ನಾಳೆ ಹಬ್ಬ!
ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"
ಮತ್ತೊಂದು ಫೋನ್ ಕಾಲ್ ಬಂದು ನನಗೂ ಏನೂ ಹೇಳಲಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಫೋನ್ ಮಾಡಿ ಹೇಳಿದರು: "ಗೊತ್ತಾಯ್ತು! ಗ್ನು/ಲಿನಕ್ಸ್ ಹಬ್ಬ ಅಲ್ವ? ಮೈಸೂರಲ್ಲಿ!"
ನಾಳೆ ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬದ ಎರಡನೇ ಆವೃತ್ತಿ. ಮೈಸೂರಿನ ಶಶಿಶೇಖರ್ ರವರು ನಡೆಸಿಕೊಂಡು ಬರುತ್ತಿರುವ ಇನ್ಫರ್ಮೀಡಿಯ ಕಂಪೆನಿ ಖರ್ಚಿನ ಜವಾಬ್ದಾರಿ ಹೊತ್ತಿಕೊಂಡಿದೆ. ನಿರ್ವಹಣೆ, ಸಂಯೋಜನೆ volunteers ಜವಾಬ್ದಾರಿ. ಸಂಪದ ಸಮುದಾಯದ ಸುಮಾರು ಜನ ಈ ತಂಡದಲ್ಲಿದ್ದಾರೆ. ಆಶಯ, ಗ್ನು/ಲಿನಕ್ಸ್ ಬಗ್ಗೆ ತಿಳಿಸಿಕೊಡುವುದು ಹಾಗು ಸ್ವತಂತ್ರ ತಂತ್ರಾಂಶದ ಕಡೆ ಸಾಮಾನ್ಯ ಕಂಪ್ಯೂಟರ್ ಬಳಕೆದಾರರಲ್ಲಿ ಒಂದಷ್ಟು ಬೆಳಕು ಹರಿಸುವುದು, ಕನ್ನಡದ ಸೊಗಡು ತುಂಬಿ, ಅದೂ. ಹೋದ ಸಲ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಮೊದಲ ಆವೃತ್ತಿ ನಡೆದಾಗಿನಿಂದಲೂ ಇದು ನಮಗೆ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಂಡಿರುವ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಮೀಸಲಾದ ದಿನ, ಖುಷಿ ಕೊಡುವ ದಿನ, ಒಂದು ರೀತಿಯ ಹಬ್ಬ. ಅಥವ, ನಾಗೇಶ ಹೆಗಡೆಯವರು ಹೇಳುವಂತೆ "ಹೊಸ ಸ್ಟೈಲ್" ಹಬ್ಬ :-)
- hpn's blog
- Login or register to post comments
- 741 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನಾಳೆ ಹಬ್ಬ!
ಹಬ್ಬ ಎನ್ನುವ ಹೆಸರೇ ಪುಳಕಗೊಳಿಸುವಂಥದು. ಕನ್ನಡ ತಂತ್ರಾಂಶಕ್ಕೆ ಈ ಹಬ್ಬ ಹೊಸ ಕನಸು ತುಂಬಲಿ. ಹಳೆಯ ಕನಸುಗಳನ್ನು ನನಸಾಗಿಸಲಿ. ಇವತ್ತು ಅಂತರ್ಜಾಲ ತಾಣವನ್ನು ತುಂಬಿರುವ ಏಕರೂಪದ ಫಾಂಟ್‌ಗಳ ಜೊತೆ ಜೊತೆಗೆ ಹೊಸ ಫಾಂಟ್‌ಗಳು, ಶೈಲಿ, ಹಾಗೂ ಹೊಸ ಸಾಧ್ಯತೆಗಳಿಗೆ ಈ ಹಬ್ಬ ಕಣ್ಣು ತೆರೆಸುವಂತಾಗಲಿ. ಇಂಥದೊಂದು ಕನಸನ್ನು ಸಾಧ್ಯವಾಗಿಸಿದ ಎಲ್ಲರ ಕನಸುಗಳು ಈಡೇರುವಂತಾಗಲಿ.
- ಚಾಮರಾಜ ಸವಡಿ
http://chamarajsavad...
ಉ: ನಾಳೆ ಹಬ್ಬ!
ಮೈಸೂರು ವಿಶ್ವವಿದ್ಯಾಲಯದ ಫಿಸಿಕ್ಸ್ ಡಿಪಾರ್ಟ್ಮೆಂಟ್ ನೋಡಿ ಖುಷಿಯಾಯ್ತು. ಹಬ್ಬಕ್ಕೆ ನೂರಾರು ಜನ ಬಂದಿದ್ದಾರೆ - ಮೈಸೂರು ವಿ.ವಿ ಯಲ್ಲಿ ಕುಳಿತು ಅವರ ಲ್ಯಾಬಿನಲ್ಲಿರುವ ಗ್ನು/ಲಿನಕ್ಸ್ ಬಳಸುವ ಕಂಪ್ಯೂಟರಿನಲ್ಲಿಯೇ ಕನ್ನಡದಲ್ಲಿ ಟೈಪಿಸುತ್ತ ಈ ಕಾಮೆಂಟ್ ಹಾಕುತ್ತಿರುವುದು ಏನೋ ಒಂಥರಾ ವಿಶೇಷ ಅನ್ನಿಸುತ್ತಿದೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಾಳೆ ಹಬ್ಬ!
ಮೈಸೂರಿನಿಂದ ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ಖುಷಿಯಾಯಿತು.
*ಅಶೋಕ್