್ನು ಹೊತ್ತೊಯ್ಯುವ ಬಿ ಎಮ್ ಪಿ ವ್ಯಾನ್ ಗಳಲ್ಲಿ ಅಲ್ಲಲ್ಲಿ ಕಸದ ರಾಶಿಯಲ್ಲಿ ನೇತಾಡುತ್ತಾ ನಮ್ಮ ರಾಷ್ಟ್ರದ ಬಾವುಟ ರಾರಾಜಿಸುತ್ತದೆ! ರೋಡಿನಲ್ಲಿ ಹರಿಬಿಟ್ಟ ಜಾನುವಾರು ಪಾಪ 'ಪ್ಲಾಸ್ಟಿಕ್ ತಿನ್ನುವ ವಸ್ತುವಲ್ಲ' ಎಂಬುದನ್ನು ತಿಳಿಯದೆಯೆ ಕಬಳಿಸಿದಾಗ ಬಾವುಟಗಳು ಅವುಗಳ ಹೊಟ್ಟೆ ಸೇರುವುದೂ ಉಂಟು. ಪುಣ್ಯವಂತಳಲ್ಲವೇ ನಮ್ಮ ಭಾರತ ಮಾತೆ?

ಭಾರತ ಮಾತೆಗೆ ಆಗುವ ಅವಮಾನದ ವೈಖರಿ ಇರಲಿ, ಭೂತಾಯಿಗಾಗುವ ಮಾಲಿನ್ಯ ಹಾಗೂ ಗಲೀಜು ಜನರ ಅರಿವಿಗೆ ಬರುವುದೂ ಕಡಿಮೆಯೇ. ಪ್ಲಾಸ್ಟಿಕ್ ಬಟ್ಟೆಯಂತೆ ಗೊಬ್ಬರವಾಗುವುದಿಲ್ಲ. ನೂರಾರು ವರ್ಷಗಳು ಕಳೆದರೂ ಕೊಳೆಯುವುದಿಲ್ಲ! ಹೊಟ್ಟೆಗೆ ಸೇರಿಸಿಕೊಂಡ ಜಾನುವರಗಳ ಗತಿ ದೇವರಿಗೇ ತಿಳಿದದ್ದು. ಹಸುಗಳಿಗೆ 'ಕಾಮಧೇನು', ದೇವರು ಎಂದು ಪೂಜಿಸುವವರಲ್ಲವೇ ನಾವುಗಳು? ದೇವರು ಕವರ್ ತಿಂದರೆ ಏನು ಆಗುವುದಿಲ್ಲವೆಂಬುದು ನಮ್ಮಗಳ ಲೆಕ್ಕಾಚಾರವೆ?

ಹೀಗೆ ಪ್ಲಾಸ್ಟಿಕ್ ಬಾವುಟಗಳನ್ನು ಅಲ್ಲಲ್ಲಿ ಬಿಸುಟು 'ಸಾರೆ ಜಹಾ ಸೆ ಅಚ್ಚಾ' ಎಂದು ಹೇಳಿ ಭಾರತವನ್ನು, ಕೊನೆಗೆ ನಮ್ಮ ಬೆಂಗಳೂರನ್ನು ಕಚ್ಛಡಾ ಎಬ್ಬಿಸುತ್ತೇವೆ!

'ಮಹಾತ್ಮ'ರೆನಿಸಿಕೊಂಡ ಬಾಪೂಜಿಯವರು ಜಗತ್ತಿಗೆ ಪರಿಚಯಿಸಿದ 'ಖಾದಿ' ನಮಗೆ ತುಟ್ಟಿಯೇ? ಪ್ಲಾಸ್ಟಿಕ್ ಬಾವುಟದ ಬದಲು ಖಾದಿಯ ಪುಟ್ಟ ಬಾವುಟಗಳನ್ನೇ ಬಳಸಬಾರದೇಕೆ? ಮುಂದಿನ ಸಾರಿ ಒಮ್ಮೆ ಒಗೆದು ಉಪಯೋಗಿಸಿದರಾಯಿತು! ಪ್ಲಾಸ್ಟಿಕ್ ಬಾವುಟದಂತೆ ಇಟ್ಟುಕೊಳ್ಳಲಾಗಲೀ, ತೆಗೆದಿಡುವುದರಲ್ಲಾಗಲೀ ರೇಜಿಗೆಯಾಗುವುದಿಲ್ಲ.

ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ನಿಮಗಾಗಲಿ ನಿಮ್ಮ ಪುಟ್ಟ ಮಕ್ಕಳಿಗಾಗಲಿ, ಪ್ಲಾಸ್ಟಿಕ್ ಬಾವುಟಗಳನ್ನು ಕೊಳ್ಳದಿರಿ. ಆಚರಣೆಗೆ ಬಾವುಟವು ಬೇಕೇ ಬೇಕು ಎಂದಾದರೆ ಖಾದಿಯ ಒಂದು ಬಾವುಟವನ್ನು ಕೊಂಡು ತನ್ನಿ.

- ಹರಿ ಪ್ರಸಾದ್ ನಾಡಿಗ್

~.~
  • hpn ರವರ ಬ್ಲಾಗ್
  • Login or register to post comments
  • 723 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 13, 2005 - 7:22pm — muralihr

ಬಾವುಟಗಳು , ಚಿಹ್ನೆಗಳಿ೦ದ(ಪಾರ್ಟಿಗಳು)

muralihr's picture

Good !Good !Good !
ಬಾವುಟಗಳು , ಚಿಹ್ನೆಗಳಿ೦ದ(ಪಾರ್ಟಿಗಳು) ನಾವು ಮುಕ್ತವಾಗುವುದೆ ನಿಜ ಸ್ವಾತಂತ್ರ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2005 - 8:17pm — tvsrinivas41

ಸರಿಯಾಗಿ ಹೇಳಿದ್ದೀರಿ

tvsrinivas41's picture

ನಾಡಿಗರೇ,
ಸರಿಯಾಗಿ ಹೇಳಿದ್ದೀರಿ. ಈ ಪ್ಲಾಸ್ಟಿಕ್ ಕಾಗದ, ಚೀಲ ಉಪಯೊಗಿಸಬಾರದು ಅಂತ ಹೇಳೋ ಸರಕಾರದವರು, ಆ ಪ್ಲಾಸ್ಟಿಕ್ ತಯಾರಕರನ್ನು ಯಾಕೆ ಮಟ್ಟ ಹಾಕಬಾರದು. ಗಿಡವನ್ನು ಬುಡದಲ್ಲೇ ಕತ್ತರಿಸಿದರೆ ಸರಿ. ನನ್ನ ಅನಿಸಿಕೆ ಪ್ರಕಾರ ಅಂದು ರಜೆ ಕೊಡೋದೇ ತಪ್ಪು. ಇನ್ನೂ ಹೆಚ್ಚಿನದಾಗಿ ಕೆಲಸ ಮಾಡಿ ರಾಷ್ಟ್ರಕ್ಕೆ ಉಪಯುಕ್ತರೆನ್ನಿಸಿಕೊಳ್ಳಬೇಕು. ಜಪಾನಿನಲ್ಲಿ ಹೀಗೆ ಮಾಡೋದು.

ಎಲ್ಲಾ ಉತ್ಸವಗಳಲ್ಲೂ ಹೀಗೇಯೇ ಅಲ್ವೇ? ರಾಜ್ಯೋತ್ಸವದಲ್ಲೂ ಅಷ್ಟೇ. ಕೆಲವೇ ಘಂಟೆಗಳ ಕಾಲ ನಮಗೆ ಉತ್ಸವದ ಬಗ್ಗೆ ನೆನೆಪಾಗತ್ತೆ. ನಂತರ ಸಿನೆಮಾ, ಟಿವಿ, ಪಿಕ್ ನಿಕ್ ಇದರಲ್ಲೇ ಕಾಲಹರಣ ಮಾಡಿದರೆ ದೇಶ ಹೇಗೆ ಉದ್ಧಾರ ಆಗತ್ತೆ.

ಇದರ ಬಗ್ಗೆ ಎಲ್ಲರೂ ಒಂದಿನಿತು ಯೋಚಿಸಿದರೂ ಸಾಕು.

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ಲಾಸ್ತಿಕ್ ಬಳಕೆ ಕಡಿಮೆ ಮಾಡಿ
  • ಎಲ್ಲೆಲ್ಲಿ ನೋಡಲೂ...
  • ಪ್ಲಾಸ್ಟಿಕ್ ರಸ್ತೆ
  • ಹಾಲು-ಹುಡುಗ-ಹಸು ಇತ್ಯಾದಿ..
  • ಹಕ್ಕಿಯ ಹಾಡು-ಪಾಡು!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator