ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕನ್ನಡಿಗರೇನು ಕಡಿಮೆಯೇ?

September 15, 2005 - 11:01pm — hpn

ಇಂದು ಯಾಹೂ ಮೇಯ್ಲ್‌ನ ಹೊಸ ಆವೃತ್ತಿ ಬಿಡುಗಡೆಯಾಗಿದೆಯೆಂಬ ಸುದ್ದಿ ಓದಿ ಎಷ್ಟೋ ದಿನಗಳಿಂದ ಬಳಸದೇ ಇಟ್ಟಿದ್ದ ನನ್ನ ಯಾಹೂ ಅಕೌಂಟ್ ತೆರೆದುನೋಡಿದೆ. ಯಾಹೂನವರಿಗೆ ನಾವುಗಳು 'important' ಎನಿಸಲಿಲ್ಲವೋ ಏನೋ, ಬರೇ ಯು ಎಸ್ ನಲ್ಲಿರುವವರಿಗೆ ಮಾತ್ರ ಹೊಸ ಯಾಹೂ ಮೇಯ್ಲ್ ಬಳಸುವ ಭಾಗ್ಯ ಎಂದು ನನ್ನ ಕುತೂಹಲಕ್ಕೆ ತಣ್ಣೀರು ಎರಚಿದರು.

ಸರಿ, ಇಷ್ಟು ದಿನಗಳಾದ ಮೇಲೆ ತೆರೆದು ನೋಡುತ್ತಿರುವ ನನ್ನ ಯಾಹೂ ಖಾತೆಯೆಲ್ಲಿ ಏನಾದರೂ ಓದಿ ಕ್ಲೋಸ್ ಮಾಡಬೇಕಲ್ಲ! ಯಾಹೂ ಗ್ರೂಪ್ಸ್‌ನೆಡೆಗೆ ನಡೆದೆ. ಏನು ಬಂತೋ ಏನೋ 'kannada' ಎಂದು ಗ್ರೂಪ್ಸ್ ಇಂಟರ್ಫೇಸಿನಲ್ಲಿ ಟೈಪಿಸಿ 'ಎಂಟರ್' ಕುಟ್ಟಿದ್ದಾಗಿ ಹೋಯ್ತು. ಅರೆರೆ, ಏನಾಶ್ಚರ್ಯ! ಸುಮಾರು 350ಕ್ಕೂ ಹೆಚ್ಚು (ನಮ್ಮಲ್ಲಿ 'ಸಂಪದ'ದಲ್ಲಿ ಇರುವ ಸದಸ್ಯರಿಗಿಂತಲೂ ಹೆಚ್ಚು) ಬರೇ ಕನ್ನಡ 'ಗುಂಪು'ಗಳೇ ಇವೆ!
೧೦೦೦ಕ್ಕೂ ಹೆಚ್ಚು ಸದಸ್ಯರಿರುವುದು ಕನ್ನಡ 'activism' ಗುಂಪುಗಳಲ್ಲಿ ಮಾತ್ರ Eye-wink ಸಾಹಿತ್ಯ ಕುರಿತ ಗುಂಪುಗಳಲ್ಲಿ ಜನರು ಕಡಿಮೆಯೇ (ನಮ್ಮ ಜನ ಬರೇ ಬೇರೆಯವರನ್ನು ಬಯ್ಯೋದಕ್ಕೆ ಸರಿ, ತಾವೇ ಭಾಷೆ ಉದ್ಧಾರ ಮಾಡುವುದಿರಲಿ ಅದರ ಬಳಕೆಯೂ ಮಾಡರು ಎಂಬುದು ಎಷ್ಟು ಸತ್ಯ?)

ಇನ್ನು ಒಂದೇ ರೀತಿಯ ವಿಷಯಗಳನ್ನಾಧರಿಸಿ ಕನ್ನಡದಲ್ಲೇ ಹಲವು ಗುಂಪುಗಳು! (ನಮ್ಮಲ್ಲಿ ಒಗ್ಗಟ್ಟೆಷ್ಟಿದೆ ಎಂಬುದಕ್ಕೆ ಇದೇ ಸಾಕ್ಷಿಯೋ ಏನೊ? Eye-wink ಅಥವಾ ಎಲ್ಲರಿಗೂ ತಮ್ಮ ತಮ್ಮ ಗುಂಪು ಪ್ರಾರಂಭಿಸುವಲ್ಲಿ ಬಹಳ ಮಜ ಇರಬಹುದು)
ಸರಿ, ಅದೆಲ್ಲಾ ಮೂಲೆಗೆ ಹಾಕಿದರೂ ಯಾಹೂನಲ್ಲಿ ಕನ್ನಡ ಯುನಿಕೋಡ್ ಬೆಂಬಲವೇ ಇಲ್ಲ! ಎಲ್ಲರಿಗೂ ಕಂಗ್ಲಿಷ್ಷೆ ಗತಿ!

ಕನ್ನಡಿಗರೇನೂ ಕಡಿಮೆಯಿಲ್ಲ. ಆದರವರು ತಮ್ಮ ತಮ್ಮ ಸ್ವಾರ್ಥದಿಂದ ಹೊರಬಂದು ಒಟ್ಟಾಗಿ ಕನ್ನಡದ ಬೆಳವಣಿಗೆಯ ಕಡೆ ಗಮನಹರಿಸಿದರೆ ಬಹುಶಃ ಕನ್ನಡದ ಸ್ಥಿತಿ ಸಾಕಷ್ಟು ಸುಧಾರಿಸಬಹುದೇನೊ?

~.~
  • hpn ರವರ ಬ್ಲಾಗ್
  • Login or register to post comments
  • 931 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 15, 2005 - 11:00pm — tvsrinivas41

ಯಾಹೂ ಗ್ರೂಪ್‍ನಲ್ಲಿ ಕನ್ನಡಿಗರ ಗುಂಪು

tvsrinivas41's picture

ಯಾಹೂ ಗುಂಪಿನಲ್ಲಿ ಕನ್ನಡ ಮತ್ತು ಕನ್ನಡಿಗರ ಗುಂಪು ಬಹಳಷ್ಟಿದೆ. ನಾನೂ ನೊಡಿದ್ದೇನೆ. ನಾನು ಮೂರು ಗುಂಪುಗಳಲ್ಲಿ ಸದಸ್ಯನಾಗಿರುವೆ. ನಮ್ಮಲ್ಲಿರೋ ಒಂದು ವೀಕ್‍ನೆಸ್ ಅಂದರೆ ಯಾವುದೇ ಪುಕ್ಕಟೆಯಾಗಿ ದೊರೆಯುವಂತಿದ್ದರೆ ನಾ ಮುಂದು ತಾ ಮುಂದು ಎಂದು ಹೋಗುವುದು. ಮುಂದೆ ಆ ಕಡೆ ತಲೆ ಇಡುವುದಿಲ್ಲ.

ಬಿಟ್ಟಿ ಸಿಕ್ಕಿದರೆ ದಟ್ಟಿಯನ್ನು ಮೊಳ ಹಾಕಿ ನೋಡಿದರು ಎನ್ನುವ ಹಾಗೆ, ಬಿಟ್ಟಿ ಸಿಕ್ಕಿದರೆ ಎಲ್ಲರೂ ಒತ್ಲಾ ಮಾಡುವುದೇ. ಹಾಗಾಗಿಯೇ ಅಷ್ಟು ಗುಂಪುಗಳಾಗಿರುವುದು. ಸ್ವಲ್ಪ ಸಮಯದ ನಂತರ ಆ ಗುಂಪು ಸತ್ತ ಗುಂಪಾಗುವುದು. ಇದು ಕನ್ನಡದಲ್ಲಿ ಮಾತ್ರವೇ ಅಲ್ಲ, ಎಲ್ಲ ಭಾಷೆಗಳಲ್ಲೂ ಕಂಡುಬರುವುದು. ಈಗ ಓರ್ಕುಟ್ ನಲ್ಲಿಯೂ ಹಾಗೇ ಆಗಿದೆ.
ಸಕ್ರಿಯವಾದ ಪೋಸ್ಟ್ ಬರಬೇಕು ಅಂದ್ರೆ ಹೊಸದಾದ ಒಂದು ಗುಂಪು ಮಾಡಬೇಕು. ಸ್ವಲ್ಲ್ಪ ಸಮಯದ ನಂತರ ಅದೂ ಒತ್ಲಾ ತಾಣ ಆಗುವುದು. ಆಗ ಮತ್ತೆ ಇನ್ನೊಂದು ತಾಣ. ಹೀಗೇ ಮುಂದುವರೆಯುವುದು. ತಾಣಗಳ ಸಂಖ್ಹ್ಯೆ ಜಾಸ್ತಿ ಆಗುವುದು, ಭಾರತದಲ್ಲಿಯ ಜನಸಂಖ್ಯೆಯಂತೆ.

ಇದನ್ನು ಪ್ರಗತಿ ಅನ್ನೋಕ್ಕಾಗುತ್ಯೇ?

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 2:33pm — prakashaka

'ಒತ್ಲಾ' ಇದು ಯಾವ ಕಡೆ ಭಾಷೆ

prakashaka's picture

ಶ್ರೀನಿವಾಸ್ ಅವರೇ
ನಿಮ್ಮ ಪತ್ರದಲ್ಲಿ ಈ 'ಒತ್ಲಾ' ಅನ್ನೋ ಶಬ್ದವನ್ನು ಉಪಯೋಗಿಸಿದ್ದೀರಿ. ಈ ಶಬ್ದದ ಅರ್ಥವೇನು.. ಹಾಗೂ ಈ ಶಬ್ದವನ್ನು ಯಾವ ಏರಿಯಾದ ಕನ್ನಡಿಗರು ಉಪಯೋಗಿಸುತ್ತಾರೆ.. ನಾನಂತೂ ಇದನ್ನು ಪ್ರಪ್ರಥಮ ಬಾರಿಗೆ ನೋಡು/ಕೇಳುತ್ತಿದ್ದೇನೆ.
ಮಂಗಳೂರಿಗನಾದುದರಿಂದ ಇಂಥಾ ಹಲವಾರು ಕನ್ನಡದ ಆಡು ಭಾಷೆಗಳನ್ನು ಇಲ್ಲಿ ಕಲಿಯಬಹುದೇನೋ?

ಪ್ರಕಾಶ್ ಶೆಟ್ಟಿ ಉಳೆಪಾಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 4:19pm — hpn

ಬಹುಶಃ ಬೆಂಗಳೂರಿನದ್ದು

hpn's picture

ಬಹುಶಃ ಬೆಂಗಳೂರಿನದ್ದು Eye-wink

ಕೆಲಸಕ್ಕೆ ಬಾರದ ಏನೋ‌ ಮಾಡಿಕೊಂಡಿದ್ದರೆ 'ಓತ್ಲಾ ಹೊಡಿಯೋದು' ಎಂದು ಹೇಳುವುದನ್ನು ಕೇಳಿದ್ದೇನೆ. 'slang' ಅಂತಾರಲ್ಲ, ಹಾಗೇ ಕನ್ನಡಕ್ಕೂ ಇಂಥವು ಕೆಲವು ಪದಗಳು Eye-wink

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 10:29am — ಸ್ಮಿತಾ

ಯಾಹೂ! ಮೇಲ್

ಸ್ಮಿತಾ's picture

ನನಗೆ ತಿಳಿದಿರುವಮಟ್ಡಿಗೆ ಹೊಸ ಆವೃತ್ತಿಯಲ್ಲಿ ಯುನಿಕೋಡ್ ಬೆಂಬಲವಿದೆ Eye-wink
ನೀವು ಇತ್ತೀಚೆಗೆ ಯಾಹೂ! ಮೇಲ್ ನಿಂದ ಯುನಿಕೋಡ್ ಸಂದೇಶ ಕಳಿಸಲು ಪ್ರಯತ್ನಿಸಿದ್ದೀರಾ ?

-ಸ್ಮಿತಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 11:50am — hpn

ಯಾಹೂ ಮತ್ತು ಯುನಿಕೋಡ್

hpn's picture

ಹೊಸ ಆವೃತ್ತಿ ಬರೇ ಅಮೇರಿಕದವರಿಗೆ ಮಾತ್ರ ಪ್ರಯೋಗಕ್ಕೆ ಕೊಡುತ್ತಿದ್ದಾರೆ. ಹೊಸ ಆವೃತ್ತಿ ಬಹಳ ಚೆನ್ನಾಗಿದೆಯಂತೆ. ಅದರಲ್ಲಿ ಯುನಿಕೋಡ್ ಇರಬಹುದು. ಆದರೆ ಈಗಿರುವುದರಲ್ಲಿ (ನಮಗೆ ಬಳಸಲು ನೀಡಿರುವ ಪ್ರಸ್ತುತ ಆವೃತ್ತಿಯಲ್ಲಿ) ಯುನಿಕೋಡ್ ಬೆಂಬಲವಿಲ್ಲ.

ಯಾಹೂ‌ ಗ್ರೂಪ್ಸ್ ನಲ್ಲಂತೂ ಯುನಿಕೋಡ್ ಬೆಂಬಲವಿಲ್ಲವೇ ಇಲ್ಲ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 12:00pm — hpn

ಯಾಹೂ ಮತ್ತು ಯುನಿಕೋಡ್

hpn's picture


ಆದರೆ ಈಗಿರುವುದರಲ್ಲಿ (ನಮಗೆ ಬಳಸಲು ನೀಡಿರುವ ಪ್ರಸ್ತುತ ಆವೃತ್ತಿಯಲ್ಲಿ) ಯುನಿಕೋಡ್ ಬೆಂಬಲವಿಲ್ಲ.

ಕ್ಷಮಿಸಬೇಕು, ಪ್ರಸ್ತುತ ಆವೃತ್ತಿಯಲ್ಲಿ ಯುನಿಕೋಡ್ ಬೆಂಬಲ ಇತ್ತೀಚೆಗೆ ನೀಡಿರುವಂತೆ ಕಾಣುತ್ತದೆ. ಯುನಿಕೋಡ್ ಸಂದೇಶವಂತೂ ನೀಟಾಗಿ ಕಾಣುತ್ತಿದೆ.

ಆದರೆ ಯಾಹೂ ಗ್ರೂಪ್ಸ್ ನಲ್ಲಿ ಇನ್ನೂ ಯುನಿಕೋಡ್ ಬೆಂಬಲವಿಲ್ಲ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 12:48pm — ಸ್ಮಿತಾ

ಯಾಹೂ! ಮೇಲ್ beta sign-up

ಸ್ಮಿತಾ's picture

ಹೌದು, ಪ್ರಸ್ತುತ ಆವೃತ್ತಿಯಲ್ಲಿ ಕೂಡ ಯುನಿಕೋಡ್ ಬೆಂಬಲವಿದೆ. ಹೊಸ ಆವೃತ್ತಿಗೆ http://whatsnew.mail.yahoo.com/ ಗೆ ಹೋಗಿ sign-up ಮಾಡಿ.ನಿಮ್ಮ ಸರದಿ ಕೆಲವು ವಾರಗಳಲ್ಲಿ ಬರಬಹುದು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2005 - 2:00pm — hpn

ಗೊತ್ತುಂಟು

hpn's picture

ನಿನ್ನೆ ನಾನು ಮಾಡಿದ ಮೊದಲ ಕೆಲಸ ಯಾಹೂ ಬೀಟ ಮೇಯ್ಲ್ ಗೆ ಅರ್ಜಿ ಹಾಕಿದ್ದು! ಆದರೂ ಅರ್ಜಿ ಭರ್ತಿ ಮಾಡುವಾಗ ನೀವು ಸರಿಯಾಗಿ ಅಬ್ಸರ್ವ್ ಮಾಡ್ಲಿಲ್ವೇನೊ... ಅದು 'ಅಮೇರಿಕದವರಿಗೆ ಮಾತ್ರ' ಎಂದು ಬರೆದಿದ್ದಾರೆ.

ಇದೆಲ್ಲ ಗೊತ್ತಿದ್ದಕ್ಕೆ ಮೇಡಮ್, ಸ್ಕ್ರೀನ್ ಶಾಟ್ ಗಳು ಮತ್ತು ಮಾಹಿತಿ ಇರುವ ಲೇಖನಕ್ಕೆ ಲಿಂಕ್ ನೀಡಿದ್ದು Eye-wink
--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾಹೂ ಬೆಂಗಳೂರು ಪುಟ ನೋಡಿದಿರ?
  • ಯಾಹೂ! Answers ನಲ್ಲಿ ಕನ್ನಡ
  • ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
  • ವೈವಿಧ್ಯಮಯ ಯಾಹೂ!
  • ಎಂ.ಎಸ್.ಎನ್ ನಿಂದ ಕನ್ನಡಕ್ಕಾಗಿ ಒಂದು ಪೋರ್ಟಲ್
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 143 ಅತಿಥಿಗಳು ಆನ್ಲೈನ್ ಇರುವರು.


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator