ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕೊನೆಗೂ ಗೆದ್ದರು!

September 20, 2006 - 10:47pm — hpn

ಕ್ರಿಕೆಟ್ ತಪ್ಪದೇ ಫಾಲೋ ಮಾಡುವವರಿಗೆ ಈ season ಮೊದಲಿಗೇ ಬೇಸರ ತಂದಿಟ್ಟ ಸೀಝನ್ನು. ಮೊದಲಿಗೆ ಅತ್ತ ಇಂಗ್ಲೆಂಡಿನಲ್ಲಿ ಬಾಲ್ ಟ್ಯಾಂಪರಿಂಗ್ ಅಂತ ಎಲ್ಲರೂ ಕಿತ್ತಾಡುತ್ತ ಕ್ರಿಕೆಟ್ಟಿಗಿಂತ ಹೆಚ್ಚು ಗೊಂದಲ ಗಲಾಟೆ ನಡೆಸಿದರೆ, ಇತ್ತ ಮಳೆಯಿಂದಾಗಿ ಮ್ಯಾಚುಗಳೇ ನಡೆಯಲಿಲ್ಲ. ಮೊನ್ನೆ ಮಲೇಶಿಯದಲ್ಲೂ ಭಾರತ ಆಡಿದ ಆಟಗಳು ಮಳೆ ಪಾಲಾದಾಗ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ "ಛೆ!" ಅನ್ನಿಸಿರಲಿಕ್ಕೂ ಸಾಕು.

ಕೊನೆಗೊಂದು ದಿನ, ಅದೂ ಇವತ್ತು "ದಿಸ್ ಇಸ್ ಎ ಟ್ರೆಮೆಂಡಸ್ ಡೇ ಫಾರ್ ಕ್ರಿಕೆಟ್, ಹಾಟ್ ಎಂಡ್ ಹ್ಯೂಮಿಡ್ ವೆದರ್" ಅನ್ನುತ್ತ ಟೋನಿ ಗ್ರೆಗ್ ತನ್ನ ಟ್ರೇಡ್ ಮಾರ್ಕ್ ಧ್ವನಿಯಲ್ಲಿ ಹೇಳುತ್ತಿದ್ದಾಗ ಕೊನೆಗಾದರೂ ಒಂದು ಒಳ್ಳೆಯ ಕ್ರಿಕೆಟ್ ಆಟ ನೋಡಲು ಸಿಗುತ್ತದೆ ಎಂದು ಸಂತಸವಾಯಿತು. ಕಂಪ್ಯೂಟರಿನಲ್ಲಿ ಟಿ ವಿ ತಂತ್ರಾಂಶ ತೆರೆದು LCD ಸ್ಕ್ರೀನಿನ ಕೋನೆಯ ಒಂದು ಚಿಕ್ಕ ಚೌಕಟ್ಟಿನಲ್ಲಿ display ಆಗುವಂತೆ ಝೀ ಸ್ಪೋರ್ಟ್ಸ್ ಹಾಕಿಕೊಂಡು ಕುಳಿತಿದ್ದೆ.

ದ್ರಾವಿಡ್ ಟಾಸ್ ಗೆದ್ದ ವರದಿ ಬರುತ್ತಿತ್ತು. 'ಶುಭಾರಂಭ' ಎಂದುಕೊಂಡೆ.

ಭಾರತದವರು ಬ್ಯಾಟಿಂಗ್ ಪ್ರಾರಂಭಿಸಿದರು. ಇತ್ತ ನಾನು ಅದನ್ನೇ ನೋಡುತ್ತ ಕುಳಿತರೆ ಎಲ್ಲ ವಿಕೆಟ್ಟುಗಳು ಬಿದ್ದು ಹೋಗುವುವು ಎಂಬ ನನ್ನ ಮೂಢನಂಬಿಕೆಯಂತೆ ನನ್ನ ಕೆಲಸ ಮುಂದುವರೆಸಿಕೊಂಡು ಆಗಾಗ ಸ್ಕೋರು ನೋಡಲು ಟಿವಿ ತಂತ್ರಾಂಶದ ಚೌಕಟ್ಟಿನತ್ತ ಕಣ್ಣು ಹಾಯಿಸುತ್ತಿದ್ದೆ. (ಒಂದು ರೀತಿಯಲ್ಲಿ ಈ ಮೂಢನಂಬಿಕೆ ನಾನೇ ಕಟ್ಟಿಟ್ಟುಕೊಂಡ ನಂಬಿಕೆ ಎನ್ನಬಹುದು - ಅದಿಲ್ಲದಿದ್ದರೆ ನನ್ನ ಕೆಲಸಗಳು ಮುಂದೆ ಸಾಗವು!) ನನ್ನ ಮೂಢನಂಬಿಕೆ ಇಂದು ಸುಳ್ಳಾಯ್ತು! ವಿಕೆಟ್ಟುಗಳು ಒಂದೇ ಸಮನೆ ಬಿದ್ದವು. ಸಚಿನ್ ತೆಂಡೂಲ್ಕರನೂ ಪೆವಿಲಿಯನ್ನಿಗೆ ತೆರಳಿದಾಗ 'ತತ್ತರೀಕಿ! ಇವರದ್ದು ಯಾವಾಗಲೂ ಇದೇ ಹಣೇ ಬರಹ" ಎಂದು ನೊಂದುಕೊಂಡು ಟಿ ವಿ ಚೌಕಟ್ಟು ಕ್ಲೋಸ್ ಮಾಡಿ ನಮ್ಮ ಕ್ರಿಕೆಟ್ ಟೀಮಿನವರನ್ನು ಶಪಿಸಿ ಸುಮ್ಮನೆ ಕೆಲಸ ಮುಂದುವರೆಸಿಕೊಂಡು ಹೋದೆ.

****

ಸಾಯಂಕಾಲ ನ್ಯೂಸ್ ಕೇಳಿದ ಮೇಲೆ ತಿಳಿದುಬಂದದ್ದು ಭಾರತದವರು ಕೇವಲ ೧೬ ರನ್ನುಗಳಿಂದ ಗೆದ್ದುಬಿಟ್ಟಿದ್ದಾರೆಂದು! ಬಾಪುರೇ!

ಬೆಳಿಗ್ಗೆ ಕೇವಲ ೧೬೫ ರನ್ ಹೊಡೆದ ಭಾರತ ಗೆಲ್ಲುವುದು ದೂರದ ಮಾತು ಎಂಬಂತಿದ್ದುದು, ಸಾಯಂಕಾಲ ಗೆದ್ದು ಬಿಟ್ಟಿದ್ದಾರೆಂಬ ಸುದ್ದಿ. ಇದೇ ಅಲ್ಲವೇ ಕ್ರಿಕೆಟ್ ಆಟವನ್ನು ಇಷ್ಟೊಂದು ಸ್ವಾರಸ್ಯಕರವಾಗಿಸುವುದು? ಭಾರತ ಗೆದ್ದಾಗಲಲ್ಲವೇ ಕ್ರಿಕೆಟ್ ಚೆಂದವಾಗಿರುವುದು? Eye-wink

~.~
  • hpn ರವರ ಬ್ಲಾಗ್
  • Login or register to post comments
  • 596 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 21, 2006 - 9:26am — Sunil Jayaprakash

ಗೊಂದಲಗಳ ಗೂಡೀ ಆಟವು

Sunil Jayaprakash's picture

ನನ್ನ ಅಮೇರಿಕದ ಸಹೋದ್ಯೋಗಿಗೆ ಆಶ್ಚರ್ಯವೋ ಆಶ್ಚರ್ಯ. ಅದು ಹೇಗೆ ಸಾಧ್ಯ. ಮೊನ್ನೆ ತಾನೆ ನೀವುಗಳು ೩೦೯ ಓಟಗಳನ್ನು ಕಲೆಹಾಕಿಯೂ ಸೋತಿರಿ, ಆದರೆ ಈ ದಿನ ಈಗ ಕೇವಲ ೧೬೦ ಚಿಲ್ಲರೆ ರನ್ನುಗಳಿದ್ದಾಗಿಯೂ ಗೆದ್ದಿರಲ್ಲಾ...ಓಹ್, ತಲೆಕೆಟ್ಟು ಹೋಗತ್ತಪ್ಪಾ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಗೋ ಬಂತು ಕ್ರಿಕೆಟ್ ಸಮಯ
  • ವಿಶ್ವಕಪ್ ಕ್ರಿಕೆಟ್ ಜ್ವರ:ಇಳಿದೀತೇ?
  • ಜಾಹಿರಾತು ಇದ್ರೇನೆ ಒಳ್ಳೇದು!
  • ಕಪಿಲ್ ದೇವ್ ನೇತೃತ್ವದಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಗೆದ್ದ ಕ್ರಿಕೆಟ್ ವಿಶ್ವಕಪ್, ನಿಜಕ್ಕೂ ಅವಿಸ್ಮರಣೀಯ-೨೫ ವರ್ಷಗಳು ಸಂದಿವೆ !
  • ತುಂತುರು ಮಳೆಯಲ್ಲೂ ಆಟದ ಸೊಗಸಿಗೆ ಕಡಿಮೆಯೇನೂ ಇರಲಿಲ್ಲ ; ಆಸ್ಟ್ರೇಲಿಯ, ಶ್ರೀ ಲಂಕಾ ವನ್ನು ೫೩ ರನ್ನುಗಳಿಂದ ಮಣಿಸಿ ವಿಶ್ವಕ್ರಿಕೆಟ್ ಗೆದ್ದಿದೆ.
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator