ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕನ್ನಡಕ್ಕಾಗಿ ಮತ್ತೊಂದು ದಿನ

December 17, 2007 - 12:24am — hpn

ಕೆಲವು ದಿನಗಳ ಹಿಂದೆ ಫೋನಾಯಿಸಿದ್ದ ಶಿವಪ್ರಕಾಶ್ ಮಾತಿನ ನಡುವೆ ಕನ್ನಡ ಹಾಗೂ ಲಿನಕ್ಸ್ ಮಟ್ಟಿಗೆ ನಾವುಗಳು ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಹಾಗೇ ಉಳಿದುಕೊಂಡದ್ದು ನೆನಪಿಸಿದ್ದ. "ಈ ವಾರ ಒಂದು ದಿನ ಸೀರಿಯಸ್ಸಾಗಿ ಕುಳಿತು ಅವುಗಳಲ್ಲಿ ಕೆಲವನ್ನು ಮಾಡಿ ಮುಗಿಸಬೇಕು ಕಣೋ ಹರಿ" ಎಂದಿದ್ದ. ಅವನು ಹಾಗೆ ಹೇಳಿದ್ದು ನನಗೆ ಎಂದಿನಂತೆಯೇ ಕೇಳಿ ಬಂದಿತ್ತು. ಇತ್ತೀಚೆಗಷ್ಟೆ ಸರಿಯಾದ ಇಂಟರ್ನೆಟ್ ಕನೆಕ್ಷನ್ ಬಂದದ್ದಾಗಿ ಕೆಲಸಗಳ ಬ್ಯಾಕ್ ಲಾಗ್ ಇದ್ದದ್ದರಿಂದ ನಾನೂ ಹೆಚ್ಚು ಏನೂ ಹೇಳದೆ ಸುಮ್ಮನಿದ್ದೆ.

ವಾರ ಬಹುತೇಕ ಕಳೆದು ವಾರಾಂತ್ಯ ಬರುತ್ತಲೇ ಮಧ್ಯಾಹ್ನ ಮತ್ತೆ ಅವ ಫೋನಾಯಿಸಿದಾಗ "ಈಗ ತಾನೆ ಇಂಟರ್ನೆಟ್ ಕನೆಕ್ಷನ್ ಸಿಕ್ತು - ಕೆಲಸವಿದೆ, ನೀನೆ ಮನೆಗೆ ಬಾ. ಇಲ್ಲೇ ಕುಳಿತು ಚರ್ಚೆ ಮಾಡೋಣ" ಎಂದೆ. ಆ ಟ್ರಾಫಿಕ್ ನಲ್ಲಿ ಇಷ್ಟು ದೂರ ಬರಲಿಕ್ಕಿಲ್ಲ ಎಂದು ಎಣಿಸಿದ್ದೆ. ಬೇಸರ ಮಾಡಿಕೊಳ್ಳದೆ, ಅರ್ಧ ಊರು ಹಾದು ನೇರ ಮನೆಗೇ ಬಂದುಬಿಟ್ಟ. ಲಿನಕ್ಸಿನ ಕುರಿತು, ಲಿನಕ್ಸಿನಲ್ಲಿ ಕನ್ನಡ ಉತ್ತಮಪಡಿಸುವ ಕುರಿತು ಅವನಿಗಿರುವ ಆಸಕ್ತಿ ನೋಡಿ ನನಗಾಶ್ಚರ್ಯವಾಯಿತು.

ನಾವುಗಳು ಮಾಡುತ್ತಿದ್ದ ಕೆಲಸಗಳಿಗೆ ನೆಲೆಯಾದ ವೆಬ್ಸೈಟು, ಹಾಗೂ ವಿಕಿ ಎರಡೂ ಇತ್ತೀಚೆಗೆ ಹೆಚ್ಚು ಬಳಕೆಯಾಗದೆ ಹೋಗಿದ್ದರಿಂದ ಮೊದಲು ಅದನ್ನು ಸರಿಪಡಿಸಿ, ಚೊಕ್ಕಗೊಳಿಸಿ ಕೆಲವು ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸಬೇಕು ಎಂದು ನಿರ್ಧರಿಸಿದೆವು. ಮಾಡಬೇಕಾದ ಕೆಲಸಗಳ ಒಂದು ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯನ್ನೂ ಸರಿಯಾಗಿ ಮಾಡದೇ ಹೋದರೆ?
ಏನೇನು ಮಾಡಬೇಕೆಂಬ ಪಟ್ಟಿ ಮಾಡಿಟ್ಟರಾಯಿತು ಎಂದಿನಷ್ಟೇ ಆಸಕ್ತಿಯಿಂದ ಕೆಲಸ ಕೈಗೆತ್ತಿಕೊಳ್ಳುವ ಮಿಶ್ರಿಕೋಟಿಯವರಂತಹ ಹಲವರು ಲೋಕಲೈಸೇಶನ್ ಕಾರ್ಯ ಎಲ್ಲಿಯವರೆಗೂ ಬಂತು ಎಂದು ಮತ್ತೆ ಮತ್ತೆ ವಿಚಾರಿಸುತ್ತಿರುವಾಗ ಬೇರೆಯ ಎಷ್ಟೇ ಕೆಲಸವಿದ್ದರೂ ಇದನ್ನು ಪುನಶ್ಚೇತನಗೊಳಿಸುವ ಯಾವುದೂ ಕಾರ್ಯವಾಗದಿದ್ದರೆ?

ವಾರಾಂತ್ಯದ ಸಾಕಷ್ಟು ಸಮಯ ವ್ಯಯ ಮಾಡಿ ಹಳೆಯ ಅನುವಾದಗಳನ್ನು ಹಾರ್ಡ್ ಡಿಸ್ಕಿನಲ್ಲಿ ಹುಡುಕಿ ತೆಗೆದು ಡೇಟಬೇಸ್ ಒಂದಕ್ಕೆ ಹಾಕಿಕೊಂಡು "merge" ಮಾಡಿ ಅನುವಾದಗಳನ್ನು ಒಂದು ಹಂತಕ್ಕೆ ತಂದು ಇಟ್ಟದ್ದಾಯಿತು. ಲಿನಕ್ಸಿನಲ್ಲಿ ಕನ್ನಡ ತರುವಲ್ಲಿ ಕನ್ನಡ ಅನುವಾದ ಕಣ್ಣಿಗೆ ಕಾಣುವ ಮುಖ್ಯ ಅಂಶವಾದರೂ, ಸರಿಯಾದ ಲೊಕ್ಯಾಲೆ, ಫಾಂಟು, ನಿಘಂಟು, ಸ್ಪೆಲ್ ಚೆಕರ್ - ಇವೆಲ್ಲ ಬಹುಮುಖ್ಯ ಅಂಶಗಳು. ಅವಲ್ಲದೇ ಭಾಷೆಯನ್ನು ಕಂಪ್ಯೂಟರಿಗೆ ನಿಜವಾಗಿಯೂ ಅಳವಡಿಸುವ ಉಳಿದ advanced ತಂತ್ರಜ್ಞಾನಗಳು.

ಈ ಎಲ್ಲ ಕೆಲಸಗಳನ್ನು ಒಬ್ಬಿಬ್ಬರಿಂದ ಮಾಡಲಾಗದು. ಹಲವರು ಒಟ್ಟಾಗಿ ಯೋಜನೆ ಹಮ್ಮಿಕೊಂಡು ಅಷ್ಟಿಷ್ಟು ಕೆಲಸ ಆಗೀಗ ಮುಗಿಸುತ್ತ ಬಂದರೆ ಮಾತ್ರ ಇದು ಸರಿಯಾಗಿ ಮುಗಿದೀತು. ಇದರಲ್ಲಿ ಭಾಗವಹಿಸಲು ತಂತ್ರಜ್ಞಾನದ ಅರಿವು ಇರಲೇಬೇಕಿಲ್ಲ - ಕನ್ನಡ ತಿಳಿದಿದ್ದರಾಯಿತು. ಹೊಸತೊಂದನ್ನು ಕಲಿಯುವ ಆಸಕ್ತಿಯಿರಬೇಕು ಕನ್ನಡ ನೋಡಿ ನಲಿಯುವ ಮನಸ್ಸಿರಬೇಕು ಅಷ್ಟೆ. ಭಾಗವಹಿಸಲು ಬೇಕಾದ ಸರಕು ಭಾಗಶಃ ಇಲ್ಲಿದೆ:

http://dev.sampada.net/

ಉಳಿದದ್ದು ನಾವುಗಳೇ ಕೆಲಸ ಮಾಡುತ್ತ ತಿಳಿದುಕೊಂಡದ್ದನ್ನು ತುಂಬುತ್ತ ಹೋಗಬೇಕು. ಚಿಕ್ಕ ಪುಟ್ಟ ಕೆಲಸಗಳನ್ನು ಕೈಗೆತ್ತಿಕೊಂಡು ಮುಗಿಸುತ್ತ ಉಳಿದವುಗಳತ್ತ ನಡೆಯಬೇಕು.

ಆಸಕ್ತರೆಲ್ಲರೂ ಭಾಗವಹಿಸುತ್ತೀರ ತಾನೆ?

(ಗಮನಿಸಿ: ವಿಕಿಗೆ ಲಾಗಿನ್ ಬೇರೆ... ಸಂಪದದ ಐಡಿ ಅಲ್ಲಿ ಕೆಲಸ ಮಾಡುವುದಿಲ್ಲ. ಅಲ್ಲಿ ಸದ್ಯಕ್ಕೆ ಎಡಿಟ್ ಮಾಡಲು ಹೊಸತಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ).

  • ಕನ್ನಡ
  • ಲಿನಕ್ಸ್
  • ಲೋಕಲೈಸೇಶನ್
~.~
  • hpn ರವರ ಬ್ಲಾಗ್
  • Login or register to post comments
  • 340 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 17, 2007 - 11:44am — csomsekraiah

ಉ: ಕನ್ನಡಕ್ಕಾಗಿ ಮತ್ತೊಂದು ದಿನ

csomsekraiah's picture

ಪ್ರೀತಿಯ ಹರಿ ನೀವೆಲ್ಲಾ ಇಷ್ಟೊಂದು ಶ್ರಮ ವಹಿಸುತ್ತಿರುವುದರಿಂದಲೇ ನಮ್ಮಂತಹ ಕಂಪ್ಯೂಟರ್ ಗೊತ್ತಿಲ್ಲದವರೂ ಸಹ, ಕಂಪ್ಯೂಟರಿನಲ್ಲಿ ಬರೆಯುವುದೂ, ಓದುವುದೂ ಮಾಡಲು ಸಾಧ್ಯವಾಗಿರುವುದು . ಪವನಜ ಅವರು, ವಾಸು ಅವರು, ಕೆ.ಪಿ.ರಾವ್ ಅವರು, ನೀವೆಲ್ಲಾ ಮನಸ್ಸು ಮಾಡದಿದ್ದರೆ ಇಂಟರ್ನೆಟ್ ಎಂಬ ಮಾಯಾಂಗನೆ ಕನ್ನಡದಲ್ಲಿ ನಮಗೆ ದೊರೆಯುತ್ತಿದ್ದಳೇ?ಕನ್ನಡಿಗರೆಲ್ಲರ ಧನ್ಯವಾದಗಳು ನಿಮಗೆ. ನಾನು ಬರಹದಲ್ಲಿ ಬರೆಯಲು ಆರಂಭಿಸಿದ್ದೇ ,ನವಂಬರ್ ನಲ್ಲಿ ಸಂಪದದಿಂದ ಅಯ್ ಎಮ್ ಇ ಡೌನ್ ಲೋಡ್ ಮಾಡಿಕೊಂಡ ಮೇಲೆ . ಅಧಿಕೃತವಾಗಿ ಬರಿಯ ದುಡ್ಡು ಖರ್ಚು ಮಾಡುತ್ತಾ, ಕಾಲಹರಣ ಮಾಡುವ ಸರ್ಕಾರಿ ಸಂಸ್ಥೆಗಳನ್ನು ನೆಚ್ಚಿ ಕುಳಿತಿದ್ದರೆ , ಯಾವುದೂ ಆಗುತ್ತಿರಲಿಲ್ಲ . ಕಂಪ್ಯೂಟರ್ ತಂತ್ರಜ್ಝಾನ ಏನೇನೂ ಗೊತ್ತಿಲ್ಲದ ನಾನು ನಿಮ್ಮಂತಹವ ಕೆಲಸಗಳನ್ನು ಬೆರಗಿನಿಂದ ಮಾತ್ರ ನೋಡಬಲ್ಲೆ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದದಲ್ಲಿ ಮತ್ತಷ್ಟು ಹೊಸತು
  • Getting Involved
  • ಸಫಾರಿಯಲ್ಲಿ ಕನ್ನಡ
  • About Sampada
  • ಬೋಧನೆಯ ವರಸೆ - ಮತ್ತು ಇತರ ಕಥೆಗಳು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator