ಗೂಗಲ್ ಇಲ್ಲದ ಸಮಯ
ಗೂಗಲ್ ಒಮ್ಮೆ ಒಂದು ವೆಬ್ಸೈಟಿನಲ್ಲಿ ಕಾಣುವ text box ಅಷ್ಟೇ ಆಗಿತ್ತು ನಮಗೆ. ಅದರಲ್ಲಿ ಟೈಪಿಸಿ ಕ್ಲಿಕ್ ಮಾಡಿದರೆ ಒಂದಷ್ಟು ಮಾಹಿತಿ ಹುಡುಕಿಕೊಡುತ್ತದೆ ಎಂಬುದು ಮನಸ್ಸಿನಲ್ಲಿರುತ್ತಿತ್ತು. ಆದರೆ ದಿನಕಳೆದಂತೆ ಗೂಗಲ್ ನಮ್ಮೆಲ್ಲರ ನಿತ್ಯ ಕಂಪ್ಯೂಟರ್ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಗೂಗಲ್ ಇಲ್ಲದೆ ಅಂತರ್ಜಾಲದ ಸ್ಥಿತಿ ಊಹಿಸಲೂ ಸಾಧ್ಯವಿರಲಾರದು. ಇಷ್ಟೆಲ್ಲ ಪ್ರಾಮುಖ್ಯತೆ ಇರುವ ಗೂಗಲ್ ಏನೆಲ್ಲ ಮಾಡಬಲ್ಲುದು, ಜೊತೆಗೆ ಸ್ವಲ್ಪ ಹೊತ್ತು ಲಭ್ಯವಿಲ್ಲದಿದ್ದರೆ ಏನೆಲ್ಲ ತೊಂದರೆಯೂ ಉಂಟಾಗಬಹುದು ಎಂಬುದರ ಬಗ್ಗೆ ಊಹಿಸುವುದೂ ಕಷ್ಟ.
ಆದರೆ ಇವತ್ತು, ಈಗ, ಸುಮಾರು ಇಪ್ಪತ್ತು ನಿಮಿಷಗಳಿಂದ ಗೂಗಲ್ ನ ಎಲ್ಲ ಸೌಲಭ್ಯಗಳು ನಿಧಾನವಾಗಿ ಲೋಡ್ ಆಗುತ್ತಿವೆ, ಕೆಲವು ಲೋಡ್ ಆಗುತ್ತಲೇ ಇಲ್ಲ.
ಗೂಗಲ್ ಇ-ಮೇಯ್ಲ್ ಬಳಸುವವರಿಗೆ ಇ-ಮೇಯ್ಲ್ ಇಲ್ಲ, ಗೂಗಲ್ ಚ್ಯಾಟ್ ಬಳಸುವವರಿಗೆ ಉಳಿದವರೊಂದಿಗೆ ಸಂಪರ್ಕ ಇಲ್ಲ, ಗೂಗಲ್ ಸರ್ಚ್ ಸೌಲಭ್ಯಕ್ಕೆ ಹೊಂದಿಕೊಂಡವರಿಗೆ ಸರ್ಚ್ ಸೌಲಭ್ಯ ಇಲ್ಲ.
ಗೂಗಲ್ ಇಲ್ಲದೆ ಹೇಗೆ ಎಂಬುದು ಈಗ ಗೊತ್ತಾಗುತ್ತದೆ, ಅಲ್ವ? :)
- hpn's blog
- Login or register to post comments
- 672 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಗೂಗಲ್ ಇಲ್ಲದ ಸಮಯ
ಸಂಪದ ಸ್ನೇಹ ಮಿಲನದಲ್ಲಿ ನೀವು ಗೂಗಲ್ ಗೆ ಪರ್ಯಾಯ ಹೇಳಿದ್ದ ನೆನಪು. ಇವತ್ತು ಗೂಗಲ್ ನಿಧಾನ ವಾಗಿದೆಯೇ?
ಉ: ಗೂಗಲ್ ಇಲ್ಲದ ಸಮಯ
ಇಪ್ಪತ್ತು - ಇಪ್ಪತ್ತೈದು ನಿಮಿಷ ಲಭ್ಯ ಇರಲಿಲ್ಲ ಜಗತ್ತಿನ ವಿವಿಧೆಡೆ, ಸ್ವಲ್ಪ ಹೊತ್ತಿನ ಮುಂಚೆ.
ಉ: ಗೂಗಲ್ ಇಲ್ಲದ ಸಮಯ
ಹೌದು. ನಂಗೂ ಹಂಗೇ ಆಗ್ತಿತ್ತು. ಎಷ್ಟೊತ್ತಾದ್ರೂ ಜೀ-ಮೇಲ್ ಓಪನ್ ಆಗ್ತಲೇ ಇರಲಿಲ್ಲ. ಮೊದ್ಲೇ ನಮ್ದು ಡಯಲಪ್ ಕನೆಕ್ಷನ್. ಕನೆಕ್ಷನ್ ಹಾಗೂ ಗೂಗಲ್ ಎರಡೂ ಸ್ಲೋ ಆಗಿ ಗಂಟೆಗಟ್ಟಲೆ ಕಾದಿದ್ದೇ ಬಂತು, ಜೀ-ಮೇಲ್ ಓಪನ್ ಆಗಲೇ ಇಲ್ಲ :-( . ಈಗ ಸರಿಹೋಗಿದೆ.
ಉ: ಗೂಗಲ್ ಇಲ್ಲದ ಸಮಯ
ಪಾಪ, ಬಿ ಎಸ್ ಏನ್ ಎಲ್ ನೆಟ್ವರ್ಕ್ ನ ಬೈಕೋತಾ ಇದ್ದೆ. ಒ೦ದು ಕಾಲದಲ್ಲಿ ವಿ೦ಡೋಸ ಲೈವ್ ಬಳಸಿ ಅ೦ತ ತು೦ಬಾ ಒತ್ತಡ ಇತ್ತು :) ಗೂಗಲ್ ಗೆ ಏನಾದ್ರೂ ಪರ್ಯಾಯ ಇದೆ ಅನ್ನೋದೇ ಹೊಳೆಯಲ್ಲ at times.
ಉ: ಗೂಗಲ್ ಇಲ್ಲದ ಸಮಯ
ಗೂಗಲ್ ಗ್ರಹಣ ಅನ್ನಬಹುದೇ ಇದನ್ನು..?;)
ಉ: ಗೂಗಲ್ ಇಲ್ಲದ ಸಮಯ
+1 :)
ಉ: ಗೂಗಲ್ ಇಲ್ಲದ ಸಮಯ
:) :-) :smile: :ನಗು: