ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಮೀಡಿಯ ಪ್ಲೇಯರ್ ೧೧ ಬೀಟ - ಬೆಳ್ಳಿ ತಟ್ಟೆ, ತಂಗಳೂಟ - ಜೊತೆಗೊಂದು ಅಂಗಡಿ ಬೇರೆ!

May 20, 2006 - 1:18am — hpn

ಮೀಡಿಯ ಪ್ಲೇಯರ್ ೧೧ ಮೊನ್ನೆ ತಾನೆ ಪಾದಾರ್ಪಣೆ ಮಾಡಿದೆ. ವಿಂಡೋಸ್ ಎಕ್ಸ್ ಪಿ ಯ ಲೀಗಲ್ ಕಾಪಿ ಯಜಮಾನರಾದ ಎಲ್ಲರೂ ಇದನ್ನು ಮೈಕ್ರೊಸಾಫ್ಟಿನ ವಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಬುಧವಾರವೇ ಸ್ಲಾಶ್ ಡಾಟ್ ಮೂಲಕ ಇದರ ಬಗ್ಗೆ ತಿಳಿದುಬಂದಿದ್ದರೂ ಇಂದು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಾದ್ದರಿಂದ ಇನ್ಸ್ಟಾಲ್ ಮಾಡಿ ನೋಡಿದೆ. ಏನು ಹೊಸತಿರಬಹುದೆಂಬ ಎಂದಿನ ಕುತೂಹಲ ಇಟ್ಟುಕೊಂಡು ನೋಡಿದಾಗ ಭಾರೀ ನಿರಾಶೆ ಕಾದಿತ್ತು... ವಿಂಡೋಸ್ ಮೀಡಿಯ ಪ್ಲೇಯರ್ ೧೧ ಕೂಡ (ಎಂದಿನಂತೆ) Itunesನ ಹತ್ತಿರವೂ ಸುಳಿಯುವಷ್ಟು ಸಮರ್ಪಕವಾಗಿಲ್ಲ.
ಹೊಸತೊಂದು ಸ್ಕಿನ್/ಪರದೆ/ಬಟ್ಟೆ ಹೊದಿಸಿ ಅದೇ ತಂಗಳೂಟವನ್ನು ಬಡಿಸಿದ್ದಾರೆ, ಮೈಕ್ರೊಸಾಫ್ಟಿನವರು. ಜೊತೆಗೆ ಹಿಂದಿಗಿಂತಲೂ ಹೆಚ್ಚು ನಿಮ್ಮ ಸ್ವಂತ ಮಾಹಿತಿ ಸಂಗ್ರಹಣ ಕಾರ್ಯವನ್ನು ಮಾತ್ರ (ಗೂಗಲ್ ಅನ್ನು ಮೀರಿಸಲು ಛಲ ತೊಟ್ಟಂತೆ) ಅತ್ಯಂತ ಸಮರ್ಪಕವಾಗಿ ಮಾಡುತ್ತದೆ! ನೀವುಗಳೂ ಈ ಸಾಫ್ಟ್ವೇರನ್ನ ಡೌನ್ಲೋಡ್ ಮಾಡಿದರೆ ಇನ್ಸ್ಟಾಲ್ ಮಾಡುವಾಗ ಸಾಧ್ಯವಾದಷ್ಟೂ 'custom' ಆಪ್ಶನ್ನುಗಳನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ... ಹಾಗೂ ಸಾಧ್ಯವಾದಷ್ಟು 'ಮಾಹಿತಿ ಕಳುಹಿಸುವ'ಂತಹ ಆಫ್ಶನ್ನುಗಳನ್ನು 'uncheck' ಮಾಡಿ.

ಹೊಸ ಮೀಡಿಯ ಪ್ಲೇಯರ್ ನಲ್ಲಿ ಹೊಸತು - ಬರೇ itunes ಸಡ್ಡು ಹೊಡೆಯಲೆಂದು ಹೊರಟ ಪ್ರಯತ್ನದ (ಅಥವಾ ಕಾಂಪಿಟೇಶನ್ ನೀಡುವ ಮಹತ್ವಾಕಾಂಕ್ಷೆ ಇಟ್ಟುಕೊಂಡ) ಅಂಗಡಿಯೆಂದರೆ ತಪ್ಪಾಗಲಾರದು. ಮೆಮೊರಿ ತಿನ್ನುವುದರಲ್ಲಿ ತಂತ್ರಾಂಶಗಳಿಗಿರಬೇಕಾದ ಸದಭಿರುಚಿಯ ಜುಗ್ಗತನ ಸ್ವಲ್ಪ ಹೆಚ್ಚಾಗಿರುವುದು (ಒಳ್ಳೆಯ ಬೆಳವಣಿಗೆ, ಅದು) ಬಿಟ್ಟರೆ ಹೊಸ ಮೀಡಿಯ ಪ್ಲೇಯರಿನಲ್ಲಿ ವಿಶೇಷವೇನೂ ಇಲ್ಲ. ಆದರೆ ಕಣ್ಣಿಗೆ ಮುದ ನೀಡುವ ಹೊಸ ಸ್ಕಿನ್/ಪರದೆ/ಬಟ್ಟೆ ಹೊದ್ದುಕೊಂಡು ಬಂದಿದೆ, ಈ ಹೊಸ ಆವೃತ್ತಿ.

ನನ್ನ ಮೊಬೈಲು ಫೋನಿಗೆ ಕೂಡ ಐಟ್ಯೂನ್ಸ್ ನೀಡುವಷ್ಟು ಒಳ್ಳೆಯ support ಮೀಡಿಯ ಪ್ಲೇಯರ್ ಕೊಡದಿರುವುದು (ನನಗೆ) ಮತ್ತೊಂದು ನಿರಾಶೆಯ ಸಂಗತಿ. ಇತ್ತೀಚೆಗೆ ಮೀಡಿಯ ಪ್ಲೇಯರಿನಲ್ಲಿನಿಂದಲೇ ಆಡಿಯೋ ಸಿಡಿ ಬರ್ನ್ ಮಾಡುವ ಸೌಲಭ್ಯ ಲಭ್ಯವಿದ್ದರೂ ಅದು ಮೈಕ್ರೊಸಾಫ್ಟಿನ ಕಟ್ಟಾ ಲೈಸೆನ್ಸುವಾದಿಯಾಗಿ ವರ್ತಿಸುವುದರಿಂದ ಅದನ್ನು ಬಹಳಷ್ಟು ಜನ ಬಳಸುವುದಂತೂ ಕಾಣೆ. ಈಗಂತೂ ಎಲ್ಲ ಫ್ರೀ ಪ್ಲೇಯರುಗಳೂ ಸಿ ಡಿ, ಡಿ ವಿ ಡಿ ಬರ್ನ್ ಮಾಡುವ ಸೌಲಭ್ಯ ಒದಗಿಸುತ್ವೆ... so there Smiling ಇನ್ನು ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲವೆಂದು ನಂಬುತ್ತೇನೆ... ವಾಪಸ್ Itunesಗೇ ಮರಳಬೇಕಷ್ಟೆ!

(ಸ್ಕ್ರೀನ್‌ಶಾಟ್‌ಗಳನ್ನು ಅಪ್ಲೋಡ್ ಮಾಡಿದ್ದು, ಈಗ ನನ್ನ ಇಂಟರ್ನೆಟ್ ಕನ್ನೆಕ್ಷನ್ ಕೈ ಕೊಡುತ್ತಿರುವುದರಿಂದ ನಾಳೆ ನಾಳಿದ್ದು ಅವುಗಳನ್ನು ಈ ಪೋಸ್ಟಿನೊಂದಿಗೆ ಸೇರಿಸುವೆ. ಸದ್ಯಕ್ಕೆ ಅವನ್ನು ಈ ಸಂಪರ್ಕದಲ್ಲಿ ನೋಡಬಹುದು)

~.~
  • hpn ರವರ ಬ್ಲಾಗ್
  • Login or register to post comments
  • 1035 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೀಡಿಯ ಪ್ಲೇಯರ್ ೧೧ ಬೀಟ
  • ಸಫಾರಿಯಲ್ಲಿ ಕನ್ನಡ
  • ವಿಂಡೋಸ್ ೯೮ ರಲ್ಲಿ ಕನ್ನಡ
  • ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್
  • ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator