ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ನಾಡಿಗರು ಯಾರು?
ರಶೀದ್ ತಮ್ಮ ಲೇಖನದಲ್ಲಿ ಐದು ವರ್ಷಗಳ ಹಿಂದೆ ಸುಮತೀಂದ್ರ ನಾಡಿಗರ ಜೊತೆ ಸಂಭಾಷಣೆ ನಡೆಸಿದುದರ ನಿಮಿಷಗಳೆಂದು ಹೀಗೆ ಬರೆದಿದ್ದಾರೆ:
ರಶೀದ್: ‘ನಾಡಿಗ ಅಂತ ಹೆಸರು ಹೇಗೆ ಬಂತು’ ಅಂತ ಕೇಳಿದೆ.
ಸುಮತೀಂದ್ರ ನಾಡಿಗ್: ‘ನಾವು ಮೂಲದಲ್ಲಿ ತೆಲುಗರು ಹಾಗಾಗಿ ಈ ನಾಡಿಗರು ನಮ್ಮನ್ನು ನಾಡಿಗರು ಅಂತ ಕರೆದರು.ತೆಲುಗಿನಿಂದ ಬಂದ ಎಲ್ಲರನ್ನೂ ಕನ್ನಡಿಗರು ನಾಡಿಗರು ಎಂದು ಕರೆದರು.ಬ್ರಾಹ್ಮಣ ಸಾಬ ಶೂದ್ರ ಎಲ್ಲರಲ್ಲೂ ನಾಡಿಗರಿದ್ದಾರೆ’ ಎಂದರು.
(ರಶೀದ್ ರವರ ಬ್ಲಾಗಿನಿಂದ)
ಇದು ನಿಜವೋ ಸುಳ್ಳೋ ಎಂಬ ವಿಷಯ ಖಾತರಿಪಡಿಸಿಕೊಳ್ಳಲು ಅತಿಶೀಘ್ರವಾಗಿ ನನ್ನನ್ನು ಹಲವರು ಸಂಪರ್ಕಿಸಿದ್ದುದು ಗಾಬರಿಯೂ, ಅಚ್ಚರಿಯೂ ತಂದಿತು. ಆ ಲೇಖನದಲ್ಲಿ "ನಾಡಿಗರು" ಹೆಸರಿನ ಮೂಲವಲ್ಲದೆ ತಲೆ ಕೆರೆದುಕೊಳ್ಳುವ, ತಲೆ ಕೊರೆಯುವ ಹಲವು ವಿಷಯಗಳಿವೆ, ಸರ್ಕ್ಯಾಸಮ್ ಇದೆ. ಅವುಗಳ ಕಡೆಯೂ ಓದುಗರ ಗಮನ ಹೋಗುವುದೆಂದು wish ಮಾಡಬಹುದಷ್ಟೆ.
ಹೆಸರಿನ ಸುತ್ತ
ಸುಮತೀಂದ್ರ ನಾಡಿಗರ ಪರಿಚಯ ನನಗಿಲ್ಲ. ಸಾಹಿತ್ಯದ ಪರಿಚಯವಿರುವ ಹಲವರು ನನ್ನ ಹೆಸರು ಕೇಳಿ "ಸುಮತೀಂದ್ರ ನಾಡಿಗರ ಪರಿಚಯವಿದೆಯೇ, ನಿಮ್ಮ ಸಂಬಂಧಿಕರೋ ಅವರು?" ಎಂದು ಪ್ರಶ್ನಿಸಿದಾಗಲೆಲ್ಲ ನನ್ನ ಉತ್ತರ "ಪರಿಚಯವಿಲ್ಲ, ಗೊತ್ತಿಲ್ಲ" ಎಂಬುದೇ. ನಮ್ಮ ತಂದೆಯ ಹೆಸರಿನಲ್ಲಿದ್ದ ನಾಡಿಗ್ ಎಂಬ ಹೆಸರನ್ನು ನಾನೂ ಇಟ್ಟುಕೊಂಡಿದ್ದೇನೆ. ಈ ಹೆಸರಿನ ಹಿನ್ನೆಲೆ ಖಂಡಿತವಾಗಿಯೂ ಗೊತ್ತಿಲ್ಲ. ಹಿನ್ನೆಲೆ ಏನಾದರೇನು, ಹೆಸರು ನೆನಪಿನಲ್ಲುಳಿಯುವಂತೆ, ಮುಂದಿನ ಸಾರಿ ಫೋನಿನ ಅಡ್ರೆಸ್ ಬುಕ್ಕಿನಲ್ಲಿ ಹುಡುಕುತ್ತಿರುವಾಗ "ನೀನ್ಯಾವ ಹರಿ ಪ್ರಸಾದ್? ನನಗೆ ನಾಲ್ಕೈದು ಜನ ಹರಿ ಪ್ರಸಾದರು ಗೊತ್ತು" ಎಂಬುದು ಕೇಳಿಬರದಂತೆ ಈ ಸರ್ನೇಮ್ ಸಹಾಯ ಮಾಡುತ್ತಿದೆ.
ಈ ಹೆಸರ ಬಗ್ಗೆ ಅಲ್ಲಿಲ್ಲಿ ಕೇಳಿದ್ದಷ್ಟೇ ನನಗೂ (ಬಹುಶಃ ಸುಮತೀಂದ್ರ ನಾಡಿಗರಿಗೂ) ಗೊತ್ತಿರುವುದು ಎಂಬ ವಿಷಯವನ್ನು ಬಿಟ್ಟರೆ ರಶೀಧರು ಬರೆದ ಈ ವಿಷಯದ ಸತ್ಯಾಸತ್ಯತೆಯ ಕುರಿತು ಆಸಕ್ತಿಯನ್ನು ದಯವಿಟ್ಟು ರಶೀಧರ ಹತ್ತಿರವೋ, ಅದನ್ನು ಹೇಳಿದರೆನ್ನಲಾದ ಸುಮತೀಂದ್ರರ ಬಳಿಯೋ ಆಸಕ್ತರು ತೋಡಿಕೊಂಡಲ್ಲಿ ಅವರು ಬರೆದ ಹಿನ್ನೆಲೆಯಲ್ಲಿನದೇ ಹೆಚ್ಚಿನ ಮಾಹಿತಿ ಸಿಗಬಹುದು.
ಒಟ್ಟಾರೆ ಲೇಖನ ಓದಿದ ಮೇಲೆ ನನಗೆ ಸುಮತೀಂದ್ರ ನಾಡಿಗರು ನಿಜವಾಗಿಯೂ ಹೀಗೆ ಹೇಳಿದ್ದರೆ ಅದು ಅವರ opinion ಆಯಿತು. ಅವರು ಯಾಕೆ ಹಾಗೆ ಹೇಳಿದರೋ, ಕಾಂಟೆಕ್ಸ್ಟ್ ಏನಿತ್ತೋ ಏನೂ ಗೊತ್ತಿಲ್ಲದೆ ಮಾತನಾಡುವ ಹಾಗಿಲ್ಲ - ಇದು ಸೆನ್ಸಿಟಿವ್ ವಿಷಯ. ಸುಮತೀಂದ್ರರ ಜೊತೆಗಿನ ಆ ಸಂಭಾಷಣೆಯನ್ನು ರಶೀದ್ ಹೊರಗೆಡವಲು ಅನುಸರಿಸಿರುವ ಚತುರ ವಿಧಾನ ನನಗಂತೂ ಇಷ್ಟವಾಯ್ತು ಎಂದು ಹೇಳೋಕಾಗೊಲ್ಲ.
ಆದರೆ ಪರಿಚಯವಿರುವ ರಶೀಧರ ಹತ್ತಿರ ನಾನು ತಮಾಷೆಯಿಂದಲೋ, ಸ್ನೇಹದಿಂದಲೋ ಮಾತನಾಡುವಾಗಲೂ ಬಹಳ ಹುಷಾರಾಗಿ ಇರಬೇಕೆಂಬುದು ಖಾತ್ರಿಯಾಯ್ತು. ಯಾರಿಗ್ಗೊತ್ತು? ಮುಂದೊಂದು ದಿನ ಇನ್ನೊಬ್ಬ ನಾಡಿಗನಿಂದಲೂ ರಶೀಧರು ತಮ್ಮ ಬ್ಲಾಗಿನಲ್ಲಿ ಏನೇನೋ ಹೇಳಿಸಿಬಿಟ್ಟಾರು. ![]()

- hpn ರವರ ಬ್ಲಾಗ್
- Login or register to post comments
- 601 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನಾಡಿಗರು ಯಾರು?
ನನಗೆ ಗೊತ್ತಿರುವ 'ನಾಡಿಗ'ರಲ್ಲಿ ಇರುವವರೆಲ್ಲ "ಮಾಧ್ವ"ರು. ನನ್ನ ಕಂಸಿನ್ ಒಬ್ಬ 'ನಾಡಿಗ'
ನಾವು "ಮಾಧ್ವ"ರೆಲ್ಲ ಅಪ್ಟಟ ಕನ್ನಡಿಗರು ಎಂದು ನಂಬಿದ್ದೇವೆ.!
ಬಸವಣ್ಣನವರು "ತೆಲುಗು ಬ್ರಾಹ್ಮಣ" ಎಂದುದು ತಪ್ಪು "ಅವರು ಕನ್ನಡದ ಕಮ್ಮೆ ಬ್ರಾಹ್ಮಣರು" ಎಂದು ಚಿಮೂ ಬರೆದಿದ್ದನ್ನು ಪ್ರಜಾವಾಣಿಯಲ್ಲಿ ಓದಿದ ನೆನೆಪು. ಇಲ್ಲೇ ಸಂಪದದಲ್ಲಿ ಒಂದೆಡೆ ಅದನ್ನು ಬರೆದಿದೆ.
ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ನಾಡಿಗರು ಯಾರು?
ನಾಡಿಗರು ಬಹಳ ಸೀರಿಯಸ್ ಆದ ಪ್ರಶ್ನೆ ಎತ್ತಿದ್ದಾರೆ. ಒಬ್ಬರ ಜೊತೆ ಮಾತಾಡುವಾಗಲೂ, ಅವರು ಏನು ಹೇಳಿದರೂ ಅದನ್ನು ಬರೆಯುವಾಗ ತಮಗೆ ರುಚಿಸುವಂತೆ ತಿರುಚಿ, ಬೇಡದಿರುವುದನ್ನು underplay ಮಾಡುವುದು ರಶೀದರ ಈ ಪೋಸ್ಟಿನಲ್ಲಿ ಎದ್ದು ಕಾಣುತ್ತದೆ. ಇದು ಅವರ ಸೃಜನಶೀಲತೆಯ ಪರಿಮಿತಿಯಲ್ಲಿಯೇ ಇರಬಹುದು ಆದರೆ ಇವರೊಡನೆ ಮಾತಾಡಿದವರ false representation ಆಗಲಿಕ್ಕಿಲ್ಲವೇ?
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ನಾಡಿಗರು ಯಾರು?
ತೆಲುಗು ಮೂಲದ ಜನರಲ್ಲಿ( ನನಗೆ ಗೊತ್ತಿರುವಂತೆ ದಕ್ಷಿಣ ಕರ್ನಾಟಕದಲ್ಲಿ) ಮುಲುಕುನಾಡು, ಬಡಗನಾಡು ಮೊದಲಾದ ಪಂಗಡಗಳಿವೆಯಲ್ಲ - ಅದರಿಂದ ಬಂತೇ ಈ ನಾಡಿಗ ಎಂಬ ಹೆಸರು?
ಕೆಲವು ಮಾಧ್ವರು (ದೇಶಸ್ತ್ಥರೆಂದೂ ಕರೆಯುತ್ತಾರೆ) ಮರಾಠಿ ಮಾತಾಡುವುದನ್ನು ಕೇಳಿದ್ದೇನೆ. ಅದು ಅವರು ಮಹಾರಾಷ್ಟ್ರದಲ್ಲಿ ಇದ್ದಿರುವ ಪರಿಣಾಮವೋ ಏನೋ ತಿಳಿಯದು.
ಆದರೆ ಮಾಧ್ವರೆಲ್ಲ ಕನ್ನಡಿಗರೇ ಎಂಬ ಭಾವನೆಯಂತೂ ಇದೆ ಅಂತ ಕಾಣುತ್ತೆ. ನಾನು ಮದರಾಸಿನಲ್ಲಿದ್ದಾಗ ನನ್ನ ನೆರೆಯವರೊಬ್ಬರು ನಾನು ಮಾಧ್ವನಲ್ಲದಿರುವಾಗ, ಕನ್ನಡ ಹೇಗೆ ಮಾತಾಡುತ್ತಿದ್ದೇನೆ ಎಂಬ ಪ್ರಶ್ನೆ ಮಾಡಿದ್ದರು!
-ಹಂಸಾನಂದಿ
ಉ: ನಾಡಿಗರು ಯಾರು?
ನನಗನ್ನಿಸುವ ಮಟ್ಟಿಗೆ ಇಲ್ಲಿ HPN ಮಾತಾಡುತ್ತಿರುವುದು "ನಾಡಿಗ" ಹೆಸರಿನ ಮೂಲದ ಬಗ್ಗೆ ಅಲ್ಲ. ರಶೀದರ ಬರವಣಿಗೆಯ ಕುರಿತು. HPN ಬೇಕಿದ್ದರೆ clarify ಮಾಡಲಿ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ನಾಡಿಗರು ಯಾರು?
ಹಂಸಾನಂದಿಯವರೇ
ಬಡಗನಾಡು ಇವರು ಕನ್ನಡದೋರು. ಪಾಪ ಹಿಂಗೆ ಅವರನ್ನ ತೆಲುಗರು ಅಂದ್ರೆ ಬೇಜಾರ್ ಮಾಡಿಕೊಂಡಿದ್ರು ಒಬ್ರು.
http://en.wikipedia.org/wiki/Badaganadu
ಮೂಲಕ ನಾಡುಗಳಲ್ಲಿ ಕೆಲವರ ಮನೆಮಾತು ತೆಲುಗು, ಕೆಲವರ ಕನ್ನಡ. ಈ ಮೂಲಕ ದೇಸ ಈಗಿನ ಮಹಾರಾಷ್ಟ್ರದಲ್ಲಿದೆ. ಮೂಲಕ ಅಂದ್ರೆ ಮೂಲಂಗಿ. ಅದಕ್ಕೆ ಅವರನ್ನು ಮೂಲಂಗಿನಾಡೋರು ಅನ್ನಬಹುದು( ಮುಲುಕುಗಳು ಮನ್ನಿಸಿರಿ ).
ಇಲ್ಲಿ "ನಾಡಿಗ" ಇದು ತೆಲುಗ ಒರೆ ಅನ್ನೋದೇ ಐಬು. "ಇಗ" ಬರೋದು ಬರೀ ಕನ್ನಡದಲ್ಲಿ ಎಂದು ನನ್ನ ಅರಿವು. ಹಾಗೆ "ಹೆಬ್ಬಾರ್" ಇದು ಕನ್ನಡದ್ದೇ ಅಲ್ವಾ?!!
ಹರಿ ಮತ್ತು ಕಶ್ಯಪರಿಗೆ ತೊಂದರೆ ಆಗಿದ್ದರೆ ಮನ್ನಿಸಿರಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !