ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ತೊಗರಿ ನುಚ್ಚಿನುಂಡೆ
ನಮ್ಮ ಅಮ್ಮ ಚಪಾತಿ ಮಾಡುತ್ತೇನೆ ಅಂದರೆ ಸಾಕು ನಾವೆಲ್ಲ ಹೋಟೆಲಿಗೆ ಹೋಗುವ ಪ್ಲಾನಿದ್ದರೆ ಅದಕ್ಕೆ ಚಕ್ಕರ್ ಕೊಟ್ಟು ಮನೆಯಲ್ಲಿ ಜಮಾಯಿಸಿಬಿಡುತ್ತೇವೆ. ಅಷ್ಟು ಚೆನ್ನಾಗಿ ಚಪಾತಿ ಮಾಡುತ್ತಾರೆ. ಸರಿಯಾದ ತ್ರಿಕೋನಾಕಾರದಲ್ಲಿ ಮೃದುವಾದ ಚಪಾತಿಯ ಜೊತೆ ಸಾಗು ಅಥವ ಪಲ್ಯ ಇದ್ದರಾಯ್ತು, ಚಪಾತಿ ಮಾಡಿದ್ದೂ ಗೊತ್ತಾಗದಂತೆ ಹಾಕಿಕೊಂಡು ಖಾಲಿ ಮಾಡಿಬಿಟ್ಟಿರುತ್ತೇವೆ.
ಮೊನ್ನೆ ಎಷ್ಟೋ ದಿನಗಳ ನಂತರ ಅಮ್ಮ ನುಚ್ಚಿನುಂಡೆ ಮಾಡಿದ್ದರು. ಇದು 'ತೊಗರಿ ನುಚ್ಚಿನುಂಡೆ'ಯಂತೆ. ಬಹಳ ಚೆನ್ನಾಗಿರತ್ತೆ ತಿನ್ನೋದಕ್ಕೆ.

- hpn ರವರ ಬ್ಲಾಗ್
- Login or register to post comments
- 698 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ತೊಗರಿ ನುಚ್ಚಿನುಂಡೆ
veena.
ನಾಡಿಗರೆ ಬರಿ ಫೋಟೋ ಹಾಕಿ ಬಾಯಲ್ಲಿ ನೀರೂರಿಸುತ್ತಿದ್ದೀರಲ್ಲ. ಮಾಡುವುದು ಹೇಗೆ ಎಂದು ತಿಳಿಸಿದ್ದರೆ ನಾವು ಅದರ ಸವಿಯನ್ನು ಸವಿಯುತ್ತಿದ್ದೆವು.
ಉ: ತೊಗರಿ ನುಚ್ಚಿನುಂಡೆ
ತಿಂದಿದ್ದು ಆಯ್ತು, ಹೀಗಾಗಿ ಅದರ ಬಗ್ಗೆ ಯೋಚನೇನೆ ಮಾಡಿರಲಿಲ್ಲ.

ಕೈಯಲ್ಲಿ ಕ್ಯಾಮೆರ ಹಿಡಿದಿದ್ದರಿಂದ ಫೋಟೋ ತೆಗೆದಿದ್ದೆ. ಇರಿ, ನಾಳೆ ಅದನ್ನ ಹೇಗೆ ಮಾಡ್ತಾರೆ ಅಂತ ಕೇಳಿ ಒಂದು ಕಡೆ ಬರೆದು ಹಾಕುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ತೊಗರಿ ನುಚ್ಚಿನುಂಡೆ
ಚೆನ್ನಾಗಿದೆ ಹರಿಪ್ರಸಾದ್ ಅವರೆ!
ಮಾಡುವ ವಿಧಾನ : ಇದು ನನ್ನ ಊಹೆ
ಮಾತ್ರ. ರುಚಿಯಿಂದ reverse engineer ಮಾಡಿ ಬರೆದಿದ್ದೇನೆ ಅಷ್ಟೇ!
ಒಂದು ಅಳತೆ ತೊಗರಿಬೇಳೆ, ಒಂದು ಅಳತೆ ಕಡಲೆ ಬೇಳೆ ಎರಡನ್ನೂ ಸೇರಿಸಿ ಮಿಕ್ಗಿಯಲ್ಲಿ ನುಚ್ಚು ಮಾಡಿಕೊಳ್ಳಿ. ಬಹಳ ಸಣ್ಣಗೆ ಆಗಬಾರದು.
ಎರಡುಗಂಟೆ ನೆನೆಸಿಡಿ. ನಂತರ ೮-೧೦ ಹಸಿಮೆಣಸಿನಕಾಯಿ (ನಿಮ್ಮ ಖಾರದ ಮಟ್ಟಕ್ಕೆ ತಕ್ಕಷ್ಟು), ಅರ್ಧ ಕಟ್ಟು ಕೊತ್ತಂಬರಿ, ಒಂದು ಸಣ್ಣ ಹಸಿಶುಂಠಿಯ ಚೂರನ್ನು ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ (ಇಷ್ಟವಿದ್ದವರು, ಒಂದು ಚಮಚ ಜೀರಿಗೆ, ೪-೬ ಕಾಳುಮೆಣಸನ್ನೂ ಹಾಕಬಹುದು) . ನೆನೆಸಿದ ಬೇಳೆಯ ಮಿಶ್ರಣದಲ್ಲಿ ನೀರನ್ನೆಲ್ಲ ಸೋಸಿಬಿಡಿ, ಅದಕ್ಕೆ ತಿರುವಿದ ಮಿಶ್ರಣವನ್ನು ಹಾಕಿ ಕಲೆಸಿ. ಇಷ್ಟವಿದ್ದರೆ, ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಿ. ಮೇಲೆ ನೀರು ಹಾಕದೆ ಕಲೆಸಿ. ಇದು ಅಕ್ಕಿರೊಟ್ಟಿ ಹಿಟ್ಟಿನ ಹದ (ಅಥವ ಅದಕ್ಕಿಂತ ಸ್ವಲ್ಪ ಗಟ್ಟಿ) ಇದ್ದರೆ ಸರಿ. ಚಿತ್ರದಲ್ಲಿರುವಂತೆ ಕೈಯಲ್ಲಿ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ, ಪಾತ್ರೆಯಲ್ಲಿಟ್ಟು ಪ್ರೆಶರ್ ಕುಕರ್ ನಲ್ಲಿಡಿ. ಹಬೆ ಬಂದ ಮೇಲೆ, weight ಇಡದೆ, ೮-೧೦ ನಿಮಿಷ ಬೇಯಿಸಿ.
ರುಚಿರುಚಿಯಾದ, ನುಚ್ಚಿನುಂಡೆ ತಯಾರ್! ಬೇಕಿದ್ದರೆ ಪುದಿನ ಚಟ್ನೆ, ಅಥವ ಬೇರೆ ಚಟ್ಣಿ ಪುಡಿಯ ಜೊತೆ ತಿನ್ನಿ. ಹಾಗೇ ತಿನ್ನಲೂ ಬಲು ಸೊಗಸಾಗಿರುವುದು.
-ಹಂಸಾನಂದಿ
ಸೂ: ನಾಡಿಗರೆ, ನಿಮ್ಮ ತಾಯಿಯವರ ವಿವರಣೆ ಇದಕ್ಕಿಂತ ಎಷ್ಟು ಬೇರೆಯಾಗಿದೆ ಅನ್ನೋದನ್ನ ತಿಳಿಸಲು ಮರೀಬೇಡಿ!
ಉ: ತೊಗರಿ ನುಚ್ಚಿನುಂಡೆ
ತೊಗರಿನುಚ್ಚಿನುಂಡೆಯನ್ನ ನೆನಪಿಸಿ ನನಗೆ ಬಾಯಿಯಲ್ಲಿ ನೀರೂರಿಸಿದಿರೆ ಮಿ.ನಾಡಿಗ್. ಇಡೀ ವಿಶ್ವವನ್ನೆ ಸುತ್ತಿದರೂ, ಕರ್ನಾಟಕದ ಈ ಸಾಂಪ್ರದಾಯಿಕ ರುಚಿಗಳಿಗೆ ಸಾಟಿಯೆಲ್ಲಿ. ಇನ್ನೂ ಅಕ್ಕಿ ಹಾಲುಬಾಯಿ, ಒತ್ತು ಶಾವಿಗೆ, ಅದಕ್ಕೆ ಬೆಲ್ಲ ಸೇರಿಸಿದ ಕಾಯಿಹಾಲು, ಮತ್ತು ಹಂಡೆನೀರಿನಲ್ಲಿ ಬಿಸಿಬಿಸಿ ಎಣ್ಣೆ ನೀರು ಆಮೇಲೆ ಗಸಗಸೆ ಪಾಯಸ, ಅಮ್ಮನ ಪ್ರೀತಿ, ಓಹ್ ಅಧ್ಬುತ. ಹಲವು ನಿಮಿಷಗಳು ಬಾಲ್ಯಕ್ಕೆ ಕರೆದೊಯ್ದ ನಿಮಗೆ ಧನ್ಯವಾದಗಳು
ಏಸ್.ಶಾಮಸುಂದರ
ಉ: ತೊಗರಿ ನುಚ್ಚಿನುಂಡೆ
ಓದಿ ಪ್ರತಿಕ್ರಿಯೆ ಸೇರಿಸಿದ್ದಕ್ಕೆ ಧನ್ಯವಾದಗಳು, ಶಾಮಸುಂದರರವರೆ. ಏನೋ ಒಂದಷ್ಟು ಬರೆದು ಮಲಗುವ ಇರಾದೆ ಇಟ್ಟುಕೊಂಡು ಬರೆದಿದ್ದೆ, ನಿದ್ರೆಗಣ್ಣಿನಲ್ಲಿ. ಇಷ್ಟು ಜನ ಓದುತ್ತಾರೆ, ಎರಡು ಪ್ರತಿಕ್ರಿಯೆಗಳೂ ಬರುವುವು ಎಂದು ಎಣಿಸಿರಲಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa